ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಉಡುಗೊರೆ ವಿಚಾರಕ್ಕೆ ವಾಗ್ವಾದ; ಪತ್ನಿ, ಅತ್ತೆಯನ್ನು ಕೊಂದ ಪಾಪಿ ಪತಿ

ಮಗನ ಹುಟ್ಟುಹಬ್ಬದ ವೇಳೆ ನೀಡಬೇಕಾದ ಉಡುಗೊರೆ ವಿಚಾರದಲ್ಲಿ ಪತಿ ಪತ್ನಿಯ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬ ಪತ್ನಿ ಮತ್ತು ಅತ್ತೆಯನ್ನು ಕೊಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ಕರೆಗೆ ಉತ್ತರಿಸುತ್ತಿಲ್ಲ, ಸಹೋದರಿಯು ಪ್ರತಿಕ್ರಿಯೆ ನೀಡುತ್ತಿಲ್ಲ. ಏನಾಗಿದೆ ನೋಡೋಣ ಎಂದುಕೊಂಡು ಮನೆಗೆ ಬಂದ ಮಗನಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಉಡುಗೊರೆಗಾಗಿ ಜಗಳ: ಪತ್ನಿ, ಅತ್ತೆಯನ್ನು ಕೊಂದ ಪಾಪಿ ಪತಿ

-

ನವದೆಹಲಿ: ಹುಟ್ಟುಹಬ್ಬದ ಉಡುಗೊರೆ (Fight for Birthday Gifts) ವಿಷಯದಲ್ಲಿ ಮನೆಯಲ್ಲಿ ಉಂಟಾದ ಜಗಳದಲ್ಲಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಆಕೆಯ ತಾಯಿಯನ್ನು ಕೊಂದಿರುವ (Murder Case) ಘಟನೆ ನವದೆಹಲಿಯ (Delhi) ರೋಹಿಣಿಯ ಸೆಕ್ಟರ್ -17 ರಲ್ಲಿ ಶನಿವಾರ ನಡೆದಿದೆ. ಆರೋಪಿ ಯೋಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಿದ ಬಟ್ಟೆಗಳು, ಕತ್ತರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತರನ್ನು ಪ್ರಿಯಾ ಸೆಹಗಲ್ (34), ಕುಸುಮ್ ಸಿನ್ಹಾ (63) ಎಂದು ಗುರುತಿಸಲಾಗಿದೆ. ಮೊಮ್ಮಗ ಚಿರಾಗ್ ನ ಹುಟ್ಟುಹಬ್ಬದ ವಿಚಾರದಲ್ಲಿ ಮನೆಯಲ್ಲಿ ಜಗಳ ಉಂಟಾಗಿತ್ತು ಎನ್ನಲಾಗಿದೆ.

ಮಗುವಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಉಡುಗೊರೆಗಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ರೋಹಿಣಿಯ ಸೆಕ್ಟರ್ -17ರಿಂದ ಕುಸುಮ್ ಅವರ ಮಗ ಮೇಘ ಸಿನ್ಹಾ ಎಂಬವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಾಯಿ ಮತ್ತು ಸಹೋದರಿಯ ಕೊಲೆಗೆ ಸಂಬಂಧಿಸಿದಂತೆ ಕೆಎನ್‌ಕೆ ಮಾರ್ಗ ಪೊಲೀಸ್ ಠಾಣೆಗೆ ಮಧ್ಯಾಹ್ನ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಕುಸುಮ್ ಸಿನ್ಹಾ ಮತ್ತು ಅವರ ಮಗಳು ಪ್ರಿಯಾ ಸೆಹಗಲ್ ಅವರ ಶವಗಳು ಕೋಣೆಯಲ್ಲಿ ಬಿದ್ದಿತ್ತು. ಮೊಮ್ಮಗ ಚಿರಾಗ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 28ರಂದು ಕುಸುಮ್ ಮಗಳ ಮನೆಗೆ ಬಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ನೀಡಬೇಕಾದ ಉಡುಗೊರೆಗಳ ಕುರಿತು ಪ್ರಿಯಾ ಮತ್ತು ಆಕೆಯ ಪತಿ ಯೋಗೇಶ್ ನಡುವೆ ಜಗಳ ಉಂಟಾಗಿದೆ . ಈ ವೇಳೆ ಕುಸುಮ್ ವಿಷಯ ಬಗೆ ಹರಿಸಲು ಅವರಿಗೆ ಸಲಹೆ ನೀಡಿದ್ದು ಜಗಳ ವಿಕೋಪಕ್ಕೆ ತಿರುಗಿದೆ.

