Shah Rukh Khan: ವೇದಿಕೆ ಮೇಲೆ ಕಾಲು ಜಾರಿ ಬಿದ್ದ ನಟಿ-ಪಕ್ಕದಲ್ಲೇ ನಿಂತಿದ್ದ ಶಾರುಖ್ ಖಾನ್ ಮಾಡಿದ್ದೇನು ಗೊತ್ತಾ?
Shah Rukh Khan saves Nitanshi: ಯುವ ನಟಿ ನಿತಾಂಶಿ ಗೋಯಲ್ ಅವರ ಮೊದಲ ಸಿನಿಮಾ 'ಲಾಪತಾ ಲೇಡೀಸ್' ನಲ್ಲಿ ಅದ್ಭುತ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ 2025ರ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿ ಗೇರಿಸಿಕೊಂಡಿದ್ದಾರೆ. ಆದರೆ ನಟಿ ನಿತಾಂಶಿಗೋಯಲ್ ಪ್ರಶಸ್ತಿ ಸ್ವೀಕಾರ ಮಾಡಲು ವೇದಿಕೆಗೆ ಬರುತ್ತಿ ರುವಾಗಲೇ ಕಾಲು ಜಾರಿ ಬೀಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರ ಕೈ ಹಿಡಿದುಕೊಂಡು ಬೀಳದಂತೆ ರಕ್ಷಣೆ ಮಾಡಿದ್ದಾರೆ..

-

ನವದೆಹಲಿ: ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ನಡೆದಿದೆ. ಹಲವು ಖ್ಯಾತ ನಟ- ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಅದೇ ರೀತಿ ಯುವ ನಟಿ ನಿತಾಂಶಿ ಗೋಯಲ್ (Nitanshi Goel) ಅವರ ಮೊದಲ ಸಿನಿಮಾ 'ಲಾಪತಾ ಲೇಡೀಸ್' (Laapataa Ladies)ನಲ್ಲಿ ಅದ್ಭುತ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ 2025ರ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ. ಆದರೆ ನಟಿ ನಿತಾಂಶಿ ಗೋಯಲ್ ಪ್ರಶಸ್ತಿ ಸ್ವೀಕಾರ ಮಾಡಲು ವೇದಿಕೆಗೆ ಬರುತ್ತಿರುವಾಗಲೇ ಕಾಲು ಜಾರಿ ಬೀಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಅವರ ಕೈ ಹಿಡಿದುಕೊಂಡು ಬೀಳದಂತೆ ರಕ್ಷಣೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವನ್ನು ಶಾರುಖ್ ಖಾನ್ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಿರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಲು ನಿತಾಂಶಿ ಗೋಯಲ್ ಅವರು ವೇದಿಕೆಗೆ ಬರುತ್ತಿದ್ದಾಗ ಅವರು ಧರಿಸಿದ್ದ ಉದ್ದನೆಯ ಹಳದಿ ಗೌನ್ ನಿಂದಾಗಿ ನಟಿಯ ಕಾಲು ಜಾರಿದೆ. ತಕ್ಷಣ ಎಚ್ಚೆತ್ತ 'ಕಿಂಗ್ ಖಾನ್', ಯಾವುದೇ ಅಂಜಿಕೆ ಇಲ್ಲದೆ ಅವರ ಎರಡೂ ಕೈಗಳನ್ನು ಹಿಡಿದು ಅವರನ್ನು ರಕ್ಷಣೆ ಮಾಡಿದ್ದಾರೆ. ಶಾರುಖ್ ಖಾನ್ ಅವರ ಈ ಮಾನವೀಯತೆ ಮತ್ತು ಸರಳತ್ವದ ವಿಡಿಯೊ ಎಲ್ಲರ ಗಮನ ಸೆಳೆದಿದೆ.
ವೇದಿಕೆ ಮೇಲೆ ನಟಿ ನಿತಾಂಶಿ ಕೈ ಹಿಡಿದು ರಕ್ಷಣೆ ಮಾಡಿದ ಶಾರುಖ್
SRK Being The utmost Gentleman as He Helps Nitanshi Goel To The Stage To Accept Her Award ❤️@iamsrk @filmfare #SRK #ShahRukhKhan #KingKhan #King #GujaratTourism #FilmfareAwards2025 #Filmfareawards #Filmfare #FilmfareInGujarat #KuchhDinToGuzaroGujaratMein… pic.twitter.com/8GMEiVoDS3
— Shah Rukh Khan Universe Fan Club (@SRKUniverse) October 11, 2025
ನಿತಾಂಶಿಯವರನ್ನು ಶಾರುಖ್ ರಕ್ಷಣೆ ಮಾಡುತ್ತಿದ್ದಂತೆ ನಟಿ ಒಂದು ಕ್ಷಣ ಭಾವನಾತ್ಮಕವಾಗಿ ಮಾತನಾಡಿಸಿದ್ದಾರೆ. ವೇದಿಕೆಗೆ ಬಂದ ನಂತರ, ಶಾರುಖ್ ಖಾನ್ ಅವರು ಆಕೆಯ ಗೌನ್‌ನ ಟ್ರೈಲ್ ಅನ್ನು ಸರಿಪಡಿಸಲು ಸಹಾಯ ಮಾಡಿದರು. ನಂತರ ಸಹ-ನಿರೂಪಕ ಕರಣ್ ಜೋಹರ್ ಕುಡ ನಿತಾಂಶಿಯನ್ನು ಅಪ್ಪಿಕೊಂಡು ಈ ಬಗ್ಗೆ ವಿಚಾರಿಸಿ ಪ್ರೀತಿಯಿಂದ ಹಣೆಯ ಮೇಲೆ ಮುತ್ತಿಟ್ಟರು. ಸದ್ಯ ಶಾರುಖ್ ಅವರ ಈ ನಡೆಗೆ ಇಡೀ ಸಭಾಂಗಣದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:Monk the Young Movie: ಇಂದಿನಿಂದ ಸಿನಿಮಾ ಬಜಾರ್‌ನಲ್ಲಿ ʼಮಾಂಕ್ ದಿ ಯಂಗ್ʼ; ಸ್ಕ್ಯಾನ್ ಮಾಡಿ ಚಿತ್ರ ನೋಡಿ
ಲಾಪತಾ ಲೇಡೀಸ್’ ಸಿನಿಮಾದ ಮೂಲಕ ನಟಿ ನಿತಾಂಶಿ ಗೋಯಲ್ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಕೇವಲ 18ನೇ ವರ್ಷದ ನಿತಾಂಶಿಯವರು ಕಿರಣ್ ರಾವ್ ನಿರ್ದೇಶನದ ಸಿನಿಮಾ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದರು. 2001ರ ಗ್ರಾಮೀಣ ಭಾರತದ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರವು, ರೈಲು ಪ್ರಯಾಣದಲ್ಲಿ ಇಬ್ಬರು ವಧುಗಳು ಬೇರ್ಪಡುವ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲಿ ಪ್ರತಿಭಾ ರಾಂಟಾ, ಸ್ಪರ್ಶ್ ಶ್ರೀವಾಸ್ತವ, ಛಾಯಾ ಕದಂ ಮತ್ತು ರವಿ ಕಿಶನ್ ಮುಂತಾದವರು ನಟಿಸಿದ್ದಾರೆ.