ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್‌ ದೇವರಕೊಂಡ ಭರ್ಜರಿ ವೆಕೇಶನ್‌? ವೈರಲ್‌ ಆಗಿರೋ ವಿಡಿಯೊದಲ್ಲೇನಿದೆ?

ನ್ಯಾಷನಲ್ ಕ್ರಶ್‌' ರಶ್ಮಿಕಾ ಮಂದಣ್ಣ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆಗೆ ಲವ್‌ ರಿಲೇಶನ್ಶಿಪ್‌ನಲ್ಲಿ ಇರುವುದು ಪಕ್ಕಾ ಎನ್ನಲಾಗುತ್ತಿದೆ. ಈ ನಡುವೆ ಸಾರ್ವಜನಿಕ ಸ್ಥಳದಲ್ಲಿ ಕೂಡ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಈ ಎಲ್ಲ ವದಂತಿಗಳು ಬಹುತೇಕ ನಿಜ ಎಂದೆ ಅಭಿಮಾನಿಗಳು ಅಭಿಪ್ರಾಯಿಸುತ್ತಿದ್ದಾರೆ. ಇದೀಗ ಮಾಸ್ಕ್ ಧರಿಸಿ ನಟ ವಿಜಯ್ ದೇವರಕೊಂಡ ಜೊತೆ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಈ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ: ಗೀತಾ ಗೋವಿಂದಂ ಸಿನಿಮಾ ಬಳಿಕ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Deverakonda) ನಡುವಿನ ಗಾಸಿಪ್ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇವರಿಬ್ಬರು ಅನೇಕ ಸಲ ವಿದೇಶಿ ಪ್ರವಾಸ, ಸಿನಿಮಾ ಇವೆಂಟ್ ನಲ್ಲಿ ಕಾಣಿಸಿಕೊಂಡಿದ್ದು ನ್ಯಾಷನಲ್ ಕ್ರಶ್‌' ರಶ್ಮಿಕಾ ಮಂದಣ್ಣ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆಗೆ ಲವ್‌ ರಿಲೇಶನ್‌ಶಿಪ್‌ನಲ್ಲಿ ಇರುವುದು ಪಕ್ಕಾ ಎನ್ನಲಾಗುತ್ತಿದೆ. ಈ ನಡುವೆ ಸಾರ್ವಜನಿಕ ಸ್ಥಳದಲ್ಲಿ ಕೂಡ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಎಲ್ಲ ವದಂತಿಗಳು ಬಹುತೇಕ ನಿಜ ಎಂದೇ ಅಭಿಮಾನಿಗಳು ಅಭಿಪ್ರಾಯಿಸುತ್ತಿದ್ದಾರೆ. ಇದೀಗ ಮಾಸ್ಕ್ ಧರಿಸಿ ನಟ ವಿಜಯ್ ದೇವರ ಕೊಂಡ ಜೊತೆ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಈ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕಿರಿಕ್ ಪಾರ್ಟಿ ,ಅನಿಮಲ್ ಸಿನಿಮಾ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ವೈಟ್ ಕಲರ್ ವೆಸ್ಟರ್ನ್ ಔಟ್ ಫಿಟ್ ನಲ್ಲಿ ಪ್ರಿಟಿಯಾಗಿ ಕಂಡಿ ದ್ದಾರೆ‌. ಇನ್ನು ನಟ ವಿಜಯದೇವರಕೊಂಡ ಅವರು ಬ್ಲೂ ಕಲರ್ ಸಿಂಪಲ್ ಔಟ್ ಫಿಟ್ ನಲ್ಲಿ ಇರುವ ದೃಶ್ಯ ಕಾಣಬಹುದು. ಇಬ್ಬರು ತಮ್ಮ ಮುಖವನ್ನು ಮಾಸ್ಕ್ ನಿಂದ ಕವರ್ ಮಾಡಿದ್ದು ಕಾರು ಹಿಂಬದಿಯ ಸೀಟಿನಲ್ಲಿ ಒಟ್ಟಿಗೆ ಕುಳಿತಿದ್ದ ‌ವಿಡಿಯೋ ಸದ್ಯ ವೈರಲ್ ಆಗುತ್ತಿದೆ.



ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರು ಸೀರೆ ಉಟ್ಟುಕೊಂಡು‌ ತಮ್ಮ ಫೋಟೊ ಜೊತೆಗೆ ವಿಶೇಷ ಕ್ಯಾಪ್ಶನ್ ಸಹ ನೀಡಿದ್ದರು. ಈ ಫೋಟೊಗಳು ನನ್ನ ಹೃದಯಕ್ಕೆ ಆಪ್ತವಾಗಿವೆ. ನನಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ ಬ್ಯುಟಿಫುಲ್ ವುಮನ್ ಮತ್ತು ಫೋಟೊ ತೆಗೆದ ಛಾಯಾಚಿತ್ರಗ್ರಾಹಕನಿಗೆ ವಿಶೇಷ ಕೃತಜ್ಞತೆ ಎಂದು ಅವರು ಬರೆದಿದ್ದರು. ಈ ಫೋಟೊ ಕಂಡ ಅಭಿಮಾನಿಗಳು ನಾನಾ ತರನಾಗಿ ಕಾಮೆಂಟ್ ಹಾಕಿದ್ದಾರೆ. ಬಳಕೆ ದಾರರೊಬ್ಬರು, ಇದು ಹೈದರಾಬಾದ್​ಗೆ ತೆರಳಿ ದಾಗ ವಿಜಯ್ ದೇವರಕೊಂಡ ಮನೆಯಲ್ಲಿ ತೆಗೆಸಿಕೊಂಡ ಫೋಟೊ ಎಂದು ಕಾಮೆಂಟ್ ಹಾಕಿದ್ದಾರೆ‌. ಮತ್ತೊಬ್ಬರು ವಿಜಯ್ ಚಿತ್ರಗಳನ್ನು ಕ್ಲಿಕ್ ಮಾಡಿದ್ದು ಅವರ ತಾಯಿ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದರು. ಮತ್ತೊಬ್ಬ ಬಳಕೆದಾರರು ಅವರು ಫೋಟೊ ಕ್ಲಿಕ್ ಮಾಡಿದ್ದ ಸ್ಥಳ ನಾವು ಈ ಹಿಂದೆ ಗಮನಿಸಿದ್ದೇವೆ ಇದು ವಿಜಯ್ ದೇವರಕೊಂಡ ಅವರ ಮನೆಯಲ್ಲಿಯೇ ತೆಗಿಸಿಕೊಂಡಿದ್ದು ಎಂದು ಪ್ರತಿಕ್ರಿಯೆ ನೀಡಿದ್ದರು.

ಇದನ್ನು ಓದಿ: Kannappa Movie: ವಿಷ್ಣು ಮಂಚು ನಟನೆಯ ʼಕಣ್ಣಪ್ಪʼ ಚಿತ್ರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್

ಗೀತ ಗೋವಿಂದಂ ಚಿತ್ರಕ್ಕೆ ಐದು ವರ್ಷ ತುಂಬಿದ್ದಾಗ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ಚಿತ್ರದ ನಿರ್ದೇಶಕ ಪರಶುರಾಮ್ ಪೆಟ್ಲಾ ಜೊತೆಯಾಗಿ ವಿಜಯ್ ದೇವರಕೊಂಡ ನಿವಾಸದಲ್ಲಿ ಫೋಟೋಗೆ ಪೋಸ್ ಕೊಟ್ಟು ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಬಳಿಕ ರಶ್ಮಿಕಾ ಸ್ಯಾರಿ ಲುಕ್ ಫೋಟೊ ಕೂಡ ಅದೇ ಬ್ಯಾಗ್ರೌಂಡ್ ನಲ್ಲಿಯೆ ತೆಗಿಸಿಕೊಂಡಿದ್ದಾರೆ. ರಶ್ಮಿಕಾ ಅಥವಾ ವಿಜಯ್ ಇಬ್ಬರೂ ಅಧಿಕೃತ ವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡ ದಿದ್ದರೂ ಇವರಿಬ್ಬರ ನಡುವೆ ಲವ್ ರಿಲೇಶನ್ ಶಿಪ್ ಇದೆ ಎಂಬುದಕ್ಕೆ ಅನೇಕ ವಿಚಾರಗಳೆ ಸಾಕ್ಷಿ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.