ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushka Shetty: ಘಾಟಿ ಸಿನಿಮಾ ಸೋತ ಬೆನ್ನಲ್ಲೆ ನಟಿ ಅನುಷ್ಕಾ ಈ ನಿರ್ಧಾರ ಕೈಗೊಂಡಿದ್ದೇಕೆ?

Anushka Shetty: ಅನುಷ್ಕಾ ನಟನೆಯ 'ಘಾಟಿ' ಸಿನಿಮಾ ಕಳೆದ ವಾರವಷ್ಟೇ ತೆರೆಗೆ ಬಂದಿದ್ದು ಸಿನಿಮಾ ರಿಲೀಸ್ ಗೂ ಮುನ್ನವೇ ಬಹಳ ನಿರೀಕ್ಷೆ ಮೂಡಿಸಿತ್ತು. ಆದರೆ ಸಿನಿಮಾ ತೆರೆ ಮೇಲೆ ಬಂದ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಇವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತು ಗಳು ಕೇಳಿಬಂದರೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಪಡೆಯಲೇ ಇಲ್ಲ. ಇದರ ಬೆನ್ನಲ್ಲೆ ನಟಿ ಅನುಷ್ಕಾ ಶೆಟ್ಟಿ ಅವರು ಸೋಶಿಯಲ್ ಮಿಡಿಯಾದಿಂದಲೂ ದೂರ ಉಳಿಯುವುದಾಗಿ ಸ್ವತಃ ಅವರೇ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನವದೆಹಲಿ: ಅರುಂಧತಿ, ಸಿಂಗಂ, ಬಾಹುಬಲಿ ಸಿನಿಮಾ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಸದಾ ಒಂದಲ್ಲ ಒಂದು ವಿಚಾರ ದಿಂದ ಸುದ್ದಿಯಲ್ಲಿರುತ್ತಾರೆ. ವಿಭಿನ್ನವಾದ ಕಥೆ ಗಳಿಗೆ ಆಯಾ ಪಾತ್ರಕ್ಕೆ ತಕ್ಕಂತೆ ನಟಿಸಿ ನಟಿ ಅನುಷ್ಕಾ ಶೆಟ್ಟಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆನಿಂತು ಅಭಿಮಾನಿಗಳ‌ ಮನಗೆದ್ದಿದ್ದಾರೆ. ಇತ್ತೀಚೆಗೆ ಅವರ ನಟನೆಯ ಸಿನಿಮಾಗಳ ಸಂಖ್ಯೆ ಬಹಳ ಕಡಿಮೆ ಇದ್ದು ಅವರಿಗೆ ಬರುವ ಸಿನಿಮಾ ಆಫರ್ಸ್ ಕೂಡ ಕಡಿಮೆ ಆಗಿದೆ ಎನ್ನಬಹುದು. ಇವರ ನಟನೆಯ 'ಘಾಟಿ' ಸಿನಿಮಾ ಕಳೆದ ವಾರವಷ್ಟೇ ತೆರೆಗೆ ಬಂದಿದ್ದು ಸಿನಿಮಾ ರಿಲೀಸ್‌ಗೂ ಮುನ್ನವೇ ಬಹಳ ನಿರೀಕ್ಷೆ ಮೂಡಿಸಿತ್ತು. ಆದರೆ ಸಿನಿಮಾ ತೆರೆ ಮೇಲೆ ಬಂದ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಇವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದರೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಪಡೆಯಲೇ ಇಲ್ಲ. ಇದರ ಬೆನ್ನಲ್ಲೆ ನಟಿ ಅನುಷ್ಕಾ ಶೆಟ್ಟಿ ಅವರು ಸೋಶಿಯಲ್ ಮಿಡಿಯಾದಿಂದಲೂ ದೂರ ಉಳಿಯುವುದಾಗಿ ಸ್ವತಃ ಅವರೇ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಅವರಿಗೆ ವಯಸ್ಸು 40 ದಾಟಿದರೂ ಈಗಲೂ ಬಹಳ ಯಂಗ್ ಆಗೆ ಇದ್ದಾರೆ‌. ಆದರೆ ಹೊಸ ನಟಿಯರ ಆಗಮನದಿಂದಾಗಿ ಸಿನಿಮಾದಲ್ಲಿ ತನಗೆ ಹೋಲುವ ಪಾತ್ರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಟಿ ಅನುಷ್ಕಾ ಬಹುತೇಕ ಸಿನಿಮಾ ಪ್ರಾಜೆಕ್ಟ್ ರಿಜೆಕ್ಟ್ ಮಾಡಿ ದ್ದಾರೆ. ಸಿನಿಮಾ ಸಂಬಂಧಿತ ಕಾರ್ಯಕ್ರಮ , ಸಾರ್ವಜನಿಕ ರಂಗದಲ್ಲಿ ಕೂಡ ಕಾಣಿಸಿ ಕೊಂಡಿರಲಿಲ್ಲ. ಅವರಿಗೆ ಏನೊ ಆಗಿದೆ. ಅನಾರೋಗ್ಯವಿದ್ದಿರಬೇಕು. ಅನುಷ್ಕಾ ಮದುವೆ ಯಾಗ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡಿತ್ತು. ಇದೀಗ ಅವರೇ ಬಹುತೇಕ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.



ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕೈ ಬರಹ ಇರುವ ಪೋಸ್ಟ್ ಒಂದನ್ನು ಹಂಚಿ ಕೊಂಡಿದ್ದಾರೆ. ಸೋಶಿಯಲ್ ಮಿಡಿಯಾವನ್ನು ಕೆಲ ದಿನಗಳ ಮಟ್ಟಿಗೆ ಗುಡ್‌ಬೈ ಹೇಳಲು ಮುಂದಾಗಿದ್ದಾರೆ ಎಂಬುದನ್ನು ಕೂಡ ತಿಳಿಸಿದ್ದು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ಸ್ವಲ್ಪ ದೂರ ಸರಿಯಲು ಇಷ್ಟ ಪಡುತ್ತಿದ್ದೇನೆ. ನಾವೆಲ್ಲರೂ ಸೋಶಿ ಯಲ್ ಮೀಡಿಯಾ ಇಲ್ಲದೇ ಹೇಗೆ ಇದ್ದೆವೋ ಅದೇ ರೀತಿ ಬದುಕುವ ಇಚ್ಛೆ ನನ್ನದಾಗಿದೆ. ಇನ್ನಷ್ಟು ಕಥೆಗಳು ಹಾಗೂ ಪ್ರೀತಿಯೊಂದಿಗೆ ಮತ್ತೆ ವಾಪಸ್ ಬರ್ತೀನಿ ಎಂದು ಕೈಬರಹದಲ್ಲಿ ಬರೆದ ಕಾಗದದ ಫೋಟೊವನ್ನು ಅನುಷ್ಕಾ ಶೆಟ್ಟಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ:Kantara Movie: ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲೂ ರಿಲೀಸ್‌ ಆಗಲಿದೆ ʼಕಾಂತಾರ ಚಾಪ್ಟರ್ 1ʼ

ಕ್ರಿಶ್ ನಿರ್ದೇಶನದ 'ಘಾಟಿ' ಚಿತ್ರದಲ್ಲಿ ನಟಿ ಅನುಷ್ಕಾ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದರು. ಅವರ ಆ್ಯಕ್ಟಿಂಗ್ ಗೆ ಪ್ರೇಕ್ಷಕರು ಮನ ಸೋತರು ಸಿನಿಮಾ ಮಾತ್ರ ಹಿಟ್ ಆಗಲೇ‌ ಇಲ್ಲ. ಒಟ್ಟಿನಲ್ಲಿ ನಟಿ ಅನುಷ್ಕಾ ಅವರ ಈ ವೈಯಕ್ತಿಕ ನಿರ್ಧಾರವು ಅಭಿಮಾನಿಗಳಿಗೆ ಅನೇಕ ಕುತೂಹಲ ಹುಟ್ಟಿಸುವಂತೆ ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆಯೂ ನಟಿ ಅನುಷ್ಕಾ ಶೆಟ್ಟಿ ಅಷ್ಟೇನು ಆಕ್ವೀವ್ ಆಗಿ ಇರಲಿಲ್ಲ. ಕೆಲವೊಂದು ಪೋಸ್ಟ್ ಮಾತ್ರವೇ ಮಾಡುತ್ತಿದ್ದರು. ಇದೀಗ ಮತ್ತೆ ಸೋಶಿಯಲ್ ಮಿಡಿಯಾ‌ ದಿಂದ ಅಂತರ ಕಾಯ್ದುಕೊಳ್ಳಲು ಅವರು ಇಚ್ಛಿಸಿದ್ದಾರೆ. ಸದ್ಯ ಘಾಟಿ ಸಿನಿಮಾ ವಿಫಲವಾದ ಬಳಿಕ ಅವರು ಮಲಯಾಳಂನ 'ಕಥನಾರ್' ಎಂಬ ಮತ್ತೊಂದು ಸಿನಿಮಾದಲ್ಲಿ ನಟಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಕೂಡ ತಮ್ಮ ಪೋಸ್ಟ್ ಮೂಲಕ ಭರವಸೆ ಮೂಡಿಸಿದ್ದಾರೆ.