ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dowry Harassment: ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್.‌ ನಾರಾಯಣ್‌ ಹೇಳುವುದೇನು?

S Narayan: ‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ ಎಸ್​ ನಾರಾಯಣ್.

ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ (S Narayan) ಮತ್ತು ಕುಟುಂಬದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೊಸೆಗೆ ವರದಕ್ಷಿಣೆ ಕಿರುಕುಳ (Dowry Harassment) ನೀಡಿದ ಆರೋಪದ ಅಡಿ ಇದೀಗ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಾವ ನಾರಾಯಣ, ಅತ್ತೆ ಭಾಗ್ಯವತಿ, ಪತಿ ಪವನ್ ವಿರುದ್ಧ ಸೊಸೆ ಪವಿತ್ರ ಬೆಂಗಳೂರಿನ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ವಯಸ್ಸು, ವ್ಯಕ್ತಿತ್ವ ಎರಡಕ್ಕೂ ಸೊಸೆ ಬೆಲೆ ಕೊಡುತ್ತಿರಲಿಲ್ಲ ಎಂದು ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ.

2021ರಲ್ಲಿ ಎಸ್ ನಾರಾಯಣ ಪುತ್ರ ಪವನ್ ಹಾಗೂ ಪವಿತ್ರ ಮದುವೆ ನಡೆದಿತ್ತು. ಮದುವೆಯಲ್ಲಿ ವರದಕ್ಷಿಣೆ ಕೊಟ್ಟರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆಯಲ್ಲಿ ಒಂದು ಲಕ್ಷ ಮೌಲ್ಯದ ಉಂಗುರ ಇಟ್ಟು ಮದುವೆ ಖರ್ಚು ಮಾಡಿದ್ದರು. ಕೆಲಸ ಇಲ್ಲದೆ ಎಸ್ ನಾರಾಯಣ ಪುತ್ರ ಪವನ್ ಮನೆಯಲ್ಲಿಯೇ ಇದ್ದ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ನಾನೇ ಮನೆಯನ್ನು ನಡೆಸುತ್ತಿದ್ದೆ. ಈ ವೇಳೆ ತಾಯಿಯ ಒಡೆವೆ ಅಡವಿಟ್ಟು ನಾನು ಹಣ ಕೊಟ್ಟಿದ್ದೇನೆ. ಆದರೆ ಕಲಾ ಸಾಮ್ರಾಟ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಗಿತ್ತು. ಬಳಿಕ 10 ಲಕ್ಷ ರೂಪಾಯಿ ಸಾಲ ಮಾಡಿ ನಾನು ಪತಿಗೆ ನೀಡಿದ್ದೇನೆ. ಆದರೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಪವಿತ್ರ ದೂರು ನೀಡಿದ್ದಾರೆ.

ನಾರಾಯಣ್ ಹೇಳೋದೇನು?

‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ ಎಸ್​ ನಾರಾಯಣ್.

ʼಅವರು ದುಡಿದು ನನ್ನ ಸಾಕಬೇಕಾ? ನನ್ನ ಬಳಿ ಎಂಟು ಜನ ಕೆಲಸದವರು ಇದ್ದಾರೆ. ನಮ್ಮ ಸೊಸೆ ಪವಿತ್ರ ಮನೆ ಬಿಟ್ಟು ಹೋಗಿ 14 ತಿಂಗಳಾಯಿತು. ವರದಕ್ಷಿಣೆ ಪಿಡುಗು ತೊಲಗಿಸಬೇಕು ಅಂತ ಸಿನಿಮಾ ಮಾಡಿದವನು ನಾನು. ಪವನ್ ಪವಿತ್ರ ಪ್ರೀತಿಸಿ ಮದುವೆಯಾಗಿದ್ದರು. ನಾವು ಸಹ ಅದಕ್ಕೆ ವಿರೋಧ ಮಾಡಲಿಲ್ಲ. ಹಿರಿಯರ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಅವರ ಮನೆಯ ಹಿರಿಯರನ್ನು ಕರೆದು ನಾನು ಮಾತನಾಡಿದ್ದೆ. ಆದರೆ ಮಾತುಕತೆ ಫಲಕಾರಿಯಾಗಲಿಲ್ಲ. ನನ್ನ ಕುಟುಂಬದ ಹೆಣ್ಣು ಮಕ್ಕಳು ದುಡಿಯುವ ಅವಶ್ಯಕತೆ ಇರಲಿಲ್ಲ ಎಂದು ನಿರ್ದೇಶಕ ನಾರಾಯಣ್ ತಿಳಿಸಿದ್ದಾರೆ.

ಇದನ್ನೂ ಓದಿ: S Narayana: ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಕುಟುಂಬದ ವಿರುದ್ಧ ವರದಕ್ಷಿಣೆ ಆರೋಪ! ಸೊಸೆ ಕೊಟ್ಟ ದೂರಿನಲ್ಲೇನಿದೆ?

ಹರೀಶ್‌ ಕೇರ

View all posts by this author