ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

bigg boss

Bigg Boss Kannada 13: ಈ ಬಾರಿಯ ಬಿಗ್‌ ಬಾಸ್‌ ಪ್ರಪಂಚ ಹೇಗೆ ಇದೆ ಗೊತ್ತಾ? ಇಲ್ಲಿದೆ ಸಣ್ಣ ಝಲಕ್‌

ಈ ಬಾರಿಯ ಬಿಗ್‌ ಬಾಸ್‌ ಪ್ರಪಂಚ ಹೇಗೆ ಇದೆ ಗೊತ್ತಾ? ಇಲ್ಲಿದೆ ಸಣ್ಣ ಝಲಕ್‌

Bigg Boss Kannada 13: ಸೆಪ್ಟೆಂಬರ್ 6ರಿಂದ ಸಂಜೆ 7 ಗಂಟೆಗೆ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ನಿರೂಪಿಸಲಿದ್ದಾರೆ. ಫ್ಲೈಟ್ ಹಾಗೂ ವರ್ಲ್ಡ್ ಟೂರ್ ಥೀಮ್ ಹೊಂದಿರುವ ಈ ಬಾರಿಯ ದೊಡ್ಮನೆಗೆ 18 ಸ್ಪರ್ಧಿಗಳು ಕಾಲಿಡುವ ನಿರೀಕ್ಷೆಯಿದೆ. ಇದೀಗ ಈ ಬಾರಿಯ ಬಿಗ್‌ ಬಾಸ್‌ ಮನೆಯ ಸಣ್ಣ ಝಲಕ್‌ ಔಟ್‌ ಆಗಿದೆ.

Bigg Boss: ಕೌಬಾಯ್ ಗೆಟಪ್‌ನಲ್ಲಿ ಸಲ್ಮಾನ್ ಖಾನ್‌; ಬಿಗ್‌ ಬಾಸ್‌ ಶೂಟಿಂಗ್‌ ಶುರು!

ಕೌಬಾಯ್ ಗೆಟಪ್‌ನಲ್ಲಿ ಸಲ್ಮಾನ್ ಖಾನ್‌; ಬಿಗ್‌ ಬಾಸ್‌ ಶೂಟಿಂಗ್‌ ಶುರು!

salman Khan: ಸಲ್ಮಾನ್ ಖಾನ್ ರಿಯಾಲಿಟಿ ಶೋನ ಬಹುನಿರೀಕ್ಷಿತ ಗ್ರ್ಯಾಂಡ್ ಪ್ರೀಮಿಯರ್ ಚಿತ್ರೀಕರಣಕ್ಕಾಗಿ ಸೆಟ್‌ಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಸೂಪರ್‌ಸ್ಟಾರ್ ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ವಿಶಿಷ್ಟ ಭಂಗಿಗಳನ್ನು ಪ್ರದರ್ಶಿಸುತ್ತಾ, ಅಭಿಮಾನಿಗಳಿಗೆ ಆರಂಭಿಕ ಸಂಚಿಕೆಯಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಒಂದು ಲುಕ್‌ ನೀಡಿದರು. ಕೌಬಾಯ್ ಹ್ಯಾಟ್, ಹಾಫ್ ಜಾಕೆಟ್, ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು.

Bigg Boss Kannada 13: ಮಂಗಳೂರು ಮೂಲದ ಬ್ಯೂಟಿ  ಸೌಂದರ್ಯ ಶೆಟ್ಟಿ! ಬಿಗ್‌ ಬಾಸ್‌ಗೆ ಬರೋದು ಕನ್‌ಫರ್ಮ್‌?

ಬಿಗ್‌ ಬಾಸ್‌ಗೆ ಎಂಟ್ರಿ ಕೊಡಲಿರೋ ಈ ಸೌಂದರ್ಯ ಶೆಟ್ಟಿ ಯಾರು?

