ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara: Chapter 1: ಮಾಂಸ, ಮದ್ಯ ಸೇವಿಸದೇ 'ಕಾಂತಾರ- 1' ಚಿತ್ರ ನೋಡ್ಬೇಕಾ? ರಿಷಬ್‌ ಕೊಟ್ಟ ಸ್ಪಷ್ಟನೆ ಏನು?

Kantara: Chapter 1: ಕಾಂತಾರ: ಚಾಪ್ಟರ್ 1 ಸಿನಿಮಾ ವೀಕ್ಷಣೆ ಬಗ್ಗೆ ವಿಶೇಷ ಪೋಸ್ಟ್ ಒಂದು ಹರಿ ದಾಡಿತ್ತು. ಸಿನಿಮಾ ನೋಡುಗರು ಮದ್ಯಪಾನ ಮಾಡುವುದಿಲ್ಲ, ಧೂಮಪಾನ ಮಾಡುವುದಿಲ್ಲ ಹಾಗೂ ಮಾಂಸಾಹಾರ ಸೇವಿಸುವುದಿಲ್ಲ ಎಂದು 'ಸಂಕಲ್ಪ’ಮಾಡಿ ಸಿನಿಮಾ ನೋಡಬೇಕು ಎನ್ನುವ ಪೋಸ್ಟ್ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ನಿರ್ದೇಶಕ ರಿಷಭ್‌ ಶೆಟ್ಟಿ (Rishab shetty) ಅವರೇ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನ್ ವೆಜ್ ತಿಂದು ಕಾಂತಾರ ಚಿತ್ರ ನೋಡಂಗಿಲ್ವಾ? ರಿಷಬ್‌ ಏನು ಅಂದ್ರು?

-

Profile Pushpa Kumari Sep 23, 2025 5:08 PM

ಬೆಂಗಳೂರು: ಸಿನಿಪ್ರಿಯರು ಕಾದು ಕುಳಿತಿದ್ದ ಮೋಸ್ಟ್ ಇಂಟ್ರಸ್ಟಿಂಗ್ ಕಾಂತಾರ: ಚಾಪ್ಟರ್ 1’ (kantara chapter 1) ಸಿನಿಮಾದ ಟ್ರೈಲರ್‌ ನಿನ್ನೆ ಬಿಡುಗಡೆಯಾಗಿದೆ.‌ ಟ್ರೈಲರ್‌ ನೋಡಿದ ಹೆಚ್ಚಿನವರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ: ಚಾಪ್ಟರ್ 1 ಸಿನಿಮಾ ವೀಕ್ಷಣೆ ಬಗ್ಗೆ ವಿಶೇಷ ಪೋಸ್ಟ್ ಒಂದು ಹರಿದಾಡಿತ್ತು. ಸಿನಿಮಾ ನೋಡುಗರು ಮದ್ಯಪಾನ ಮಾಡುವುದಿಲ್ಲ, ಧೂಮಪಾನ ಮಾಡುವುದಿಲ್ಲ ಹಾಗೂ ಮಾಂಸಾಹಾರ ಸೇವಿಸು ವುದಿಲ್ಲ ಎಂದು 'ಸಂಕಲ್ಪ’ಮಾಡಿ ಸಿನಿಮಾ ನೋಡಬೇಕು ಎನ್ನುವ ಪೋಸ್ಟ್ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಅವರೇ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಕಾಂತಾರ ಚಿತ್ರತಂಡವು ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದು ಈ ಪೋಸ್ಟ್ ಬಗ್ಗೆಯೂ ರಿಷಬ್‌ ಶೆಟ್ಟಿ ಉತ್ತರ ನೀಡಿದ್ದಾರೆ. ಕಾಂತಾರ: ಚಾಪ್ಟರ್ 1 ಸಿನಿಮಾವು ಒಂದು ದೈವ ಭಕ್ತಿವುಳ್ಳ ಸಿನಿಮಾ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿತ್ತು. ಅದರಲ್ಲಿ ಕಾಂತಾರ ಸಿನಿಮಾ ವೀಕ್ಷಣೆ ಮಾಡುವವರು ಈ ಮೂರು ನಿಯಮಗಳನ್ನು ಪಾಲಿಸಲೇಬೇಕು. ಯಾವುದೇ ರೀತಿಯ ಮದ್ಯಪಾನ, ಧೂಮಪಾನ, ಮಾಂಸಹಾರ ತಿಂದು ಸಿನಿಮಾ ನೋಡುವಂತಿಲ್ಲ. ಮದ್ಯಪಾನ ಮಾಡುವುದಿಲ್ಲ, ಧೂಮಪಾನ ಮಾಡುವುದಿಲ್ಲ ಹಾಗೂ ಮಾಂಸಾಹಾರ ಸೇವಿಸುವುದಿಲ್ಲ ಎಂದು‘ ಸಂಕಲ್ಪ’ಮಾಡಿ ಎಂದು ಬರೆಯಲಾಗಿತ್ತು. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದು ಸುಳ್ಳು ಸುದ್ದಿ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

ಇದನ್ನು ಓದಿ:Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ

ಬಗ್ಗೆ ನಿರ್ದೇಶಕ ರಿಷಬ್‌ ಶೆಟ್ಟಿ ಮಾತನಾಡಿದ್ದು, ಈ ಪೋಸ್ಟ್ ನೋಡಿ ನಮಗೂ ಶಾಕ್ ಆಯಿತು. ಯಾರೋ ನನಗೆ ಆ ಪೋಸ್ಟರ್ ಕಳುಹಿಸಿದ್ದರು. ಪ್ರತಿಯೊಬ್ಬರ ಊಟೋಪಚಾರ ಅವರಿಗೆ ಇಷ್ಟ ವಾದದ್ದು ಹಾಗೂ ಯಾವುದೇ ಅಭ್ಯಾಸಗಳನ್ನು ಯಾರಿಗೆ ಯಾರೂ ಪ್ರಶ್ನೆ ಮಾಡುವ ಇಲ್ಲ. ಅದು ಫೇಕ್ ಪೋಸ್ಟರ್ ಆಗಿದ್ದು ನಮ್ಮ ಗಮನಕ್ಕೂ ಬಂದಿದೆ. ಚಿತ್ರತಂಡಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಪೋಸ್ಟರ್‌ ಹಾಕಿರುವವರು ನಮ್ಮ ಗಮನಕ್ಕೆ ಬಂದಿದ್ದು ಕ್ಷಮೆಯನ್ನೂ ಕೂಡ ಕೇಳಿದ್ದಾರೆ ಎಂದು ರಿಷಭ್ ವೈರಲ್‌ ಪೋಸ್ಟರ್‌ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಕಾಂತಾರ ಸಿನಿ ತಂಡ ಅಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ರಿಷಬ್‌ ಶೆಟ್ಟಿ ದಂಪತಿ, ರುಕ್ಮಿಣಿ ವಸಂತ್‌, ಹೀಗೆ ಚಿತ್ರತಂಡದ ಹಲವು ಗಣ್ಯರು ನೆರೆದಿದ್ದರು.‌ ಅಕ್ಟೋಬರ್ 2ರಂದು 'ಕಾಂತಾರ- 1' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಬರೋಬ್ಬರಿ 6000 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಸಿನಿಪ್ರಿಯರು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.