ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aamir Khan: ರಜನೀಕಾಂತ್‌ ಸಿನಿಮಾದಲ್ಲಿ ಆಮೀರ್‌ ಖಾನ್‌ ನಟಿಸೋದು ಪಕ್ಕಾನಾ?

ಸೂಪರ್ ಸ್ಟಾರ್ ರಜನೀಕಾಂತ್ ಅವರ ಕೂಲಿ ಚಿತ್ರವು ಬಹುನಿರೀಕ್ಷೆ ಹುಟ್ಟಿಸುತ್ತಿದೆ. ಕೂಲಿ ಸಿನಿಮಾ ದಿನೇ ದಿನೇ ಹೊಸ ಅಪ್ಡೇಟ್‌ಗಳು ಕೇಳಿಬರುತ್ತಲೇ ಇದೆ. ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್ ಮೊದಲಾದವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಇದೇ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಆಮೀರ್‌ ಖಾನ್ ಕೂಡ ಅಭಿನಯಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಟ ಆಮೀರ್‌ ಖಾನ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಕೂಲಿ ಚಿತ್ರದಲ್ಲಿ ನಟಿಸುವ ಬಗ್ಗೆ ಸ್ವತಃ ಆಮೀರ್‌ ಖಾನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ಸೂಪರ್ ಸ್ಟಾರ್ ರಜನೀಕಾಂತ್ ಅವರ ಕೂಲಿ (Aamir Khan) ಚಿತ್ರವು ಬಹುನಿರೀಕ್ಷೆ ಹುಟ್ಟಿಸುತ್ತಿದೆ. ಕೂಲಿ ಸಿನಿಮಾ ದಿನೇ ದಿನೇ ಹೊಸ ಅಪ್ಡೇಟ್ ಗಳು ಕೇಳಿಬರುತ್ತಲೇ ಇದೆ. ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್ ಮೊದಲಾದವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಇದೇ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಆಮೀರ್‌ ಖಾನ್ ಕೂಡ ಅಭಿನಯಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಟ ಆಮಿರ್ ಖಾನ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಕೂಲಿ ಚಿತ್ರದಲ್ಲಿ ನಟಿಸುವ ಬಗ್ಗೆ ಸ್ವತಃ ಆಮಿರ್ ಖಾನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕೂಲಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಸ್ವತಃ ಆಮೀರ್‌ ಖಾನ್ ಅವರೇ ದೃಢ ಪಡಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಓದುವ ಮೊದಲೇ ಈ ಸಿನಿಮಾದಲ್ಲಿ ನಟಿಸಲು ಒಪ್ಪಿರುವುದಾಗಿ ಅವರು ಹೇಳಿದ್ದಾರೆ. ಸಂದರ್ಶಕನು ಯಾವ ಪಾತ್ರ ನಿರ್ವಹಿಸುತ್ತಿದ್ದೀರಿ ಎಂದು ಕೇಳಿದಾಗ ಪಾತ್ರದ ಬಗ್ಗೆ ಈಗಲೇ ಏನನ್ನು ಹೇಳಲಾಗುವುದಿಲ್ಲ. ಕೈತಿ 2 ಸಿನಿಮಾ ಮುಗಿದ ಬಳಿಕ ಲೋಕೇಶ್ ಅವರೊಂದಿಗೆ ಒಂದು ಚಿತ್ರ ಮಾಡುತ್ತಿದ್ದೇನೆ ಅದರ ಜೊತೆಗೆ ಕೂಲಿ ಚಿತ್ರದಲ್ಲಿ ಕೂಡ ನಾನು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಕೆಲಸ ಮಾಡುವುದು ತುಂಬಾ ಇಷ್ಟವಾಯಿತು. ನಾನು ರಜನಿ ಸರ್ ಅವರ ದೊಡ್ಡ ಅಭಿಮಾನಿ. ನನಗೆ ರಜನಿ ಸರ್ ಮೇಲೆ ತುಂಬಾ ಪ್ರೀತಿ ಮತ್ತು ಗೌರವವಿದೆ. ಹಾಗಾಗಿ, ನಾನು ಸ್ಕ್ರಿಪ್ಟ್ ಕೇಳದೆಯೇ ಈ ಚಿತ್ರದ ಅತಿಥಿ ಪಾತ್ರ ಮಾಡಲು ಒಪ್ಪಿರುವುದುದಾಗಿ ನಟ ಆಮೀರ್‌ ಖಾನ್ ಅವರು ಹೇಳಿ ದ್ದಾರೆ‌.

2024ರ ಆಗಸ್ಟ್ ನಿಂದಲೂ ಕೂಲಿ ಚಿತ್ರದಲ್ಲಿ ಆಮೀರ್‌ ಖಾನ್ ಅವರ ಅತಿಥಿ ಪಾತ್ರದ ಬಗ್ಗೆ ವದಂತಿಗಳು ಹರಡುತ್ತಿವೆ. 2025ರ ಮಾರ್ಚ್ 24 ರಂದು ನಟ ಆಮೀರ್‌ ಖಾನ್ ಅವರ ಜೊತೆಗಿನ ಫೋಟೊವನ್ನು ಲೋಕೇಶ್ ಕನಗರಾಜ್ ಅವರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೊ ಕೂಲಿ ಚಿತ್ರದ ಸೆಟ್‌ನಂತೆ ಕಾಣಿಸಿಕೊಂಡಿತ್ತು. ಇದೀಗ ಅವರೇ ಸ್ವತಃ ನಟಿಸುವ ಬಗ್ಗೆ ಸ್ಪಷ್ಟನೆ ನೀಡಿದ್ದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಇದನ್ನು ಓದಿ: Father Movie: ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು ʼಫಾದರ್ʼ ಚಿತ್ರದ ನೂತನ ಪೋಸ್ಟರ್

ಕೂಲಿ ಸಿನಿಮಾವು ಕಮರ್ಶಿಯಲ್ ಆ್ಯಕ್ಷನ್ ಥ್ರಿಲ್ಲರ್ ಆಗಿರಲಿದ್ದು ಇದನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಈ ಸಿನಿಮಾ ಬಹು ತಾರಾಗಣದ ಸಂಗಮವನ್ನು ಕೂಡ ಹೊಂದಿದೆ.ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟ ರಜನಿಕಾಂತ್, ಖ್ಯಾತ ನಟ ನಾಗಾ ರ್ಜುನ, ಉಪೇಂದ್ರ, ಸೌಬಿನ್ ಶಾಹಿರ್, ಸತ್ಯರಾಜ್, ಶ್ರುತಿ ಹಾಸನ್, ರೆಬಾ ಮೋನಿಕಾ ಜಾನ್, ಮೋನಿಶಾ ಬ್ಲೆಸ್ಸಿ ಸೇರಿ ದಂತೆ ಬಹುತೇಕ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಕೂಲಿ ಚಿತ್ರವು ಆಗಸ್ಟ್ 14, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.