Bigg Boss Kannada 13: ಸೌಂದರ್ಯ ಶೆಟ್ಟಿ, ಅವರ ಪೂರ್ಣ ಹೆಸರು ಸೌಂದರ್ಯ ಯುವರಾಜ್ ಶೆಟ್ಟಿ, ಮೂಲತಃ ಕರ್ನಾಟಕದ ಮಂಗಳೂರಿನವರು. ಅವರು ಫ್ಯಾಷನ್, ಸೌಂದರ್ಯ ಮತ್ತು ಜೀವನಶೈಲಿಗೆ ಹೆಸರುವಾಸಿಯಾದ ಮಾಡೆಲ್ .ಸ್ಪರ್ಧಿಗಳ ಝಲಕ್‌ಗಳನ್ನು ಒಳಗೊಂಡ ಹೊಸ ಪ್ರೋಮೋದೊಂದಿಗೆ (Promo) ಈಗಾಗಲೇ ಕುತೂಹಲವನ್ನು ಹೆಚ್ಚಿಸಿದೆ ವಾಹಿನಿ. ಮೊದಲ ಫ್ರೇಮ್‌ನಲ್ಲಿ ಹಾಗೂ ಕೊನೆಯ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವವರು ಒಬ್ಬರೇ. ಅವರೇ ಸೌಂದರ್ಯ ಶೆಟ್ಟಿ.

Bigg Boss Kannada 13: ಬಿಗ್ ಬಾಸ್​ಗೆ ಎಂಟ್ರಿ ಕೊಡುತ್ತಿರೋ ಸ್ಪರ್ಧಿಗಳು ಇವರೇ?

ಬಿಗ್ ಬಾಸ್​ಗೆ ಎಂಟ್ರಿ ಕೊಡುತ್ತಿರೋ ಸ್ಪರ್ಧಿಗಳು ಇವರೇ?

Bigg Boss Kannada 13:ಇಂದು ಎಲ್ಲಾ ಸ್ಪರ್ಧಿಗಳು ದೊಡ್ಮನೆ ಒಳಗೆ ತೆರಳಲಿದ್ದು, ಅದರ ಪ್ರಸಾರ ಭಾನುವಾರ ನಡೆಯಲಿದೆ. ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಲೇಟೆಸ್ಟ್ ಪ್ರೋಮೋದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳ ವಿಡಿಯೋಗಳಿವೆ. ಸದ್ಯಕ್ಕೆ ಸ್ಪರ್ಧಿಗಳ ಮುಖವನ್ನ (Tentative Contestant List) ಕ್ಲಿಯರ್ ಆಗಿ ರಿವೀಲ್ ಮಾಡಿಲ್ಲ. ಆದರೆ, ಕೆಲ ಸಜೆಷನ್ ಶಾಟ್‌ಗಳನ್ನ ಬಳಸಿಕೊಳ್ಳಲಾಗಿದೆ. ಅಗ್ನಿಪರೀಕ್ಷೆಯಿಂದ 3 ಸ್ಪರ್ಧಿಗಳು ಬಿಗ್ ಬಾಸ್​ಗೆ ತೆರಳಲಿದ್ದಾರೆ.

Bigg Boss: 104 ಕ್ಯಾಮೆರಾಗಳು, ಒಂದು ರಹಸ್ಯ ರೂಮ್‌! ಹೇಗಿದೆ ಬಿಗ್‌ ಬಾಸ್‌ ಮನೆ?

104 ಕ್ಯಾಮೆರಾಗಳು, ಒಂದು ರಹಸ್ಯ ರೂಮ್‌! ಹೇಗಿದೆ ಬಿಗ್‌ ಬಾಸ್‌ ಮನೆ?

Bigg Boss:ಸೆಪ್ಟೆಂಬರ್ 6 ರ ಭಾನುವಾರದಂದು ಅದ್ಧೂರಿಯಾಗಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಈ ಸೀಸನ್‌ನ ಥೀಮ್ "ವರ್ದಾನ್" ಆಗಿದ್ದು, ಯಾವ ಸ್ಪರ್ಧಿಗಳು ಮನೆಗೆ ಪ್ರವೇಶಿಸುತ್ತಾರೆ ಎಂಬುದು ಅತ್ಯಂತ ಕುತೂಹಲಕಾರಿಯಾಗಿದೆ. ಸ್ಪರ್ಧಿಗಳ ಜೊತೆಗೆ, ಕಾರ್ಯಕ್ರಮದ ಹೊಸ ಮನೆಯೂ ಈ ಬಾರಿ ಚರ್ಚೆಯ ಪ್ರಮುಖ ವಿಷಯವಾಗಿದೆ. ಸುಮಾರು 19 ವರ್ಷಗಳ ಕಾಲ ಬಿಗ್ ಬಾಸ್ ಮನೆಯನ್ನು ವಿನ್ಯಾಸಗೊಳಿಸಿದ ಓಮಂಗ್ ಕುಮಾರ್ ಅವರನ್ನು ಈಗ ಡಿಸೈನರ್ ವರ್ಷಾ ಜೈನ್ ಬದಲಾಯಿಸಿದ್ದಾರೆ.

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಕಾರಣವೇನು?

‘ಬಿಗ್ ಬಾಸ್‌’ ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು!

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಪರಿಸರ ಮತ್ತು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ (NOC) ನೀಡದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Bigg Boss Kannada 13:  ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

Bigg Boss Kannada 13: ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕುಮಾರಿ ಅವರು ಆಟ ಆಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಕುಮಾರಿ 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಿಂದ ಕುಮಾರಿ ಹೊರಬಿದ್ದಿದ್ದಾರೆ. ‘ನನ್ನನ್ನು ಕಳುಹಿಸಲು ಕುಮಾರಿ ಅವರನ್ನು ಕರೆತರಲಾಗುತ್ತಿಲ್ಲ’ ಎಂದು ಪೂರ್ಣಿಮಾ ಆರೋಪಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ಕುಮಾರಿ ಅನಾರೋಗ್ಯದ ಕಾರಣದಿಂದಲೇ ಶೋನಲ್ಲಿ ಉಳಿಯುತ್ತಿಲ್ಲ.

Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off! Video

ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಬಿಗ್ ಬಾಸ್ ಸೀಸನ್‌ಗಳಲ್ಲಿ (Bigg Boss Kannada 13) ಸುದೀಪ್ ಎರಡು ಸೀನ್‌ಗಳನ್ನ ನೆನಪಿಟ್ಟುಕೊಂಡಿದ್ದಾರೆ. ಈ ಎರಡರಲ್ಲಿ ಮೊದಲ ಸೀಸನ್‌ ಇವರಿಗೆ ಯಾವಾಗಲೂ ಇಷ್ಟ ಆಗುವ ಸೀಸನ್ ಆಗಿದೆ. ಸತತ 12 ಸೀಸನ್‌ ನಡೆಸಿಕೊಟ್ಟ ಕೀರ್ತಿ ಕಿಚ್ಚನಿಗೆ ಇದೆ. ಈ ಬಾರಿ ಹಲವು ಸೆಲೆಬ್ರಿಟಿಗಳ ಜೊತೆಗೆ 'ಅಗ್ನಿಪರೀಕ್ಷೆ' ಗೆದ್ದ ಮೂವರು ಜನಸಾಮಾನ್ಯರೂ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು

ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು

Bigg Boss Kannada 13: ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್​​ಗಳಾಗಿದ್ದಾರೆ. ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಜಾಲತಾಣಗಳಲ್ಲಿ ವಿನಯ್​ ಗೌಡ (vinay Gowda) ಅವರು ಬಳಸಿದ ಭಾಷೆಗಳ ಬಗ್ಗೆ, ಸ್ಪರ್ಧಿಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಬಗ್ಗೆ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಇದೀಗ ಈ ಬಗ್ಗೆ ಸುದೀಪ್​ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿದೆ. ಅವರು ಉತ್ತರ ಕೊಟ್ಟಿದ್ದು ಹೀಗೆ.

Bigg Boss kannada 13: ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಶುರುವಾಲು ವಾರವಷ್ಟೆ ಬಾಕಿ ಇದೆ. ಕಿಚ್ಚ ಸುದೀಪ್ ಮತ್ತು ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದು, ಈ ಸೀಸನ್​​ನ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್‌ ಕುರಿತಾಗಿ ಒಂದು ಪ್ರಶ್ನೆ ಬಂದಿದೆ. ಸುದೀಪ್‌ ಕೂಡ ಖಡಕ್‌ ಉತ್ತರ ನೀಡಿದ್ದಾರೆ.

Bigg Boss Kannada 13: ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

Bigg Boss Kannada 13: ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಅಗ್ನಿಪರೀಕ್ಷೆಗೆ ಒಳಗಾದವರು ಲಾವಣ್ಯ ಕುಮಾರಿ (Lavanya Kumari). ಏಕಾಏಕಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಕುಮಾರಿ ಕಾಣ್ತಿಲ್ಲ ಅಂತ ವೀಕ್ಷಕರು ಕಮೆಂಟ್‌ ಕೂಡ ಮಾಡಿದ್ದರು. ಇದೀಗ ಉತ್ತರ ಸಿಕ್ಕಿದೆ.

Bigg Boss Kannada 13:  ‘ಕ್ಯಾಮರಾ ಆಫ್ ಮಾಡಿ’  ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ

‘ಕ್ಯಾಮರಾ ಆಫ್ ಮಾಡಿ’ ಎಂದು ವೇದಿಕೆಯಲ್ಲಿ ರಂಪಾಟ ಮಾಡಿದ ಸ್ಪರ್ಧಿ

Bigg Boss Kannada 13: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ನಡೆಯುತ್ತಿದೆ. ಅಗ್ನಿಪರೀಕ್ಷೆ ಗೆದ್ದ 3 ಮಂದಿ ಮಾತ್ರ ದೊಡ್ಮನೆ ಸೇರುವ ಅವಕಾಶ ಇದೆ. ಆ ಸುವರ್ಣಾವಕಾಶ ಪಡೆಯಲು ಪ್ರಸ್ತುತ 18 ಮಂದಿ ಸೆಣಸಾಡುತ್ತಿದ್ದಾರೆ. ಪೂರ್ಣಿಮಾ ‘ಅಗ್ನಿಪರೀಕ್ಷೆ’ ವೇದಿಕೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣಿಮಾ ಆಡಿರುವ ಮಾತುಗಳಿಗೆ ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ಶ್ರುತಿ ಅಸಮಾಧಾನಗೊಂಡಿದ್ದಾರೆ. ಪೂರ್ಣಿಮಾ ಹಾಗೂ ನಿರ್ಣಾಯಕರ ನಡುವೆ ನಡದಿರುವ ಸಂಘರ್ಷ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Bigg Boss kannada 13: ಚಂದನ್ ತಂಡಕ್ಕೆ ಕಠಿಣ ಸವಾಲು; ಗೆಲುವಿಗಾಗಿ ಸ್ಪರ್ಧಿಗಳ ಕಾದಾಟ

ಚಂದನ್ ತಂಡಕ್ಕೆ ಕಠಿಣ ಸವಾಲು; ಗೆಲುವಿಗಾಗಿ ಸ್ಪರ್ಧಿಗಳ ಕಾದಾಟ

Bigg Boss kannada 13: ಬಿಗ್ ಬಾಸ್ ಅಗ್ನಿಪರೀಕ್ಷೆ ಕೊನೆಯ ಹಂತದಲ್ಲಿದೆ. 60 ಸ್ಪರ್ಧಿಗಳಿಂದ ಆರಂಭಗೊಂಡ ಸ್ಪರ್ಧೆಯಲ್ಲಿ ಈಗ 19 ಮಂದಿ ಉಳಿದುಕೊಂಡಿದ್ದಾರೆ. ಆದರೆ ಈ 19 ಜನರಲ್ಲಿ ಮೂವರಿಗೆ ಮಾತ್ರ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶವಿದೆ. ಜ್ಯೂರಿ ಸದಸ್ಯರಾದ ಚಂದನ್ ಶೆಟ್ಟಿ, ಸಂಗೀತ ಶೃಂಗೇರಿ, ಶ್ರುತಿ ಹಾಗೂ ವಿನಯ್ ಗೌಡ ತಂಡಗಳ ನಡುವೆ ನಡೆದಿರುವ ಬಲೂನ್ ಟಾಸ್ಕ್ ಸ್ಪರ್ಧಿಗಳ ನಡುವೆ ಭಾರಿ ಕುತೂಹಲ ಮತ್ತು ಪೈಪೋಟಿಗೆ ಕಾರಣವಾಗಿದೆ.

Bigg Boss Kannada 13: ಬಿಗ್‌ ಬಾಸ್‌ ವೋಟಿಂಗ್ ಪ್ರಕ್ರಿಯೆ ಆರಂಭ! ಮತ್ತೆ ಸ್ಪರ್ಧಿ ಮೇಲೆ ವಿನಯ್‌ ಗರಂ

ಬಿಗ್‌ ಬಾಸ್‌ ವೋಟಿಂಗ್ ಪ್ರಕ್ರಿಯೆ ಆರಂಭ! ಮತ್ತೆ ಸ್ಪರ್ಧಿ ಮೇಲೆ ವಿನಯ್‌ ಗರಂ

Bigg Boss Kannada 13: ಬಿಗ್ ಬಾಸ್ ಮುಖ್ಯ ಮನೆಗೆ ಹೋಗುವ 18 ಸ್ಪರ್ಧಿಗಳಲ್ಲಿ 3 ಸ್ಪರ್ಧಿಗಳನ್ನು ನೇರವಾಗಿ ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ವೀಕ್ಷಕರಿಗೆ ನೀಡಲಾಗಿದೆ. ಈ ಅಗ್ನಿಪರೀಕ್ಷೆಯಲ್ಲಿ ಹಲವು ಟಾಸ್ಕ್ (Task) ನೀಡಲಾಗುತ್ತಿದೆ. 3 ಪ್ಯಾಸೆಂಜರ್‌ಗಳನ್ನು ಆಯ್ಕೆ ಮಾಡಲು ವೀಕ್ಷಕರಿಗೆ ಅವಕಾಶನೀಡಲಾಗಿದೆ. ಈಗಾಗಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಆರಂಭವಾಗಿದೆ.

Bigg Boss Kannada 13: ʻಗೆಟ್‌ ಔಟ್‌ʼ ಎಂದ ವಿನಯ್‌ ಗೌಡ! ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟ ಸ್ಪರ್ಧಿ ಶ್ರೇಯಸ್

ʻಗೆಟ್‌ ಔಟ್‌ʼ ಎಂದ ವಿನಯ್‌ ಗೌಡಗೆ ಸ್ಪರ್ಧಿ ಶ್ರೇಯಸ್ ಹೇಳಿದ್ದೇನು?

Bigg Boss Kannada 13: ಟಾಪ್ 3 ಕಂಟೆಸ್ಟೆಂಟ್ಸ್‌ನ ಬಿಗ್ ಬಾಸ್ ಮನೆಯೊಳಗೆ ವೋಟ್ ತುಂಬಾ ಮುಖ್ಯ. ಜಿಯೋಹಾಟ್‌ಸ್ಟಾರ್ ಓಪನ್ ಮಾಡಿ, ನಿಮ್ಮ ಇಷ್ಟದ ಕಂಟೆಸ್ಟೆಂಟ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ವೋಟ್ ಮಾಡಿ ಎಂದು ವಾಹಿನಿ ಸದ್ಯ ಹಂಚಿಕೊಂಡಿದೆ. ಇದೆಲ್ಲದರ ಹೊರತಾಗಿ ಮತ್ತೆ ಸುದ್ದಿಯಾಗಿದ್ದು ವಿನಯ್‌ ಗೌಡ . ಈಗ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೋಂದು ವೈರಲ್‌ ಆಗಿದ್ದು, ವಿನಯ್‌ ಗೌಡ ಅವರ ಸುತ್ತ ಮತ್ತಷ್ಟು ಟ್ರೋಲ್‌ಗಳು ಹರಿದಾಡ್ತಿವೆ.

Bigg Boss Kannada 13: ನಾಯಕಿ ನಿರ್ಧಾರಕ್ಕೆ ತಂಡದವರೇ Rebel! ಅಗ್ನಿಪರೀಕ್ಷೆ ಎದುರಿಸೋಕೆ ವಯಸ್ಸು ಯಾವ ಲೆಕ್ಕ?

Bigg Boss : ಅಗ್ನಿಪರೀಕ್ಷೆ ಎದುರಿಸೋಕೆ ವಯಸ್ಸು ಯಾವ ಲೆಕ್ಕ?

Bigg Boss: ಸ್ಪರ್ಧಿಗಳ ಮಧ್ಯೆ ಹಣಾಹಣಿ ಜೋರಾಗಿದೆ. ಪೂರ್ಣಿಮಾ ತಂಡದಲ್ಲೇ ಅಸಮಧಾನ ಶುರುವಾಗಿತ್ತು. ನಾಯಕಿ ನಿರ್ಧಾರಕ್ಕೆ ತಂಡದವರೇ Rebel ಆಗಿದ್ದಾರೆ. ಮತ್ತೊಂದು ಕಡೆ ಟೀಂ ಕಟ್ಟುವಾಗ ಗಂಡು , ಹೆಣ್ಣು ಎಂಬ ಭೇದ ಶುರುವಾಗಿದೆ. ಅಗ್ನಿಪರೀಕ್ಷೆ ಅಖಾಡದಲ್ಲಿ ಗಂಡು-ಹೆಣ್ಣು ಭೇದನೇ ಇಲ್ಲ ಎಂಬ ಅಂಶವು ಇದರಲ್ಲಿದೆ.

Bigg Boss Kannada 13: ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

Bigg Boss Kannada 13: ಹಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 13 (Bigg boss Kannada 13) ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಗ್ರ್ಯಾಂಡ್ ಪ್ರೀಮಿಯರ್ ದಿನಾಂಕ ಹಾಗೂ ಸಮಯ ಈಗಾಗಲೇ ರಿವೀಲ್‌ ಆಗಿದೆ. 'ಅಗ್ನಿ ಪರೀಕ್ಷೆ'ಗೆ ಒಟ್ಟು 60 ಮಂದಿ ಬಂದಿದ್ದರು. ಜನರ ವೋಟಿಂಗ್ ಮೂಲಕ ನಡೆಯಲಿದೆ ಆಯ್ಕೆ: ಮನೆಯೊಳಗೆ ಹೋಗೋದು ಮೂರೇ ಮಂದಿ. ಎಲ್ಲವೂ ನಡೆದ ಮೇಲೆ ಇಲ್ಲಿ ವೀಕ್ಷಕರ ಮತದ ಆಧಾರದ ಮೇಲೆ ಕೇವಲ ಮೂರು ಮಂದಿಯನ್ನಷ್ಟೇ ಆಯ್ಕೆ ಮಾಡಿ ಬಿಗ್‌ ಬಾಸ್‌ ಮನೆಗೆ ಕಳುಹಿಸಲಾಗುತ್ತದೆ.

Bigg Boss Kannada 13: ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

ʻಅಗ್ನಿಪರೀಕ್ಷೆʼಗೆ ಹೆದರಿ ಹೇಮಲತಾ ಹೊರಗೆ ಹೋಗ್ಬಿಡ್ತಾರಾ?

Bigg Boss Kannada 13: ʻಹೇಮಲತಾ ಅವರ ಪೂರ್ಣ ಹೆಸರು ಹೇಮಲತಾ ಜಯಣ್ಣ. ಅಪ್ಪಟ ಹಳ್ಳಿ ಪ್ರತಿಭೆ. ಇವರ ಮೂಲ ಆದಯ ವ್ಯವಸಾಯ. ಹೇಮಲತಾ ಅವರಿಗೆ ಇಬ್ಬರೂ ಮಕ್ಕಳು. ವ್ಯವಸಾಯ, ಮನೆ ಕೆಲಸ ಮಾಡುತ್ತಾ ಹಾಡು ಹೇಳುವ ಅಭ್ಯಾಸ ಇವರದ್ದು. ಹೇಮಲತಾಗೆ ಈ ಟಾಸ್ಕ್‌ ನಿಭಾಯಿಸಲು ಕಷ್ಟವಾಯ್ತು. ಪ್ರತಿ ಸ್ಪರ್ಧಿಗಳು ಕೊಟ್ಟ ಕಾರಣಕ್ಕೆ ಹೇಮಲತಾ ಸಖತ್‌ ಸೈಲೆಂಟ್‌ ಆದ್ರು. ಇಷ್ಟು ಅರ್ಥ ಮಾಡಿಕೊಂಡು ಇಲ್ಲಿ ತನಕ ಆಟ ಆಡಿದೆ. ಬಿಗ್‌ ಬಾಸ್‌ ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದು ಭಾವುಕರಾದರು.

