ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಾರಾಜಾವಾಡಿ ಜನರಿಗೆ ಟ್ರ್ಯಾಕ್ಟರ್‌ ನೀರೇ ಗತಿ

ಮಹಾರಾಜವಾಡಿ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಮಾರುತಿ ರಾಠೋಡ್ ಅವರು ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚನ್ನಬಸವ ಮೋಕ್ತೆದಾರ ಬೀದರ್

ಅನುದಾನ ಖರ್ಚಾದರೂ ಉಪಯೋಗವಿಲ್ಲ

ಹನಿ ನೀರಿಗೂ ಜನರ ಪರದಾಟ

ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಕುಡಿಯುವ ನೀರಿಗಾಗಿ ಸರಕಾರ ಕೋಟ್ಯಾಂತರ ರುಪಾಯಿ ಅನುದಾನ ಒದಗಿಸಿದೆ. ಆದರೆ ಅಧಿಕಾರಿ ಗಳು ಮತ್ತು ಗುತ್ತಿಗೆದಾರರ ದುರಾಸೆಯಿಂದ ಸಮರ್ಪಕವಾಗಿ ಕಾಮಗಾರಿ ಕೈಗೊಳ್ಳದ ಕಾರಣ ಜಿಲ್ಲೆಯ ಔರಾದ್ ತಾಲೂಕಿನ ಮಹಾರಾ ಜವಾಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅರ್ಧಮರ್ಧ ಕಾಮಗಾರಿ ಮುಗಿಸಿದ ಗುತ್ತಿಗೆದಾರರು ಕೈತೋಳೆದುಕೊಂಡಿದ್ದಾರೆ. ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಲಾಗಿದೆ ಆದರೆ ಮೋಟಾರ್‌ಅಳವಡಿಸಿಲ್ಲ ಎಂದು ಗ್ರಾಮಸ್ಥರು ಅಸಮಧಾನ ಹೊರ ಹಾಕಿದ್ದಾರೆ. ಆದರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕಾಮಗಾರಿ ಮಾತ್ರ ಕಂಪ್ಲೀಟ್ ಆಗಿದೆ. ಗ್ರಾಪಂಗೆ ಹಸ್ತಾಂತರಿಸಲಾಗಿದೆ ಎಂದು ಹಾರಿಕೆ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಮಹಾರಾಜವಾಡಿ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಮಾರುತಿ ರಾಠೋಡ್ ಅವರು ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಮಸ್ಯೆ ಪರಿಹಾರಕ್ಕಾಗಿ ರೀ-ಬೋರಿಂಗ್ ಹಾಗೂ ಹೊಸ ಬೋರ್‌ವೆಲ್ ಕೊರೆಸುವ ಕಾರ್ಯ ಕೈಗೊಂಡರೂ ನೀರು ಸಿಗದೆ ಅಧಿಕಾರಿಗಳ ಪ್ರಯತ್ನ ವಿಫಲವಾಗಿ ಟ್ಯಾಂಕರ್‌ನೀರೇ ಗತಿಯಾಗಿದೆ.

ಇದೀಗ ಗ್ರಾಮಸ್ಥರ ದಾಹ ನೀಗಿಸಲು ಜಂಬಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ರೆಡ್ಡಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಆದರೆ ಸುಮಾರು 900 ಜನಸಂಖ್ಯೆ ಹೊಂದಿ ರುವ ಗ್ರಾಮಕ್ಕೆ ದಿನಕ್ಕೆ ಕೇವಲ 1 ರಿಂದ 2 ಟ್ಯಾಂಕರ್ ನೀರು ಮಾತ್ರ ಸರಬರಾಜು ಮಾಡಲಾಗು ತ್ತಿದ್ದು, ಅದು ಜನರ ಅವಶ್ಯಕತೆಗೆ ಸಾಲುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನನಿತ್ಯ ನಾಲ್ಕು ಟ್ಯಾಂಕರ್ ನೀರು ಪೂರೈಸಿ

ಗ್ರಾಮಕ್ಕೆ ಪ್ರತಿದಿನ ಕನಿಷ್ಠ ನಾಲ್ಕು ಟ್ಯಾಂಕರ್ ನೀರು ಪೂರೈಸಿದರೆ ಮಾತ್ರ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಂದೆಡೆ ಜೆಜೆಎಂ ಯೋಜನೆ ಯಡಿ ಕೋಟ್ಯಾಂತರ ರು. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಜನರು ಹನಿ ನೀರಿಗಾಗಿ ಅಲೆದಾಡುತ್ತಿರುವುದು ಅಧಿಕಾರಿಗಳ ಕಾರ್ಯ ವೈಖರಿಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ. ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಟ್ಯಾಂಕರ್ ನೀರಿಗೆ ಜನ ಅವಲಂಬನೆ

ಗ್ರಾಮದಲ್ಲಿ ಶಾಶ್ವತ ನೀರು ಪೂರೈಕೆಗಾಗಿ ಜೆಲ ಜೀವನ್ ಮೀಷನ್ ವತಿಯಿಂದ ಕೋಟ್ಯಾಂತರ ರುಮಾಲು ಅನುದಾನ ಖರ್ಚು ಮಾಡಲಾಗಿದೆ ಆದರೆ ಉಪಯೋಗಕ್ಕೆ ಬಾರದಂತಾಗಿದೆ. (ಜೆಜೆಎಂ) ಯೋಜನೆ ಮಹಾರಾಜವಾಡಿ ಗ್ರಾಮದಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಮನೆಗೆ ನೀರು ನೀಡುವ ಭರವಸೆ ನೀಡಿದ್ದ ಅDiಕಾರಿಗಳು ಈಗ ಜನರನ್ನು ಟ್ಯಾಂಕರ್ ನೀರಿನ ಅವಲಂಬಿತರನ್ನಾಗಿಸಿದ್ದಾರೆ.

ಶಾಶ್ವತ ಪರಿಹಾರ ಒದಗಿಸಿ

ಭೂ ವಿಜ್ಞಾನ ಇಲಾಖೆ (ಜಿಯೋಲಜಿಸ್ಟ್) ಮೂಲಕ ವೈಜ್ಞಾನಿಕ ಸಮೀಕ್ಷೆ ನಡೆಸಿ, ನೀರಿನ ಸಾಮರ್ಥ್ಯ ಇರುವ ಸ್ಥಳದಲ್ಲಿಯೇ ಕೊಳವೆಬಾವಿ ಕೊರೆಸಬೇಕು. ತಾತ್ಕಾಲಿಕ ಕ್ರಮಗಳ ಬದಲು ಶಾಶ್ವತ ಪರಿಹಾರ ಕಂಡುಹಿಡಿದು ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಯನ್ನು ಅDiಕಾರಿಗಳು ತಕ್ಷಣ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.