ನವದೆಹಲಿ: ಸೆಲೆಬ್ರಿಟಿಗಳು ತೆರೆ ಮೇಲೆ ಅದೆಷ್ಟೇ ದೊಡ್ಡ ಹೀರೋ ಹೀರೋಯಿನ್ ಆಗಿದ್ದರು ಕೂಡ ಅವರಿಗೂ ಒಂದು ವೈಯಕ್ತಿಕ ಬದುಕಿದೆ ಎಂಬುದನ್ನು ಎಷ್ಟೋ ಬಾರೀ ಅಭಿಮಾನಿಗಳು ಈ ವಿಚಾರ ವನ್ನು ಮರೆತುಬಿಡುತ್ತಾರೆ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ಸೆಲೆಬ್ರಿಟಿಗಳನ್ನು ಕಂಡೊಡನೆ ಅವರು ಫೋಟೊ ತೆಗೆಯುವುದು, ಸೆಲ್ಫಿ ಕೇಳುವುದು ಇಂತಹದ್ದನ್ನು ಬಹುತೇಕರು ಮಾಡುತ್ತಾರೆ. ಕೆಲವು ಸೆಲೆಬ್ರಿಟಿಗಳು ಫೋಟೊಗೆ ನಗುತ್ತಾ ಸಮ್ಮತಿ ನೀಡಿದರೆ ಇನ್ನು ಕೆಲವು ಸೆಲೆಬ್ರಿಟಿಗಳಿಗೆ ಅಭಿಮಾನಿಗಳ ಈ ಸೆಲ್ಫಿ ಬೇಡಿಕೆಯೇ ಒಂದು ದೊಡ್ಡ ಸಮಸ್ಯೆ ಆಗುವುದು ಇದೆ.
ಸಿನಿಮಾ ಸಂಬಂಧಿತ ಕಾರ್ಯಕ್ರಮ ಇರಲಿ ಇಲ್ಲವೇ ವೈಯಕ್ತಿಕ ಕಾರ್ಯಕ್ರಮಕವೇ ಇರಲಿ, ಸೆಲೆಬ್ರಿಟಿಗಳು ಈ ಸೆಲ್ಫಿ ಕಾಟಕ್ಕೆ ಆಗಾಗ ಬೇಜಾರು ಪಟ್ಟುಕೊಳ್ಳುತ್ತಿರುತ್ತಾರೆ. ಹೀಗಾಗಿ ಹಬ್ಬ ಹರಿದಿನ ಏನೆ ಇದ್ದರೂ ಬಹುತೇಕ ಸೆಲೆಬ್ರಿಟಿಗಳು ಬಾಡಿಗಾರ್ಡ್ ಗಳ ಮೊರೆ ಹೋಗುತ್ತಾರೆ. ಆದರೆ ಹೀಗೆ ನೇಮಿಸಿದ್ದ ಬಾಡಿಗಾರ್ಡ್‌ಗಳಿಂದಲೂ ಕೆಲವರು ಸಮಸ್ಯೆ ಅನುಭವಿಸಿದ್ದೂ ಇದೆ. ಸದ್ಯ ಬಾಲಿವುಡ್ ನಟಿ ಕಾಜೋಲ್ (Kajol) ಅವರು ಕೂಡ ತಮ್ಮದೆ ಬಾಡಿಗಾರ್ಡ್‌ನಿಂದ ಕಿರುಕುಳ ಅನುಭವಿಸಿದ್ದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿರುವ ಕಾಜೋಲ್ ಅವರಿಗೆ ಹಬ್ಬ ಆಚರಣೆ ಕಾರ್ಯಕ್ರಮಗಳೆಂದರೆ ಮೊದಲಿನಿಂದಲೂ ಬಹಳ ಇಷ್ಟ. ನಟಿ ಕಾಜೋಲ್ ಅವರು ಬೆಂಗಾಲಿ ಮೂಲದವರಾಗಿದ್ದು ಅವರ ಸಂಪ್ರದಾಯ ಆಚಾರ ವಿಚಾರ ಹಾಗೂ ಆಚರಣೆ ಎಲ್ಲವೂ ಸ್ವಲ್ಪ ಭಿನ್ನ. ಅಂತೆಯೇ ಪ್ರತಿ ವರ್ಷದಂತೆ ಈ ಬಾರಿ ಕೂಡ ಅದ್ಧೂರಿ ದುರ್ಗಾ ಪೂಜೆಯ ಸಂಭ್ರಮದಲ್ಲಿ ನಟಿ ಕಾಜೋಲ್ ಅವರು ಭಾಗಿಯಾಗಿದ್ದಾರೆ. ಈ ವೇಳೆ ಅವರ ಬಾಡಿಗಾರ್ಡ್ ಇವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ.