Bigg Boss Kannada 13: ಕಾವೇರಿದ 'ಅಗ್ನಿಪರೀಕ್ಷೆ'ಯ ತಾಪ: ಸ್ಪರ್ಧಿಗಳು ಗಡಗಡ

ಕಾವೇರಿದ 'ಅಗ್ನಿಪರೀಕ್ಷೆ'ಯ ತಾಪ: ಸ್ಪರ್ಧಿಗಳು ಗಡಗಡ

Bigg Boss Kannada 13: ಬಿಗ್‌ ಬಾಸ್‌ ಮನೆಗೆ ಹೋಗಲು ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದಾರೆ. ಟಾಸ್ಕ್ ಶುರುವಾಗುತ್ತಿದ್ದಂತೆ ಪೂರ್ಣಿಮಾ ಅವರು ಕುಮಾರಿಯನ್ನು ತಳ್ಳಿ ಬಲೂನ್ ಅನ್ನು ಒಡೆದು ಹಾಕಿದ್ದಾರೆ. ಏಕಾಏಕಿ ತಲೆ ಸುತ್ತಿ ಕುಮಾರಿ ಕೆಳಗೆ ಬಿದ್ದಿದ್ದಾಳೆ. ಈ ಪ್ರೋಮೋ (Promo) ಈಗ ಸಖತ್‌ ಸುದ್ದಿಯಲ್ಲಿದೆ. ಐದು Star ಕಂಟೆಸ್ಟೆಂಟ್‌ ಇದ್ದಾರೆ. ಅದರಲ್ಲಿ ಯಾರಾಗ್ತಾರೆ top 4? ಅಂತ ಪ್ರೋಮೋ ಹಂಚಿಕೊಂಡಿದೆ ವಾಹಿನಿ. ಪೂರ್ಣಿಮಾ ಈ ವೇಳೆ ಕುಮಾರಿ ತುಂಬಾ ಚೈಲ್ಡಿಶ್‌ ಎಂದಿದ್ದಾರೆ.

Bigg Boss Kannada 13: ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್‌ !

ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್‌ !

Bigg Boss Kannada 13: ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆ (Agniparikshe) ಶುರು ಆಗಿದೆ. ಅಗ್ನಿಪರೀಕ್ಷೆ ಅಲ್ಲಿ 60 ಜನ ಬಂದಿದ್ದರು. ಇವರಿಗೆ ಇಲ್ಲಿ ಟಫ್ ಟಾಸ್ಕ್‌ಗಳನ್ನೆ ಕೊಟ್ಟಿದ್ದಾರೆ. ಇದನ್ನ ಸ್ವೀಕರಿಸದೇ ಸ್ಟೇಜ್ ಬಿಟ್ಟು ಹೋಗಿರೋರು ಇದ್ದಾರೆ. ಇದೀಗ ಲಿಖಿತ್‌ ಗೊಂಡಿ, ರಾಜೀವ್‌ ಗೊಂಡಿ, ಪ್ರಿಯಾಂಕ , ದೀಪಕ್‌ ರಾಜ್‌ ಸೆಲೆಕ್ಟ್‌ ಆಗಿದ್ದಾರೆ. ಮುಂದಿನ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ ಔಟ್‌ ಆಗಿದೆ. ತೀರ್ಪುಗಾರರೇ ಕಣ್ಣೀರಿಟ್ಟಿದ್ದಾರೆ.

Bigg boss Kannada 13: ಬಿಗ್‌ ಬಾಸ್‌ಗೆ ಸೆಲೆಕ್ಟ್‌ ಆಗಲು ಇದು ಲಾಸ್ಟ್‌ ಚಾನ್ಸ್‌; ಕಠಿಣವಾಯ್ತು ಟಾಸ್ಕ್‌!

ಬಿಗ್‌ ಬಾಸ್‌ಗೆ ಸೆಲೆಕ್ಟ್‌ ಆಗಲು ಇದು ಲಾಸ್ಟ್‌ ಚಾನ್ಸ್‌

Bigg boss Kannada 13: ಹೊಸ ಸೀಸನ್‌ನ ಆರಂಭಕ್ಕೂ ಮುನ್ನ ಸ್ಪರ್ಧಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ದೀಕ್ಷಾ ಆರ್‌ ಶೆಟ್ಟಿ, ಮಾಡ್ರನ್‌ ಕವಿ ಮಂಜ, ಇಶಾ ನವೀನ್‌, ಯೋಗಿತಾ-ಯೋಗಶ್ರೀ, ಚರಣ್‌ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್‌ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್‌ ಆಗಿ ಮಾಡ್ರನ್‌ ಕವಿ ಮಂಜ, ಚರಣ್‌ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ. ಇದೀಗ ಹೊಸ ಪ್ರೋಮೋ (Promo) ಔಟ್‌ ಆಗಿದೆ.

Bigg Boss Kannada 13: ಅಷ್ಟು ಸುಲಭವಾಗಿ ಇಂಪ್ರೆಸ್‌ ಆಗಲ್ಲ `ಅಗ್ನಿಪರೀಕ್ಷೆ'ಯ juries! ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ

ಅಷ್ಟು ಸುಲಭವಾಗಿ ಇಂಪ್ರೆಸ್‌ ಆಗಲ್ಲ ʻಅಗ್ನಿಪರೀಕ್ಷೆʼಯ juries!

Bigg Boss Kannada 13:ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ರತ್ನಾ ಚಂದ್ರಪ್ಪ, ಕಬಾಬ್ ಮಂಜು, ಚರಣ್ ಶೆಟ್ಟಿ ಹಾಗೂ ಜಿ.ಕೆ. ಪೂರ್ಣಿಮಾ ಅವರ ಪೈಕಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ. ಪೂರ್ಣಿಮಾ ಯಶಸ್ವಿಯಾಗಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಹೊಸ ಪ್ರೋಮೋ ಔಟ್‌ ಆಗಿದೆ.

Bigg Boss kannada 13: ಅಮ್ಮ, ತಮ್ಮನನ್ನು ಹುಡುಕಲು ಬಂದ ಸ್ಪರ್ಧಿಯೇ ರಿಜೆಕ್ಟ್‌!

ಅಮ್ಮ, ತಮ್ಮನನ್ನು ಹುಡುಕಲು ಬಂದ ಸ್ಪರ್ಧಿಯೇ ರಿಜೆಕ್ಟ್‌!

Bigg Boss kannada 13: 60 ಮಂದಿಯಲ್ಲಿ ಕೆಲವರು 'ಅಗ್ನಿ ಪರೀಕ್ಷೆಯನ್ನು ದಾಟಿ 'ಬಿಗ್ ಬಾಸ್' ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ. ಜಿಯೋ ಹಾಟ್‌ ಸ್ಟಾರ್‌ನಲ್ಲಿ ಈಗಾಗಲೇ ಸ್ಟ್ರೀಮಿಂಗ್‌ (Straeming) ಶುರುವಾಗಿದೆ. ತೀರ್ಪುಗಾರರು ಕೊಟ್ಟ ಟಾಸ್ಕ್‌ ನಿಭಾಯಿಸಿ ಗೆದ್ದವರು ಮುಂದಿನ ರೌಂಡ್‌ಗೆ ಆಯ್ಕೆ ಆಗುತ್ತಾರೆ. ಜಡ್ಜ್‌ಗಳು ಮುಂದಿನ ಸುತ್ತಿಗೆ ಆಯ್ಕೆ ಮಾಡಿದ್ದಾರೆ. ಇನ್ನು ಕೆಲವರು ನೇರವಾಗಿ ರಿಜೆಕ್ಟ್ ಆಗಿದ್ದಾರೆ.

Bigg Boss Kannada 13: ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ ಎಂಟ್ರಿ ಯಾರದ್ದು?

ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ ಎಂಟ್ರಿ ಯಾರದ್ದು?

Bigg Boss Kannada 13: ಬಿಗ್‌ಬಾಸ್ ಕನ್ನಡ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಪ್ರತಿ ಸೀಸನ್‌ನಲ್ಲೂ ಹೊಸತನದ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ. ಲಕ್ಷಾಂತರ ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಅಳೆದು-ತೂಗಿ ಒಟ್ಟು 60 ಸ್ಪರ್ಧಿಗಳನ್ನು ಅಗ್ನಿಪರೀಕ್ಷೆ ರೌಂಡ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಬಿಗ್‌ಬಾಸ್ ಅಗ್ನಿಪರೀಕ್ಷೆ ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿಯಾಗಿರುವುದು ಇದೀಗ ಬಿಡುಗಡೆಯಾಗಿರುವ ಅಗ್ನಿ ಪರೀಕ್ಷೆ ಹೊಸ ಪ್ರೋಮೋ.

Loading...