Sai Pallavi: ಸ್ವಿಮ್ಮಿಂಗ್ ಬಟ್ಟೆ ಧರಿಸಿ ಟ್ರೋಲ್ ಆದ ನಟಿ ಸಾಯಿಪಲ್ಲವಿ! ಫೋಟೋ ನೋಡಿ
Sai Pallavi: ಹೆಚ್ಚು ಸಾಂಪ್ರದಾಯಿಕ ಉಡುಗೆ ತೊಡುಗೆಯಿಂದಲೇ ಕಾಣಿಸಿಕೊಳ್ಳುತ್ತಿದ್ದ ಸಾಯಿ ಪಲ್ಲವಿ ಈ ಬಾರಿ ತಮ್ಮ ಸಹೋದರಿ ಜೊತೆಗೆ ಬೀಚ್‌ಗೆ ತೆರಳಿದ್ದ ವೇಳೆಯಲ್ಲಿ ಸ್ವಿಮ್ಮಿಂಗ್ ಡ್ರೆಸ್ ಧರಿಸಿದ್ದಾರೆ. ಇವರ ಕೆಲವು ಫೋಟೊಗಳು ಇದೀಗ ವೈರಲ್ ಆಗುತ್ತಿದ್ದು ನೆಟ್ಟಿಗರು ನಟಿ ಸಾಯಿ ಪಲ್ಲವಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಟಿ ಸಾಯಿ ಪಲ್ಲವಿ ಪರವಾಗಿ ತಮ್ಮ ಧ್ವನಿ ಎತ್ತಿದ್ದಾರೆ.

-

ನವದೆಹಲಿ: ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಪ್ರೇಮಂ, ಫಿದಾ, ದಿಯಾ, ಮಾರಿ 2,ಗಾರ್ಗಿ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಖ್ಯಾತ ನಾಯಕರ ಜೊತೆಗೆ ಅಭಿನಯಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ವೈದ್ಯ ಕೀಯ ಶಿಕ್ಷಣ ಪಡೆದಿದ್ದರೂ ಡ್ಯಾನ್ಸ್ ಮತ್ತು ನಟನ ಆಸಕ್ತಿಯಿಂದಾಗಿ ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನ್ಯಾಚುರಲ್ ಬ್ಯೂಟಿ ಹಾಗೂ ಸರಳತೆಯಿಂದ ಮತ್ತು ಎಲ್ಲ ಪಾತ್ರಕ್ಕೂ ತಕ್ಕನಾಗಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿ ದ್ದಾರೆ. ಹೆಚ್ಚು ಸಾಂಪ್ರದಾಯಿಕ ಉಡುಗೆ ತೊಡುಗೆ ಯಿಂದಲೇ ಕಾಣಿಸಿಕೊಳ್ಳುತ್ತಿದ್ದ ಇವರು ಈ ಬಾರಿ ತಮ್ಮ ಸಹೋದರಿ ಜೊತೆಗೆ ಬೀಚ್ ಗೆ ತೆರಳಿದ್ದ ವೇಳೆಯಲ್ಲಿ ಸ್ವಿಮ್ಮಿಂಗ್ ಡ್ರೆಸ್ ಧರಿಸಿದ್ದಾರೆ. ಇವರ ಕೆಲವು ಫೋಟೊಗಳು ಇದೀಗ ವೈರಲ್ ಆಗುತ್ತಿದ್ದು ನೆಟ್ಟಿಗರು ನಟಿ ಸಾಯಿ ಪಲ್ಲವಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಟಿ ಸಾಯಿ ಪಲ್ಲವಿ ಪರವಾಗಿ ತಮ್ಮ ಧ್ವನಿ ಎತ್ತಿದ್ದಾರೆ.
ನಟಿ ಸಾಯಿ ಪಲ್ಲವಿ ಅವರು ತಮ್ಮ ಸಹೋದರಿ ಪೂಜಾ ಕಣ್ಣನ್ ಅವರೊಂದಿಗೆ ಇತ್ತೀಚೆಗಷ್ಟೇ ಪ್ರವಾಸಕ್ಕೆಂದು ತೆರಳಿದ್ದಾರೆ. ಬೀಚ್ ಸೈಡ್ ನಲ್ಲಿ ಅವರಿಬ್ಬರು ಖುಷಿಯ ಕ್ಷಣವನ್ನು ಕಳೆದಿದ್ದಾರೆ. ಅಬರಿಬ್ಬರು ಜೊತೆಗಿರುವ ಅನೇಕ ಫೋಟೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನ ಚಿತ್ರಗಳಲ್ಲಿ ಅವರ ತಂಗಿ ಪೂಜಾ ನಟಿ ಸಾಯಿ ಪಲ್ಲವಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡ ಫೋಟೋಗಳು ಇವೆ.
ನಟಿ ಸಾಯಿ ಪಲ್ಲವಿ ಧರಿಸಿದ ಡ್ರೇಸ್ ಬಗ್ಗೆ ಟ್ರೋಲರ್ಸ್ ಅವರ ಬಟ್ಟೆ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಹಾಕಿದ್ದಾರೆ. ಸಾಂಪ್ರದಾಯಿಕ ಉಡುಗೆಯ ನಟಿ ಈಗ ರಿಯಲ್ ಸ್ಟಾರ್ ಆಗಿದ್ದಾರೆ... ಇದೇ ಸಿನಿಮಾದ ಅಸಲಿ ಪ್ರಪಂಚ ಎಂದು ನೆಟ್ಟಿಗರೊಬ್ಬರು ನಟಿಯ ಫೋಟೊಗೆ ಕಾಮೆಂಟ್ ಹಾಕಿದ್ದಾರೆ. ನಟಿ ಸಾಯಿಪಲ್ಲವಿಗೆ ಸರಿಯಾದ ಬಟ್ಟೆ ಹಾಕಬಹುದಿತ್ತಲ್ಲ ಎಂದು ಮತ್ತೊಬ್ಬ ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:Sai Pallavi: ರಾಮಾಯಣ ಸಿನಿಮಾ ಬಗ್ಗೆ ನಟಿ ಸಾಯಿ ಪಲ್ಲವಿ ಫಸ್ಟ್ ರಿಯಾಕ್ಷನ್!
ತಮ್ಮ ನೆಚ್ಚಿನ ನಟಿಯ ಬಗ್ಗೆ ಟ್ರೋಲ್ ಮಾಡುವುದನ್ನು ಕಂಡು ನಟಿ ಸಾಯಿ ಪಲ್ಲವಿ ಅವರ ಅಭಿಮಾನಿಗಳು ಟೋಲರ್ಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಉಡುಗೆಯಾದರೂ ಆಯಾ ಸ್ಥಳದಲ್ಲಿ ಅವುಗಳನ್ನು ಮಾತ್ರ ಧರಿಸಬೇಕು. ಸಾಯಿ ಪಲ್ಲವಿ ಅವರು ಟ್ರೆಡಿಶನಲ್ ಆಗಿದ್ದಾರೆ ಎಂದ ಮಾತ್ರಕ್ಕೆ ಬೀಚ್ ನಲ್ಲಿ ಸಮಯ ಕಳೆಯುವಾಗಲೂಸೀರೆ ಉಡಲು ಆಗುತ್ತಾ? ಅದು ಅವರ ವೈಯಕ್ತಿಕ ವಿಚಾರ. ಅದನ್ನು ಸುಖಾ ಸುಮ್ಮನೆ ಮನ ಬಂದಂತೆ ಟ್ರೋಲ್ ಮಾಡಬೇಡಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ನಟಿ ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಈ ಸಿನಿಮಾ ಪ್ಯಾನ್ಇಂಡಿಯಾ ಮಟ್ಟದಲ್ಲಿ ದೊಡ್ಡ ಯಶಸ್ಸು ಸಿಗುವ ನಿರೀಕ್ಷೆ ಇದೆ.ಇದಾದ ಬಳಿಕ ಸ್ಟಾರ್ ನಟರೊಬ್ಬರ ಜೊತೆಗೂ ನಟಿ ಸಾಯಿ ಪಲ್ಲವಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.