ನವದೆಹಲಿ: ಕಾಂತಾರ ಚಾಪ್ಟರ್1 (Kantara: Chapter 1) ಸಿನಿಮಾ ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದ್ದು ಈಗಾಗಲೇ 600 ಕೋಟಿಗೂ ಅಧಿಕ ಕಲೆಕ್ಷನ್ ಕೂಡ ಮಾಡಿದೆ. ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲ ಯಾಳಂ ಭಾಷೆಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ಕಥಾ ವಸ್ತು, ಸಂಪ್ರದಾಯ , ಕಾಡಿನ ಪರಿಸರ, ಐತಿಹಾಸಿಕ ಹಿನ್ನೆಲೆ ಎಲ್ಲವೂ ಪ್ಲಸ್ ಪಾಂಯ್ಟ್ ಆಗಿದ್ದು ತೆರೆ ಮೇಲೆ ನಟ ರಿಷಬ್ ಶೆಟ್ಟಿ ನಟಿ ರುಕ್ಮಿಣಿ ವಸಂತ್ ಹೈಲೈಟ್ ಆಗಿದ್ದಾರೆ. ಅವರಂತೆ ಉಳಿದ ನಟರು ಸಣ್ಣ ಪುಟ್ಟ ಪಾತ್ರ ಮಾಡಿದ್ದರೂ ಅವರ ನಟನೆಗೂ ಕೂಡ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಅಂತೆಯೇ ಇದೇ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದ ನಟ ಗುಲ್ಶನ್ ದೇವಯ್ಯ (Gulshan Devaiah) ಅವರ ಅತ್ಯದ್ಭುತ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅವರು ಕದಂಬರ ಕಾಲದ ಕುಲಶೇಖರ ರಾಜ ಎಂಬ ಪಾತ್ರ ನಿಭಾಯಿಸಿದ್ದು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಆದರೆ ಇದಕ್ಕು ಮೊದಲೇ ಕನ್ನಡದ ಖ್ಯಾತ ಸಿನಿಮಾ ಒಂದರಲ್ಲಿ ಅವರಿಗೆ ನಟಿಸುವ ಆಫರ್ ಬಂದಿತ್ತಂತೆ ..ಹಾಗಿದ್ರೆ ಈ ಸಿನಿಮಾ ರಿಜೆಕ್ಟ್ ಮಾಡಲು ಕಾರಣವೇನು.
ಕರ್ನಾಟಕದ ಕೊಡಗು ಮೂಲದವರಾದ ಗುಲ್ಶನ್ ದೇವಯ್ಯ ಅವರು ಕನ್ನಡ ಸಿನಿಮಾದಲ್ಲಿ ನಟಿಸಿದವರಲ್ಲ ಬದಲಾಗಿ ಬಾಲಿವುಡ್‌ನ ಅನೇಕ ಸಿನಿಮಾ ಹಾಗೂ ವೆಬ್ ಸೀರಿಸ್ ನಲ್ಲಿ ಅಭಿನ ಯಿಸಿದ್ದಾರೆ. ಕನ್ನಡದಲ್ಲಿ ಇವರಿಗೆ ಈ ಹಿಂದೆ ಲೂಸಿಯಾ (Lucia) ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡ ಲಾಗಿತ್ತು. ಆದರೆ ಅವರು ಆ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಅಭಿನಯಿಸಿದ್ದು ಇದು ಅವರ ಮೊದಲ ಕನ್ನಡ ಚಿತ್ರವಾಗಿದೆ.
