ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiccha Sudeep: 'ಮಾರ್ಕ್' ಚಿತ್ರದ ನಿರ್ದೇಶಕನಿಗೆ ಕಿಚ್ಚನಿಂದ ಕಾಸ್ಟ್ಲೀ ಗಿಫ್ಟ್‌!

Kiccha Sudeep: 'ಮಾರ್ಕ್' ಚಿತ್ರದಲ್ಲಿ ಸುದೀಪ್ ಬ್ಯುಸಿ ಇದ್ದು ಈ ಚಿತ್ರದ ನಿರೀಕ್ಷೆ ಕೂಡ ಹೆಚ್ಚು ಮಾಡು ವಂತೆ ಮಾಡಿದೆ. ವಿಶೇಷ ಅಂದ್ರೆ 'ಮಾರ್ಕ್' ಚಿತ್ರಕ್ಕೂ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ನಿರ್ದೇಶಕ ವಿಜಯ್ ಕಾರ್ತಿಕೇಯನ್‌ಗೆ ಸುದೀಪ್ ದುಬಾರಿ ಗಿಫ್ಟ್ ವೊಂದನ್ನು ನೀಡಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿ ದುಬಾರಿ ಬೆಲೆಯ ಕಾರನ್ನು ವಿಜಯ್ ಕಾರ್ತಿಕೇಯನ್‌ಗೆ ಕಿಚ್ಚ ಹಸ್ತಾಂತರಿಸಿದ್ದಾರೆ.

ನವದೆಹಲಿ: ಸ್ಯಾಂಡಲ್ ವುಡ್ ನ ಸ್ಟಾರ್ ನಟರಲ್ಲಿ ಕಿಚ್ಚ ಸುದೀಪ್ (Kiccha Sudeep) ಕೂಡ ಒಬ್ಬರಾಗಿದ್ದಾರೆ‌. ಹಲವಾರು ಹಿಟ್ ಸಿನಿಮಾಗಳನ್ನು ನೀಡಿ ಖ್ಯಾತಿ ಪಡೆದಿರುವ ಕಿಚ್ಚ ನಟನಾಗಿ ಮಾತ್ರವಲ್ಲದೇ ಹಾಡು, ನಿರೂಪಣೆಯಿಂದಲೂ ಜನರ ಮನ ಗೆದ್ದಿದ್ದಾರೆ‌. ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾದ ಸುದೀಪ್ 'ಮ್ಯಾಕ್ಸ್' ಸಿನಿಮಾವು ದೊಡ್ಡಮಟ್ಟದ ಗೆಲುವನ್ನು ಪಡೆದುಕೊಂಡಿತ್ತು. ಈ ಚಿತ್ರದ ನಿರ್ದೇಶವನ್ನು ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮಾಡಿದ್ದರು. ಸದ್ಯ 'ಮಾರ್ಕ್' ಚಿತ್ರದಲ್ಲಿ ಸುದೀಪ್ ಬ್ಯುಸಿ ಇದ್ದು ಈ ಚಿತ್ರದ ನಿರೀಕ್ಷೆ ಕೂಡ ಹೆಚ್ಚು ಮಾಡುವಂತೆ ಮಾಡಿದೆ. ವಿಶೇಷ ಅಂದ್ರೆ 'ಮಾರ್ಕ್' ಚಿತ್ರಕ್ಕೂ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ನಿರ್ದೇಶಕ ವಿಜಯ್ ಕಾರ್ತಿಕೇಯನ್‌ಗೆ ಸುದೀಪ್ ದುಬಾರಿ ಗಿಫ್ಟ್ ವೊಂದನ್ನು ನೀಡಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿ ದುಬಾರಿ ಬೆಲೆಯ ಕಾರನ್ನು ವಿಜಯ್ ಕಾರ್ತಿಕೇಯನ್‌ಗೆ ಕಿಚ್ಚ ಹಸ್ತಾಂತರಿಸಿದ್ದಾರೆ.

