ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari Ban: ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಬಂಡೀಪುರ ಸಫಾರಿ ಸುಮಾರು 15 ರಿಂದ 20 ಕಿಮೀ ಇದ್ದರೆ, ನಾಗರಹೊಳೆಯದ್ದು 12ರಿಂದ 18 ಕಿಮೀ ಇದೆ. ಒಂದು ಸುತ್ತಿನಲ್ಲಿ ಈ ದೂರವನ್ನು ಕ್ರಮಿಸುವುದರಿಂದ ಕಾಡಿನ ಆರೇಳು ಕಿಮೀ ಭಾಗದಲ್ಲಿ ಮಾತ್ರ ಸಫಾರಿ ವಾಹನಗಳು ಹೋಗುತ್ತವೆ. ಅದರ ಆಚೆಗೆ ಈಗಲೂ ಪ್ರವಾಸಿಗರಿಗೆ ಅವಕಾಶವಿಲ್ಲ. ಇದನ್ನು ಗಣಿಸದೇ, ಇನ್ನೊಂದು ಭಾಗದಲ್ಲಿ ಆಗಿರುವ ಹುಲಿ ದಾಳಿಗೆ ಸಫಾರಿ ಯನ್ನು ‘ಲಿಂಕ್’ ಮಾಡುತ್ತಿರುವುದು ಸರಿಯಲ್ಲ ಎಂಬ ಆಕ್ರೋಶ ಕೇಳಿಸಿದೆ.

ರಂಜಿತ್ ಎಚ್. ಅಶ್ವತ್ಥ, ಬೆಂಗಳೂರು

ಶೇ.20 ಅರಣ್ಯ ಪ್ರದೇಶ ಸಫಾರಿಗೆ ಬಳಸಬಹುದು

ರಾಜ್ಯದಲ್ಲಿ ಬಳಸುತ್ತಿರುವುದು ಶೇ.6 ಕಾಡು ಮಾತ್ರ

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಸಫಾರಿಗೆಂದು ಪ್ರವಾಸೋದ್ಯಮ ಇಲಾಖೆ ‘ಹೆಚ್ಚು’ ಕಾಡನ್ನು ಬಳಸಿಕೊಂಡಿಲ್ಲ. ಆದರೂ ಸಫಾರಿ ನಿರ್ಬಂಧಿಸುವ ಶಿಕ್ಷೆ ಏಕೆ ಎನ್ನುವ ಪ್ರಶ್ನೆಗಳಿವೆ. ಕೇಂದ್ರ ಅರಣ್ಯ ಇಲಾಖೆಯ ಕಾಯಿದೆ, ಸುಪ್ರೀಮ್ ಕೋರ್ಟ್‌ನ ಹಲವು ತೀರ್ಪುಗಳಲ್ಲಿ ಒಟ್ಟು ಕಾಡಿನ ಶೇ.20ರಷ್ಟು ಪ್ರದೇಶವನ್ನು ಸಫಾರಿ, ಪ್ರವಾಸೋದ್ಯಮ, ರೆಸಾರ್ಟ್‌ಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಆದರೆ ಕರ್ನಾಟಕದಲ್ಲಿ ಶೇ.6-7ರಷ್ಟು ಅರಣ್ಯ ಪ್ರದೇಶವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಇನ್ನುಳಿದ ಪ್ರದೇಶಕ್ಕೆ ಈಗಲೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿಲ್ಲ.

ಬಂಡೀಪುರ ಸಫಾರಿ ಸುಮಾರು 15 ರಿಂದ 20 ಕಿಮೀ ಇದ್ದರೆ, ನಾಗರಹೊಳೆಯದ್ದು 12ರಿಂದ 18 ಕಿಮೀ ಇದೆ. ಒಂದು ಸುತ್ತಿನಲ್ಲಿ ಈ ದೂರವನ್ನು ಕ್ರಮಿಸುವುದರಿಂದ ಕಾಡಿನ ಆರೇಳು ಕಿಮೀ ಭಾಗದಲ್ಲಿ ಮಾತ್ರ ಸಫಾರಿ ವಾಹನಗಳು ಹೋಗುತ್ತವೆ. ಅದರ ಆಚೆಗೆ ಈಗಲೂ ಪ್ರವಾಸಿಗರಿಗೆ ಅವಕಾಶವಿಲ್ಲ. ಇದನ್ನು ಗಣಿಸದೇ, ಇನ್ನೊಂದು ಭಾಗದಲ್ಲಿ ಆಗಿರುವ ಹುಲಿ ದಾಳಿಗೆ ಸಫಾರಿ ಯನ್ನು ‘ಲಿಂಕ್’ ಮಾಡುತ್ತಿರುವುದು ಸರಿಯಲ್ಲ ಎಂಬ ಆಕ್ರೋಶ ಕೇಳಿಸಿದೆ.

