ನವದೆಹಲಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್1 ಸಿನಿಮಾ ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ಮೂಡಿ ಬಂದ ಈ ಸಿನಿಮಾ ರಿಲೀಸ್ ಆಗಿದ್ದ ಮೊದ ಲೆರಡು ವಾರ ಪೀಕ್ ಲೆವೆಲ್ ನಲ್ಲಿ ಕಲೆಕ್ಷನ್ ಮಾಡಿತ್ತು. ಆದರೆ ಮೂರನೇ ವಾರ ಕಲೆಕ್ಷನ್ ಮಟ್ಟ ಕಡಿಮೆಯಾಗಿತ್ತು. ಇದೀಗ ಈ ವಾರ ದೀಪಾವಳಿ ಹಬ್ಬದ ಸಂಭ್ರಮ ಕೂಡ ಬಂದಿದ್ದು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಶನಿವಾರ ಮತ್ತು ಭಾನು ವಾರದಂದು ಸಿನಿಮಾ ವೀಕ್ಷಿಸಲು ಬಹುತೇಕ ಪ್ರೇಕ್ಷಕರ ವರ್ಗ ಬಂದಿದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ಮಟ್ಟ ಏರಿಕೆಯಾಗಿದೆ. ಬರೀ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡಾ ಕಾಂತಾರ ಸಿನಿಮಾ ಸಂಚಲನ ಉಂಟುಮಾಡುತ್ತಿದೆ. ಹಾಗಾದರೆ ಕಾಂತಾರ ಚಾಪ್ಟರ್ 1 (Kantara: Chapter 1) ಸಿನಿಮಾ ಇದುವರೆಗೆ ಮಾಡಿದ್ದ ಕಲೆಕ್ಷನ್ ಎಷ್ಟು?
ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿ ಈಗಾಗಲೇ 17 ದಿನ ಕಳೆದಿದೆ. ಅಕ್ಟೋಬರ್ 18ರಂದು 12.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಅಕ್ಟೋಬರ್ 19 ರಂದು ಈ ಸಿನಿಮಾದ 17.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಕನ್ನಡ ಭಾಷೆಯಲ್ಲಿ 6.25 ಕೋಟಿ ರೂಪಾಯಿ, ತಮಿಳು ವರ್ಷನ್ 1.65 ಕೋಟಿ ರೂಪಾಯಿ, ತೆಲುಗು ವರ್ಷನ್ 1.5 ಕೋಟಿ ರೂಪಾಯಿ, ಹಿಂದಿ ವರ್ಷನ್ 6.35 ಕೋಟಿ ರೂಪಾಯಿ, ಮಲಯಾಳಂ ಭಾಷೆಯಲ್ಲಿ 1.75 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಕೆಜಿಎಫ್ ದಾಖಲೆ ಮೀರುತ್ತಾ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ದಾಖಲೆ ಬರೆದ ವಿಚಾರ ನಮಗೆಲ್ಲ ತಿಳಿದೆ ಇದೆ. ಅಂತೆಯೇ ಕಾಂತಾರ ಸಿನಿಮಾ ಕೆ.ಜಿ.ಎಫ್ ಸಿನಿಮಾದ ದಾಖಲೆ ಯನ್ನು ಮೀರಿ ಮುನ್ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ ಸಿನಿಮಾ 1250 ಕೋಟಿ ರೂಪಾಯಿ ವಿಶ್ವ ಮಟ್ಟದಲ್ಲಿ ಕಲೆಕ್ಷನ್ ದಾಖಲೆ ಮಾಡಿದೆ. ಮುಂದಿನ ದಿನದಲ್ಲಿ ಕಾಂತಾರ ಸಿನಿಮಾ ಕೂಡ ಈ ದಾಖಲೆ ಮೀರುತ್ತದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಕಾಂತಾರ ರಿಲೀಸ್ ಆಗಿ 18 ದಿನಕ್ಕೆ 731.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ ಸಿನಿಮಾ ತಂಡ ಕಲೆಕ್ಷನ್ ಬಗ್ಗೆ ಅಪ್ಡೇಟ್ ಮಾಹಿತಿ ಇನ್ನೂ ಕೂಡ ನೀಡಿಲ್ಲ.
ಕಾಂತಾರ ಚಾಪ್ಟರ್ 1 ಸಿನಿಮಾ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದು ಉತ್ತಮ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಬ್ಯಾನರ್ ನಡಿಯಲ್ಲೇ ನಿರ್ಮಿಸಿದ್ದ 'ಕೆಜಿಎಫ್ 1, ಸಲಾರ್ 1 ಸಿನಿಮಾದ ದಾಖಲೆಗಳನ್ನು ಮಿರಿ ಕಾಂತಾರ ಚಾಪ್ಟರ್ 1 ಸಿನಿಮಾ ಹೊಸ ದಾಖಲೆ ಮಾಡುತ್ತಿದೆ. ಈಗಾಗಲೇ ಕಾಂತಾರ ಚಾಪ್ಟರ್ 1 ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್, ಕೂಲಿ, ಪೊನ್ನಿಯಿನ್ ಸೆಲ್ವನ್ 1, ಪೊನ್ನಿಯಿನ್ ಸೆಲ್ವನ್ 2, ಹನುಮಾನ್, ಛಾವಾ, ಲಿಯೋ, ದೇವರ ಪಾರ್ಟ್ 1, ಸೈಯ್ಯಾರ ಸಿನಿಮಾ ಮಾಡಿದ ದಾಖಲೆಗಳನ್ನು ಉಡೀಸ್ ಮಾಡಿದೆ. ಸಿನಿಮಾದ ಕಥೆ, ಸಂಗೀತ, ವಿಶುವಲ್ ಎಫೆಕ್ಟ್ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದ್ದು ರಾಜ್ಯೋತ್ಸವದ ದಿನಕ್ಕೂ ಈ ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ.