Esha Gupta: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಇಶಾ ಗುಪ್ತಾ; ಗ್ಲಾಮರಸ್ ಲುಕ್‌ನ ವಿಡಿಯೋ ಫುಲ್ ವೈರಲ್!
ನಟಿ ಇಶಾ ಅವರು ಪ್ರಸಿದ್ಧ ಫ್ಯಾಷನ್ ಇವೆಂಟ್ ಒಂದರಲ್ಲಿ ಭಾಗಿಯಾಗಿದ್ದು ಅನೇಕ ಸೆಲೆ ಬ್ರಿಟಿಗಳು, ಮಾಡೆಲ್ಸ್ ಗಳು ಕೂಡ ಪಾಲ್ಗೊಂಡಿದ್ದರು. ನಟಿ ಇಶಾ ಗುಪ್ತ ಅವರು ಕೂಡ ಈ ಇವೆಂಟ್ ಗೆ ಡಿಫರೆಂಟ್ ಲುಕ್ ನಲ್ಲಿ ಆಗಮಿಸಿದ್ದು ಅವರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆ ಯುತ್ತಿದೆ. ನಟಿಯೂ ವೈಟ್ ಗೌನ್ ಧರಿಸಿದ್ದು ಸಖತ್ ಹಾಟ್ ಆಗಿ ಕಂಡಿದ್ದಾರೆ..

Esha Gupta

ನವದೆಹಲಿ: ಬಾಲಿವುಡ್ ಖ್ಯಾತ ನಟಿ ಹಾಗೂ ಮಾಡೆಲಿಂಗ್ ಸ್ಟಾರ್ ಇಶಾ ಗುಪ್ತಾ (Esha Gupta) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 2012ರಲ್ಲಿ ಜನ್ನತ್ 2 ಚಿತ್ರದ ಮೂಲಕ ಬಾಲಿವುಡ್ ರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಈ ಸಿನಿಮಾ ಅವರ ಬದುಕಲ್ಲೇ ದೊಡ್ಡ ಟರ್ನಿಂಗ್ ಪಾಂಯ್ಟ್ ಆಗಿತ್ತು. ರಹಸ್ಯ 2, ಚಕ್ರವ್ಯೂಹ್, ರುಸ್ತುಮ್ ಸಿನಿಮಾ ಮೂಲಕವು ಬಾಲಿವುಡ್ ನಲ್ಲಿ ನಟಿ ಇಶಾ ಗುಪ್ತ ಸಾಕಷ್ಟು ಪ್ರಸಿದ್ಧಿ ಪಡೆದರು. ನಟನೆಯ ಜೊತೆ ಜೊತೆಯಲ್ಲಿಯೇ ಮಾಡೆ ಲಿಂಗ್ ಕ್ಷೇತ್ರದಲ್ಲಿ ಕೂಡ ಸಾಧನೆ ಮಾಡಿದ್ದ ಇವರು 2007ರಲ್ಲಿ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಕೀರಿಟವನ್ನು ಮುಡಿ ಗೇರಿಸಿಕೊಂಡಿದ್ದಾರೆ. ಈ ಬಾರಿ ಇಶಾ ಗುಪ್ತ ಅವರು ಫ್ಯಾಶನ್ ಇವೆಂಟ್ ಒಂದರಲ್ಲಿ ಭಾಗಿಯಾಗಿದ್ದು ಇವರ ಹಾಟ್ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ನಟಿ ಇಶಾ ಅವರು ಪ್ರಸಿದ್ಧ ಫ್ಯಾಷನ್ ಇವೆಂಟ್ ಒಂದರಲ್ಲಿ ಭಾಗಿಯಾಗಿದ್ದು ಅನೇಕ ಸೆಲೆ ಬ್ರಿಟಿಗಳು, ಮಾಡೆಲ್ಸ್ ಗಳು ಕೂಡ ಪಾಲ್ಗೊಂಡಿದ್ದರು. ನಟಿ ಇಶಾ ಗುಪ್ತ ಅವರು ಕೂಡ ಈ ಇವೆಂಟ್‌ಗೆ ಡಿಫರೆಂಟ್ ಲುಕ್ ನಲ್ಲಿ ಆಗಮಿಸಿದ್ದು, ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ನಟಿಯೂ ವೈಟ್ ಗೌನ್ ಧರಿಸಿದ್ದು ಸಖತ್ ಹಾಟ್ ಆಗಿ ಕಂಡಿದ್ದಾರೆ.
ಇತ್ತೀಚೆಗಷ್ಟೆ ನಟಿ ಇಶಾ ಗುಪ್ತ ಅವರು ಜಾರ್ಜಸ್ ಹೊಬೈಕಾ ಅವರು ವಿನ್ಯಾಸ ಗೊಳಿಸಿದ್ದ ಬ್ಲ್ಯಾಕ್ ಡ್ರೆಸ್ ತೊಟ್ಟು ಸಾಕಷ್ಟು ಗಮನ ಸೆಳೆದಿದ್ದರು. ಇದರ ಬೆನ್ನಲ್ಲೆ ಇದೀಗ ವೈಟ್ ಕಲರ್ ವಿಭಿನ್ನ ವಿನ್ಯಾಸದ ಗೌನ್ ತೊಟ್ಟಿದ್ದು ಅಭಿಮಾನಿಗಳ ಮನ ಸೆಳೆಯುತ್ತಿದೆ. ಈ ಗೌನಿನ ಮುಂಭಾಗವು ಟ್ರಯಾಂಗಲ್ ಶೇಪ್ ನಲ್ಲಿದ್ದು ತುಂಬಾ ಡಿಫರೆಂಟ್ ಆಗಿ ವಿನ್ಯಾಸ ಮಾಡಲಾಗಿದೆ. ಅದರ ಜೊತೆಗೆ ಬ್ಲೂ ಕಲರ್ ಫೆದರ್ ಶಾಲು ಧರಿಸಿದ್ದು ಇವರಿಗೆ ಪ್ರಿನ್ಸೆಸ್ ಲುಕ್ ನೀಡಿದಂತಿದೆ.
ವೈರಲ್ ಆದ ವಿಡಿಯೋದಲ್ಲಿ ವಿಭಿನ್ನ ವಿನ್ಯಾಸದ ಡ್ರೆಸ್ ತೊಟ್ಟ ನಟಿ ಇಶಾ ಹೆಚ್ಚು ಬೋಲ್ಡ್ ಆಗಿ ಕಂಡಿದ್ದಾರೆ. ಈ ಡ್ರೆಸ್ ಶೊಲ್ಡರ್ ಲೆಸ್ ಆದ ಕಾರಣ ಇಶಾ ಅವರು ಹೆಚ್ಚು ಗ್ಲಾಮರಸ್ ಆಗಿ ಕಂಡಿ ದ್ದಾರೆ. ಇದರ ಜೊತೆಗೆ ಶರ್ಟ್ ಹೇರ್ ಸ್ಟೈಲ್ ಮತ್ತು ಮೇಕಪ್ ನಿಂದ ಹೆಚ್ಚು ಸ್ಟೈಲಿಶ್ ಆಗಿ ಕಂಡಿದ್ದಾರೆ. ಈ ವಿಡಿಯೋ ಕಂಡು ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಸಖತ್ ಹಾಟ್ ಲೇಡಿ ಎಂದು ಬರೆದುಕೊಂಡಿದ್ದಾರೆ.
ನಟಿ ಇಶಾ ಗುಪ್ತ ಅವರು ಈ ಹಿಂದೆ ಬಾಬಿ ಡಿಯೋಲ್ ಅವರ ಆಶ್ರಮ ಎಂಬ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡರು. ಇದೀಗ ಧಮಾಲ್ 4 ಸಿನಿಮಾದ ಶೂಟಿಂಗ್ ನಲ್ಲಿ ನಟಿ ಇಶಾ ಬ್ಯುಸಿ ಯಾಗಿದ್ದಾರೆ. ಈ ಸಿನಿಮಾದಲ್ಲಿ ನಟ ಅಜಯ್ ದೇವಗನ್ ಮತ್ತು ರಿತೇಶ್ ದೇಶ್ ಮುಖ್ ಕೂಡ ಅಭಿನಯಿಸಲಿದ್ದು ಈ ಸಿನಿಮಾ 2026 ರ ಈದ್ ಹಬ್ಬದ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.