ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rajkumar Birthday: ಇಂದು ವರನಟ ಡಾ. ರಾಜ್‌ ಜನ್ಮದಿನ, ʼಗಂಧದ ಗುಡಿʼ ರಿರಿಲೀಸ್

ಡಾ. ವಿಷ್ಣುವರ್ಧನ್ ಜೊತೆಯಾಗಿ ಡಾ. ರಾಜ್‌ಕುಮಾರ್‌ ನಟಿಸಿದ ಏಕೈಕ ಚಿತ್ರ ʼಗಂಧದ ಗುಡಿʼ ಇಂದು ರಿ ರಿಲೀಸ್‌ ಆಗುತ್ತಿದೆ. ತಾತನ (ರಾಜ್‌ಕುಮಾರ್) ಜನ್ಮದಿನದಂದೇ ತಮ್ಮ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್‌' ಅನ್ನು ಮೊಮ್ಮಗಳು ನಿವೇದಿತಾ ಶಿವರಾಜ್‌ಕುಮಾರ್‌ ಕೂಡ ಬಿಡುಗಡೆಗೊಳಿಸುತ್ತಿದ್ದಾರೆ.

ಇಂದು ವರನಟ ಡಾ. ರಾಜ್‌ ಜನ್ಮದಿನ,  ʼಗಂಧದ ಗುಡಿʼ ರಿರಿಲೀಸ್

ಗಂಧದ ಗುಡಿಯಲ್ಲಿ ಡಾ. ರಾ‌ಜ್‌ಕುಮಾರ್

ಹರೀಶ್‌ ಕೇರ ಹರೀಶ್‌ ಕೇರ Apr 24, 2025 9:12 AM

ಬೆಂಗಳೂರು: ಇಂದು (ಏ.24) ವರನಟ, ನಟಸಾರ್ವಭೌಮ ರಾಜ್‌ಕುಮಾರ್ (Dr Rajkumar Birthday) ಅವರ 96ನೇ ಜನ್ಮದಿನ. ಡಾ. ರಾಜ್‌ ನಮ್ಮನ್ನು ಅಗಲಿ 19 ವರ್ಷ ಉರುಳಿದ್ದರೂ, ಅವರ ನೆನಪು ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿದೆ. ಜನ್ಮದಿನದ ಅಂಗವಾಗಿ ರಾಜ್‌ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೊದಲ್ಲಿರುವ ರಾಜ್ ಅವರ ಸಮಾಧಿಗೆ ಬೆಳಗ್ಗೆ ಪೂಜೆ ಸಲ್ಲಿಸಲಿದ್ದು, ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ಗೌರವ ಅರ್ಪಿಸಲಿದ್ದಾರೆ. ಡಾ. ರಾಜ್‌ ಅವರ ನಟನೆಯ ʼಗಂಧದ ಗುಡಿʼ ಸಿನಿಮಾ ಕೂಡ ರಿರಿಲೀಸ್‌ (Gandhada gudi Film re release) ಆಗುತ್ತಿದೆ.

