ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

14,000 ಟಿ20 ರನ್‌ ಗಳಿಸಿ ಕೈರೊನ್‌ ಪೊಲಾರ್ಡ್‌ ದಾಖಲೆ ಮುರಿದ ಅಲೆಕ್ಸ್‌ ಹೇಲ್ಸ್‌!

ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ 74 ರನ್‌ಗಳ ಇನಿಂಗ್ಸ್ ಆಡುವ ಮೂಲಕ ಅವರು ಈ ಸಾಧನೆಗೆ ಭಾಜನರಾಗಿದ್ದಾರೆ.

ಕೈರೊನ್‌ ಪೊಲಾರ್ಡ್‌ ದಾಖಲೆ ಮುರಿದ ಅಲೆಕ್ಸ್‌ ಹೇಲ್ಸ್‌!

ಕೈರೊನ್‌ ಪೊಲಾರ್ಡ್‌ ದಾಖಲೆ ಮುರಿದ ಆಲೆಕ್ಸ್‌ ಹೇಲ್ಸ್‌! -

Profile Ramesh Kote Aug 31, 2025 2:16 PM

ನವದೆಹಲಿ: ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ಟೂರ್ನಿಯಲ್ಲಿ ಕೈರನ್ ಪೊಲಾರ್ಡ್ (Kieron Pollard) ಟಿ20 ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ಪೂರ್ಣಗೊಳಿಸಿದರು. ಈಗ ಕೇವಲ ಒಂದು ದಿನದ ನಂತರ, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ (Alex Hales) ಕೂಡ ಟಿ20ಯಲ್ಲಿ 14 ಸಾವಿರ ರನ್‌ಗಳನ್ನು ಗಳಿಸಿದ್ದಾರೆ. ಹೇಲ್ಸ್ ಕೂಡ ಇದೇ ಲೀಗ್‌ನಲ್ಲಿ ಆಡುತ್ತಿದ್ದಾರೆ ಮತ್ತು ಪೊಲಾರ್ಡ್ ಅವರ ಟ್ರಿಂಬ್ಯಾಗೊ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಹೇಲ್ಸ್ 74 ರನ್‌ಗಳನ್ನು ಗಳಿಸಿದ್ದಾರೆ. ಈ ಇನಿಂಗ್ಸ್‌ನಲ್ಲಿ ಅವರು ತಮ್ಮ 14 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳನ್ನು ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಮತ್ತು ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಹೇಲ್ಸ್ ಮತ್ತು ಪೊಲಾರ್ಡ್‌ಗೂ ಮುನ್ನ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಈ ಸ್ವರೂಪದಲ್ಲಿ 14000 ರನ್‌ಗಳನ್ನು ಗಳಿಸಿದ್ದರು. 36 ವರ್ಷದ ಹೇಲ್ಸ್ 2009 ರಲ್ಲಿ ತಮ್ಮ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಅವರು 505 ಇನಿಂಗ್ಸ್‌ಗಳಲ್ಲಿ 30ರ ಸರಾಸರಿಯಲ್ಲಿ 14024 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 7 ಶತಕಗಳು ಮತ್ತು 89 ಅರ್ಧಶತಕಗಳು ಬಂದಿವೆ. ಟಿ20ಯಲ್ಲಿ ಅವರ ಸ್ಟ್ರೈಕ್ ರೇಟ್ 145.44 ಆಗಿದೆ. ಹೇಲ್ಸ್ ಟಿ20 ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಕ್ರಿಯ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದೊಡ್ಡ ದಾಖಲೆಯನ್ನು ಬರೆದ ಕೈರೊನ್‌ ಪೊಲಾರ್ಡ್‌!

ಪೊಲಾರ್ಡ್ ದಾಖಲೆ ಮುರಿದ ಅಲೆಕ್ಸ್‌ ಹೇಲ್ಸ್‌

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಲೆಕ್ಸ್ ಹೇಲ್ಸ್, ಕೈರೊನ್‌ ಪೊಲಾರ್ಡ್ ಅವರನ್ನು ಹಿಂದಿಕ್ಕಿದ್ದಾರೆ. ಗಯಾನ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ 12 ರನ್ ಗಳಿಸಿದ್ದಾರೆ. ಆ ಮೂಲಕ ಅವರು ಈ ಸ್ವರೂಪದಲ್ಲಿ 14012 ರನ್ ಗಳಿಸಿದ್ದಾರೆ. ಇದೇ ವೇಳೆ ಅಲೆಕ್ಸ್‌ ಹೇಲ್ಸ್ 14024 ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್ 14562 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಗೇಲ್ 2022ರ ನಂತರ ಟಿ20 ಆಡಿಲ್ಲ. ಹಾಗಾಗಿ ಪೊಲಾರ್ಡ್ ಮತ್ತು ಹೇಲ್ಸ್ ಇಬ್ಬರೂ ಅಗ್ರಸ್ಥಾನಕ್ಕೆ ಹೋಗುವ ಅವಕಾಶವಿದೆ.



ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು

ಕ್ರಿಸ್ ಗೇಲ್: 14562 ರನ್‌ಗಳು

ಕೈರೊನ್ ಪೊಲಾರ್ಡ್: 14024 ರನ್‌ಗಳು

ಅಲೆಕ್ಸ್ ಹೇಲ್ಸ್: 14012 ರನ್‌ಗಳು

ಡೇವಿಡ್ ವಾರ್ನರ್: 13595 ರನ್‌ಗಳು

ಶೋಯೆಬ್ ಮಲಿಕ್: 13571 ರನ್‌ಗಳು

ಗಯಾನಾ ಅಮೆಜಾನ್ ವಾರಿಯರ್ಸ್ ಮೊದಲು ಬ್ಯಾಟ್ ಮಾಡಿ 163 ರನ್‌ಗಳನ್ನು ಗಳಿಸಿತು, ಇದಕ್ಕೆ ಪ್ರತಿಯಾಗಿ ನೈಟ್ ರೈಡರ್ಸ್ 17.2 ಓವರ್‌ಗಳಲ್ಲಿ ಗುರಿ ತಲುಪಿತು. ಅಲೆಕ್ಸ್ ಹೇಲ್ಸ್ ಮತ್ತು ಕಾಲಿನ್ ಮುನ್ರೊ ನೈಟ್ ರೈಡರ್ಸ್‌ಗೆ ಸ್ಪೋಟಕ ಆರಂಭ ನೀಡಿದರು. ಹೇಲ್ಸ್ 43 ಎಸೆತಗಳಲ್ಲಿ 74 ರನ್ ಗಳಿಸಿದರೆ, ಮನ್ರೋ 52 ರನ್ ಗಳಿಸಿದರು. ಆಂಡ್ರೆ ರಸೆಲ್ 27 ರನ್ ಗಳಿಸಿ ಅಜೇಯರಾಗಿ ಉಳಿದರು.