ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: 84 ವರ್ಷಗಳ ಸುದೀರ್ಘ ದಾಂಪತ್ಯ; ವಿಶ್ವ ದಾಖಲೆಗೆ ಸೇರಿದ ಈ ಜೋಡಿಯ ನಂಟಿನ ಗುಟ್ಟೇನು?

ಇಲ್ಲೊಂದು ಹಿರಿ ಜೋಡಿ ಸುದೀರ್ಘ 84 ವರ್ಷಗಳ ದಾಂಪತ್ಯ ಜೀವನವನ್ನು ಒಟ್ಟಿಗೆ ಕಳೆದಿದ್ದಾರೆ. 100 ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿ ಸುಖ ಜೀವನ ನಡೆಸುತ್ತಿದ್ದಾರೆ. ಮನೋಯೆಲ್ ಮತ್ತು ಮಾರಿಯಾ ಹೆಸರಿನ ಈ ಬ್ರೆಜಿಲಿಯನ್ ಜೋಡಿ ಸದ್ಯ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

100 ಮೊಮ್ಮಕ್ಕಳು, 84 ವರ್ಷದ ದಾಂಪತ್ಯ! ಯಾರಿವರು?

ಮನೋಯೆಲ್ ಮತ್ತು ಮಾರಿಯಾ

Profile Vishakha Bhat Feb 15, 2025 6:51 PM

ಬ್ರೆಸೀಲಿಯಾ: ದಾಂಪತ್ಯ ಎಂದರೆ ಪ್ರೀತಿ, ಶಕ್ತಿ, ನಂಬಿಕೆ ಎಲ್ಲವೂ. ಇವೆಲ್ಲವೂ ಇದ್ದರೆ ಮಾತ್ರ ದಾಂಪತ್ಯ ಜೀವನ ಸುದೀರ್ಘವಾಗಿ ನಡೆಯಲು ಸಾಧ್ಯ. ಇಲ್ಲೊಂದು ಜೋಡಿ ಸುದೀರ್ಘ 84 ವರ್ಷಗಳ ದಾಂಪತ್ಯ ನಡೆಸಿ ಜೀವನವನ್ನು ಒಟ್ಟಿಗೆ ಕಳೆದಿದ್ದಾರೆ. ಇವರು 100 ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿ ಸುಖ ಜೀವನ ನಡೆಸುತ್ತಿದ್ದಾರೆ. ಮನೋಯೆಲ್ ಮತ್ತು ಮಾರಿಯಾ ಹೆಸರಿನ ಈ ಬ್ರೆಜಿಲಿಯನ್ ಜೋಡಿ ಸದ್ಯ ವಿಶ್ವ ದಾಖಲೆಯನ್ನು ನಿರ್ಮಿಸಿದೆ. 1940 ರಲ್ಲಿ ಜೋಡಿಗಳಾಗಿ ಪರಸ್ಪರ ಕಷ್ಟಸುಖದಲ್ಲಿ ಒಂದಾಗಿರುವ ಪ್ರತಿಜ್ಞೆ ಮಾಡಿಕೊಂಡ ಈ ಸಂಗಾತಿಗಳು ತಮ್ಮ ಬಾಳ್ವೆಯುದ್ದಕ್ಕೂ ಸಿಹಿ, ಕಹಿಗಳನ್ನು ಒಟ್ಟಾಗಿ ಸಮನಾಗಿ ಸ್ವೀಕರಿಸಿ ಯುವ ಪೀಳಿಗೆಗೆ ಮಾದರಿಯಾಗಿ (Viral News) ನಿಂತಿದ್ದಾರೆ.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು ಮಾತನಾಡಿ, ಆಗ ಇಷ್ಟೊಂದು ಮುಂದುವರಿದ ಕಾಲವಾಗಿರಲಿಲ್ಲ. ಇಷ್ಟೊಂದು ತಂತ್ರಜ್ಞಾನ ಕೂಡ ಇರಲಿಲ್ಲ. ಆಧುನೀಕತೆ ಏನು ಎಂಬುದರ ಸ್ಪಷ್ಟ ಕಲ್ಪನೆ ಬ್ರೆಜಿಲ್‌ನಲ್ಲಿರಲಿಲ್ಲ. 1936 ರಲ್ಲಿ ಮನೋಯೆಲ್ ವ್ಯಾಪಾರ ಸಂಬಂಧವಾಗಿ ಬೋವಾ ವಿಯಾಗೆಮ್‌ನಲ್ಲಿರುವ ಅಲ್ಮೇಡಾ ಪ್ರದೇಶಕ್ಕೆ ಬಂದಾಗ ಅಲ್ಲಿ ಮಾರಿಯಾ ಅವರನ್ನು ನಾನು ಭೇಟಿಯಾಗಿದ್ದೆ. 1940 ರಲ್ಲಿ ನಾವಿಬ್ಬರು ಮತ್ತೊಮ್ಮೆ ಭೇಟಿಯಾಗಿದ್ದೆವು. ಆಗ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಯಿತು. ಇವಳೇ ನನ್ನ ಮನದರಸಿ ಎಂದು ಕೊಂಡು ನಾನು ಅವಳ ಬಳಿ ನನ್ನ ಪ್ರೀತಿಯನ್ನು ಹಂಚಿಕೊಂಡೆ ಎಂದು ಮನೋಯೆಲ್ ಹೇಳಿದ್ದಾರೆ. ಮಾರಿಯಾ ಕೂಡ ಪ್ರೀತಿಯನ್ನು ಒಪ್ಪಿಕೊಂಡಿದ್ದು, ಇಲ್ಲಿಂದ ಇವರಿಬ್ಬರ ಪ್ರೀತಿ ಜೀವನ ಆರಂಭವಾಗುತ್ತದೆ ಹಾಗೂ ದಶಕಗಳ ದಾಂಪತ್ಯಕ್ಕೆ ಅಡಿಪಾಯ ಬೀಳುತ್ತದೆ.

ತಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ಸಾಕಷ್ಟು ವಿರೋಧವಿತ್ತು ಎಂದು ಇಬ್ಬರೂ ನೆನಪಿಸಿಕೊಂಡರು. ರಿಯಾ ಅವರ ತಾಯಿಗೆ ಈ ಸಂಬಂಧ ಇಷ್ಟವಿರಲಿಲ್ಲ, ಮನೋಯೆಲ್ ತಮ್ಮ ಮಗಳನ್ನು ಹೇಗೆ ನೋಡಿಕೊಳ್ಳುತ್ತಾರೋ ಎಂಬ ಹಿಂಜರಿಕೆ ಅವರನ್ನು ಕಾಡುತ್ತಿತ್ತು. ಕೊನೆಗೂ ಮನೋಯೆಲ್ ಎಲ್ಲರನ್ನೂ ಒಪ್ಪಿಸಿ ಮಾರಿಯಾಳನ್ನು ವಿವಾಹವಾಗುತ್ತಾರೆ.

ಅಲ್ಲಿಂದ ಮುಂದೆ ಜೀವನದ ಸಿಹಿ ಕಹಿಯನ್ನು ಇಬ್ಬರು ಸಮನಾಗಿ ಹಂಚಿಕೊಂಡು ಬಾಳ್ವೆ ಮಾಡುತ್ತಾ ಬಂದಿದ್ದಾರೆ. ಮದುವೆಯ ಆರಂಭಿಕ ದಿನಗಳಲ್ಲಿ ಬ್ಬರೂ ಕೃಷಿಯಲ್ಲಿ ತಮ್ಮ ಜೀವನ ಪ್ರಯಾಣವನ್ನು ಆರಂಭಿಸಿದರು. ಇಲ್ಲಿನ ಪ್ರಮುಖ ಕೃಷಿಯಾದ ತಂಬಾಕನ್ನೇ ಬೆಳೆಸಿ 13 ಮಕ್ಕಳ ಪಾಲನೆ ಪೋಷಣೆ ಮಾಡಿದರು. ಹೀಗೆ ಆ ಮಕ್ಕಳು ದೊಡ್ಡದಾಗಿ ಸಂಸಾರಸ್ಥರಾಗಿ, ಮಾರಿಯಾ ಹಾಗೂ ಮನೋಯೆಲ್ ದಂಪತಿಗಳಿಗೆ 55 ಮೊಮ್ಮಕ್ಕಳು, 54 ಮರಿಮೊಮ್ಮಕ್ಕಳು ಮತ್ತು 12 ಮರಿಮೊಮ್ಮಕ್ಕಳಿದ್ದಾರೆ.

ಈ ಸುದ್ದಿಯನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯನ್ನು ತಬ್ಬಿಕೊಂಡ ಕೊಹ್ಲಿ; ವಿಡಿಯೊ ವೈರಲ್‌

ತಮ್ಮ ಇಳಿ ವಯಸ್ಸಿನಲ್ಲಿಯೂ ನೆಮ್ಮದಿಯ ಜೀವನ ನಡೆಸುತ್ತಿರುವ ಮನೋಯೆಲ್ ಹಾಗೂ ಮಾರಿಯಾ, ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಇಬ್ಬರೂ ಸೇರಿ ಪ್ರಾರ್ಥನೆ ನಡೆಸುತ್ತಾರೆ. ತೃಪ್ತಿ ಹಾಗೂ ಆನಂದಮಯ ದಾಂಪತ್ಯದ ಗುಟ್ಟೇನು ಎಂದು ಕೇಳಿದಾಗ ನಮ್ಮ ನಡುವಿನ ಪ್ರೀತಿಯನ್ನು ಯಾವುದೇ ಆಧುನಿಕ ಕಂಪ್ಯೂಟರ್ ಹಾಗೂ ಕ್ಯಾಲ್ಕುಲೇಟರ್‌ಗೂ ಲೆಕ್ಕಾಚಾರ ಮಾಡಲಾಗುವುದಿಲ್ಲ ಎಂದು ನಗುತ್ತಾ ಉತ್ತರಿಸುತ್ತಾರೆ. ಈ ದೊಡ್ಡ ಕುಟುಂಬಕ್ಕೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಹಿರಿಮೆ ಕೂಡ ದೊರಕಿದ್ದು ಮನೋಯೆಲ್ ಮತ್ತು ಮಾರಿಯಾ ಅತಿ ಹೆಚ್ಚು ಕಾಲ ಬದುಕಿರುವ ದಾಂಪತ್ಯ ಜೀವನ ನಡೆಸಿದ ದಂಪತಿಗಳೆಂದೆನಿಸಿಕೊಂಡಿದ್ದಾರೆ.