NREGA: ನರೇಗ ಕಾಮಗಾರಿಗಳ ಪರಿಶೀಲನೆ ನಡೆಸಿದ ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ
ದಿನನಿತ್ಯದ ಕಾರ್ಯದಲ್ಲಿ ಎದುರಾಗುತ್ತಿರುವ ಅಡಚಣೆಗಳು, ವೇತನ ವಿತರಣೆಯ ಸಮಸ್ಯೆಗಳು, ಕೆಲಸಗಳ ಲಭ್ಯತೆ, ಕೆಲಸದ ಸುರಕ್ಷತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳ ಕುರಿತು ವಿಚಾರಿಸಿದರು. ಕಾರ್ಮಿಕರು ಪ್ರಸ್ತಾಪಿಸಿದ ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ, ಬಾಕಿ ವಿಷಯಗಳನ್ನು ಶೀಘ್ರದಲ್ಲಿ ಪರಿಹರಿಸುವ ಭರವಸೆ ನೀಡಿದರು
-
ಗೌರಿಬಿದನೂರು: ತಾಲ್ಲೂಕಿನ ನಕ್ಕಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಾಪುರ ಗ್ರಾಮ ದಲ್ಲಿ ನಡೆಯುತ್ತಿರುವ ನರೇಗಾ ಯೋಜನೆ(NREGA) ಯಡಿ ಕಾಲುವೆ ಹೂಳೆತ್ತುವ ಕಾರ್ಯವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಿದರು.
ಭೇಟಿ ಸಂದರ್ಭದಲ್ಲಿ ಕಾರ್ಯನಿರ್ವಾಹಕಾಧಿಕಾರಿ ಹೊನ್ನಯ್ಯ ಕಾಲುವೆ ಹೂಳೆತ್ತುವ ಕಾಮಗಾರಿ ಯ ಗುಣಮಟ್ಟ, ವೇಗ ಮತ್ತು ಕಾರ್ಮಿಕರಿಗೆ ಲಭಿಸುತ್ತಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು. ನಂತರ ನರೇಗಾ(NREGA) ಕೂಲಿ ಕಾರ್ಮಿಕರೊಂದಿಗೆ ನೇರ ಸಂವಾದ ನಡೆಸಿದ ಅವರು, ದಿನನಿತ್ಯದ ಕಾರ್ಯದಲ್ಲಿ ಎದುರಾಗುತ್ತಿರುವ ಅಡಚಣೆಗಳು, ವೇತನ ವಿತರಣೆಯ ಸಮಸ್ಯೆಗಳು, ಕೆಲಸಗಳ ಲಭ್ಯತೆ, ಕೆಲಸದ ಸುರಕ್ಷತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಳ ಕುರಿತು ವಿಚಾರಿಸಿದರು. ಕಾರ್ಮಿಕರು ಪ್ರಸ್ತಾಪಿಸಿದ ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ, ಬಾಕಿ ವಿಷಯಗಳನ್ನು ಶೀಘ್ರದಲ್ಲಿ ಪರಿಹರಿಸುವ ಭರವಸೆ ನೀಡಿದರು.
ಇದನ್ನೂ ಓದಿ: Gauribidanur News: ನಾಳೆ ಶಿವಾಜಿ ಪ್ರತಿಮೆ ಅನಾವರಣ
ಕಾಮಗಾರಿಯಲ್ಲಿ ಒಟ್ಟು 48 ಜನ ನರೇಗಾ ಕೂಲಿ ಕಾರ್ಮಿಕರು ತೊಡಗಿಸಿಕೊಂಡಿದ್ದು, ಅವರ ಶ್ರಮದಿಂದ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಸುಧಾರಿಸುವ ನಿರೀಕ್ಷೆಯಿದೆ. ಇನ್ನೂ ಹೆಚ್ಚಿನ ಕೆಲಸಗಳು ಹಾಗೂ ವೈಯಕ್ತಿಕ ಅನುಕೂಲಕರ ಕಾಮಗಾರಿಗಳು (Individual Beneficiary Schemes) ಅನ್ನು ಪಡೆಯಲು ಕೆಲಸಗಾರರನ್ನು ಹೊನ್ನಯ್ಯ ಅವರು ಮಾಹಿತಿ ನೀಡಿ ಪ್ರೋತ್ಸಾಹಿಸಿದರು. ನರೇಗಾ ಯೋಜನೆ ನೀಡುತ್ತಿರುವ ಅವಕಾಶಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳುವಂತೆ ಕಾರ್ಮಿಕರಿಗೆ ತಿಳಿಸಿದರು.
ಇದೇ ವೇಳೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕೆಲಸಗಳ ಪ್ರಗತಿ, ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ನೀಡುವ ಸೇವೆಗಳಲ್ಲಿ ಯಾವುದೇ ರೀತಿಯ ವಿಳಂಭವಾಗದಂತೆ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸಹಾಯಕ ನಿರ್ದೇಶಕರು (ಗ್ರಾಉ), ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಹಾಗೂ ನರೇಗಾ ಕೂಲಿ ಕಾರ್ಮಿಕರು ಗ್ರಾಮ ಪಂಚಾ ಯತಿ ಅಧ್ಯಕ್ಷರು ಪಾಪಣ್ಣ, ಬಾಲಕೃಷ್ಣ ಸಹಾಯಕ ನಿರ್ದೇಶಕರು ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷ, ಶ್ರೀನಿವಾಸ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಜರಿದ್ದರು.