ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Idli Kadai Dhanush Movie: ಧನುಷ್ ನಟನೆಯ ಇಡ್ಲಿ ಕಡೈ ಸಿನಿಮಾಗೆ ಶುಭ ಕೋರಿದ ನಟ ರಿಷಭ್ ಶೆಟ್ಟಿ!

Rishabh Shetty: ನಟ ರಿಷಭ್ ಶೆಟ್ಟಿ ಅವರು ನಟಿಸಿ ನಿರ್ದೇಶನ ಮಾಡುತ್ತಿರುವ 'ಕಾಂತಾರ- 1' ಸಿನಿ ಮಾಕ್ಕೆ ಪೈಪೋಟಿ ನೀಡಲು ಇಡ್ಲಿ ಕಡೈ ಸಿನಿಮಾ ರೆಡಿಯಾಗುವ ಮೂಲಕ ಟಫ್ ಫೈಟ್ ನೀಡುವ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರ ಕುತೂಹಲ ಕೆರಳಿ ಸುವಂತಿದೆ.ಈ ನಡುವೆ ನಟ ರಿಷಬ್ ಶೆಟ್ಟಿ ಕೂಡ ಇಡ್ಲಿ ಕಡೈ ಚಿತ್ರದ ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ನವದೆಹಲಿ: ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ನಟ ಧನುಷ್ (Dhanush) ಕೂಡ ಒಬ್ಬ ರಾಗಿದ್ದಾರೆ. ಅಸುರನ್, ಆಡುಕಲಂ, ದಿ ಗ್ರೇ ಮೆನ್ , ಕರ್ಣನ್ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕೋಟ್ಯಾಂತರ ಅಭಿಮಾ‌ನಿಗಳ‌ ಮನಗೆದ್ದಿದ್ದಾರೆ. ಯಾವುದೇ ಪಾತ್ರ ವಿದ್ದರು ಆ ಪಾತ್ರಕ್ಕೆ ತಕ್ಕನಾಗಿ ನಟಿಸಿ ಜೀವ ತುಂಬುವ ಇವರ ನಟನೆಗೆ ಮನ ಸೋಲದವರಿಲ್ಲ. ಇತ್ತೀಚೆಗಷ್ಟೇ ಕುಬೇರ ಸಿನಿಮಾದಲ್ಲಿಯೂ ಭಿಕ್ಷುಕನ ಪಾತ್ರದಲ್ಲಿ ನಟಿಸುವ ಮೂಲಕ ವಿಭಿನ್ನವಾದ ಕಥೆಗೆ ಜೀವಾಳವಾಗಿದ್ದರು. ಇದಾದ ಬಳಿಕ 'ಇಡ್ಲಿ ಕಡೈ' ಹೆಸರಿನ ಸಿನಿಮಾದಲ್ಲಿ ನಟ ಧನುಷ್ ಅಭಿನಯಿಸಿದ್ದು ಈ ಮೂಲಕ ಅಭಿಮಾನಿಗಳ ಮನಸೆಳೆಯಲಿದ್ದಾರೆ.

ಈ ಸಿನಿಮಾ ಕಂಪ್ಲೀಟ್ ಆಗಿದ್ದು ತೆರೆ ಮೇಲೆ ಬರಲು ಸಜ್ಜಾಗಿದೆ. ಹೀಗಾಗಿ ನಟ ಧನುಷ್ ಕೂಡ ಸಿನಿಮಾದ ಪ್ರಚಾರ ಕಾರ್ಯ ದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ನಟ ರಿಷಭ್ ಶೆಟ್ಟಿ ಅವರು ನಟಿಸಿ ನಿರ್ದೇಶನ ಮಾಡುತ್ತಿರುವ 'ಕಾಂತಾರ- 1' ಸಿನಿಮಾಕ್ಕೆ ಪೈಪೋಟಿ ನೀಡಲು ಇಡ್ಲಿ ಕಡೈ ಸಿನಿಮಾ ರೆಡಿಯಾಗುವ ಮೂಲಕ ಟಫ್ ಫೈಟ್ ನೀಡುವ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರ ಕುತೂಹಲ ಕೆರಳಿಸುವಂತಿದೆ.

ನಟ ಧನುಷ್ ಅವರು ನಟನೆ ಜೊತೆಗೆ ನಿರ್ದೇಶನ ಮಾಡಿದ್ದು ಕೆಲವೇ ಸಿನಿಮಾವಾದರೂ ಕೂಡ ಆ ಸಿನಿಮಾಗಳು ತೆರೆ ಮೇಲೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅಂತೆಯೇ ಇಡ್ಲಿ ಕಡೈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಎರಡನ್ನು ಕೂಡ ನಟ ಧನುಷ್ ಅವರೇ ವಹಿಸಿ ಕೊಂಡಿದ್ದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ರಾಯನ್ ಸಿನಿಮಾವನ್ನು ನಟ ಧನುಷ್ ಅವರು ನಿರ್ದೇಶನ ಮಾಡಿದ್ದ ಬಳಿಕ ಇದೀಗ ಇಡ್ಲಿ ಕಡೈ ಸಿನಿಮಾಕ್ಕೂ ನಿರ್ದೇಶಿಸಿದ್ದಾರೆ. ಹೀಗಾಗಿ ಈ ಸಿನಿಮಾದ ಟ್ರೈಲರ್ ಕುತೂಹಲ ಹೆಚ್ಚಿಸುವಂತಿದೆ.



ಇಡ್ಲಿ ಕಡೈ ಸಿನಿಮಾದ ಟ್ರೈಲರ್ ನಲ್ಲಿ ನಾಯಕನ ತಂದೆಯು ಇಡ್ಲಿ ಅಂಗಡಿ ನಡೆಸುತ್ತಿದ್ದು ತಂದೆಯನ್ನು ನೋಡುತ್ತಾ ಬೆಳೆದ ಮುರುಗನ್ ಮುಂದೆ ದೊಡ್ಡ ಫುಡ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಉನ್ನತ ಸ್ಥಾನಕ್ಕೇರುತ್ತಾನೆ. ಹಾಗಿದ್ದರೂ ಹುಟ್ಟೂರಿನ ಇಡ್ಲಿ ಅಂಗಡಿ ಅವನಿಗೆ ನೆನಪಾ ಗುತ್ತಿರುತ್ತದೆ. ತನ್ನ ಹುಟ್ಟೂರಿನಲ್ಲಿ ಮುಚ್ಚಿದ ಇಡ್ಲಿ ಅಂಗಡಿಯನ್ನು ಮತ್ತೆ ಪುನಃ ತೆರೆಯುತ್ತಾನೆ ಹಾಗಾದರೆ ಇದೆಲ್ಲ ಅವನು ಯಾಕಾಗಿ ಮಾಡುತ್ತಿರಬಹುದು ಎಂಬ ಕುತೂಹಲ ಪ್ರೇಕ್ಷಕನಲ್ಲಿ ಉಂಟು ಮಾಡುವಂತಿದ್ದು ಈ ಟ್ರೇಲರ್ ಸಿದ್ಧಗೊಂಡಿದೆ. ಅದ್ಧೂರಿ ಕಾರ್ಯಕ್ರಮದ ಮೂಲಕ ಟ್ರೆಲರ್ ರಿಲೀಸ್ ಮಾಡಲಾಗಿದ್ದು ಅನೇಕ ನಟರು, ಸಿನಿಮಾ ಕಲಾವಿದರು ಇದನ್ನು ಮೆಚ್ಚಿ ಕೊಂಡಿದ್ದಾರೆ.

ನಟ ರಿಷಬ್ ಶೆಟ್ಟಿ ಕೂಡ ಇಡ್ಲಿ ಕಡೈ ಚಿತ್ರದ ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಇಡ್ಲಿ ಕಡೈ ಸಿನಿಮಾ ತಂಡಕ್ಕೆ ಶುಭವಾಗಲಿ... ಜೀವನದ ಅತ್ಯಂತ ಸುಂದರ ನೆನಪುಗಳನ್ನು ಮರುಕಳಿಸುವಂತಹ ಈ ಕಥೆ ಪ್ರೇಕ್ಷಕರ ಮನ ಗೆಲ್ಲಲಿ ಎಂದು ನಟ ರಿಷಭ್ ಶೆಟ್ಟಿ ಅವರು ಶುಭಕೋರಿದ್ದಾರೆ. ಅದರ ಜೊತೆಗೆ ಬೆಸ್ಟ್ ವಿಶಸ್ ಟು ಎಂದು ನಿತ್ಯ ಮೆನನ್ ಹಾಗೂ ನಟ ಧನುಷ್ ಅವರನ್ನು ಕೂಡ ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನು ಓದಿ:Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ

ಧನುಷ್ ನಟನೆಯ ಇಡ್ಲಿ ಕಡೈ ಚಿತ್ರದಲ್ಲಿ ಬಹು ದೊಡ್ಡ ತಾರಾಗಣವಿದೆ. ನಿತ್ಯಾ ಮೆನನ್ ಅವರು ಈ ಸಿನಿಮಾದ ನಾಯಕಿಯಾಗಿ ನಟಿಸಿದ್ದಾರೆ. ಧನುಷ್ ತಂದೆ ಪಾತ್ರದಲ್ಲಿ ರಾಜ್‌ಕಿರಣ್ ಅವರು ಸಹ ಇದೇ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಮುದ್ರ ಖನಿ, ಸತ್ಯರಾಜ್, ಶಾಲಿನಿ ಪಾಂಡೆ , ಪಾರ್ಥಿಬನ್ ಸೇರಿದಂತೆ ಬೇರೆ ಇತರ ಕಲಾವಿದರು ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿರುವುದು ಮತ್ತೊಂದು ಪ್ಲಸ್ ಪಾಂಯ್ಟ್ ಆಗಿದೆ. ಅಕ್ಟೋಬರ್ 1ರಂದು ಇಡ್ಲಿ ಕಡೈ ಸಿನಿಮಾವು ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು ಅಕ್ಟೋಬರ್ 2ರಂದು ಕನ್ನಡದ 'ಕಾಂತಾರ'-1 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಮೂಲಕ ಎರಡು ಸಿನಿಮಾದಲ್ಲಿ ಯಾವುದು ಬಾಕ್ಸ್ ಆಫೀಸ್ ದಾಖಲೆ ಮಾಡುತ್ತೆ ಎಂದು ಕಾದು ನೋಡಬೇಕು.