ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nagarjuna: ಕೂಲಿಯಲ್ಲಿ ನಾಗಾರ್ಜುನ್‌ ಟೆರರ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ! ಹಾಲಿವುಡ್‌ನ ʻಜೋಕರ್‌ʼ ಸ್ಫೂರ್ತಿಯಂತೆ!

ಸೂಪರ್ ಸ್ಟಾರ್ ರಜನೀಕಾಂತ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನ ಯಿಸಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದ ಕೂಲಿ ಸಿನಿಮಾಕ್ಕೆ ಅನೇಕ ಟ್ವಿಸ್ಟ್ ಹೊಂದಿರುವ ಕಥೆ ಇದೆ. ಅದೇ ರೀತಿ ಪಾತ್ರವರ್ಗವು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಹುದೊಡ್ಡ ತಾರಾಗಣದ ಸಂಗಮವಿರುವ ಈ ಸಿನಿಮಾದ ಕೆಲವು ದೃಶ್ಯಗಳು ಗಮನಾರ್ಹವಾಗಿದೆ. ಅಂತಹ ದೃಶ್ಯದಲ್ಲಿ ಖ್ಯಾತ ನಟ ನಾಗಾರ್ಜುನ ಅವರ ಖಳನಾಯಕನ ಪಾತ್ರ ಕೂಡ ಹೆಚ್ಚು ಹೈಲೈಟ್ ಆಗಿದೆ. ನಟ ನಾಗಾರ್ಜುನ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ಸ್ಟೈಲಿಶ್‌ ಹಾಗೂ ವೈಲೆಂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಕೂಲಿ ಸಿನಿಮಾದಲ್ಲಿ ನಾಗಾರ್ಜುನ ಲುಕ್‌ನ ಹಿಂದಿನ ಅಸಲಿ ಕಥೆ ಏನ್‌ ಗೊತ್ತಾ?

Profile Pushpa Kumari Aug 14, 2025 6:05 PM

ನವದೆಹಲಿ: ಲೋಕೇಶ್ ಕನಗರಾಜ್ ಅವರ ಬಹುನಿರೀಕ್ಷಿತ 'ಕೂಲಿ' (Coolie) ಸಿನಿಮಾ ಕೊನೆಗೂ ರಿಲೀಸ್ ಆಗಿದೆ. ಆಗಸ್ಟ್ 14ರಂದೇ ಈ ಸಿನಿಮಾ ರಿಲೀಸ್ ಆಗಿದ್ದು ಸೂಪರ್ ಸ್ಟಾರ್ ರಜನೀಕಾಂತ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದ ಕೂಲಿ ಸಿನಿಮಾಕ್ಕೆ ಅನೇಕ ಟ್ವಿಸ್ಟ್ ಹೊಂದಿರುವ ಕಥೆ ಇದೆ. ಅದೇ ರೀತಿ ಪಾತ್ರವರ್ಗವು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಹುದೊಡ್ಡ ತಾರಾಗಣದ ಸಂಗಮವಿರುವ ಈ ಸಿನಿಮಾದ ಕೆಲವು ದೃಶ್ಯಗಳು ಗಮನಾರ್ಹವಾಗಿದೆ. ಅಂತಹ ದೃಶ್ಯದಲ್ಲಿ ಖ್ಯಾತ ನಟ ನಾಗಾರ್ಜುನ ಅವರ ಖಳ ನಾಯಕನ ಪಾತ್ರ ಕೂಡ ಹೆಚ್ಚು ಹೈಲೈಟ್ ಆಗಿದೆ. ನಟ ನಾಗಾ ರ್ಜುನ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ಸ್ಟೈಲಿಷ್ ಹಾಗೂ ವಯಲೆಂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಷ ಭೂಷಣವನ್ನು ಪರಿಕಲ್ಪನೆ ಮಾಡುವಾಗ ಹೀತ್ ಲೆಡ್ಜರ್ ಅವರ ದಿ ಡಾರ್ಕ್ ನೈಟ್‌ನಲ್ಲಿನ ಐಕಾನಿಕ್ ಜೋಕರ್‌ ಪಾತ್ರದಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹಿರಿಯ ನಟ ನಾಗಾರ್ಜುನ ಅವರೇ ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.

