ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Computer Cleanup Day: ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ದಿನವಿಡೀ ನಮ್ಮ ಕೆಲಸದ ಅವಿಭಾಜ್ಯ ಅಂಗವಾಗಿರುವ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ಗಳ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ಹರಿಸುತ್ತೇವೆ? ಈ ಪ್ರಶ್ನೆಯನ್ನು ನೆನಪಿಸಲು ಮತ್ತು ಡಿಜಿಟಲ್ ಶಿಸ್ತನ್ನು ಮೈಗೂಡಿಸಿಕೊಳ್ಳಲು ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಸೋಮವಾರದಂದು (ಫೆ.9)‘ರಾಷ್ಟ್ರೀಯ ಕಂಪ್ಯೂ ಟರ್ ಸ್ವಚ್ಛತಾ ದಿನ’ವನ್ನು ಆಚರಿಸಲಾಗುತ್ತದೆ.

ವಿನುತಾ ಹೆಗಡೆ, ಶಿರಸಿ

ಡಿಜಿಟಲ್ ಲೋಕದ ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್‌ಗಳ ಶುದ್ಧೀಕರಣ

ನಾವು ವಾಸಿಸುವ ಮನೆಯನ್ನು, ಬಳಸುವ ವಾಹನವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತೇವೆ. ಆದರೆ, ದಿನವಿಡೀ ನಮ್ಮ ಕೆಲಸದ ಅವಿಭಾಜ್ಯ ಅಂಗವಾಗಿರುವ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ಗಳ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ಹರಿಸುತ್ತೇವೆ? ಈ ಪ್ರಶ್ನೆಯನ್ನು ನೆನಪಿಸಲು ಮತ್ತು ಡಿಜಿಟಲ್ ಶಿಸ್ತನ್ನು ಮೈಗೂಡಿಸಿಕೊಳ್ಳಲು ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಸೋಮವಾರದಂದು (ಫೆ.9)‘ರಾಷ್ಟ್ರೀಯ ಕಂಪ್ಯೂ ಟರ್ ಸ್ವಚ್ಛತಾ ದಿನ’ವನ್ನು ಆಚರಿಸಲಾಗುತ್ತದೆ.

1990ರ ದಶಕದಲ್ಲಿ ಅಮೇರಿಕಾದಲ್ಲಿ ಆರಂಭವಾದ ಈ ದಿನಾಚರಣೆ, ಇಂದು ಜಾಗತಿಕವಾಗಿ ಮಹತ್ವ ಪಡೆದಿದೆ. ತಾಂತ್ರಿಕವಾಗಿ ಕಂಪ್ಯೂಟರ್‌ನ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ದತ್ತಾಂಶದ ಸುರಕ್ಷತೆಯನ್ನು ಕಾಪಾಡುವುದು ಈ ದಿನದ ಮುಖ್ಯ ಉದ್ದೇಶ.

ಇದನ್ನೂ ಓದಿ: Prakash Shesharaghavachar Column: ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡರೆ ಒಳಿತು

ಅನಗತ್ಯ ಫೈಲ್‌ಗಳ ಡಿಲೀಟ್: ಡೌನ್ಲೋಡ್ ಫೋಲ್ಡರ್‌ʼನಲ್ಲಿರುವ ಬೇಡದ ಫೈಲ್ಗಳು, ಹಳೆಯ ಇಮೇಜಗಳು ಮತ್ತು ಡ್ಯೂಪ್ಲಿಕೇಟ್ ದಾಖಲೆಗಳನ್ನು ಪತ್ತೆಹಚ್ಚಿ ಡಿಲೀಟ್ ಮಾಡಿ.

ಸಾಫ್‌ಟ್ವೇರ್‌ ಅಪ್ಡೇಟ್: ಬಳಸದ ಅಪ್ಲಿಕೇಶನಗಳನ್ನು ಅನ್ ಇನ್‌ಸ್ಟಾಲ್ ಮಾಡಿ. ನಿಮ್ಮ ಆಪರೇ ಟಿಂಗ್ ಸಿಸ್ಟಮ್ ಮತ್ತು ಆಂಟಿವೈರಸ್‌ಗಳನ್ನು ಅಪ್ಡೇಟ್ ಮಾಡುವುದರಿಂದ ಸೈಬರ್ ದಾಳಿಯಿಂದ ರಕ್ಷಣೆ ಪಡೆಯಬಹುದು.