ಬಾಡಿಗಾರ್ಡ್ ತನ್ನೊಂದಿಗೆ ಈ ರೀತಿ ವರ್ತಿಸಬಹುದು ಎಂಬ ನಿರೀಕ್ಷೆ ಕೂಡ ನಟಿ ಕಾಜೋಲ್ ಅವರಿಗೆ ಇರಲಿಲ್ಲ. ಅವರು ಮರು ಕ್ಷಣವೇ ದಿಗ್ಭ್ರಾಂತರಾಗಿ ಆಶ್ಚರ್ಯದಿಂದ ಕೋಪದಲ್ಲಿ ಬಾಡಿ ಗಾರ್ಡ್‌ನತ್ತ ನೋಡಿದ್ದಾರೆ. ಆನಂತರ ಬಾಡಿಗಾರ್ಡ್ ಕೈಹಿಡಿದು ಮೆಟ್ಟಿಲು ಹತ್ತಿ ನಡೆದಿದ್ದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟುಮಾಡಿದೆ. ಇದನ್ನು ಕಂಡ ಕೆಲವು ನೆಟ್ಟಿಗರು ಬಾಡಿ ಗಾರ್ಡ್ ವರ್ತನೆ ಬಗ್ಗೆ ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಆತ ಕಾಳಜಿ ಯಿಂದ ಈ ತರ ಮಾಡಿದ್ದು ಅದನ್ನು ತಪ್ಪಾಗಿ ಭಾವಿಸಬಾರದು ಎಂದು ಸಮರ್ಥಿಸುತ್ತಿದ್ದಾರೆ.
ಇದನ್ನೂ ಓದಿ:Kantara Chapter 1 Movie: ʼಕಾಂತಾರ: ಚಾಪ್ಟರ್ 1ʼ ಚಿತ್ರ ಯಾಕಾಗಿ ನೋಡಬೇಕು? ಇಲ್ಲಿದೆ 5 ಕಾರಣಗಳು
ನವರಾತ್ರಿ ಹಬ್ಬದಲ್ಲಿ ನಟಿ ಕಾಜೋಲ್ ಮತ್ತು ರಾಣಿ ಮುಖರ್ಜಿ ಅವರು ಪ್ರತಿ ವರ್ಷ ದಂತೆ ಈ ಬಾರಿ ಕೂಡ ಭಾಗಿಯಾಗಿದ್ದಾರೆ. ಹಬ್ಬದ ಸಂದರ್ಭದಲ್ಲಿ ಸಿಂಧೂರ್ ಖೇಲಾ ಹಬ್ಬ ಕೂಡ ಆಚರಿಸುವ ಸಂಪ್ರದಾಯ ಇದೆ. ಮದುವೆಯಾದ ಮಹಿಳೆಯರು ಪರಸ್ಪರ ಸಿಂಧೂರ ಹಂಚಿಕೊಂಡು ಸಂಭ್ರಮ ಪಡುವ ಹಬ್ಬ ಇದಾಗಿದೆ. ನಟಿ ಕಾಜೋಲ್ ಕೆಂಪು ಮತ್ತು ಬಿಳಿ ಸೀರೆಯನ್ನು ಬಂಗಾಳಿ ಶೈಲಿಯಲ್ಲಿ ಧರಿಸಿಕೊಂಡು ಬಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ದುರ್ಗಾದೇವಿಗೆ ಪೂಜೆ ಮಾಡಿ ಸಿಂಧೂರ್ ಖೇಲಾ ಹಬ್ಬದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಈ ವೇಳೆ ಮೆಟ್ಟಿಲು ಇಳಿದು ಬರುತ್ತಿದ್ದ ನಟಿ ಕಾಜೋಲ್ ಅವರನ್ನು ಬಾಡಿಗಾರ್ಡ್ ತಡೆಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆ ನಂತರ ನಡೆದುಕೊಂಡು ಬರುತ್ತಿದ್ದ ಕಾಜೋಲ್ ಅವರ ಎದೆಯ ಭಾಗಕ್ಕೆ ಕೈ ಹಾಕಿದ್ದು ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
1992 ರಲ್ಲಿ 'ಬೇಕೂದಿ' ಚಿತ್ರದೊಂದಿಗೆ ತಮ್ಮ ಸಿನಿ ಪಯಣ ಆರಂಭಿಸಿದ್ದ ನಟಿ ಕಾಜೋಲ್ ಅವರು ಬಳಿಕ ಕೇವಲ 17ನೇ ವಯಸ್ಸಿಗೆ 'ಬಾಜಿಗಾರ್' ,'ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೇ' ,'ಕುಚ್ ಕುಚ್ ಹೋತಾ ಹೈ' ಮತ್ತು 'ಕಭಿ ಖುಷಿ ಕಭಿ ಗಮ್' ವಿಐಪಿ 2, ವಿ ಆರ್ ಫ್ಯಾಮಿಲಿ, ಓಂ ಶಾಂತಿ ಓಂ ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಇದರ ಜೊತೆಗೆ ತಮ್ಮ ಅದ್ಭುತ ನಟನೆಗೆ ಅನೇಕ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ.