Rishabh Shetty: ಸಿನಿಮಾ ನೋಡಿ ನನ್ನ ಮಗಳಿಗೆ ನಿದ್ದೆಯೇ ಬರಲಿಲ್ಲ; ಕಾಂತಾರದ ಬಗ್ಗೆ ಬಿಗ್ ಬಿ ಹೇಳಿದ್ದೇನು?
: ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರದ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಜೈ ಎಂದಿದ್ದು, ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದೆ. ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಗ್ ಬಿ ಜೊತೆ ಪರದೆಯನ್ನು ಹಂಚಿಕೊಂಡರು.

-

ಮುಂಬೈ: ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishabh Shetty) ಕಾಂತಾರದ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಜೈ ಎಂದಿದ್ದು, ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದೆ. ಅಕ್ಟೋಬರ್ 11 ರಂದು ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ರಿಷಬ್ ಶೆಟ್ಟಿ ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಗ್ ಬಿ ಜೊತೆ ಪರದೆಯನ್ನು ಹಂಚಿಕೊಂಡರು. ಹಾಟ್ ಸೀಟಿನಲ್ಲಿ ಕುಳಿತು ಅಮಿತಾಬ್ ಬಚ್ಚನ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ಅಮಿತಾಬ್ ಬಚ್ಚನ್‌ಗೆ ರಿಷಬ್ ಶೆಚ್ಟಿ , ಪಂಚೆ ಉಡುಗೊರೆಯಾಗಿ ನೀಡಿದ್ದಾರೆ.
ಈ ವೇಳೆ ರಿಷಬ್ ಮುಂಬೈನಲ್ಲಿರುವ ಅಮಿತಾಬ್ ಬಚ್ಚನ್ ಅವರ ಮನೆಗೆ ಭೇಟಿ ನೀಡಿದ ಸಮಯದ ಬಗ್ಗೆ ಮಾತನಾಡಿದರು . ನಾನು ವರ್ಷಗಳ ಹಿಂದೆ ರಾಷ್ಟ್ರಪ್ರಶಸ್ತಿ ಗೆದ್ದ ಮಕ್ಕಳ ಚಿತ್ರಕ್ಕಾಗಿ ನಿಮ್ಮ ಮನೆಗೆ ಭೇಟಿ ನೀಡಿದ್ದೆ. ನಾನು ಹಿಂದಿ ಡಬ್ಬಿಂಗ್ ಮಾಡಲು ಜಯಾ ಅವರನ್ನು ಭೇಟಿ ಮಾಡಿದೆ. ಆಗ ನಿಮಗೆ ದೊರಕಿದ ಪ್ರಶ್ತಸಿಗಳನ್ನು ನೋಡಿದೆ ಎಂದು ಹೇಳಿದ್ದಾರೆ. ಇದಕ್ಕುತ್ತರಿಸಿದ ಅಮಿತಾಬ್ ಅವೆಲ್ಲವೂ ನನ್ನದಲ್ಲ. ಮನೆಯಲ್ಲಿ ಮೂರು ನಾಲ್ಕು ಜನರಿದ್ದಾರೆ. ಅವರ ಪ್ರಶ್ತಿಗಳೂ ಅಲ್ಲಿವೆ ಎಂದರು.
ಕಾಂತಾರ ಚಿತ್ರದ ಕುರಿತು ಮಾತನಾಡಿದ ಬಿಗ್ ಬಿ, ಮೊದಲನೆಯದಾಗಿ, ನಿಮ್ಮ ಸಿನಿಮಾಗಳನ್ನು ಇನ್ನೂ ನೋಡದಿದ್ದಕ್ಕೆ ನಾನು ಕ್ಷಮೆಯಾಚಿಸಬೇಕು, ನಮ್ಮ ವೇಳಾಪಟ್ಟಿ ಹೇಗಿದೆ ಎಂದು ನಿಮಗೆ ತಿಳಿದಿದೆ. ಆದರೆ ನನ್ನ ಮಗಳು ಶ್ವೇತಾ ಕಾಂತಾರ ನೋಡಲು ಹೋಗಿದ್ದಳು , ಮತ್ತು ಅವಳಿಗೆ ಕೆಲವು ದಿನಗಳವರೆಗೆ ನಿದ್ರೆ ಬರಲಿಲ್ಲ. ನಿಮ್ಮ ಅಭಿನಯದಿಂದ ಅವಳು ಬೆರಗಾದಳು, ವಿಶೇಷವಾಗಿ ಕೊನೆಯ ದೃಶ್ಯ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Kantara: Chapter 1: ಕಾಂತಾರದ ಬಗ್ಗೆ ದೈವ ಯಾವ ಮಾತೂ ಆಡಿಲ್ಲ: ಪೆರಾರ ದೈವಸ್ಥಾನ ಸ್ಪಷ್ಟನೆ
2022ರ ಬ್ಲಾಕ್ ಬಸ್ಟರ್ ಚಿತ್ರ 'ಕಾಂತಾರ'ದ ಪ್ರೀಕ್ವೆಲ್ ಆಗಿರುವ ಕಾಂತಾರ: ಚಾಪ್ಟರ್ 1ನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 2 ರಂದು ದೇಶದಾದ್ಯಂತ ಬಿಡುಗಡೆಯಾಗಿದೆ. 'ಬಾಕ್ಸ್ ಆಫೀಸ್‌ನಲ್ಲಿ ದೈವಿಕ ಬಿರುಗಾಳಿ ಕಾಂತಾರ: ಚಾಪ್ಟರ್ 1 ಬಿಡುಗಡೆಯಾದ 2 ವಾರಗಳಲ್ಲಿ ವಿಶ್ವದಾದ್ಯಂತ ಒಟ್ಟು 717.50 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬ್ಲಾಕ್ ಬಸ್ಟರ್ ಕಾಂತಾರದೊಂದಿಗೆ ದೀಪಾವಳಿಯನ್ನು ಆಚರಿಸಿ!' ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದೆ.