ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್​

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್​

image-12859204-fa72-4d21-bea1-9d4877bb225c.jpg
image-2b6cab31-fe5a-47c9-b7aa-8ab37d2a8e14.jpg
ಚೆನ್ನೈ: ಹಿಂದು ಸಂಪ್ರದಾಯದಂತೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹಾಬಲಿಪುರಂನ ರೆಸಾರ್ಟ್​ನಲ್ಲಿ ನಡೆದ ನಯನತಾರಾ ಮದುವೆಯಲ್ಲಿ ಶಾರುಖ್ ಖಾನ್, ರಜನಿಕಾಂತ್, ವಿಜಯ್ ಸೇತುಪತಿ, ತಲಾ ಅಜಿತ್, ಸೂರ್ಯ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು. ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು. ಈ ಮದುವೆಯ ದೃಶ್ಯ ಪ್ರಸಾರದ ಹಕ್ಕನ್ನ 10 ಕೋಟಿ ರೂ.ಗೆ ಈ ಜೋಡಿ ಸೇಲ್ ಮಾಡಿದೆ ಎನ್ನಲಾಗಿದೆ. ನವ ಜೋಡಿಯ ಫೋಟೋ ವೈರಲ್​ ಆಗಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ಪ್ರಭುದೇವ ಮತ್ತು ಸಿಂಬು ಜೊತೆಗಿನ ಅಫೇರ್‌ನಿಂದ ಸುದ್ದಿಯಾಗಿದ್ದ ನಯನತಾರಾ, ತನಗಿಂತ ಒಂದು ವರ್ಷ ಚಿಕ್ಕವರಾದ ವಿಘ್ನೇಶ್​ರನ್ನು ಕೈಹಿಡಿದಿದ್ದಾರೆ. ವಿಘ್ನೇಶ್​ ಮತ್ತು ನಯನತಾರಾ ಅವರ ಮದುವೆ ಮೊದಲಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹೇಳ ಲಾಗಿತ್ತು.