ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vayuputra Movie: ವಾಯುಪುತ್ರ ಅನಿಮೇಷನ್‌ ಸಿನಿಮಾ ಅನೌನ್ಸ್: ದಸರಾಗೆ ಪಂಚ ಭಾಷೆಯಲ್ಲಿ ರಿಲೀಸ್!

Vayuputra 3D Animation Film: ವಾಯು ಪುತ್ರ ಟೈಟಲ್ ನಡಿ ಅನಿಮೇಷನ್‌ ರೂಪದಲ್ಲಿ ಸಿನಿಮಾ ವೊಂದು ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಸಿತಾರಾ ಎಂಟರ್ಟೈನ್ಮೆಂಟ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಡಿ ನಾಗವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಿಸಿರುವ ವಾಯುಪುತ್ರ ಸಿನಿಮಾ ದಸರಾಗೆ ಬಿಡುಗಡೆಯಾಗುತ್ತಿದೆ.

ವಾಯುಪುತ್ರ ಸಿನಿಮಾ

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ವಾಯುಪುತ್ರ (Vayuputra) ಅಥವಾ ಹನುಮಾನ್ ಹೆಸರಿನಲ್ಲಿ ಸಾಹಸ ಕಥೆಗಳು ಸಿನಿಮಾ ಆಗಿವೆ. ಆ ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ ವಾಯು ಪುತ್ರ ಟೈಟಲ್ ನಡಿ ಅನಿಮೇಷನ್‌ ರೂಪದಲ್ಲಿ ಸಿನಿಮಾವೊಂದು ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಸಿತಾರಾ ಎಂಟರ್ಟೈನ್ಮೆಂಟ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಡಿ ನಾಗವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಿಸಿರುವ ವಾಯುಪುತ್ರ ಸಿನಿಮಾ ದಸರಾಗೆ ಬಿಡುಗಡೆಯಾಗುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ 3ಡಿ ಅನಿಮೇಷನ್‌ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.



ಕಾರ್ತಿಕೇಯ, ಕಾರ್ತಿಕೇಯ-2 ಹಾಗೂ ತಂಡೇಲ್ ಸಿನಿಮಾ ಗಳನ್ನು ನಿರ್ದೇಶಿಸಿರುವ ಚಂದೂ‌ ಮೊಂಡೆಟಿ ಸೂಪರ್ ಹೀರೋ ವಾಯುಪುತ್ರ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ಶ್ರೀಕರ ಸ್ಟುಡಿಯೋಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಪುರಾಣಗಳಲ್ಲಿ ಹನುಮಂತನಿಗೆ ಪ್ರತ್ಯೇಕ ಸ್ಥಾನವಿದೆ. ಆತನ ಸಾಹಸಗಳ ಬಗ್ಗೆ ಸಾಕಷ್ಟು ಕಥೆಗಳಿವೆ. ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಹನುಮಂತನನ್ನು ವಿಶೇಷವಾಗಿ ಆರಾಧನೆ ಮಾಡಲಾಗುತ್ತದೆ. ಸದ್ಯ 'ವಾಯುಪುತ್ರ' ಎಂಬ ಆನಿಮೇಷನ್ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ.

ಇದನ್ನು ಓದಿ:Ramayana Movie: 'ರಾಮಾಯಣ’ ಚಿತ್ರಕ್ಕೆ ಆಯ್ಕೆಯಾದ ಪ್ರಸಿದ್ಧ ಹಾಲಿವುಡ್ ತಂತ್ರಜ್ಞರು!

ತೆಲುಗು ಜೊತೆಗೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 'ವಾಯುಪುತ್ರ' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಚಿತ್ರದ ಪೋಸ್ಟರ್‌ಗಳು ವೈರಲ್ ಆಗ್ತ ಇದ್ದು ಸದ್ಯ ಚಿತ್ರತಂಡ ಎರಡು ಪೋಸ್ಟರ್ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಉಳಿದ ಅಪ್ ಡೇಟ್ ಗಳನ್ನು ಚಿತ್ರತಂಡ ನೀಡಲಿದೆ.