ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shazahn Padamsee: ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದ ಬಾಲಿವುಡ್‌ನ ಖ್ಯಾತ ನಟಿ

ಬಾಲಿವುಡ್ ಹಿಟ್ ಸಿನಿಮಾಗಳಾದ ಹೌಸ್‌ಫುಲ್ 2, ದಿಲ್ ತೋ ಬಚ್ಚ ಹೈ ಜೀ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ಶಾಜಾನ್ ಪದಮ್ಸೀ ಅವರು ಉದ್ಯಮಿ ಆಶಿಶ್ ಕನಕಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂ. 5ರಿಂದ ಎರಡು ದಿನಗಳ ಕಾಲ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು‌. ಸದ್ಯ ಈ ನವ ದಂಪತಿಗಳ ಮದುವೆಯ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಸದಾ ಬೋಲ್ಡ್ ಲುಕ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನಟಿ ಶಾಜಾನ್ ಅವರ ಟ್ರೇಡಿಶನಲ್ ಲುಕ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.

1/5

ನಟಿ ಶಾಜಾನ್ ಹಾಗೂ ಅವರ ಪತಿ ಆಶಿಶ್ ಕ್ಯೂಟ್ ಕಪಲ್ ಆಗಿ ಜನಮನ ಸೆಳೆದಿದ್ದಾರೆ. ವೈಟ್ ಕಲರ್ ಲೆಹೆಂಗಾದಲ್ಲಿ ನಟಿ ಪ್ರಿನ್ಸೆಸ್‌ನಂತೆ ಕಂಡಿದ್ದಾರೆ. ಲೆಹೆಂಗಾದಲ್ಲಿ ಬೇಬಿ ಪಿಂಕ್ ಫ್ಲವರ್ ವಿನ್ಯಾಸವಿದ್ದು ಸಿಂಪಲ್ ಮೇಕಪ್, ಆಭರಣ ಗಳೊಂದಿಗೆ ಟ್ರೆಡಿಶನಲ್ ಲುಕ್ ಮೂಲಕ ನಟಿ ಶಾಜಾನ್ ಕಂಗೊಳಿಸಿದ್ದಾರೆ.

2/5

ವರ ಆಶಿಶ್ ಕೂಡ ವೈಟ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ಬೇಬಿ ಪಿಂಕ್ ಔಟ್ ಥೀಂ ನಲ್ಲಿ ನವ ದಂಪತಿಗಳು ಹೆಚ್ಚು ಗ್ರ್ಯಾಂಡ್ ಆಗಿ ಕಂಡಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ನೋಡುವ ಈ ಫೋಟೊ ಅಭಿಮಾನಿಗಳ ಮನಗೆದ್ದಿದೆ. ಫೋಟೊ ಕಂಡು ಅಭಿಮಾನಿಗಳು ನವದಂಪತಿಗಳಿಗೆ ಶುಭ ಹಾರೈಸಿದ್ದಾರೆ.

3/5

ಶಾಜಾನ್ ಅವರಿಗೆ ಬಾಲ್ಯದ ಗೆಳೆಯರೊಬ್ಬರ ಮೂಲಕ ಉದ್ಯಮಿ ಆಶಿಶ್ ಕನಕಿಯಾ ಪರಿಚಯವಾಗಿದೆ. ಬಳಿಕ ಇಬ್ಬರು ಒಳ್ಳೆ ಸ್ನೇಹಿತರಾಗಿ , ಸ್ನೇಹದಿಂದ ಪ್ರೀತಿ ಸಂಬಂಧ ಬೆಸೆದಿದೆ. ಈ ಮೂಲಕ 2024ರ ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

4/5

ಉದ್ಯಮಿ ಆಶಿಶ್ ಅವರು ನಟಿ ಶಾಜಾನ್ ಅವರಿಗೆ ತಾಳಿಕಟ್ಟುವ ಫೋಟೊ ಕೂಡ ವೈರಲ್ ಆಗಿದೆ. ಶಾಜಾನ್ ಕುಟುಂಬವು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದು ಅವರ ತಂದೆ ಅಲಿಕ್ ಪದಮ್ಸೀ ಪ್ರಸಿದ್ಧ ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿ ದ್ದಾರೆ. ಅವರ ತಾಯಿ ಶರೋನ್ ಪ್ರಭಾಕರ್ ಪ್ರಸಿದ್ಧ ಗಾಯಕಿ ಮತ್ತು ರಂಗಭೂಮಿ ನಟಿಯಾಗಿದ್ದಾರೆ. ಹೀಗಾಗಿ ಶಾಜಾನ್ ಸ್ವಾಭಾವಿಕವಾಗಿಯೇ ನಟನೆಯತ್ತ ಆಸಕ್ತಿ ಹೊಂದಿದ್ದಾರೆ.

5/5

ಶಾಜಾನ್ ತಮ್ಮ ಆರಂಭಿಕ ಶಿಕ್ಷಣವನ್ನು ಮುಂಬೈನಲ್ಲಿ ಪಡೆದರು. ನಂತರ ಜಾಹೀರಾತು ಮತ್ತು ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದರು. ಈ ಮೂಲಕ ಬಾಲಿವುಡ್ ಅನೇಕ ಸಿನಿಮಾ ಆಫರ್ ಸಹ ಸಿಕ್ಕಿದೆ. ರಾಕೆಟ್ ಸಿಂಗ್ - ಸೇಲ್ಸ್‌ಮ್ಯಾನ್ ಆಫ್ ದಿ ಇಯರ್, ದಿಲ್ ತೋ ಬಚ್ಚಾ ಹೈ ಜಿ', ಹೌಸ್ ಫುಲ್ 2, ಮಸಾಲಾ, ಸಾಲಿಡ್ ಪಟೇಲ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಹೈ ಜುನೂನ್ ಎಂಬ ವೆಬ್ ಸರಣಿಯಲ್ಲಿ ಕೂಡ ಕಾಣಿಸಿಕೊಂಡರು.