ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Aamir Khan: ಸೂಪರ್‌ ಹಿಟ್‌ ಚಿತ್ರ ʻದಂಗಲ್‌ʼ ಪಾಕ್‌ನಲ್ಲಿ ಏಕೆ ರಿಲೀಸ್‌ ಆಗಿಲ್ಲ? ಆಮೀರ್‌ ಖಾನ್‌ ಬಿಚ್ಚಿಟ್ಟ ಆ ಸತ್ಯ ಏನು?

ಬಾಲಿವುಡ್‌ ನಟ ಆಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾವು ಬಿಡುಗಡೆ 2016ರಲ್ಲಿ ತೆರೆ ಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು. ಆದರೆ ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲಿಲ್ಲ. ಇದರ ಕುರಿತು ಅನೇಕರಿಗೆ ಹಲವು ಗೊಂದಲಗಳಿದ್ದವು. ಇದರ ಬಗ್ಗೆ ಮಾತನಾಡಿರುವ ನಟ ಆಮೀರ್‌ಖಾನ್‌ ಪಾಕಿಸ್ತಾನ ಸೆನ್ಸರ್‌ ತಂಡ ಸಿನಿಮಾದಲ್ಲಿದ್ದ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯನ್ನು ತೆಗೆಯುವಂತೆ ಹೇಳಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂಬೈ: ಬಾಲಿವುಡ್‌ ನಟ ಆಮೀರ್ ಖಾನ್ (Amir Khan) ಅಭಿನಯದ 'ದಂಗಲ್' (Dangal) ಸಿನಿಮಾವು 2016ರಲ್ಲಿ ತೆರೆ ಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು. ಆದರೆ ಈ ಸಿನಿಮಾವನ್ನು ಪಾಕಿಸ್ತಾನದಲ್ಲಿ ರಿಲೀಸ್‌ ಮಾಡಿರಲಿಲ್ಲ. ಬಾಲಿವುಡ್‌ ಸಿನಿಮಾಗಳು ಸಾಮಾನ್ಯವಾಗಿ ಪಾಕ್‌ನಲ್ಲಿ ಸೂಪರ್‌ ಹಿಟ್‌ ಆಗುತ್ತವೆ. ಹೀಗಿರುವಾಗ ಇಂಥಹ ಬಿಗ್‌ ಬಜೆಟ್‌, ಸ್ಟಾರ್‌ ನಟನ ಸಿನಿಮಾ ಪಾಕಿಸ್ತಾನದಲ್ಲಿ ರಿಲೀಸ್‌ ಏಕೆ ಆಗಿಲ್ಲ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಇದೀಗ ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ನಟ ಆಮೀರ್‌ ಖಾನ್‌ ಬಿಚ್ಚಿಟ್ಟಿದ್ದಾರೆ. ಸಿನಿಮಾದಿಂದ ಭಾರತೀಯ ಧ್ವಜ ಮತ್ತು ರಾಷ್ಟ್ರಗೀತೆಯನ್ನು ತೆಗೆದುಹಾಕಬೇಕು ಎಂದು ಕೇಳಿತ್ತು. ಆದರೆ ಆಮೀರ್ ಖಾನ್ ಮತ್ತು ಚಿತ್ರತಂಡ ಇದಕ್ಕೆ ಒಪ್ಪಿರಲಿಲ್ಲ ಎನ್ನುವ ರಹಸ್ಯ ಇದೀಗ ಹೊರಬಿದ್ದಿದೆ.

ಈ ಕುರಿತು ಇತ್ತೀಚಿಗೆ ನಡೆದ ಆಪ್ ಕೀ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೀರ್ ಖಾನ್, ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನದ ಸೆನ್ಸಾರ್ ಮಂಡಳಿ, , ಚಿತ್ರದಲ್ಲಿ ಗೀತಾ ಫೋಗತ್‌ ಗೆಲುವು ಸಾಧಿಸಿದ ದೃಶ್ಯದಲ್ಲಿ ಭಾರತೀಯ ಧ್ವಜ ಹಾರಿಸಿ ಮತ್ತು ರಾಷ್ಟ್ರಗೀತೆ ಹಾಡಲಾಗಿತ್ತು. ಈ ದೃಶ್ಯವನ್ನು ತೆಗೆದುಹಾಕಬೇಕೆಂದು ಪಾಕಿಸ್ತಾನ ಸೆನ್ಸಾರ್ ಮಂಡಳಿ ತಿಳಿಸಿತ್ತು. ಇದನ್ನು ನಿರಾಕರಿಸಿದ ಕಾರಣ ಪಾಕಿಸ್ತಾನದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಿಲ್ಲ. ಈ ವೇಳೆ ಪಾಕಿಸ್ತಾನದಲ್ಲಿ ಚಿತ್ರ ಬಿಡುಗಡೆಯಾಗದಿದ್ದರೆ ಬಿಸಿನೆಸ್ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರ್ಮಾಪಕರು ಹೇಳಿದರು. ಆದರೆ ಯಾರಾದರೂ ನನ್ನ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ತೆಗೆದುಹಾಕಿ ಸಿನಿಮಾ ಬಿಡುಗಡೆ ಮಾಡಲು ಹೇಳಿದರೆ ನಾನು ಒಪ್ಪಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ನಮ್ಮ ರಾಷ್ಟ್ರಗೌರವಕ್ಕೆ ಧಕ್ಕೆ ತರುವ ಯಾವುದನ್ನೂ ನಾನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: General Asim Munir: ಅಮೆರಿಕ-ಪಾಕಿಸ್ತಾನ ಭಾಯ್‌ ಭಾಯ್‌! ಉಗ್ರ ಪೋಷಕ ಪಾಕ್‌ನ ಸೇನಾ ಮುಖ್ಯಸ್ಥನಿಗೆ ದೊಡ್ಡಣ್ಣನ ಆಹ್ವಾನ

ಪಾಕಿಸ್ತಾನಿ ನಟರಿಗೆ ಭಾರತದಲ್ಲಿ ನಿಷೇಧ:

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನ ಬೈಸರಾನ್ ಕಣಿವೆಯಲ್ಲಿ ಪಾಕಿಸ್ತಾನಿ ಮೂಲದ ಉಗ್ರರು 26 ಜನರನ್ನು ಕೊಂದು ಅಟ್ಟಹಾಸ ಮೆರೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ಪಾಕಿಸ್ತಾನಿ ನಟರ ಮೇಲೆ ನಿಷೇಧ ಹೇರಲಾಯಿತು. ಇದಾದ ನಂತರ, ಸರ್ಕಾರವು ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮತ್ತು ಮಾಧ್ಯಮಗಳಿಗೆ ಪಾಕಿಸ್ತಾನ ಮೂಲದ ಸಿನೆಮಾ, ಧಾರಾವಾಹಿ, ಹಾಡುಗಳು, ಪೋಡ್‌ಕಾಸ್ಟ್‌ಗಳು ಮುಂತಾದವುಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚನೆ ನೀಡಿತು. ಜೊತೆಗೆ, ಪಾಕಿಸ್ತಾನಿ ನಟರ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಭಾರತದಲ್ಲಿ ನಿಷೇಧಿಸಲಾಗಿದೆ.

ಆಪರೇಷನ್ ಸಿಂಧೂರ್‌ ಬಗ್ಗೆ ಆಮೀರ್ ಖಾನ್ ಪ್ರತಿಕ್ರಿಯೆ:

ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಆಮೀರ್ ಖಾನ್, ಆಪರೇಷನ್ ಸಿಂಧೂರ್‌ನ ಹೀರೋಗಳಿಗೆ ವಂದನೆಗಳು. ನಮ್ಮ ಸೇನೆಯ ಧೈರ್ಯ, ಶೌರ್ಯ ಮತ್ತು ದೇಶಭಕ್ತಿಗೆ ಕೃತಜ್ಞತೆ. ಪ್ರಧಾನ ಮಂತ್ರಿಗಳಿಗೂ ಧನ್ಯವಾದಗಳು. ಜೈ ಹಿಂದ್, ಎಂದು  ಗೌರವ ಸೂಚಿಸಿದರು.