ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chahat Fateh Ali Khan: ಮಾಡೆಲ್‌ ಜೊತೆ ಅನುಚಿತ ವರ್ತಿಸಿದ್ದು ಮಾತ್ರವಲ್ಲದೇ ವಿಡಿಯೊ ಹರಿಬಿಟ್ಟ ಖ್ಯಾತ ಗಾಯಕ!

ಪಾಕಿಸ್ತಾನದ ಮಥಿರಾ ಅವರು ಇತ್ತೀಚೆಗೆ ತನ್ನ ದಿ 21ಎಂ ಎಂ ಟಾಕ್ ಶೋನಲ್ಲಿ ಚಾಹತ್ ಫತೇಹ್ ಅಲಿ ಖಾನ್ ಜೊತೆಗೆ ಕಾಣಿಸಿಕೊಂಡಾಗ ತನ್ನ ಜೊತೆ ಆತ ಅನುಚಿತವಾಗಿ ವರ್ತಿಸಿದ್ದ ಕುರಿತು ಬೇಸರ ಹೊರ ಹಾಕಿದ್ದಾರೆ. ಈ ಶೋನಲ್ಲಿ ಆಫ್ ಸ್ಕ್ರೀನ್ ವಿಡಿಯೊ ವೈರಲ್ ಆಗಿದ್ದು ವಿಡಿಯೊದಲ್ಲಿ ಮಥಿರಾ ಅವರನ್ನು ಚಾಹತ್ ಅವರು ಕೈ ಹಿಡಿದು ತಬ್ಬಿಕೊಳ್ಳಲು ಮುಂದಾಗಿದ್ದು, ಮಥಿರಾ ನಗುತ್ತಲೇ ಅವರಿಂದ ದೂರ ಸರಿಯಲು ಪ್ರಯತ್ನಿಸಿದ್ದಾರೆ.

Mathira

ಇಸ್ಲಮಾಬಾದ್: ಫ್ಯಾಶನ್‌ ಜಗತ್ತು ನೋಡೋಕೆ ಎಷ್ಟು ಚಂದವೋ ಅದರೊಳಗಿನ ಕೆಲವೊಂದು ಹುಳುಕು ಅಷ್ಟು ಕರಾಳವಾಗಿರುತ್ತದೆ. ಅದಕ್ಕೆ ನಿದರ್ಶನ ಎಂಬಂತೆ ಪಾಕಿಸ್ತಾನದ ಖ್ಯಾತ ಹಾಡುಗಾರ ಚಾಹತ್‌ ಫತೇಹ್‌ ಅಲಿ ಖಾನ್‌ ವಿರುದ್ಧ ಮಾಡೆಲ್‌ ಒಬ್ಬರು ಅನುಚಿತ ವರ್ತನೆ ಬಗ್ಗೆ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಸ್ಟಾರ್‌ ಮಥಿರಾ (Mathira) ಅವರು ಬಹಿರಂಗವಾಗಿ ತನಗಾದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಅನೇಕರು ಕಮೆಂಟ್‌, ಶೇರ್‌ ಮಾಡುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈಕೆ ಯಾರು? ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಾರು ಈಕೆ?

ಮಥಿರಾ ಅವರು ಪಾಕಿಸ್ತಾನದ ಸ್ಟೈಲಿಶ್ ಐಕಾನ್ ಮಾಡೆಲ್ ಆಗಿದ್ದಾರೆ‌. ಅದರ ಜೊತೆಗೆ ಡ್ಯಾನ್ಸರ್, ಸಿಂಗರ್ ಆಗಿದ್ದು ಅನೇಕ ಟಿವಿ ಶೋ ಗಳಲ್ಲಿ ಹೋಸ್ಟ್ ಮಾಡಿದ್ದಾರೆ. ಈ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಕೂಡ ಈಕೆ ಸಕ್ರಿಯರಾಗಿದ್ದು ನೋಡಲು ಸ್ಟೈಲ್ ಆ್ಯಂಡ್ ಬೋಲ್ಡ್ ಆಗಿದ್ದರು ತನಗೆ ಟಿವಿ ಹೋಸ್ಟಿಂಗ್ ವೇಳೆ ಚಾಹತ್‌ ಫತೇಹ್‌ ಅಲಿ ಖಾನ್‌ ಅವರಿಂದ ಮುಜುಗರ ಅನುಭವಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಇದು ತುಂಬಾ ಕೆಟ್ಟ ಪರಿಣಾಮ ಬೀರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.



ಆಗಿದ್ದೇನು?

