ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼಬುರುಡೆʼ ಷಡ್ಯಂತ್ರ ಆರೋಪಿಗಳ ವಿಚಾರಣೆಯೇ ಇಲ್ಲ !

ಧರ್ಮಸ್ಥಳ ಪರಿಸರದಲ್ಲಿ ಯುವತಿಯರ ಅತ್ಯಾಚಾರಗೈದು ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ದೂರು ನೀಡಿದ್ದ ಪ್ರಕರಣದಲ್ಲಿ, ದೂರುದಾರರೇ ಸುಳ್ಳು ಮಾಹಿತಿ ನೀಡಿದ್ದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೇ ದೂರು ದಾಖಲಾಗಿದ್ದರೂ, ಆರೋಪಿಗಳ ವಿಚಾರಣೆ ಮಾತ್ರ ನಡೆಯುತ್ತಿಲ್ಲ.

ಜಿತೇಂದ್ರ ಕುಂದೇಶ್ವರ, ಮಂಗಳೂರು

ಬುರುಡೆ ಪತ್ತೆ ಪ್ರಕರಣದಲ್ಲಿ ಸುಳ್ಳು ಮಾಹಿತಿ: ಮಟ್ಟಣ್ಣವರ್, ತಿಮರೋಡಿ ವಿಚಾರಣೆ ಸ್ಥ ಗಿತ

ಧರ್ಮಸ್ಥಳ ಪರಿಸರದಲ್ಲಿ ಯುವತಿಯರ ಅತ್ಯಾಚಾರಗೈದು ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ದೂರು ನೀಡಿದ್ದ ಪ್ರಕರಣದಲ್ಲಿ, ದೂರುದಾರರೇ ಸುಳ್ಳು ಮಾಹಿತಿ ನೀಡಿದ್ದು ಸ್ಪಷ್ಟ ವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೇ ದೂರು ದಾಖಲಾಗಿದ್ದರೂ, ಆರೋಪಿಗಳ ವಿಚಾರಣೆ ಮಾತ್ರ ನಡೆಯುತ್ತಿಲ್ಲ. ಆರೋಪಿಗಳ ಕಡೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಜಾಲತಾಣಗಳಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ.

ಆದರೆ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಾದ ಎಸ್‌ಐಟಿ ನಿಶ್ಶಬ್ದವಾಗಿರುವುದು ಹಲವಾರು ಚರ್ಚೆಗಳಿಗೆ ಕಾರಣವಾಗಿದೆ. ಬುರುಡೆ ಪ್ರಕರಣದಲ್ಲಿ ಷಡ್ಯಂತ್ರ ಇರುವುದು ದೂರುದಾರ ಚಿನ್ನಯ್ಯನ ಬಂಧನದಿಂದ ಬಯಲಾಗಿತ್ತು. ಬುರುಡೆಯನ್ನು ಎಲ್ಲಿಂದಲೋ ತಂದು, ‘ಕ್ಷೇತ್ರದ ವಿರುದ್ಧ’ ವಿರುದ್ಧ ಆರೋಪ ಮಾಡಿದ್ದ ವ್ಯಕ್ತಿಗಳು ಷಡ್ಯಂತ್ರ ಮಾಡಿರುವುದು ತನಿಖೆ ವೇಳೆ ಸ್ಪಷ್ಟ ವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿಚಾರಣೆಗೆ ಎಸ್‌ಐಟಿ ನೋಟಿಸ್ ಕಳುಹಿಸಿತು.

