Rishab Shetty: ಕ್ಲೈ ಮ್ಯಾಕ್ಸ್ ಶೂಟಿಂಗ್ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಏನಾಗಿತ್ತು? ಫೋಟೋ ವೈರಲ್
Kantara Movie: ಕಾಂತಾರ ಹವಾ ನೋಡಿ ಬಿ ಟೌನ್ ಕೂಡ ಬೆಚ್ಚಿಬಿದ್ದಿದೆ. ಆದರೆ, ಶೂಟಿಂಗ್ ಸಮಯದ ಕಷ್ಟಗಳನ್ನ ಇದೀಗ ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದು, ಇದರಿಂದ ಸಿನಿಮಾ ಯಶಸ್ಸಿಗಾಗಿ ರಿಷಬ್ ಅವರ ಡೆಡಿಕೇಷನ್ ಹೇಗಿತ್ತು? ಎಂದು ತಿಳಿಯಬಹುದು. ಫೋಟೋ ನೋಡಿ ಬೇಸರದ ಜತೆಗೆ ನಟನನ್ನು ಫ್ಯಾನ್ಸ್ ಹಾಡಿ ಹೊಗಳುತ್ತಿದ್ದಾರೆ.

-

ಬೆಂಗಳೂರು ಅ. 13: ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ ಸಿನಿಮಾ (Kantara Movie) ಬಾಕ್ಸ್ ಆಫೀಸ್‌ನಲ್ಲಿ ಶೇಕ್ ಮಾಡುತ್ತಿದೆ. ಪ್ರಪಂಚದಾದ್ಯಂತ ಸಖತ್ ಸೌಂಡ್ ಮಾಡ್ತಿದೆ. ವರದಿಯ ಪ್ರಕಾರ ಬಾಕ್ಸಾಫೀಸಲ್ಲಿ (Box Office) 600ಕ್ಕೂ ಹೆಚ್ಚು ಕೋಟಿ ಬಾಚಿರುವ ಕಾಂತಾರ ಬಗೆಗಿನ ಕ್ರೇಜ್ ಒಂದು ವಾರವಾದರೂ ತಗ್ಗಿಲ್ಲ. ಕಾಂತಾರ ಹವಾ ನೋಡಿ ಬಿ ಟೌನ್ ಕೂಡ ಬೆಚ್ಚಿಬಿದ್ದಿದೆ. ಆದರೀಗ ಸಿನಿಮಾ ಯಶಸ್ಸಿನ ಹಿಂದೆ ರಿಷಬ್ ಅವರ ಡೆಡಿಕೇಶನ್ (Dedication) ಹೇಗಿತ್ತು? ಅನ್ನೋದು ಈಗ ರಿವೀಲ್ ಆಗಿದೆ. ನಟನ ಫೋಟೋ ನೋಡಿ ಫ್ಯಾನ್ಸ್ ಹಾಡಿ ಹೊಗಳುತ್ತಿದ್ದಾರೆ.
ಶೂಟಿಂಗ್ ಸಮಯದ ಕಷ್ಟಗಳನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್, ನೆಚ್ಚಿನ ನಟನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
ರಿಷಬ್ ಪೋಸ್ಟ್ ಏನು?
ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದು ಹೀಗೆ, Climax shooting ನ ಸಮಯ… ಊದಿಕೊಂಡಿದ್ದ ಕಾಲು , ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ .. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ವರದಿಯ ಪ್ರಕಾರ ಎರಡೇ ವಾರಕ್ಕೆ 600ಕೋಟಿ ಗಡಿ ದಾಟಿದ ಕಾಂತಾರ ಚಾಪ್ಟರ್ 1 ಹೊಸ ದಾಖಲೆ ಬರೆದಿದೆ. ರಿಲೀಸ್ ಆದ 11 ದಿನಕ್ಕೆ ಕರ್ನಾಟಕದಲ್ಲಿ 191 ಕೋಟಿ ಗಳಿಕೆ ಕಂಡ ಕಾಂತಾರ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಹಬ್ಬದ ದಿನಗಳಲ್ಲಿ ಬಂಪರ್!
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿದೆ. ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಮತ್ತೊಂದು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಬರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು, ಸಹಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ದೀಪಾವಳಿ ಹಬ್ಬ ಸನಿಹದಲ್ಲಿದ್ದು, ಹಬ್ಬಕ್ಕೆ ಕಲೆಕ್ಷನ್ನಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ತೆಲುಗು, ತಮಿಳು ಹಾಗೂ ಉತ್ತರದ ಭಾಗಗಳಲ್ಲಿಯೂ ಸಹ ಹವಾ ಸೆನ್ಷೇಷನ್ ಕ್ರಿಯೇಟ್ ಮಾಡ್ತಿದೆ.