ಹುಲಿಗಳ ದಾಳಿಗೆ ನೂರಾರು ಕಾರಣಗಳಿವೆ. ಪ್ರಮುಖವಾಗಿ ಅರಣ್ಯ ಪ್ರದೇಶ, ಅರಣ್ಯದೊಳಗೆ ಇಲಾಖೆಯಿಂದ ‘ಅವೈಜ್ಞಾನಿಕ’ವಾಗಿ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿ, ಕಾಡಿನಂಚಿನ ಗ್ರಾಮಸ್ಥರ ಪ್ರಚೋದನೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ದಾಳಿಗಳು ಹೆಚ್ಚಾಗಿವೆ. ಈ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಅರಣ್ಯ ಇಲಾಖೆ, ಕಾಡು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುವ ವೈಲ್ಡ್ ಲೈಫ್ ಟೂರಿಸಂ ಅನ್ನೇ ನಿರ್ಬಂಧಿಸಿರುವುದು ವಿವಾದ ಹುಟ್ಟಿಸಿದೆ.

ಇದನ್ನೂ ಓದಿ: Ban on Safari: ಸಫಾರಿಗೆ ನಿರ್ಬಂಧ; ಕರುನಾಡು ಪ್ರವಾಸಿ ಸಂಸ್ಕೃತಿಗೆ ಧಕ್ಕೆ

ಗೋಮಾಳಗಳೆಲ್ಲ ಕಬ್ಜ: ಮನುಷ್ಯರ ಮೇಲೆ ಆಗುತ್ತಿರುವ ಹುಲಿ ದಾಳಿ ಕೇವಲ ಕರ್ನಾಟಕದ ಸಮಸ್ಯೆಯಲ್ಲ. ಭಾರತದ ಹಲವು ಭಾಗದಲ್ಲಿ ಈ ರೀತಿ ದಾಳಿಗಳು ವರದಿಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಇಂದಿರಾ ಗಾಂಧಿ ಅವರ ಕಾಲದಲ್ಲಿ ಹುಲಿ ಸಂರಕ್ಷಣಾ ಕಾಯಿದೆ ಜಾರಿಗೊಳಿಸಿದ ಬಳಿಕ ಹುಲಿಗಳ ಬೇಟೆ ಕಡಿಮೆಯಾಗುವುದರೊಂದಿಗೆ, ಹುಲಿಗಳ ಜನನ ಪ್ರಮಾಣ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಹುಲಿಗಳಿಗೆ ಬೇಕಿರುವಷ್ಟು ಅರಣ್ಯ ಪ್ರದೇಶವಿಲ್ಲ.

ಜಾನುವಾರುಗಳನ್ನು ಮೇಯಿಸುವುದಕ್ಕೆ ಕಾಡಿಗೆ ಬಿಡಬಾರದು ಎನ್ನುವ ಸೂಚನೆ ಇದ್ದರೂ, ಅನೇಕ ರೈತರು ಈಗಲೂ ಕಾಡಿಗೆ ಬಿಡುತ್ತಿದ್ದಾರೆ. ಇದರಿಂದ ಹುಲಿಗಳು ದಾಳಿ ಮಾಡುತ್ತಿವೆ. ಈ ದಾಳಿಯ ಸಲುವಾಗಿ ಮಾನವ-ಹುಲಿ ಸಂಘರ್ಷವನ್ನು ತಡೆಯಲು, ಇದಕ್ಕೆ ಸಂಬಂಧವಿಲ್ಲದ ಸಫಾರಿಯನ್ನು ನಿರ್ಬಂಧಿಸುತ್ತಿದ್ದಾರೆ ಎನ್ನುವ ಆರೋಪವಿದೆ.

