Keerthy Suresh: ಕೀರ್ತಿ ಸುರೇಶ್ ಕ್ರಿಶ್ಚಿಯನ್ ವೆಡ್ಡಿಂಗ್ ಫೊಟೋ ವೈರಲ್; ವೈಟ್ ಗೌನ್ ಲುಕ್‌ನಲ್ಲಿ ಫುಲ್ ಮಿಂಚಿಂಗ್!
ನಟಿ ಕೀರ್ತಿ ಸುರೇಶ್ ಗೋವಾದ ಸೇಂಟ್ ರೆಜಿಸ್ ರೆಸಾರ್ಟ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದು, ತಾನು ಧರಿಸಿದ್ದ ವೈಟ್ ಗೌನ್ ಫೋಟೋ ಶೇರ್ ಮಾಡಿ ಸೂರ್ಯಾಸ್ತದ ಸಮಯದಲ್ಲಿ ಪರಸ್ಪರ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಕೀರ್ತಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕೀರ್ತಿ ಸುರೇಶ್ ಮದುವೆ ಫೊಟೋ

ನವದೆಹಲಿ: ನಟಿ ಕೀರ್ತಿ ಸುರೇಶ್ (Keerthy Suresh) ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 12 ರಂದು ಗೋವಾ ದಲ್ಲಿ ಮದುವೆಯಾದ ಈ ಜೋಡಿ ಕ್ರಿಶ್ಚಿಯನ್, ಹಿಂದೂ ಎರಡು ಸಂಪ್ರದಾಯದಂತೆ ಮದುವೆಯಾಗಿದ್ದರು. ಇದೀಗ ನಟಿ ಕೀರ್ತಿ ತಮ್ಮ ಕ್ರಿಶ್ಚಿಯನ್ ವೆಡ್ಡಿಂಗ್‌ನ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಗೆ ಧರಿಸಿದ್ದ ಬಿಳಿ ಗೌನ್‌ನಲ್ಲಿ ಕೀರ್ತಿ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಕೀರ್ತಿ ವೈಟ್ ಗೌನ್ ನಲ್ಲಿ ಮಿಂಚಿದ್ದು ಥೇಟ್ ರಾಜ ಕುಮಾರಿಯಂತೆ ಕಾಣಿಸಿಕೊಂಡಿದ್ದು ತಮ್ಮ ಅದ್ಭುತ ಲುಕ್‌ನಿಂದ ಅಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಿದ್ದಾರೆ. ಸದ್ಯ ನಟಿಯ ಕ್ರಿಶ್ಚಿಯನ್ ಸಂಪ್ರದಾಯದ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು ಇವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಟಿ ಕೀರ್ತಿ ಸುರೇಶ್ ಗೋವಾದ ಸೇಂಟ್ ರೆಜಿಸ್ ರೆಸಾರ್ಟ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದು, ತಾನು ಧರಿಸಿದ ವೈಟ್ ಗೌನ್ ಫೋಟೋ ಶೇರ್ ಮಾಡಿ ಸೂರ್ಯಾಸ್ತದ ಸಮಯದಲ್ಲಿ ಪರಸ್ಪರ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಕೀರ್ತಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬ್ಯೂಟಿ ಕ್ವೀನ್ ಕೀರ್ತಿ ಟ್ರೆಡಿಶನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ನಟಿ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯಲ್ಲಿ ಬ್ಯೂಟಿಫುಲ್ ಡಿಸೈನ್ ನೊಂದಿಗೆ ಫುಲ್ ನೆಕ್ ಇರೋ ವೈಟ್ ಗೌನ್ ನಲ್ಲಿ ರಾಜ ಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಕೀರ್ತಿ ತನ್ನ ಮದುವೆಗೆ, ಲೆಬನಾ ನಿನ ಡಿಸೈನರ್ ಜುಹೇರ್ ಮುರಾದ್ ಅವರಿಂದ ಈ ಉಡುಪು ಆರಿಸಿಕೊಂಡಿದ್ದು ಗೌನ್ ಆಧುನಿಕ ವಿನ್ಯಾಸ ದೊಂದಿಗೆ ಟ್ರೆಡಿಷನಲ್ ಲುಕ್ ಜೊತೆ ಸುಂದರವಾಗಿ ಮೂಡಿ ಬಂದಿದೆ. ಗೌನ್ ನಲ್ಲಿ ಲೇಸ್, ಹರಳಿನ ಮಣಿಗಳು ಮತ್ತು ಹೂವಿನ ಮೋಟಿಫ್‌ಗಳಿಂದ ಬ್ಯುಟಿಫುಲ್ ಆಗಿ ಅಲಂಕರಿಸಲಾಗಿತ್ತು. ಕೀರ್ತಿ ಬಿಳಿ ಗೌನ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದು ಬಿಳಿ ಗೌನ್ ಜೊತೆಗೆ ಸರಳವಾದ ಗ್ರೀನ್ ಸ್ಟಡ್ ಕಿವಿ ಯೋಲೆಗಳನ್ನು ಧರಿಸಿದ್ದು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನು ಓದಿ: Viral News: 84 ವರ್ಷಗಳ ಸುದೀರ್ಘ ದಾಂಪತ್ಯ; ವಿಶ್ವ ದಾಖಲೆಗೆ ಸೇರಿದ ಈ ಜೋಡಿಯ ನಂಟಿನ ಗುಟ್ಟೇನು?
ನಟಿ ಕೀರ್ತಿ ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದು ಆ್ಯಂಟೋನಿ ಕ್ರಿಶ್ಚಿಯನ್ ಹೀಗಾಗಿ ಒಂದೇ ದಿನದಲ್ಲಿ ಎರಡೂ ಕುಟುಂಬಗಳ ಸಂಪ್ರದಾಯದ ಪ್ರಕಾರ ಎರಡು ಬಾರಿ ವಿವಾಹವಾಗಿದ್ದರು. ಕೀರ್ತಿ ಹಾಗೂ ಆ್ಯಂಟೋನಿ ಅವರದ್ದು 15 ವರ್ಷಗಳ ಪ್ರೀತಿ. ಬಾಲ್ಯದಿಂದ ಗೆಳೆಯರಾಗಿದ್ದ ಇವರು ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ಕೀರ್ತಿ ಪ್ಯಾನ್ ಇಂಡಿಯಾ ಮಟ್ಟದ ನಟಿಯಾಗಿದ್ದು ತೆಲುಗು, ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಇದೀಗ ಬಾಲಿವುಡ್ಗೂ ಕಾಲಿಟ್ಟಿದ್ದಾರೆ.