ನಟ ನಾಗಾರ್ಜುನ ಅವರು ತಮ್ಮ ಸಂದರ್ಶನದಲ್ಲಿ ವಿಭಿನ್ನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ನಿರ್ದೇಶಕ ಲೋಕಿ ಅವರು ಹಾಲಿವುಡ್ ನಟ ಹೀತ್ ಲೆಡ್ಜರ್‌ ಅವರ ಜೋಕರ್ ಸಿನಿ ಮಾದಂತಯೇ ಒಂದು ಪಾತ್ರವನ್ನು ಕೂಲಿಯಲ್ಲಿ ತೆರೆ ಮೇಲೆ ತರಬೇಕು ಎಂದು ಅಂದು ಕೊಂಡಿ ದ್ದರು. ನೇರಳೆ ಮತ್ತು ಕ್ರೀಮ್ ಬಣ್ಣದ ಮೇಕಪ್ ಲುಕ್ ಕೂಡ ಪ್ರಯತ್ನಿ ಸಲಾಗಿತ್ತು. ಇದು ನನ್ನ ವೃತ್ತಿ ಬದುಕಲ್ಲಿ ಹೊಸ ಅನುಭವವಾಗಿದೆ. ಬಳಿಕ ಲೋಕಿ ವಸ್ತ್ರ ವಿನ್ಯಾಸಕರಿಗೆ ಹೇಳಿ ಅವರು ಮೂರು ಡಿಫರೆಂಟ್ ಥೀಂ ನ ಆಯ್ಕೆ ನೀಡಿದರು. ಅದರಲ್ಲಿ ಈ ಥೀಂ ನನಗೆ ಹೆಚ್ಚು ಇಷ್ಟವಾಯಿತು. ನನ್ನ ಬಳಿ ಒಂದು ಜಾಕೆಟ್ ಕೂಡ ಇತ್ತು. ನೇರಳೆ ಜಾಕೆಟ್. ಅದು ನಿಜವಾಗಿಯೂ ಚೆನ್ನಾಗಿತ್ತು. ಹೀಗಾಗಿ ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣುವಂತಾಯಿತು. ನಾವು ಅಭಿನಯಿಸುವಾಗ ನಟ ರಜನೀಕಾಂತ್ ಅವರು ಕೂಡ ನನ್ನ ವಿಭಿನ್ನ ಸ್ಟೈಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ನಟ ನಾಗಾರ್ಜುನ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನು ಓದಿ:Nodiddu Sullagabahudu Movie: ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್‌

ಸನ್ ಪಿಕ್ಚರ್ಸ್ ಸಂಸ್ಥೆಯಿಂದ 'ಕೂಲಿ' ಸಿನಿಮಾವು ಬಹುದೊಡ್ಡ ಮಟ್ಟಿಗೆ ನಿರ್ಮಾಣ ಮಾಡ ಲಾಗಿದೆ. ಈ ಸಿನಿಮಾವನ್ನು ಕೋಟಿ ಕೋಟಿ ಬಂಡವಾಳ ಹೂಡಿಕೆ ಮಾಡಿ ಮಾಡಲಾಗಿದ್ದು ಸಿನಿಮಾ ರಿಲೀಸ್ ಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ ನೂರಾರು ಕೋಟಿ ಬಾಚಿತ್ತು. ಈ ಸಿನಿಮಾದಲ್ಲಿ ಮೊದಲಾರ್ಧ ಅನೇಕ ಸಸ್ಪೆನ್ಸ್ ಸಿಕ್ವೆನ್ಸ್ ಇರಲಿದ್ದು ಇಂಟರ್ವಲ್ ನಲ್ಲಿ ಫ್ಲ್ಯಾಶ್‌ ಬ್ಯಾಕ್ ಎಪಿಸೋಡ್ ಮತ್ತಷ್ಟು ಕುತೂಹಲ ಮೂಡುವಂತಿದೆ. ಹಾಸ್ಟೆಲ್ , ಫೈಟಿಂಗ್ , ಇತರ ಅಂಶದ ಕಥೆ ಜೊತಗೆ ಸಂಗೀತ ಸಂಯೋಜನೆ ಕೂಡ ಬಹಳ ಚೆನ್ನಾಗಿದೆ. ಇದರೊಂದಿಗೆ ಅನೇಕ ಅತಿಥಿ ಪಾತ್ರಗಳು ಕೂಡ ಈ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು.

ಕೂಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ನಾಗಾರ್ಜುನ, ಶ್ರುತಿ ಹಾಸನ್, ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ, ಸೌಬಿನ್ ಶಾಹಿರ್, ಸತ್ಯರಾಜ್ ಮತ್ತು ಆಮಿರ್ ಖಾನ್ ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರವು ಅತ್ಯಾಕರ್ಷಕ ಆ್ಯಕ್ಷನ್ ಸಿಕ್ವೇನ್ಸ್ ನಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಈ ಮೂಲಕ ನಟ ನಾಗಾರ್ಜುನ ಅವರ ಜೋಕರ್-ಪ್ರೇರಿತ ಪಾತ್ರವು ಈ ಸಿನಿಮಾದಲ್ಲಿ ಚರ್ಚಾಸ್ಪದ ವಿಷಯಗಳಲ್ಲಿ ಒಂದಾಗಿ ಖ್ಯಾತಿ ಪಡೆಯುತ್ತಿದೆ.