ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉತ್ತರ ಕನ್ನಡದ ಧ್ವನಿಯಾಗಿ 'ಜಿಲ್ಲೆಯ ಹಿರಿಯಣ್ಣ' ವಿಶ್ವೇಶ್ವರ ಹೆಗಡೆ ಕಾಗೇರಿ

​ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕ ವಿ.ಎಸ್. ಪಾಟೀಲ್ ಸೇರಿದಂತೆ ನಾಡಿನ ಹಲವು ಹಿರಿಯ ಜನಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡು ಕರಾವಳಿ ಹಾಗೂ ಮಲೆನಾಡಿನ ಹಿತರಕ್ಷಣೆಗೆ ಒಂದಾಗಿ ಧ್ವನಿ ಎತ್ತಿದರು

ವಿನುತಾ ಹೆಗಡೆ

ಶಿರಸಿ: ಉತ್ತರ ಕನ್ನಡದ ಧ್ವನಿಯಾಗಿ 'ಜಿಲ್ಲೆಯ ಹಿರಿಯಣ್ಣ' ವಿಶ್ವೇಶ್ವರ ಹೆಗಡೆ ಕಾಗೇರಿ: ನದಿ ತಿರುವು ವಿರುದ್ಧ ಜನಪ್ರತಿನಿಧಿಗಳ ಗೌರವ ಎತ್ತಿ ಹಿಡಿದ ಕ್ಷಣ.

ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಸಮತೋಲನ ಮತ್ತು ಜೀವವೈವಿಧ್ಯಕ್ಕೆ ತೀವ್ರ ಮಾರಕವಾಗ ಬಲ್ಲ ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ವಿರೋಧಿಸಿ ಯಲ್ಲಾಪುರದಲ್ಲಿ ಇತ್ತೀಚೆಗೆ ನಡೆದ ಬೃಹತ್ ಜನಜಾಗೃತಿ ಜಾಥಾ ಹಾಗೂ ಸಭೆ, ಜಿಲ್ಲೆಯ ಒಗ್ಗಟ್ಟು ಮತ್ತು ಅಸ್ಮಿತೆಗೆ ದಾರಿದೀಪ ವಾಯಿತು.

ಈ ಬೃಹತ್ ಹೋರಾಟದ ವೇದಿಕೆಯಲ್ಲಿ ಜಿಲ್ಲೆಯ ಹಿರಿಯ ನಾಯಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೋರಿದ ನಾಯಕತ್ವ ಮತ್ತು ಮಾತುಗಳು ಸಮಸ್ತ ಜಿಲ್ಲೆಯ ಗೌರವಕ್ಕೆ ಕಿರೀಟ ವಿಟ್ಟಂತಾಗಿವೆ.

ಇದನ್ನೂ ಓದಿ: MLA Shivaram Hebbar: ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ: ಶಿವರಾಮ ಹೆಬ್ಬಾರ್

​ಶಾಸಕರಾದ ಶಿವರಾಮ ಹೆಬ್ಬಾರ್(Shivaram Hebbar), ಭೀಮಣ್ಣ ನಾಯ್ಕ(Bhimanna Naik), ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕ ವಿ.ಎಸ್. ಪಾಟೀಲ್ ಸೇರಿದಂತೆ ನಾಡಿನ ಹಲವು ಹಿರಿಯ ಜನಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡು ಕರಾವಳಿ ಹಾಗೂ ಮಲೆನಾಡಿನ ಹಿತರಕ್ಷಣೆಗೆ ಒಂದಾಗಿ ಧ್ವನಿ ಎತ್ತಿದರು. ಆದರೆ, ಕಾರ್ಯಕ್ರಮದ ವೇಳೆ ಪರಿಸರವಾದಿಗಳು ಸಾರ್ವಜನಿಕ ವೇದಿಕೆಯಲ್ಲಿ ಜನಪ್ರತಿನಿಧಿಗಳ ಕಾರ್ಯವೈಖರಿಯ ಕುರಿತು ಕೇವಲವಾಗಿ ಹಾಗೂ ಹಗುರವಾಗಿ ಮಾತನಾಡಿದಾಗ, ಸಭೆಯಲ್ಲಿದ್ದ ಪ್ರತಿಯೊಬ್ಬರಿಗೂ ಆಕ್ಷೇಪ ಮೂಡುವುದು ಸಹಜವಾಗಿತ್ತು.

​ಅಂತಹ ಸೂಕ್ಷ್ಮ ಕ್ಷಣದಲ್ಲಿ ತಕ್ಷಣವೇ ಮುನ್ನೆಲೆಗೆ ಬಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Member of Parliament Vishweshwar Hegde Kageri) ಅವರು, ಜಿಲ್ಲೆಯ ನೈಜ 'ಹಿರಿಯಣ್ಣ' ನಾಗಿ ನಿಂತು ಗಟ್ಟಿಯಾಗಿ ಧ್ವನಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ ವೇದಿಕೆಯಲ್ಲಿದ್ದ ಹಾಗೂ ಜಿಲ್ಲೆಯ ಸಮಸ್ತ ಜನಪ್ರತಿನಿಧಿಗಳ ಪರವಾಗಿ, ಅವರ ಶ್ರಮ ಹಾಗೂ ನಿಷ್ಠೆಯ ಪರವಾಗಿ ನಿಂತು ಹೆಮ್ಮೆಯಿಂದ ಉತ್ತರಿಸಿದರು. ಜನಪ್ರತಿನಿಧಿಗಳು ಎದುರಿಸುವ ಸವಾಲುಗಳು ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಅವರು ನಡೆಸುವ ಹೋರಾಟ ಎತ್ತಿ ಹಿಡಿದ ಕಾಗೇರಿ ಅವರ ನಡೆ, ಜಿಲ್ಲೆಯ ಪ್ರಜ್ಞಾ ವಂತ ನಾಗರಿಕರ ಭಾವನೆಗಳಿಗೆ ಕನ್ನಡಿ ಹಿಡಿಯಿತು.

​ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಜಿಲ್ಲೆಯ ನೆಲ-ಜಲ ಮತ್ತು ಜನಪ್ರತಿನಿಧಿಗಳ ಆತ್ಮಗೌರವದ ರಕ್ಷಣೆಗೆ ಕಾಗೇರಿ ಅವರು ನಿಂತ ರೀತಿ ನಿಜಕ್ಕೂ ಅಭಿನಂದನಾರ್ಹ. ಉತ್ತರ ಕನ್ನಡದ ಪರಿಸರ ಉಳಿವಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದ್ದಷ್ಟೇ ಅಲ್ಲದೆ, ಪ್ರತಿಯೊಬ್ಬ ಜನಪ್ರತಿನಿಧಿ ಮತ್ತು ಪ್ರಜೆಯ ಗೌರವವನ್ನು ಕಾಗೇರಿ ಅವರು ಕಾಯ್ದುಕೊಂಡಿದ್ದು ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಒಂದು ಸುಂದರ ಹಾಗೂ ಹೆಮ್ಮೆಯ ಅಧ್ಯಾಯವಾಗಿ ಉಳಿಯಲಿದೆ.