ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹರೀಶ್ ರಾಯ್‌ಗೆ ಸಹಾಯಹಸ್ತ ಚಾಚಿದ ಧ್ರುವ ಸರ್ಜಾ!

ಥೈರಾಯ್ಡ್‌ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಖ್ಯಾತ ನಟ ಹರೀಶ್ ರಾಯ್ ಅವರ ಚಿಕಿತ್ಸೆಯ ಖರ್ಚನ್ನು ಭರಿಸಲು ನಟ ಧ್ರುವ ಸರ್ಜಾ ಮುಂದಾಗಿದ್ದಾರೆ. ಈ ಕುರಿತು ಹರೀಶ್‌ ರಾಯ್ ಅವರೇ ಸ್ವತಃ ವಿಡಿಯೊ ಹಂಚಿಕೊಂಡು ಧ್ರುವ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹರೀಶ್ ರಾಯ್‌ಗೆ ಸಹಾಯಹಸ್ತ ಚಾಚಿದ ಧ್ರುವ ಸರ್ಜಾ!

-

ಬೆಂಗಳೂರು: ಥೈರಾಯ್ಡ್‌ ಕ್ಯಾನ್ಸರ್‌ (Thyroid cancer) ನಿಂದ ಬಳಲುತ್ತಿರುವ ಖ್ಯಾತ ನಟ ಹರೀಶ್ ರಾಯ್ (actor Harish Roy) ಅವರ ಚಿಕಿತ್ಸೆಗೆ ನಟ ಧ್ರುವ ಸರ್ಜಾ (actor Dhruva Sarja) ಬೆಂಬಲ ನೀಡಿದ್ದು, ಹರೀಶ್‌ ರಾಯ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೆಜಿಎಫ್‌ʼ (KGF) ಚಿತ್ರದಲ್ಲಿ ʻಚಾಚಾʼ ಪಾತ್ರದ ಮೂಲಕ ಜನಪ್ರಿಯಾಗಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್‌ ರಾಯ್‌ ಅವರು ಥೈರಾಯ್ಡ್‌ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ತಿಳಿದ ತಕ್ಷಣವೇ ನಟ ಧ್ರುವ ಸರ್ಜಾ ಸ್ಪಂದಿಸಿದ್ದಾರೆ. ಇದರಿಂದ ಹರೀಶ್‌ ರಾಯ್‌ ಅವರ ಚಿಕಿತ್ಸೆಗೆ ಬಹುದೊಡ್ಡ ಬೆಂಬಲ ಸಿಕ್ಕಂತಾಗಿದೆ ಎಂದು ಹರೀಶ್ ರಾಯ್ ಅವರೇ ಹೇಳಿದ್ದಾರೆ. ಇದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.

ಓಂ, ಸಮರ, ಬೆಂಗಳೂರು ಅಂಡರ್​ ವರ್ಲ್ಡ್, ಜೋಡಿಹಕ್ಕಿ,ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ನಲ್ಲ, ಕೆಜಿಎಫ್​​ ಚಾಪ್ಟರ್ 1 ಹಾಗೂ ಕೆಜಿಎಫ್​​ ಚಾಪ್ಟರ್ 2 ಸೇರಿದಂತೆ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಹರೀಶ್‌ ರಾಯ್‌ ಅವರ ಚಿಕಿತ್ಸೆಗೆ ಸ್ಪಂದಿಸಿದ ಧ್ರುವ ಸರ್ಜಾ, ಅವರಿಗೆ ಫೋನ್‌ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅಗತ್ಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹರೀಶ್‌ ರಾಯ್‌, ನನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಆದ ಮರುದಿನವೇ ಸಂಜೆ ಒಂದು ಕರೆ ಬಂದಿದೆ. ಮನೆ ಲೊಕೇಶನ್‌ ಕಳುಹಿಸಿ, ನಾನು ಬರಬೇಕು ಮಾತನಾಡಬೇಕು ಎಂದು ಹೇಳಿದರು. ನಾನು ಲೊಕೇಶನ್‌ ಕಳುಹಿಸಿದೆ. ಆಗ ಒಬ್ಬರು ಮನೆಗೆ ಬಂದು ಅಣ್ಣ ಫೋನ್‌ನಲ್ಲಿದ್ದಾರೆ. ನಿಮ್ಮ ಹತ್ತಿರ ಮಾತನಾಡಬೇಕಂತೆ ಎಂದು ಹೇಳಿದರು. ಯಾರು ಇರಬಹುದು ಎನ್ನುವ ಕುತೂಹಲವಿತ್ತು. ಬಳಿಕ ಗೊತ್ತಾಯಿತು ಅದು ಧ್ರುವ ಸರ್ಜಾ ಅವರು ಎಂಬುದು.

ಶಕ್ತಿ ಪ್ರಸಾದ್‌ ಅವರಂತಹ ದೊಡ್ಡ ಮನೆಯ ಹುಡುಗ ಇವತ್ತು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಚಿರು ಒಳ್ಳೆಯ ಸ್ನೇಹಿತರಾಗಿದ್ದರು. ಧ್ರುವ ಸರ್ಜಾ ಅಷ್ಟೇನು ಹತ್ತಿರವಾಗಿರಲಿಲ್ಲ. ಆಸ್ಪತ್ರೆ, ವೈದ್ಯರ ಬಗ್ಗೆ ವಿಚಾರಿಸಿದ ಅವರು, ನಮ್ಮ ವೈದ್ಯರೊಬ್ಬರು ಇದ್ದಾರೆ. ಅವರನ್ನು ಹೋಗಿ ನೋಡಿ. ಬಳಿಕ ಏನಿದ್ದರೂ ನಾನು ನೋಡಿಕೊಳ್ಳುತ್ತೇನೆ. ಚಿಂತೆ ಮಾಡಬೇಡಿ ಎಂದು ಧ್ರುವ ಸರ್ಜಾ ಹೇಳಿದರು.



ಆಗ ನಾನು ಅವರಿಗೆ ಚಿಕಿತ್ಸೆ ಪ್ರಾರಂಭವಾಗಿದೆ. ವಾರದೊಳಗೆ ಇಂಜೆಕ್ಷನ್‌ ಶುರು ಮಾಡಬೇಕು ಎಂದು ಹೇಳಿದೆ. ಆಗ ಅವರು. ಸರಿ ನೀವು ಚಿಕಿತ್ಸೆ ತಗೊಳ್ಳಿ. ಎಷ್ಟು ಖರ್ಚಾದರೂ ನಾನು ನೋಡಿಕೊಳ್ಳುತ್ತೇನೆ. ಎಲ್ಲಿಯೂ ಕಣ್ಣೀರು ಹಾಕಬೇಡಿ. ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದರು. ಅವರ ಮಾತು ಕೇಳಿ ತುಂಬಾ ಖುಷಿ ಆಯಿತು. ಈ ಕಷ್ಟದ ಸಂದರ್ಭದಲ್ಲಿ ಅವರ ಭರವಸೆ ಒಂದು ತುಂಬಾ ಖುಷಿ ಕೊಟ್ಟಿದೆ ಎಂದು ಹರೀಶ್ ರಾಯ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ʼಹುಬ್ಬಳ್ಳಿ-ಜೋಧಪುರ್‌' ನೇರ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅಸ್ತು

ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರಾಯ್ ಈಗ ಗುರುತೇ ಸಿಗಲಾರದಷ್ಟು ಬದಲಾಗಿದ್ದಾರೆ. ಕ್ಯಾನ್ಸರ್ ಹೊಟ್ಟೆಗೆ ಪಸರಿಸಿದ್ದು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರ ದೇಹದ ತೂಕ ಕಡಿಮೆಯಾಗಿದ್ದು, ಹೊಟ್ಟೆಯಲ್ಲಿ ನೀರು ತುಂಬಿ ಊದಿಕೊಂಡಿದೆ. ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗೋಪಿ ಗೌಡ್ರು ಎಂಬುವರು ಹರೀಶ್ ರಾಯ್ ಅವರ ಈ ವಿಡಿಯೊವನ್ನು ಹಂಚಿಕೊಂಡಿದ್ದರು.