ಎಚ್ಚೆತ್ತುಕೊಳ್ಳದ ಇಲಾಖೆ: ಸಫಾರಿ ನಿರ್ಬಂಧದಿಂದಾಗುತ್ತಿರುವ ಹತ್ತಾರು ಸಮಸ್ಯೆ ಬಗ್ಗೆ ಸ್ಥಳೀಯ ರೆಸಾರ್ಟ್ ಮಾಲೀಕರು, ಹೋಮ್ ಸ್ಟೇ ಮಾಲೀಕರು ನಿರಂತರವಾಗಿ ಸರಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಸಫಾರಿ ನಿರ್ಬಂಧವೂ ಅವೈಜ್ಞಾನಿಕ, ಅರಣ್ಯ ಇಲಾಖೆಯ ಕಿತ್ತಾಟ, ಪ್ರತಿಷ್ಠೆಯ ಕಾರಣಕ್ಕೆ ಈ ತೀರ್ಮಾನವನ್ನು ಸಚಿವರು ತೆಗೆದುಕೊಂಡಿದ್ದಾರೆ ಎನ್ನುವ ನಿರಂತರ ವರದಿಗಳು ಬರುತ್ತಿದ್ದರೂ ಈ ವಿಷಯದಲ್ಲಿ ಅರಣ್ಯ ಇಲಾಖೆ ಜಾಣ ಮೌನ ವಹಿಸಿದೆ.

ಸಫಾರಿ ಪುನಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಡಕ್ ಸೂಚನೆಯ ಹೊರತಾ ಗಿಯೂ, ಅರಣ್ಯ ಸಚಿವ ಈಶ್ವರ ಖಂಡ್ರೆ, ತಾಂತ್ರಿಕ ಸಮಿತಿಯ ವರದಿಯ ನೆಪದಲ್ಲಿ ನಿರ್ಬಂಧ ಮುಂದುವರಿಸಿದ್ದಾರೆ. ಇನ್ನು ಪ್ರವಾಸೋದ್ಯಮ ಇಲಾಖೆ ಈ ವಿಷಯದಲ್ಲಿ ಇನ್ನೂ ಎಚ್ಚೆತ್ತು ಕೊಳ್ಳದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಎಲ್ಲೂ ಇಲ್ಲದ ನಿರ್ಬಂಧ ಇಲ್ಲೇಕೆ?

ದೇಶದಲ್ಲಿ 50ಕ್ಕೂ ಹೆಚ್ಚು ಭಾಗದಲ್ಲಿ ಹುಲಿ ಸಫಾರಿಗಳಿವೆ. ಅದರಲ್ಲಿಯೂ ಕಾರ್ಬೆಟ್, ಸಬರ್‌ಬನ್, ಕನ್ಹಾ, ಪೆಂಚ್ ಅರಣ್ಯ ಪ್ರದೇಶದಲ್ಲಿ ಮಾನವ-ಹುಲಿ ಸಂಘರ್ಷ ಕರ್ನಾಟಕಕ್ಕಿಂತ ಹೆಚ್ಚಾಗಿದೆ. ಆದರೆ ಅಲ್ಲೆಲ್ಲಿಯೂ ಸಫಾರಿಯನ್ನು ನಿರ್ಬಂಧಿಸಿಲ್ಲ. ಸಫಾರಿಗೆ ಹೋದ ಪ್ರವಾಸಿಗರ ಮೇಲೆ ದಾಳಿಗಳಾಗಿಲ್ಲ ಎನ್ನುವ ಕಾರಣಕ್ಕೆ. ಕರ್ನಾಟಕದಲ್ಲಿ ಮಾತ್ರ ಬಂಡೀಪುರ, ನಾಗರಹೊಳೆಗೆ 40 ಕಿಮೀ ದೂರದಲ್ಲಿ ನಡೆದಿರುವ ಹುಲಿ ದಾಳಿಯನ್ನು ಮುಂದಿಟ್ಟು ಸಫಾರಿಯನ್ನು ನಿರ್ಬಂಧಿಸಲಾಗಿದೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author