ಇದನ್ನೂ ಓದಿ: Dharmasthala Case: ಬುರುಡೆ ಚಿನ್ನಯ್ಯನಿಗೆ ಜಾಮೀನು ಮಂಜೂರು

ಹಲವು ಬಾರಿ ನೋಟಿಸ್ ಬಂದರೂ ಆರೋಪಿಗಳು ವಿಚಾರಣೆಗೆ ಹಾಜರಾಗಿಲ್ಲ. ಆರೋಪಿಗಳು ಕಾನೂನು ತಜ್ಞರ ನೆರವು ಪಡೆದು ಪ್ರಕರಣವನ್ನೇ ರದ್ದುಗೊಳಿಸಬೇಕು ಎಂದು ಹೈಕೋರ್ಟಿಗೆ ಮೊರೆ ಹೋಗಿದ್ದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ.ಜಯಂತ್ ಮತ್ತು ವಿಠಲ ಗೌಡ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಬೇಕು ಮತ್ತು ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡದಂತೆ ರಕ್ಷಣೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಕ್ಟೋಬರ್ 30ರಂದು ಎಸ್‌ಐಟಿ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ನ.೧೨ರಂದು ಹೈಕೋರ್ಟ್ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾe ತೆರವುಗೊಳಿಸಿತ್ತು. ಆದರೆ ಆರೋಪಿಗಳಿಗೆ ಕಿರುಕುಳ ನೀಡದಂತೆ ಸೂಚಿಸಿತು. ತಡೆಯಾಜ್ಞೆ ತೆರವುಗೊಳಿಸಿ ಬಹುತೇಕ ೨೦ ದಿನಗಳೇ ಸಂದಿವೆ. ಹೈಕೋರ್ಟ್ ವಿಚಾರಣೆ ನಡೆಸುವಂತೆ ಸೂಚಿಸಿದ್ದರೂ ತನಿಖಾಧಿಕಾರಿ ಪ್ರಣಬ್ ಮೊಹಾಂತಿ ಮತ್ತು ಅವರ ಎಸ್‌ಐಟಿ ತಂಡ ವಿಳಂಬ ನೀತಿ ಅನುಸರಿಸುತ್ತಿರುವುದೇಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಇತ್ತ ಕಡೆ ಆರೋಪಿಗಳ ಪರವಾಗಿ ದೇಶದಲ್ಲಿನ ದುಬಾರಿ ವಕೀಲರೇ ಸಮರ್ಥವಾಗಿ ವಾದ ಮಾಡು ತ್ತಿದ್ದಾರೆ. ಇದಕ್ಕೆ ಹಣಕಾಸು ನೆರವು ಒದಗಿಸಿರುವುದು ಯಾರು ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಬುರುಡೆ ಚಿನ್ನಯ್ಯನಿಗೆ, ಆತನ ಪತ್ನಿಯ ಖಾತೆಗಳಿಗೆ ಷಡ್ಯಂತ್ರ ಆರೋಪಿಗಳ ಖಾತೆಯಿಂದ ಹಣ ಹೋಗಿರುವುದನ್ನು ಎಸ್‌ಐಟಿ ಪತ್ತೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದು.

ಇನ್ನೂ ಬಿಡುಗಡೆಯಾಗಿಲ್ಲ ಚಿನ್ನಯ್ಯ: ಪ್ರಕರಣದ ಕೇಂದ್ರಬಿಂದುವಾಗಿದ್ದ ಸಿ.ಎನ್.ಚಿನ್ನಯ್ಯ ಕಳೆದ ಎರಡು ದಶಕಗಳಲ್ಲಿ ನೂರಾರು ಶವಗಳನ್ನು ಧರ್ಮಸ್ಥಳದಲ್ಲಿ ತಾನೇ ಹೂತಿರುವುದಾಗಿ ಹೇಳಿದ್ದ. ಆದರೆ ಆತ ಸುಳ್ಳು ಹೇಳಿದ್ದು ಖಚಿತವಾಗಿದ್ದರಿಂದ ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಆ.೨೩ರರಂದು ಚಿನ್ನಯ್ಯನನ್ನು ಬಂಧಿಸಲಾಗಿತ್ತು. ನ.೨೪ರಂದು ಇವರಿಗೆ ಜಾಮೀನು ನೀಡಿ, ಬಿಡುಗಡೆಗೆ ಆದೇಶವಾಗಿದೆ. ಆದರೆ ನ್ಯಾಯಾಲಯವು ವಿಧಿಸಿರುವ ೧೨ ಕಠಿಣ ಷರತ್ತುಗಳನ್ನು ಪೂರೈಸಿದ ನಂತರವೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ.