ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hasirumakki Bridge: ದೀಪಾವಳಿಗೂ ಹುಸಿಯಾದ ಹಸಿರುಮಕ್ಕಿ ಸೇತುವೆ ಉದ್ಘಾಟನೆ !

ಈ ನಡುವೆ ಸೇತುವೆ ಕಾಮಗಾರಿ ವಿಳಂಬಕ್ಕೆ ಹಿಂದಿನ ಅವಧಿಯ ಶಾಸಕರೇ ಕಾರಣ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿ ಬಿಜೆಪಿ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ದ ಆರೋಪ ಮಾಡಿದ್ದ ಶಾಸಕ ಬೇಳೂರರ ಹೇಳಿಕೆ ಚರ್ಚೆಯ ವಿಷಯವಾಗಿತ್ತು. ಇದರ ವಿರುದ್ದ ಸ್ಪಷ್ಟನೆಗೆ ಮುಂದಾಗಿರುವ ಹಾಲಪ್ಪ, ಸ್ವತ: ಸದನದಲ್ಲಿ ಕಾಂಗ್ರೆಸ್ ಸರಕಾರದ ಪರವಾಗಿ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅಧಿಕೃತವಾಗಿ ನೀಡಿರುವ ಲಿಖಿತ ಸ್ಪಷ್ಟನೆಯನ್ನು ಪಡೆದು ಜನರ ಮುಂದಿಟ್ಟಿದ್ದಾರೆ.

ರಮೇಶ್ ಹೆಗಡೆ ಗುಂಡೂಮನೆ, ಸಾಗರ

ಮಲೆನಾಡು ಮತ್ತು ದಕ್ಷಿಣ ಕನ್ನಡ ಸಂಪರ್ಕ ಸೇತುವಾಗಿ ಕಾರ್ಯ ಮಾಡಲಿರುವ ಶರಾವತಿ ಹಿನ್ನೀರ ಹಸಿರುಮಕ್ಕಿ ಸೇತುವೆ(Hasirumakki Bridge) ಕಾಮಗಾರಿ ಆರಂಭಗೊಂಡು ಒಂಬತ್ತು ವರ್ಷ ಗತಿಸುತ್ತ ಬಂದಿದೆ. ಪ್ರಸ್ತುತ ಅಂತಿಮ ಹಂತದ ಕಾಮಗಾರಿ ಸಾಗುತ್ತಿದೆ. ಈ ನಡುವೆ ದೀಪಾವಳಿ ಸಿಹಿ ಸುದ್ದಿಯಾಗಿ ಸೇತುವೆ ಉದ್ಘಾಟನೆ ಮಾಡಲಾಗುವುದು ಎಂದು ಈಚೆಗೆ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna)ಹೇಳಿಕೆ ನೀಡಿರುವುದು ಹೌದಾದರೂ ಬಹುಶ: ಪ್ರಸ್ತುತ ಕಾಮಗಾರಿಯ ಗತಿಯನ್ನು ಗಮನಿಸಿದರೆ ಯಾವುದೇ ಕಾರಣಕ್ಕೂ ದೀಪಾವಳಿಗೆ ಸೇತುವೆ ಕಾಮಗಾರಿಯನ್ನೂ ಪೂರ್ಣ ಪೂರೈಸಿ ಉದ್ಘಾಟಿಸುವುದು ಸಾಧ್ಯವಿಲ್ಲ ..!

ಹಾಗಾಗಿ ಮತ್ತೆ ಬೇಳೂರು ಭರವಸೆ ಹುಸಿಯಾಗುವುದು ಬಹುತೇಕ ಖಚಿತ. ಈ ನಡುವೆ ಸೇತುವೆ ಕಾಮಗಾರಿ ವಿಳಂಬಕ್ಕೆ ಹಿಂದಿನ ಅವಧಿಯ ಶಾಸಕರೇ ಕಾರಣ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿ ಬಿಜೆಪಿ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ದ ಆರೋಪ ಮಾಡಿದ್ದ ಶಾಸಕ ಬೇಳೂರರ ಹೇಳಿಕೆ ಚರ್ಚೆಯ ವಿಷಯವಾಗಿತ್ತು. ಇದರ ವಿರುದ್ದ ಸ್ಪಷ್ಟನೆಗೆ ಮುಂದಾಗಿರುವ ಹಾಲಪ್ಪ, ಸ್ವತ: ಸದನದಲ್ಲಿ ಕಾಂಗ್ರೆಸ್ ಸರಕಾರದ ಪರವಾಗಿ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅಧಿಕೃತವಾಗಿ ನೀಡಿರುವ ಲಿಖಿತ ಸ್ಪಷ್ಟನೆಯನ್ನು ಪಡೆದು ಜನರ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್‌ ಮಿನುಗುತಾರೆ

ವಿಳಂಬಕ್ಕೆ ಕಾರಣಗಳು: ಅದರಲ್ಲಿ 2018 ಮತ್ತು 2019ರ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ, ಹಿನ್ನೀರಿನ ನೀರಿನ ಮಟ್ಟ 8 ತಿಂಗಳ ಕಾಲ ಹೆಚ್ಚಿದ್ದಿದ್ದು, ಅತೀ ಹೆಚ್ಚು ನೀರಿನ ಮಟ್ಟಕ್ಕೆ ಸೇತುವೆ ವಿನ್ಯಾಸದ ಬದಲಾವಣೆ ಹಾಗೂ 2020 ಮತ್ತು 2021ರಲ್ಲಿ ಕೋವಿಡ್ ರೋಗದ ಲಾಕ್ ಡೌನ್ ಸಮಸ್ಯೆ ಕಾರಣ ಕಾಮಗಾರಿ ಸಾಗದೆ ವಿಳಂಬವಾಗಿದೆ ಎಂದು 6 ಸಂಗತಿಗಳನ್ನು ಉಲ್ಲೇಖಿಸಿ ಕಾಮಗಾರಿಯ ವಿಳಂಬಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹರತಾಳು ಹಾಲಪ್ಪ ಬಹಿರಂಗವಾಗಿ ಜನರ ಮುಂದಿಟ್ಟಿರುವ ಕಾರಣ ತಮ್ಮ ಹೇಳಿಕೆಗೆ ತಾವೇ ಮುಜುಗರ ಪಡುವ ಪರಿಸ್ಥಿತಿ ಶಾಸಕ ಬೇಳೂರು ಗೋಪಾಲಕೃಷ್ಣನವರಿಗಾಗಿದೆ.

ಸೇತುವೆ ಇತಿಹಾಸ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ(Kagodu Thimmappa)ನವರು ಸಾಗರ ಕ್ಷೇತ್ರದ ಶಾಸಕರಾಗಿದ್ದಾಗ 2017ರಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ಹಸಿರುಮಕ್ಕಿಗೊಂದು ಸೇತುವೆ ಮಂಜೂರು ಮಾಡಿಸಿದರು. ಶಂಕುಸ್ಥಾ ಪನೆಗೊಂಡು ಕಾಮಗಾರಿ ಆರಂಭವೂ ಆಯಿತು. ನಂತರ ಅವರ ಅDiಕಾರ ಬದಲಾಯಿತು. ಕ್ಷೇತ್ರವನ್ನು ಹರತಾಳು ಹಾಲಪ್ಪ ಪ್ರತಿನಿDiಸಿದರು. ಆದರೆ ಈ ನಡುವೆ ತಾಂತ್ರಿಕ ಕಾರಣಗಳಿಂದ ಸೇತುವೆ ಕಾಮಗಾರಿ ವಿಳಂಬವಾಗುತ್ತ ಸಾಗಿತ್ತು. ಆದರೆ ಅದೇ ಹೊತ್ತಿನಲ್ಲಿ ಕೇಂದ್ರ ಸರಕಾರ ಮಂಜೂರು ಮಾಡಿ ಶಂಕುಸ್ಥಾಪನೆ ಗೊಂಡ ತುಮರಿ ಸೇತುವೆ ಕಾಮಗಾರಿ ಮುಗಿದು ಕಳೆದ ವರ್ಷ ಉದ್ಘಾಟನೆಯೂ ಆಯಿತು. 2023ರ ವಿಧಾನ ಸಭಾ ಚುನಾವಣೆ ಯಲ್ಲಿ ಶಾಸಕರಾಗಿ ಬಂದ ಬೇಳೂರು ಗೋಪಾಲಕೃಷ್ಣ(Belur Gopalakrishna) ಮೊದಲು 2024ರ ಡಿಸೆಂಬರ್ ಒಳಗೆ ಕಾಮಗಾರಿ ಪೂರೈಸಿ ಸೇತುವೆ ಉದ್ಘಾಟಿಸುವ ಹೇಳಿಕೆ ನೀಡಿದ್ದರು. ಆದರೆ ಅದಾಗಲಿಲ್ಲ.

ನಂತರ 2026ರ ಮೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಧಿಕೃತವಾಗಿ ಪ್ರಕಟಗೊಳಿಸಿದರು. ಆಗ ಶಾಸಕರು ಕೊಟ್ಟ ಭರವಸೆಗೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಲೋಕೋಪಯೋಗಿ ಮಂತ್ರಿಗಳು ಕೂಡ ಸಾಥ್ ನೀಡಿದ್ದರು. ಆದರೆ ಅದೂ ಸಕಾರಗೊಳ್ಳಲಿಲ್ಲ. ಇದೀಗ ದೀಪಾವಳಿಗೆ ಉದ್ಘಾಟನೆ ಎನ್ನುವ ಹೇಳಿಕೆ ನೀಡಲಾಗಿದೆಯಾದರೂ ಅದರೊಳಗೆ ಕಾಮಗಾರಿ ಮುಗಿಯುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಕಾದು ನೋಡಬೇಕಿದೆ.