1973ರ ಬ್ಲಾಕ್‌ಬಸ್ಟರ್ ಚಿತ್ರ 'ಗಂಧದ ಗುಡಿ' ದಿವಂಗತ ಡಾ. ರಾಜ್‌ಕುಮಾರ್ ಮತ್ತು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಮೊದಲ ಮತ್ತು ಏಕೈಕ ತೆರೆಯ ಮೇಲಿನ ಸಹಯೋಗದ ಚಿತ್ರ. ವಿಜಯ್ ನಿರ್ದೇಶಿಸಿದ, ಎಂ. ಪಿ. ಶಂಕರ್ ನಿರ್ಮಿಸಿದ 'ಗಂಧದ ಗುಡಿ' ಡಾ. ರಾಜ್‌ಕುಮಾರ್ ಅವರ 150 ನೇ ಚಿತ್ರ ಮತ್ತು ಅನುಭವಿ ನರಸಿಂಹರಾಜು ಅವರೊಂದಿಗಿನ ಅವರ ಕೊನೆಯ ಸಹಯೋಗವಾಗಿತ್ತು. ಹಿಂದಿಯಲ್ಲಿ ಇದನ್ನು 'ಕರ್ತವ್ಯ' ಎಂದು ರೀಮೇಕ್ ಮಾಡಲಾಯಿತು. ಮಲಯಾಳಂನಲ್ಲಿ 'ಚಂದನಕಾಡು' ಎಂದು ಡಬ್ ಮಾಡಲಾಯಿತು. 'ಗಂಧದ ಗುಡಿ' ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ವಿಷಯದ ಕುರಿತು ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾತನ (ರಾಜ್‌ಕುಮಾರ್) ಜನ್ಮದಿನದಂದೇ ತಮ್ಮ ನಿರ್ಮಾಣದ ಚೊಚ್ಚಲ ಚಿತ್ರ 'ಫೈರ್‌' ಅನ್ನು ಮೊಮ್ಮಗಳು ನಿವೇದಿತಾ ಶಿವರಾಜ್‌ಕುಮಾರ್‌ ಬಿಡುಗಡೆಗೊಳಿಸುತ್ತಿದ್ದಾರೆ. ಜೊತೆಗೆ ಶಿವರಾಜ್‌ಕುಮಾರ್ ಅವರು ನಟಿಸಲಿರುವ ಹೊಸ ಚಿತ್ರದ ಘೋಷಣೆಯೂ ಇದೇ ಸಂದರ್ಭದಲ್ಲಿ ಆಗಿದೆ. ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ಈ ನೂತನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್, ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ.

ಡಾಕ್ಟರ್ ರಾಜ್‌ಕುಮಾರ್ ಈಗ ಇದ್ದಿದ್ದರೆ ಏಪ್ರಿಲ್ 24ರಂದು ತಮ್ಮ 96ನೇ ಜನ್ಮ ದಿನ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು. ಅದರೆ, ಅವರಿಲ್ಲ ಅನ್ನೋ ನೋವಿನೊಂದಿಗೆ ಪ್ರತಿ ವರ್ಷ ಅವರ ಅಭಿಮಾನಿ ದೇವರುಗಳು ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡುತ್ತಾರೆ. ಅನ್ನದಾನ, ರಕ್ತದಾನ ಹೀಗೆ ಸಮಾಜಮುಖಿ ಹಲವು ಕೆಲಸ ಮಾಡುತ್ತಾ ಬಂದಿದ್ದಾರೆ. ರಾಜ್‌ಕುಮಾರ್ ಅವರು ಒಟ್ಟು 220ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗಳಲ್ಲಿ ಸಮಾಜಮುಖಿ ವಿಷಯಗಳೇ ಹೆಚ್ಚಾಗಿವೆ. ಇವರ ಪಾತ್ರದ ಮೂಲಕ ಎಂದೂ ಇವರು ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವ ಥರದ ರೋಲ್‌ಗಳನ್ನ ಮಾಡಿಯೇ ಇಲ್ಲ.

ನಿನ್ನೆ, ನಟ ಯುವ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮವಿತ್ತು. ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿದ ನಟ ಯುವ ರಾಜ್‌ಕುಮಾರ್ ಅವರು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಬೇಸರ ವ್ಯಕ್ತಪಡಿಸಿ ಕೇಕ್ ಕಟ್ ಮಾಡಲಿಲ್ಲ. ಜೊತೆಗೆ ಹುಟ್ಟುಹಬ್ಬದ ವಿಶೇಷವಾಗಿ ಎಕ್ಕ ಸಿನಿಮಾ ಟೀಸರ್ ಬಿಡುಗಡೆ ಆಗಬೇಕಿದ್ದುದನ್ನೂ ಚಿತ್ರತಂಡ ಮುಂದೂಡಿದೆ.

ಇದನ್ನೂ ಓದಿ: ಇಂದು ವರನಟ ಡಾ.ರಾಜ್‌ ಕುಮಾರ್​ ಪುಣ್ಯತಿಥಿ; ನಟಸಾರ್ವಭೌಮನ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