ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UI Movie: ಯುಗಾದಿ ಪ್ರಯುಕ್ತ ಝೀ ಕನ್ನಡದಲ್ಲಿ ಬರಲಿದೆ ಯುಐ ಸಿನಿಮಾ!

UI Movie: ಉಪೇಂದ್ರ ನಿರ್ದೇಶನದ ಸಿನಿಮಾಗಳು ಬಹಳಷ್ಟು ಆಸಕ್ತಿಕರವಾಗಿ ಇರಲಿದ್ದು UI ಚಿತ್ರಕ್ಕೂ ನಟ ಉಪೇಂದ್ರ ನಿರ್ದೇಶಿಸಿ ನಟನೆ ಮಾಡಿದ್ದಾರೆ. ಪ್ಯಾನ್‌ ಇಂಡಿ ಯಾ ಮಟ್ಟದಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗಿದ್ದ ಯುಐ ಸಿನಿಮಾ. ಇದೀಗ ಚಿತ್ರ ಮಂದಿರಗಳಲ್ಲಿ ಮೋಡಿ ಮಾಡಿದ ಸಿನಿಮಾ ಇದೀಗ ಟಿವಿಗೆ ಕಾಲಿಟ್ಟಿದೆ.

ಉಪ್ಪಿ ನಟನೆಯ UI ಸಿನಿಮಾ ಕಿರುತೆರೆಗೆ ಎಂಟ್ರಿ!

Profile Pushpa Kumari Mar 28, 2025 3:46 PM

ಬೆಂಗಳೂರು: ಝೀ ಕನ್ನಡದ ಜನಪ್ರಿಯ ಧಾರಾವಾಹಿಗಳು, ಸೂಪರ್ ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ ಪ್ರೇಕ್ಷಕರ ಮನಗೆದ್ದು ನಂ.1 ಸ್ಥಾನದಲ್ಲಿದೆ. ಪ್ರತಿ ಬಾರಿಯೂ ಹೊಸತನ ದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಝೀ ಕನ್ನಡ ಈಗ ವೀಕ್ಷಕರಿಗೆ ಮತ್ತೊಂದು ಮನರಂಜನೆಯ ರಸದೌತಣ ಬಡಿಸಲು ಸಜ್ಜಾಗಿದೆ. ಸ್ಯಾಂಡ ಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಹೊಸ ಸಿನಿಮಾ UI' ಮೊಟ್ಟಮೊದಲ ಬಾರಿಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ಭಾನುವಾರ ಸಂಜೆ 4.30ಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಉಪೇಂದ್ರ ನಿರ್ದೇಶನದ ಸಿನಿಮಾಗಳು ಬಹಳಷ್ಟು ಆಸಕ್ತಿಕರವಾಗಿ ಇರಲಿದ್ದು UI ಚಿತ್ರಕ್ಕೂ ನಟ ಉಪೇಂದ್ರ ನಿರ್ದೇಶಿಸಿ ನಟನೆ ಮಾಡಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗಿದ್ದ ಯುಐ ಸಿನಿಮಾ. ಕರ್ನಾಟಕದಲ್ಲಿ ದೊಡ್ಡ ಮಟ್ಟದ ಗಳಿಕೆ ಕಂಡಿತ್ತು. ಹೆಚ್ಚು ಕ್ರೇಜ್ ಗಿಟ್ಟಿಸಿಕೊಂಡಿದ್ದ ಈ ಸಿನಿಮಾವನ್ನು ಸಾಕಷ್ಟು ಅಭಿಮಾನಿಗಳು, ಕಣ್ತುಂಬಿ ಕೊಂಡು, ತಲೆಯಲ್ಲಿ ಹುಳ ಬಿಟ್ಟಿದ್ದರು. ಇದೀಗ ಚಿತ್ರ ಮಂದಿರ ಗಳಲ್ಲಿ ಮೋಡಿ ಮಾಡಿದ ಸಿನಿಮಾ ಇದೀಗ ಟಿವಿಗೆ ಆಗಮಿಸುತ್ತಿದೆ.

ಚಿತ್ರದಲ್ಲಿ ನಟ ಉಪೇಂದ್ರ‌ಕಲ್ಕಿ ಮತ್ತು ಸತ್ಯ ಎಂಬ ಪಾತ್ರವನ್ನು ನಿರ್ವ ಹಿಸಿದ್ದು‌ ರೀಷ್ಮಾ ನಾಣಯ್ಯ ಅವರು ಜೋಡಿಯಾಗಿದ್ದಾರೆ. ಅಷ್ಟೇ ಅಲ್ಲದೆ, ರವಿಶಂಕರ್ ,ಸಾಧು ಕೋಕಿಲ,ನಿಧಿ ಸುಬ್ಬಯ್ಯ,ಮುರಳಿ ಶರ್ಮಾ ಹಾಗು ಅಚ್ಯುತ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಉಪೇಂದ್ರ ಸತ್ಯ ಮತ್ತು ಕಲ್ಕಿ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಈ ಸಿನೆಮಾದಲ್ಲಿ 'ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರ ಮಂದಿರ ದಿಂದ ಎದ್ದೋಗಿ' ಎಂಬ ಉಪ್ಪಿಯ ಲೈನ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು. 'ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಈ ಸಿನಿಮಾದಲ್ಲಿ ಉಪೇಂದ್ರ ಹೇಳದೇ ಇರುವ ವಿಚಾರಗಳೇ ಇಲ್ಲ. ದೇವರು, ಜಾತಿ, ಧರ್ಮ, ಪ್ರಕೃತಿ, ಸಮಾಜ, ಮಹಿಳೆ, ಬುದ್ಧ, ಬಸವ, ಭ್ರಷ್ಟಾಚಾರ, ಕಲ್ಕಿ ಯುಗ & ಸತ್ಯ ಯುಗ, ಭವಿಷ್ಯ, ಕೊನೆಗೆ ಸಾಮಾಜಿಕ ಜಾಲ ತಾಣಗಳನ್ನೂ ಕೂಡ ಉಪ್ಪಿ ಬಿಟ್ಟಿಲ್ಲ. ಇಡೀ ಸಿನಿಮಾದಲ್ಲಿ ಇವೆಲ್ಲವೂ ಒಂದಲ್ಲಾ ಒಂದು ಕಡೆ ಬಂದು ತಮ್ಮ ಇರುವಿಕೆಯನ್ನು ತೋರಿಸಿಕೊಟ್ಟು ಹೋಗುತ್ತವೆ.

ಇದನ್ನು ಓದಿ: L2: Empuraan Movie: 'ಎಲ್ 2 ಎಂಪುರಾನ್' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ

ಸಿನೆಮಾದೊಳಗೆ ಮತ್ತೊಂದು ಸಿನೆಮಾದ ಕಥೆಯೇ UI. ಇಲ್ಲಿ ಸತ್ಯ ನ್ಯಾಯದ ಪರ ಹೋರಾಡಿದರೆ, ಕಲ್ಕಿ ಅನ್ಯಾಯದ ಪರ ಹೋರಾಡುತ್ತಾರೆ. ಆದರೆ ಈ ಚಿತ್ರದ ‌ ದೊಡ್ಡ ಟ್ವಿಸ್ಟ್ ಏನೆಂದರೆ ಅಲ್ಲಿ ವಿಮರ್ಶಕನಿಗೆ ಚಿತ್ರದ ನಿರ್ದೇಶಕ ಸಿಗುವುದಿಲ್ಲ ಬದಲಾಗಿ ಸುಟ್ಟುಹಾಕಲು ಹೋಗಿದ್ದ ಕಥೆಯ ಪ್ರತಿ ಸಿಗುತ್ತದೆ. ಇದರಿಂದ ವಿಮರ್ಶಕನ ಗೊಂದಲ ಮತ್ತಷ್ಟು ಜಾಸ್ತಿ ಆಗುತ್ತದೆ. ಯುಗಾದಿ ಹಬ್ಬದ ಪ್ರಯುಕ್ತ ಪ್ರಸಾರ ಆಗುವ UI ಸಿನೆಮಾ ನೋಡಿ, ವಾಚ್ ಅಂಡ್ ವಿನ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ 10 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಬಹುಮಾನದ ಆಫರ್ ಅನ್ನು ಸಹ ಪಡೆಯಬಹುದು. ಈ ಕಾಂಟೆ ಸ್ಟ್ ಮಾರ್ಚ್ 30 ರಿಂದ ಶುರುವಾಗಿ ಏಪ್ರಿಲ್ 6 ರ ವರೆಗೆ ನಡೆಯಲಿದ್ದು ಪ್ರತಿ ಅರ್ಧ ಗಂಟೆಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ 3 ಅದೃಷ್ಟ ಶಾಲಿಗಳಿಗೆ ಉಡುಗೊರೆ ಮತ್ತು ಒಬ್ಬ ಅದೃಷ್ಟಶಾಲಿಗೆ ಬಂಪರ್ ಬಹುಮಾನ ಸಿಗಲಿದೆ.

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಯುಐ ಚಿತ್ರವನ್ನು ನಿರ್ಮಿಸಿದ್ದು ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು , ಜಿ. ರಮೇಶ್, ಜಿ. ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.