ಆಗಸ್ಟ್ 30ರಂದು ಕುಸುಮ್ ಕರೆಗೆ ಉತ್ತರಿಸದೇ ಇದ್ದುದರಿಂದ ಅನುಮಾನಗೊಂಡ ಮೇಘ ಸಿನ್ಹಾ ಮನೆಗೆ ಬಂದು ನೋಡಿದಾಗ ಹೊರಗಿನಿಂದ ಲಾಕ್ ಆಗಿತ್ತು. ಕಿಟಕಿಯ ಮೂಲಕ ಒಳಗೆ ನೋಡಿದಾಗ ಬಾಗಿಲಿನ ಬಳಿ ರಕ್ತದ ಕಲೆಗಳು ಕಂಡು ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಬಂದು ನೋಡಿದಾಗ ಕೋಣೆಯೊಳಗೆ ಮೇಘ ಸಿನ್ಹಾ ಅವರ ತಾಯಿ ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಪ್ರಿಯಾ ಅವರ ಪತಿ, ಪ್ರಸ್ತುತ ನಿರುದ್ಯೋಗಿಯಾಗಿರುವ ಯೋಗೇಶ್ ಸೆಹಗಲ್ ತನ್ನ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಕೊಂದು ಮಗುವಿನೊಂದಿಗೆ ಪರಾರಿಯಾಗಿದ್ದಾನೆ ಎಂದು ಮೇಘ ಸಿನ್ಹಾ ದೂರು ನೀಡಿದ್ದರು.

ಬಳಿಕ ಯೋಗೇಶ್‌ನನ್ನು ಕೆಎನ್‌ಕೆ ಮಾರ್ಗ ಪೊಲೀಸರು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಬಟ್ಟೆಗಳು ಮತ್ತು ಕತ್ತರಿಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಅಪರಾಧ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡಗಳು ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ʼʼಮೊಮ್ಮಗನ ಹುಟ್ಟುಹಬ್ಬಕ್ಕೆಂದು ತಾಯಿ ಪ್ರಿಯಾಳ ಮನೆಗೆ ಒಂದು ದಿನ ಮೊದಲು ಹೋಗಿದ್ದರು. ನಾನು ಕರೆ ಮಾಡಿದಾಗ ಪ್ರಿಯಾ ಮತ್ತು ಯೋಗೇಶ್ ನಡುವೆ ಉಡುಗೊರೆ ವಿಚಾರಲ್ಲಿ ಜಗಳ ನಡೆಯುತ್ತಿದೆ ಮತ್ತು ಅದನ್ನು ಬಗೆಹರಿಸಲು ಸಹಾಯ ಮಾಡುವುದಾಗಿ ಹೇಳಿದ್ದರು. ಮರುದಿನ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಉತ್ತರಿಸಲಿಲ್ಲ. ಪ್ರಿಯಾಳಿಗೂ ಫೋನ್ ಮಾಡಿದರೂ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ ಮನೆಗೆ ಬಂದೆವುʼʼ ಎಂದು ಪ್ರಿಯಾಳ ಸಹೋದರ ತಿಳಿಸಿದ್ದಾನೆ.

ಇದನ್ನೂ ಓದಿ: Surabhi Hudigere Column: ಧಾರ್ಮಿಕ ಪ್ರಜ್ಞೆಗೊಂದು ಆಘಾತ: ಮಹಿಳೆಯರು, ನಂಬಿಕೆ ಮತ್ತು ವದಂತಿಗಳು

ಅವರಿಬ್ಬರ ಮದುವೆಯಾಗಿ 17 ವರ್ಷಗಳಾಗಿವೆ. ಜಗಳ ಎಲ್ಲ ದಂಪತಿಯ ಮಧ್ಯೆಯೂ ಇರುತ್ತದೆ. ಆದರೆ ಕೊಲೆ ಯಾರು ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.