ಇತ್ತೀಚೆಗಷ್ಟೇ ಮಾಧ್ಯಮ ಒಂದರ ಸಂದರ್ಶನದಲ್ಲಿ ಪಾಲ್ಗೊಂಡ ಗುಲ್ಶನ್ ದೇವಯ್ಯ ಅವರು ತಾವು ಕನ್ನಡ ಸಿನಿಮಾದಲ್ಲಿ ಇಷ್ಟು ಸಮಯದಲ್ಲಿ ಅಭಿನಯಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ವಿಚಾರ ವನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಸಿನಿಮಾ ಕ್ಷೇತ್ರಕ್ಕೆ ಹೋಗುವ ಮುನ್ನ ಇಂಗ್ಲಿಷ್ ನಾಟಕದಲ್ಲಿ ರಂಗ ಕಲಾವಿದರಾಗಿ ಅಭಿನಯಿಸಿದ್ದರು. ಆ ಸಂದರ್ಭದಲ್ಲಿ ಅವರಿಗೆ ಲೂಸಿಯಾ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಕೂಡ ಇಂಗ್ಲಿಷ್ ಡ್ರಾಮಾ ಆರ್ಟಿಸ್ಟ್ ಆಗಿದ್ದು ಈ ಸಿನಿಮಾಕ್ಕೆ ಗುಲ್ಶನ್ ಅವರಿಗೆ ಕಾಲ್ ಶೀಟ್ ಕೂಡ ಕೇಳಿದ್ದರು.
ಇದನ್ನೂ ಓದಿ:Coolie Movie: ಕಿರುತೆರೆಗೆ ಎಂಟ್ರಿ ಕೊಟ್ಟ ʼಕೂಲಿʼ; ಎಲ್ಲಿ ಯಾವಾಗ ನೋಡಬಹುದು ರಜನಿಕಾಂತ್ ಚಿತ್ರ?
'ಲೂಸಿಯಾ' ಸಿನಿಮಾದಲ್ಲಿ ನಟಿಸಲು ಆಫರ್ ಬಂದಾಗ ಗುಲ್ಶನ್ ದೇವಯ್ಯ ಅವರಿಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬಂದಿತ್ತು. ಅದರ ನಡುವೆ ನಟ, ನಿರ್ದೇಶಕ ಪವನ್ ಕುಮಾರ್ ಲೂಸಿಯಾ ಸಿನಿಮಾಕ್ಕೆ ಒಂದು ವರ್ಷ ಕಾಲ್‌ಶೀಟ್ ಕೇಳಿದ್ದಾರೆ. ಈಗಾಗಲೇ ಬಾಲಿವುಡ್‌ನ ಅನೇಕ ಸಿನಿಮಾ ಜೊತೆ ಟೈ ಅಪ್ ಆದ ಕಾರಣ ಒಂದು ವರ್ಷ ಬಾಲಿವುಡ್ ನಿಂದ ದೂರ ಇರುವುದಕ್ಕೆ ಗುಲ್ಶನ್ ಅವರಿಗೆ ಸಾಧ್ಯವಿರಲಿಲ್ಲ. ಹೀಗಾಗಿ ಅವರು ಈ ಆಫರ್ ಕೈ ಬಿಟ್ಟಿದ್ದಾರೆ.
ಲೂಸಿಯಾ ಸಿನಿಮಾ ಆಫರ್ ನಂತೆಯೆ ಸಿಹಿ-ಕಹಿ ಚಂದ್ರು ಅವರ 'ಯಾಕಿಂಗ್ ಆಡ್ತಿರೋ' ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿದೆ. ಮೂರು ದಿನಗಳ ಕಾಲ ಈ ಸೀರಿಯಲ್ ಕೆಲಸದಲ್ಲಿ ಅವರು ಪಾಲ್ಗೊಂಡಿದ್ದಾರೆ. ಆ ಸೀರಿಯಲ್‌ನಲ್ಲಿ ಅವರ ಅಭಿನಯಕ್ಕೆ 500 ರೂಪಾಯಿ ಸಂಭಾವನೆ ಕೂಡ ಸಿಕ್ಕಿದೆ ಎಂದು ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಈ ಮೂಲಕ ಲೂಸಿಯಾ ದಲ್ಲಿ ಅವರು ಅಭಿನಯಿಸಿದ್ದರೆ ಅದೇ ಅವರ ಮೊದಲ ಸಿನಿಮಾವಾಗುತ್ತಿತ್ತು ಎಂದು ಹೇಳಿದ್ದಾರೆ.