ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾತಗಳ್ಳಿಯಲ್ಲಿ ಭರದ ಸಿದ್ಧತೆ, 175 ಜತೆ ಕೋಣಗಳಿಗೆ ಅವಕಾಶ: ದಸರಾ ಅಂಗಳದಲ್ಲಿ ಕರಾವಳಿ ಕಂಬಳದ ಸಪ್ಪಳ

ತುಳುನಾಡಿನ ಸಾಂಪ್ರದಾಯಿಕ ವೀರಕ್ರೀಡೆ ಕಂಬಳ ಆಯೋಜನೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಮೈಸೂರಿನಲ್ಲಿ ಕಂಬಳ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿಯ ದಸರಾದಲ್ಲಿ ಕೋಣಗಳ ಸದ್ದು ಕೇಳಿಸಲಿದ್ದು, ಸಾತಗಳ್ಳಿ ಸಮೀಪ ಕಂಬಳದ ಅಖಾಡ ಸಿದ್ಧಗೊಳ್ಳುತ್ತಿದೆ. ಟ್ರ್ಯಾಕ್ ನಿರ್ಮಾಣ ಸೇರಿದಂತೆ ಅಗತ್ಯ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

ಕೆ.ಜೆ.ಲೋಕೇಶ್ ಬಾಬು, ಮೈಸೂರು

ತುಳುನಾಡಿನ ಸಾಂಪ್ರದಾಯಿಕ ವೀರಕ್ರೀಡೆ ಕಂಬಳ ಆಯೋಜನೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಮೈಸೂರಿನಲ್ಲಿ ಕಂಬಳ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿಯ ದಸರಾದಲ್ಲಿ ಕೋಣ ಗಳ ಸದ್ದು ಕೇಳಿಸಲಿದ್ದು, ಸಾತಗಳ್ಳಿ ಸಮೀಪ ಕಂಬಳದ ಅಖಾಡ ಸಿದ್ಧಗೊಳ್ಳುತ್ತಿದೆ. ಟ್ರ್ಯಾಕ್ ನಿರ್ಮಾಣ ಸೇರಿದಂತೆ ಅಗತ್ಯ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

175 ಜತೆ ಕೋಣಗಳಿಗೆ ಅವಕಾಶ: ದಸರಾ ಕಂಬಳದಲ್ಲಿ 175 ಜತೆ ಕೋಣಗಳಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಸುಮಾರು 225 ಕೋಣಗಳ ಯಜಮಾನರು ಕಂಬಳದಲ್ಲಿ ಭಾಗವಹಿ ಸಲು ಉತ್ಸುಕತೆ ವ್ಯಕ್ತಪಡಿಸಿ ಸಂಪರ್ಕಿಸಿದ್ದಾರೆ. ಆದರೆ ಸ್ಪರ್ಧೆಯನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇ ಶದಿಂದ 175 ಜತೆ ಕೋಣಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 2 ದಿನ ನಡೆಯಲಿರುವ ಕಂಬಳಕ್ಕೆ ಸುಮಾರು 25 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಯನ್ನೂ ಆಯೋಜಕರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kambala at Mysuru Dasara: ಮೈಸೂರು ದಸರಾ ಉತ್ಸವದಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದ ಎಚ್‌ಡಿಕೆ

ಕರಾವಳಿಯ ಕ್ರೀಡೆ... ಮೈಸೂರಿನ ಅಂಗಳ: ಕಂಬಳ ಕೇವಲ ಕೋಣಗಳ ಓಟವಲ್ಲ. ಇದು ಕರಾವಳಿ ಕರ್ನಾಟಕದ ಗ್ರಾಮೀಣ ಬದುಕು, ಕೃಷಿ, ಸಂಸ್ಕೃತಿ ಮತ್ತು ಜನಪದ ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಸಾಂಪ್ರದಾಯಿಕ ಕ್ರೀಡೆ. ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿ ಕಂಬಳ ನಡೆಯು ವಾಗ ಸುತ್ತಮುತ್ತಲಿನ ವಾತಾ ವರಣವೇ ಹಬ್ಬದ ರೂಪ ಪಡೆದುಕೊಳ್ಳುತ್ತದೆ. ಸಾವಿರಾರು ಜನರು ಸೇರುತ್ತಾರೆ. ಕೋಣಗಳ ಓಟಕ್ಕೆ ಪ್ರೇಕ್ಷಕರ ಕೇಕೆ, ಡೋಲು-ವಾದ್ಯಗಳ ಸದ್ದು, ಸಂಭ್ರಮ ಕಂಬಳದ ಅಂಗಳವೇ ಒಂದು ಜನಪದ ಜಾತ್ರೆಯಾಗಿ ಮಾರ್ಪಡುತ್ತದೆ. ಇದೇ ಸೊಗಡನ್ನು ಇದೀಗ ಮೈಸೂರಿನ ಜನತೆಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ.

ಬೆಂಗಳೂರಿನ ಯಶಸ್ಸಿನ ಬಳಿಕ ಮೈಸೂರಿನತ್ತ ಹೆಜ್ಜೆ: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮಕ್ಕೆ ದೊರೆತ ಭರ್ಜರಿ ಪ್ರತಿಕ್ರಿಯೆ ಆಯೋಜಕರಿಗೆ ಹೊಸ ವಿಶ್ವಾಸ ನೀಡಿದೆ. ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕರಾವಳಿ ಪ್ರದೇಶದ ಹೊರಗಡೆಯೂ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆಯಬಲ್ಲದು ಎಂಬುದನ್ನು ಬೆಂಗಳೂರಿನ ಕಂಬಳ ತೋರಿಸಿ ಕೊಟ್ಟಿತ್ತು. ಅದೇ ಯಶಸ್ಸಿನ ಹಿನ್ನೆಲೆ ಪುತ್ತೂರು ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಇದೀಗ ಮೈಸೂರಿನತ್ತ ಕಂಬಳದ ಹೆಜ್ಜೆ ಮುಂದುವರಿದಿದೆ. ದಸರಾ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ಕಂಬಳಕ್ಕೆ ದೊಡ್ಡ ಪ್ರೇಕ್ಷಕವರ್ಗ ದೊರೆಯುವ ನಿರೀಕ್ಷೆಯಿದೆ.

ವಿರೋಧದ ನಡುವೆಯೂ ಸಿದ್ಧತೆ

ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಕೆಲವರಿಂದ ವಿರೋಧದ ಧ್ವನಿಯೂ ಕೇಳಿಬಂದಿದೆ. ದಸರಾ ಮಹೋತ್ಸವದ ಸಂದರ್ಭದಲ್ಲಿ ಹೊಸ ಕಾರ್ಯಕ್ರಮವೊಂದನ್ನು ಸೇರಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ವಿರೋಧದ ನಡುವೆಯೂ ಕಂಬಳದ ಸಿದ್ಧತೆಗಳು ನಿಂತಿಲ್ಲ. ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಮುಖ್ಯಮಂತ್ರಿ ಅವರಿಂದ ಗ್ರೀನ್ ಸಿಗ್ನಲ್ ದೊರೆತಿದೆ.

image

ಆರಂಭದಲ್ಲಿ ಮೈಸೂರಿನಲ್ಲಿ ಕಂಬಳ ಆಯೋಜನೆ ಕುರಿತು ಸಾಕಷ್ಟು ಗೊಂದಲಗಳಿದ್ದವು. ಕಂಬಳದಿಂದ ನೀರು ಪೋಲಾಗುತ್ತದೆ, ಕೆರೆ ನಿರ್ಮಿಸಬೇಕು,ಕೋಣಗಳನ್ನು ಬಿಟ್ಟು ಹೋಗುತ್ತಾರೆ ಎಂಬಂತಹ ಹಲವು ತಪ್ಪು ಕಲ್ಪನೆಗಳು ಸ್ಥಳೀಯರಲ್ಲಿ ಇದ್ದವು. ಆದರೆ ಈ ಎಲ್ಲ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದು, ಇದೀಗಕಂಬಳದ ಬಗ್ಗೆ ಮೈಸೂರಿಗರಲ್ಲಿ ಆಸಕ್ತಿ ಹೆಚ್ಚಾಗಿದೆ.

- ಅಶೋಕ್ ರೈ ಕಂಬಳದ ಉಸ್ತುವಾರಿ