'ಮ್ಯಾಕ್ಸ್' ಚಿತ್ರದ ಮೂಲಕ ವಿಜಯ್ ಮೊದಲ ಸಿನಿಮಾದಲ್ಲೇ ಹಿಟ್ ಗಳಿಸಿದ್ದರು..ಇದೀಗ ಮತ್ತೆ ಕಿಚ್ಚ ನಟನೆಯ 'ಮಾರ್ಕ್' ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ವಿಜಯ್ ಗೆ ಸ್ಕೋಡಾ ಕಾರ್ ಅನ್ನು ಕಿಚ್ಚ ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊಗಳು ಸದ್ಯ ಸೋಶಿ ಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಕಿಚ್ಚ ಸುದೀಪ್ ನ ಧಾರಾಳ ಮನಸ್ಸಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಿಚ್ಚ ಇಂತಹ ವಿಚಾರದಲ್ಲಿ ಯಾವತ್ತಿಗೂ ಮುಂದೆ ಇರುತ್ತಾರೆ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.



ನಿರ್ದೇಶಕ ವಿಜಯ್ ಕಾರ್ತಿಕೇಯನ್‌ ಅವರಿಗೆ ಸ್ಕೋಡಾ ಕಾರನ್ನು ಅನ್ನು ಗಿಫ್ಟ್ ನೀಡಿದ್ದ ಈ ಕಾರಿನ ಬೆಲೆ ಸುಮಾರು10 ಲಕ್ಷದಿಂದ ಶುರುವಾಗಿ 16 ಲಕ್ಷದವರೆಗೆ ಇದೆ ಎಂದು ಹೇಳಾಗುತ್ತಿದೆ.‌ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್ "ಕಿಚ್ಚ ಸುದೀಪ್ ಸರ್ ಮತ್ತು ಅವರ ಕುಟುಂಬದಿಂದ ನೀಡಿದ ಈ ಉಡುಗೊರೆ.. ನನ್ನ ಹೃದಯದಲ್ಲಿ ಯಾವಾ ಗಲೂ ಇದು ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಧನ್ಯವಾದಗಳು ಕಿಚ್ಚ ಸರ್" ಎಂದು ವಿಜಯ್ ಕಾರ್ತಿಕೇಯನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Vrusshabha Movie: ಮೋಹನ್‌ಲಾನ್‌ ನಟನೆಯ 'ವೃಷಭ' ಚಿತ್ರತಂಡ ಸಂಭಾವನೆಯನ್ನೇ ನೀಡಿಲ್ಲ; ವಿಡಿಯೊ ಮಾಡಿ ಬೇಸರ ಹೊರಹಾಕಿದ ಸ್ಯಾಂಡಲ್‌ವುಡ್‌ ನಟ

ಕಿಚ್ಚ ಸುದೀಪ್ ನಟಿಸಿದ್ದ ‘ಮ್ಯಾಕ್ಸ್’ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಸದ್ಯ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಾರ್ಕ್ ನಲ್ಲಿ ನಟಿಸುತ್ತಿದ್ದು ಅಜನೀಶ್ ಲೋಕ ನಾಥ್ ಸಂಗೀತ ನೀಡಿದ್ದಾರೆ. ಡಿಸೆಂಬರ್ 25 ರಂದು ಈ ಚಿತ್ರ ಬಿಡುಗಡೆ ಯಾಗುವ ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ಹೊರ ಬಂದಿದೆ. ಮಾರ್ಕ್’ ಸಿನಿಮಾಕ್ಕಾಗಿ ಭಿನ್ನ ಹೇರ್ ಸ್ಟೈಲ್ ಅನ್ನು ಸುದೀಪ್ ಮಾಡಿಸಿಕೊಂಡಿದ್ದಾರೆ. ‘ಮಾರ್ಕ್’ ಮಾತ್ರವಲ್ಲದೆ ಸುದೀಪ್, ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.