ಪಾಕಿಸ್ತಾನದ ಮಥಿರಾ ಅವರು ಇತ್ತೀಚೆಗೆ ತನ್ನ ದಿ 21ಎಂ ಎಂ ಟಾಕ್ ಶೋನಲ್ಲಿ ಚಾಹತ್ ಫತೇಹ್ ಅಲಿ ಖಾನ್ ಜೊತೆಗೆ ಕಾಣಿಸಿಕೊಂಡಾಗ ತನ್ನ ಜೊತೆ ಆತ ಅನುಚಿತವಾಗಿ ವರ್ತಿಸಿದ್ದ ಕುರಿತು ಬೇಸರ ಹೊರ ಹಾಕಿದ್ದಾರೆ. ಈ ಶೋನಲ್ಲಿ ಆಫ್ ಸ್ಕ್ರೀನ್ ವಿಡಿಯೊ ವೈರಲ್ ಆಗಿದ್ದು ವಿಡಿಯೊದಲ್ಲಿ ಮಥಿರಾ ಅವರನ್ನು ಚಾಹತ್ ಅವರು ಕೈ ಹಿಡಿದು ತಬ್ಬಿಕೊಳ್ಳಲು ಮುಂದಾಗಿದ್ದು, ಮಥಿರಾ ನಗುತ್ತಲೇ ಅವರಿಂದ ದೂರ ಸರಿಯಲು ಪ್ರಯತ್ನಿಸಿದ್ದಾರೆ.

ಮಥಿರಾ ಅವರು ತಮ್ಮ ಟಾಕ್ ಶೋನ ವಿಡಿಯೊ ವೈರಲ್ ಆಗಿದ್ದರ ಬಗ್ಗೆ ತಿಳಿಸಿದ್ದಾಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮುನ್ನ ಚಾಹತ್ ಅವರು ತನ್ನ ಬಳಿ ಅನುಮತಿ ಕೇಳಿರಲಿಲ್ಲ. ಇದು ನಿಜಕ್ಕೂ ನನಗೆ ಬೇಸರ ತರಿಸಿದೆ. ಟಿವಿ ಶೋ ಸಂದರ್ಭದಲ್ಲಿ ಯಾರೇ ಬಂದರೂ ಅವರನ್ನು ನಾವು ಅತಿಥಿಗಳ ತರ ಕಾಣುತ್ತೇವೆ. ವೈರಲ್ ಆದ ವಿಡಿಯೊ ತನಗೆ ಗೊತ್ತಿಲ್ಲದೆ ಪೋಸ್ಟ್ ಮಾಡಿದ್ದಾರೆ ಎಂದು ಮಥಿರಾ ಅವರು ಚಾಹತ್ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನು ಓದಿ: Pilipanja Cinema: ‘ಪಿಲಿ ಪಂಜ’ ಶೂಟಿಂಗ್‌ ಫಿನಿಶ್‌– ತೆರೆಗೆ ಯಾವಾಗ ಬರಲಿದೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ

ಮಥಿರಾ ಅವರು ತನ್ನ ಶೋನಲ್ಲಿ ತನಗಾದ ಬೇಸರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣ ನೀಡುವ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ ನಾನು ತುಂಬಾ ಬೋಲ್ಡ್ ಆಗಿರಬಹುದು. ಆದರೆ ಇದು ಬೋಲ್ಡ್ ಆಗಿ ಸ್ವೀಕಾರ ಮಾಡುವ ವಿಚಾರ ಅಲ್ಲ. ಅವರು ನನ್ನ ಶೋ ನಲ್ಲಿ ನನಗೆ ಗೊತ್ತಿಲ್ಲದೆ ವೀಡಿಯೋ ಮಾಡಿ ನನ್ನ ಅನುಮತಿ ಇಲ್ಲದೆ ವಿಡಿಯೊ ಪೋಸ್ಟ್ ಮಾಡಿದ್ದು ಸರಿಯಲ್ಲ. ಅದನ್ನು ಕೂಡಲೆ ಡಿಲೀಟ್ ಮಾಡಲು ಕೂಡ ಈಗಾಗಲೇ ಸೂಚನೆ ನೀಡಿದ್ದೇವೆ. ಆದರೂ ಅದನ್ನು ಡಿಲೀಟ್ ಮಾಡಿಲ್ಲ. ಈ ತರ ಅಸಭ್ಯವಾಗಿ ವರ್ತಿಸಿದ್ದು ನನಗೆ ಬೇಸರ ಇದೆ. ನಾವು ಅವರನ್ನು ಸಭ್ಯವಾಗಿ ಕಂಡರು ಅವರು ನಮ್ಮನ್ನು ತುಂಬಾ ಬೋಲ್ಡ್ ಅಂದುಕೊಳ್ಳುತ್ತಾರೆ. ಇದು ನನಗೆ ಜೀವನದ ಒಂದು ಪಾಠವಾಗಿದೆ ಎಂದಿದ್ದಾರೆ.