ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ಬರ್ತ್‌ಡೇ ಸಂಭ್ರಮದಲ್ಲಿ ʻಶ್ರೀವಲ್ಲಿʼ-ಒಮನ್‌ಗೆ ಹಾರಿದ ರಶ್ಮಿಕಾ; ಫೊಟೋಗಳು ವೈರಲ್‌

Rashmika Mandanna birthday: ಅನಿಮಲ್, ಪುಷ್ಪ 2, ಛಾವಾ, ಸಿಕಂದರ್‌ ಹೀಗೆ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ರಶ್ಮಿಕಾ ಬರ್ತ್‌ಡೇ ಎಂಜಾಯ್‌ ಮಾಡ್ತಿದ್ದಾರೆ. ಸದ್ಯ ರಶ್ಮಿಕಾ ಪೂಲ್‌ಸೈಡ್ ರೆಸ್ಟೋರೆಂಟ್‌ನಲ್ಲಿ ತಮ್ಮ ಫುಡ್‌ ಎಂಜಾಯ್‌ ಮಾಡುತ್ತಿರುವ ಫೊಟೋಗಳನ್ನು ಹಂಚಿಕೊಂಡಿದ್ದು, ಹೊಟ್ಟೆ ಬಿರಿಯುವಂತಹ ಟೇಸ್ಟಿ ಫುಡ್‌. ಟ್ರೈನರ್‌ ನೋಡಿದ್ರೆ ಕೋಪ ಮಾಡಿಕೊಳ್ಳಬಹುದು ಎಂದು ಕ್ಯಾಪ್ಶನ್‌ ಕೊಟ್ಟಿದ್ದಾರೆ.

ಮುಂಬೈ: ನ್ಯಾಷನಲ್‌ ಕ್ರಶ್‌, ಬಹುಭಾಷಾ ಸ್ಟಾರ್‌ ನಟಿ, ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ಅವರು ಇಂದು 29 ನೇ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು(Rashmika Mandanna birthday) ರಶ್ಮಿಕಾ ಒಮನ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದು, ಅಲ್ಲಿನ ಫೊಟೋಗಳು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿವೆ. ತಮ್ಮ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ಒಮಾನ್‌ಗೆ ಹೋಗಿರುವ ರಶ್ಮಿಕಾ ಮತ್ತು ಅವರು ಭೇಟಿ ನೀಡಿದ ರೆಸಾರ್ಟ್‌ನ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಹಂಚಿಕೊಂಡಿರುವ ಫೊಟೋಗಳು ಇಲ್ಲಿವೆ



ರಶ್ಮಿಕಾ ಮಂದಣ್ಣ ಒಮನ್‌ನ ಐಷಾರಾಮಿ ರೆಸಾರ್ಟ್ ಅಲ್ ಬಲೀದ್ ಸಲಾಲಾ ಬೈ ತಂಗಿದ್ದು, ಅವರೊಂದಿಗೆ ಅವರ ಆತ್ಮೀಯ ಸ್ನೇಹಿತರೂ ಇದ್ದಾರೆ. ತಮ್ಮ ಸ್ನೇಹಿತರೊಂದಿಗೆ ಅದ್ಧೂರಿ ಹುಟ್ಟುಹಬ್ಬದ ಆಚರಣೆಗಳನ್ನು ಮಾಡಿಕೊಳ್ಳಲಿದ್ದಾರೆ ರಶ್ಮಿಕಾ. ಇನ್ನು ರಶ್ಮಿಕಾ ಅವರ ರೂಮರ್‌ ಬಾಯ್‌ಫ್ರೆಂಡ್‌ ನಟ ವಿಜಯ್ ದೇವರಕೊಂಡ ಶನಿವಾರ ಇಲ್ಲಿಗೆ ಬರಬಹುದು ಎನ್ನಲಾಗಿದೆ. ವಿಜಯ್‌ ದೇವರಕೊಂಡ ಪ್ರಸ್ತುತ ಶ್ರೀಲಂಕಾದಲ್ಲಿ ಶೂಟಿಂಗ್‌ ಬ್ಯುಸಿಯಲ್ಲಿದ್ದಾರೆ. ಆದರೂ ನೆಚ್ಚಿನ ಗೆಳತಿಯ ಬರ್ತ್‌ಡೇಗೆ ಅವರು ಒಮನ್‌ಗೆ ತೆರಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಸುದ್ದಿಯನ್ನೂ ಓದಿ: Salman Khan: ರಶ್ಮಿಕಾಗೆ ಮಗಳಾದರೆ ಆಕೆಯ ಜತೆಗೂ ನಟಿಸುವೆ; ಏಜ್‌ ಗ್ಯಾಪ್‌ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಸಲ್ಮಾನ್‌ ಖಾನ್‌

