Kurudu Kanchana Movie: ʼಕುರುಡು ಕಾಂಚಾಣʼ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ರಾಕ್ ಸ್ಟಾರ್ ರೋಹಿತ್
Kurudu Kanchana Movie: ಎಸ್. ಪ್ರದೀಪ್ ವರ್ಮ ನಿರ್ದೇಶನದ ʼಕುರುಡು ಕಾಂಚಾಣʼ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರೀಕರಣ ಪೂರೈಸಿರುವ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ಕುರುಡು ಕಾಂಚಾಣ" ಚಿತ್ರ ತೆರೆಗೆ ಬರುವ ಹಂತದಲ್ಲಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ವಿ.ಟಾಕೀಸ್ ಲಾಂಛನದಲ್ಲಿ ಅರುಣ್ ಕುಮಾರ್ ಜೆ ಹಾಗೂ ಡಾ. ಶ್ರೇಯಸ್ ಎಸ್. ನಿರ್ಮಿಸಿರುವ, ಕೆ.ಎಸ್. ಮಂಜುನಾಥ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಹಾಗೂ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿರುವ ಎಸ್. ಪ್ರದೀಪ್ ವರ್ಮ ನಿರ್ದೇಶನದ ʼಕುರುಡು ಕಾಂಚಾಣʼ ಚಿತ್ರದ (Kurudu Kanchana Movie) ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ, ನಿರ್ದೇಶಕ, ರಾಕ್ ಸ್ಟಾರ್ ರೋಹಿತ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರೈಸಿರುವ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ "ಕುರುಡು ಕಾಂಚಾಣ" ಚಿತ್ರ ತೆರೆಗೆ ಬರುವ ಹಂತದಲ್ಲಿದೆ.
ʼಕುರುಡು ಕಾಂಚಾಣʼ ಚಿತ್ರದ ಚಿತ್ರೀಕರಣವು ಬೆಂಗಳೂರು, ಕುಣಿಗಲ್, ಚಿಕ್ಕಮಗಳೂರು, ವರ್ಕಳ ಹಾಗೂ ವೈನಾಡ್‌ನಲ್ಲಿ ನಡೆದಿದೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಎಚ್. ಗೀತಾ ಕೈವಾರ ಸಂಗೀತ ನೀಡಿದ್ದಾರೆ. ವಿ. ಮನೋಹರ್, ವರದರಾಜ್ ಚಿಕ್ಕಬಳ್ಳಾಪುರ, ಅರ್ಚನಾ ಮರವಂತೆ ಹಾಡುಗಳನ್ನು ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ನಿರ್ದೇಶಕ ಪ್ರದೀಪ್ ವರ್ಮ ಅವರೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Summer Season End Sale: ಸೀಸನ್‌ಗೂ ಮುನ್ನವೇ ಆರಂಭವಾಯ್ತು ಸಮ್ಮರ್ ಎಂಡ್ ಸೇಲ್
ಪ್ರವೀಣ್ ಶೆಟ್ಟಿ & ಗೌತಮ್ ಮಟ್ಟಿ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿರಣ್ ರಾಜ್, ಎಸ್. ಪ್ರದೀಪ್ ವರ್ಮ, ಅಮೂಲ್ಯ ಗೌಡ, ಸಾಕ್ಷಿ ಮೇಘನಾ, ರೆಮೋ (ರೇಖಾ), ನಾಗೇಂದ್ರ ಅರಸ್ ಮುಂತಾದವರಿದ್ದಾರೆ.