ಡೆಸ್‌ಕ್ಟಾಪ್ ಅಚ್ಚುಕಟ್ಟು: ಸ್ಕ್ರೀನ್ ತುಂಬಾ ಐಕಾನ್‌ಗಳನ್ನು ಹರಡಿ ಕೊಳ್ಳುವ ಬದಲು, ನಿರ್ದಿಷ್ಟ ಫೋಲ್ಡರ್‌ಗಳನ್ನು ರಚಿಸಿ ಫೈಲ್‌ಗಳನ್ನು ವರ್ಗೀಕರಿಸಿ. ಇದು ಕೆಲಸದ ವೇಗ ಮತ್ತು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಬ್ರೌಸರ್‌ ಕ್ಲೀನಿಂಗ್: ಇಂಟರನೆಟ್ ಬ್ರೌಸರ್ನಲ್ಲಿರುವ ಕ್ಯಾಶ್ ಮತ್ತು ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದರಿಂದ ಬ್ರೌಸಿಂಗ್ ವೇಗ ಹೆಚ್ಚುತ್ತದೆ.

ದೈಹಿಕ ಸ್ವಚ್ಛತೆ: ಕೀಬೋರ್ಡ್ ನಡುವೆ ಸಿಲುಕಿರುವ ಧೂಳು, ಮೌಸ್ ಮತ್ತು ಸ್ಕ್ರೀನ್ ಮೇಲಿರುವ ಕಲೆಗಳನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಇದು ಹಾರ್ಡ್‌ವೇರ್‌ ಆಯಸ್ಸನ್ನು ಹೆಚ್ಚಿಸು ತ್ತದೆ.

ಕಂಪ್ಯೂಟರ್‌ ಸ್ವಚ್ಛತೆ ಏಕೆ ಅಗತ್ಯ?

ಕಂಪ್ಯೂಟರ್ನಲ್ಲಿ ಅನಗತ್ಯ ಫೈಲ್‌ಗಳು ತುಂಬಿಕೊಂಡರೆ ಅದು ಕಾರ್ಯನಿರ್ವಹಿಸುವ ವೇಗ ಕಡಿಮೆ ಯಾಗುತ್ತದೆ. ‘ಹ್ಯಾಂಗ್’ ಆಗುವುದು ಅಥವಾ ಪ್ರಮುಖ ಕೆಲಸದ ಸಮಯದಲ್ಲಿ ಸಾಫ್‌ಟ್ವೇರ್ಗಳು ಸರಿಯಾಗಿ ಸ್ಪಂದಿಸದಿರುವುದು ಡಿಜಿಟಲ್ ಕಸದ ಪರಿಣಾಮವೇ ಆಗಿದೆ. ಹೀಗಾಗಿ, ದೈಹಿಕ ಸ್ವಚ್ಛತೆಯ ಜತೆಗೆ ಸಾಫ್ಟ್‌ʼವೇರ್ ಸ್ವಚ್ಛತೆಯೂ ಅತಿ ಮುಖ್ಯ.

ಡಿಜಿಟಲ್ ಶಿಸ್ತಿನತ್ತ ಹೆಜ್ಜೆ

ಕಂಪ್ಯೂಟರ್ ಸ್ವಚ್ಛಗೊಳಿಸುವುದು ಕೇವಲ ವರ್ಷಕ್ಕೊಮ್ಮೆ ಮಾಡುವ ಕೆಲಸವಾಗಬಾರದು. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಬ್ಯಾಕಪ್ ತೆಗೆದುಕೊಳ್ಳುವ ಮತ್ತು ಹಳೆಯ ಫೈಲಗಳನ್ನು ಅಳಿಸುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಡಿಜಿಟಲ್ ಜೀವನ ಸುಗಮವಾಗಿರುತ್ತದೆ. ಇಂದೇ ನಿಮ್ಮ ಕಂಪ್ಯೂಟರ್‌ಅನ್ನು ಅಚ್ಚುಕಟ್ಟುಗೊಳಿಸಿ, ತಾಂತ್ರಿಕ ಒತ್ತಡದಿಂದ ಮುಕ್ತರಾಗಿ.