ಅನಿಮಲ್, ಪುಷ್ಪ 2, ಛಾವಾ, ಸಿಕಂದರ್‌ ಹೀಗೆ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿ ಬಳಿಕ ರಿಲ್ಯಾಕ್ಸ್‌ ಮೂಡ್‌ನಲ್ಲಿರುವ ರಶ್ಮಿಕಾ ಬರ್ತ್‌ಡೇ ಎಂಜಾಯ್‌ ಮಾಡ್ತಿದ್ದಾರೆ. ಸದ್ಯ ರಶ್ಮಿಕಾ ಪೂಲ್‌ಸೈಡ್ ರೆಸ್ಟೋರೆಂಟ್‌ನಲ್ಲಿ ತಮ್ಮ ಫುಡ್‌ ಎಂಜಾಯ್‌ ಮಾಡುತ್ತಿರುವ ಫೊಟೋಗಳನ್ನು ಹಂಚಿಕೊಂಡಿದ್ದು, ಹೊಟ್ಟೆ ಬಿರಿಯುವಂತಹ ಟೇಸ್ಟಿ ಫುಡ್‌. ಟ್ರೈನರ್‌ ನೋಡಿದ್ರೆ ಕೋಪ ಮಾಡಿಕೊಳ್ಳಬಹುದು ಎಂದು ಕ್ಯಾಪ್ಶನ್‌ ಕೊಟ್ಟಿದ್ದಾರೆ.

2016ರ ಡಿಸೆಂಬರ್​​ 30ರಂದು ತೆರೆಕಂಡ 'ಕಿರಿಕ್​ ಪಾರ್ಟಿ' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ನಟನಾ ವೃತ್ತಿಜೀವನ ಆರಂಭಿಸಿದರು. ಡಿವೈನ್​ ಸ್ಟಾರ್ ಖ್ಯಾತಿಯ ರಿಷಬ್​ ಶೆಟ್ಟಿ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ತೆರೆಹಂಚಿಕೊಂಡಿದ್ದರು. 4 ಕೋಟಿ ರೂಪಾಯಿ ಬಜೆಟ್​ನ ಈ ಚಿತ್ರ ಆ ದಿನಗಳಲ್ಲೇ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು ಎಂದು ವರದಿಯಾಗಿದೆ.

ತೆಲುಗಿನ ಗೀತಾ ಗೋವಿಂದಂ (2018) ಮತ್ತು ಡಿಯರ್ ಕಾಮ್ರೇಡ್ (2019)ನಂತಹ ಚಲನಚಿತ್ರಗಳು ದಕ್ಷಿಣ ಚಲನಚಿತ್ರೋದ್ಯಮದ ಪ್ರಮುಖ ನಟಿಯರ ಪಟ್ಟಿಯಲ್ಲಿ ಅವರಿಗೆ ಸ್ಥಾನ ತಂದುಕೊಟ್ಟವು.ಸುಕುಮಾರ್ ನಿರ್ದೇಶಿಸಿದ್ದ 'ಪುಷ್ಪ: ದಿ ರೈಸ್' ಚಿತ್ರವು ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದಲ್ಲಿ ಮೈಲಿಗಲ್ಲೆನ್ನಬಹುದು. 2021ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ ಅವರ ಜೊತೆ ಶ್ರೀವಲ್ಲಿ ಪಾತ್ರ ನಿರ್ವಹಿಸಿದ್ದು, ಇದು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು.

ರಶ್ಮಿಕಾ ಮಂದಣ್ಣ ಅವರ ಸಕ್ಸಸ್ ಸೌತ್​ ಸಿನಿಮಾ ಇಂಡಸ್ಟ್ರಿಯ ಆಚೆಗೂ ವಿಸ್ತರಿಸಿತು. 2022ರಲ್ಲಿ ಗುಡ್​ ಬೈ, 2023ರಲ್ಲಿ ಮಿಷನ್ ಮಜ್ನುನಂತಹ ಚಿತ್ರಗಳೊಂದಿಗೆ ಬಾಲಿವುಡ್‌ ಪ್ರಯಾಣ ಪ್ರಾರಂಭಿಸಿದರು. ಸಿದ್ಧಾರ್ಥ್ ಮಲ್ಹೋತ್ರಾ, ಅಮಿತಾಭ್​ ಬಚ್ಚನ್​​ ಅವರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡರು. ಬಾಲಿವುಡ್​ನ ಆರಂಭದ ಸಿನಿಮಾಗಳು ಧೂಳೆಬ್ಬಿಸದಿದ್ದರೂ ನಂತರ ಬಂದ ಅನಿಮಲ್​ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್​ ಆಯಿತು.