ಗುಹೆ ಮನುಷ್ಯನ ಅವತಾರದಲ್ಲಿ ಆಮಿರ್ ಖಾನ್ ಚಾರ್ಜ್ಡ್
ಚುರುಕಾದ ದೇಹ ಮತ್ತು ಮನಸ್ಸಿನೊಂದಿಗೆ ಅನಿರೀಕ್ಷಿತ ಸಾಹಸಗಳನ್ನು ಎದುರಿಸುವ ಹಿಂದೆಂದೂ ಕಂಡಿರದ ಗುಹೆ ಮನುಷ್ಯನ ಪಾತ್ರದಲ್ಲಿ ಆಮಿರ್ ಖಾನ್ ಅವರನ್ನು ಒಳಗೊಂಡ ವೈವಿಧ್ಯಮಯವಾದ ಚಿತ್ರ ಶ್ರೇಣಿ ಗಳ ಮೂಲಕ ಪ್ರದರ್ಶಿಸಲಾಗಿದೆ!
ಬೆಂಗಳೂರು: ಕೋಕ-ಕೋಲಾ ಇಂಡಿಯಾದ ವಿದ್ಯುಚ್ಛಕ್ತಿಯಂಥ ಪಾನೀಯವಾದ ಚಾರ್ಜ್ಡ್, “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್”ನ ಹೊಸ ಸೀಸನ್‌ನಲ್ಲಿ ಗುಹೆ ಮನುಷ್ಯನ ಹಿಂದಿರುಗುವಿಕೆ ಯೊಂದಿಗೆ ಆಕರ್ಷಣೆಯ ಕೇಂದ್ರವಾಗಿದೆ.
ಸ್ವತಂತ್ರ ಚಿಂತಕ ಆಮಿರ್ ಖಾನ್ ಅವರನ್ನು ಗುಹೆಮನುಷ್ಯನ ಅವತಾರದಲ್ಲಿ ತೋರಿಸಿರುವ ಚಾರ್ಜ್ಡ್, 2025ದ ಬೇಸಿಗೆಗಾಗಿ ತನ್ನ ಹೊಸ ಪ್ರಚಾರವನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆ ಯು, , ಚುರುಕುತನ ಹಾಗೂ ದೈಹಿಕ ಶಕ್ತಿಯನ್ನು ಪ್ರತಿನಿಧಿಸುವ ವುಲ್ಫ್‌ನ ಹೊಸ ಮಾಸ್ಕಾಟ್ ಮೂಲಕ ತಾಜಾ ಉತ್ಪನ್ನ ಗುರುತನ್ನೂ ಅನಾವರಣಗೊಳಿಸಿದೆ.
ಚಾರ್ಜ್ಡ್, ದೈಹಿಕ ಶಕ್ತಿ ಹಾಗೂ ಮಾನಸಿಕ ಚುರುಕುತನ ಎರಡರ ಅಗತ್ಯವೂ ಇರುವಂತಹ ಅಸಾಧ್ಯ ಪರಿಹಾರಗಳನ್ನು ಹುಡುಕಲು ಮತ್ತು ದೊಡ್ಡ ಸಾಧನೆಗಳನ್ನು ಮಾಡಲು ಒಂದು ವೇಗವರ್ಧಕ ವಾಗಿ ಮಾರುಕಟ್ಟೆಯಲ್ಲಿ ತನ್ನನ್ನು ತಾನು ವಿಭಿನ್ನಗೊಳಿಸಿಕೊಂಡಿದೆ. ಇದನ್ನು, ಚುರುಕಾದ ದೇಹ ಮತ್ತು ಮನಸ್ಸಿನೊಂದಿಗೆ ಅನಿರೀಕ್ಷಿತ ಸಾಹಸಗಳನ್ನು ಎದುರಿಸುವ ಹಿಂದೆಂದೂ ಕಂಡಿರದ ಗುಹೆ ಮನುಷ್ಯನ ಪಾತ್ರದಲ್ಲಿ ಆಮಿರ್ ಖಾನ್ ಅವರನ್ನು ಒಳಗೊಂಡ ವೈವಿಧ್ಯಮಯವಾದ ಚಿತ್ರ ಶ್ರೇಣಿ ಗಳ ಮೂಲಕ ಪ್ರದರ್ಶಿಸಲಾಗಿದೆ!
ಇದನ್ನೂ ಓದಿ: Amir Khan: ಮಹಾಭಾರತ ಸಿನಿಮಾ ಬಗ್ಗೆ ಭಯ ಇದೆ... ಅಮೀರ್ ಖಾನ್ ಹೀಗಂದಿದ್ದೇಕೆ?
ಈ ಪ್ರಚಾರದ ಸೃಜನಶೀಲ ದೃಶ್ಯವನ್ನು ಒಗಿಲ್ವಿ ಇಂಡಿಯಾ(Ogilvy India) ಅಭಿವೃದ್ಧಿಪಡಿಸಿದೆ. ಚಿತ್ರಗಳ ಸರಣಿಯಲ್ಲಿ ಆಮಿರ್ ಖಾನ್, ಡೈನೋಸಾರ್‌ಗೆ ಚಳ್ಳೆ ಹಣ್ಣು ತಿನ್ನಿಸುವುದರಬಹುದು, ಒಂದು ನೃತ್ಯ ಕಾರ್ಯಕ್ರಮ ಆರಂಭಿಸುವುದಿರಬಹುದು ಅಥವಾ ಒಂದು ಡೇಟ್ ನೈಟ್‌ನಲ್ಲಿ ಒಂದು ಅಚ್ಚರಿತರುವ ಸಂದರ್ಭವನ್ನು ನಿಭಾಯಿಸುವುದೇ ಇರಬಹುದು, ತನ್ನ ಸ್ವಂತ “ಚಾರ್ಜ್ಡ್” ಬಾಟಲ್ ನೊಂದಿಗೆ ಹಲವಾರು ದೃಶ್ಯಗಳಲ್ಲಿ ತೊಡಗಿಕೊಳ್ಳುವ ಗುಹೆಮನುಷ್ಯನ ಪಾತ್ರ ವಹಿಸುತ್ತಿದ್ದಾರೆ.
ಪ್ರತಿಯೊಂದು ಸಂದರ್ಭದಲ್ಲೂ, ‘ಚಾರ್ಜ್ಡ್’, ಸಮಸ್ಯೆಗಳಿಗೆ ಅನಿರೀಕ್ಷಿತ ಪರಿಹಾರಗಳನ್ನು ಆಲೋ ಚಿಸುವುದಕ್ಕೆ ಅವರ ಮನಸ್ಸು ಮತ್ತು ದೇಹವನ್ನು ಉತ್ತೇಜಿಸುತ್ತದೆ. ದಿ ಕೋಕ-ಕೋಲಾ ಕಂಪನಿ ಯ ಸ್ಪಾರ್ಕ್ಲಿಂಗ್ ಫ್ಲೇವರ್ಸ್(ಭಾರತ ಮತ್ತು ಸೌತ್‌ವೆಸ್ಟ್ ಏಶ್ಯ)ದ ವರ್ಗ ಮುಖ್ಯಸ್ಥರಾದ ಸುಮೇಲಿ ಚಟರ್ಜೀ , " ಚಾರ್ಜ್ಡ್ ಪಾನೀಯವನ್ನು ನಿರ್ದಿಷ್ಟವಾಗಿ ಗ್ರಾಹಕರು ಅದರ ತುಚಿಗಾಗಿ ಅತ್ಯಂತ ಹೊಗಳುತ್ತಾರೆ. ದಿಟ್ಟವಾಗಿರುವ, ಚುರುಕಾಗಿರುವ ಮತ್ತು ತಡೆಯಲಾಗದಂತೆ ಇರುವ ನಮ್ಮ ಹೊಸ ಪ್ಯಾಕೇಜಿಂಗ್‌ಅನ್ನು ಪರಿಚಯಿಸುವುದಕ್ಕೆ ನಾವು ಅತ್ಯಂತ ಹರ್ಷಿತರಾಗಿದ್ದೇವೆ.
ಈ ಪ್ಯಾಕೇಜ್ ಪಾನೀಯದ ಗುಣವಿಶೇಷತೆಯನ್ನು ನಿಖರವಾಗಿ ಪ್ರತಿಫಲಿಸುತ್ತದೆ. ಕೌತುಕಮಯ ಹಾಗೂ ಅನಿರೀಕ್ಷಿತವಾಗಿಯೇ ಉಳಿಯುವಾ ವಿನೂತನ ಕಥಾನಕಗಳನ್ನು ಬ್ರ್ಯಾಂಡ್ ನಿರಂತರವಾಗಿ ಬಳಸಿಕೊಳ್ಳುತ್ತಲೇ ಇದೆ. ಸ್ವತಃ ಒಬ್ಬ ಲೆಜೆಂಡ್ ಆದ ಆಮಿರ್ ಖಾನ್ ಅವರು ಪಾತ್ರವಹಿಸುತ್ತಿರುವ ನಮ್ಮ ನೆಚ್ಚಿನ ಗುಹೆಮನುಷ್ಯ(ಕೇವ್ ಮ್ಯಾನ್) ತನ್ನ ಇಡೀ ವಿಶ್ವದೊಡನೆ ಮತ್ತೆ ಹಿಂದಿರುಗಿದ್ದಾನೆ.” ಎಂದರು.
ಆಮಿರ್ ಖಾನ್ ಅವರು, "ಚಾರ್ಜ್ಡ್‌ನ ಭಾಗವಾಗಿರುವುದು ನನಗೆ ನಿಜವಾಗಿಯೂ ವಿಶೇಷವಾದುದು, ನಾನು ಬಹಳವಾಗಿ ಗೌರವಿಸುವ ದಿಟ್ಟತನ ಹಾಗೂ ಸ್ವಂತಿಕೆಯನ್ನು ಒಳಗೊಂಡ ಬ್ರ್ಯಾಂಡ್ ಆಗಿದೆ ಅದು. “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್” ಪ್ರಚಾರವು ಜೀವನ ಪ್ರತಿಯೊಂದು ಅಂಶದಲ್ಲೂ ಸಮತೋಲನ ಹಾಗೂ ಅತ್ಯುತ್ಕೃಷ್ಟತೆಗಾಗಿ ಶ್ರಮಿಸಬೇಕೆಂಬ ನನ್ನ ನಂಬಿಕೆಗೆ ನಿಖರವಾಗಿ ಹೊಂದಿ ಕೊಳ್ಳುತ್ತದೆ.
ಇದಕ್ಕಾಗಿ ಸಹಯೋಗ ಏರ್ಪಡಿಸಿಕೊಂಡಿರುವುದು ನನಗೆ ಒಂದು ವಿಶಿಷ ಅನುಭವವಾಗಿತ್ತು ಮತ್ತು ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ತಿಳಿದುಕೊಳ್ಳಲು ನಾನು ಕಾತರನಾಗಿದ್ದೇನೆ.” ಎಂದು ಹೇಳಿದರು. ಒಗಿಲ್ವಿದ ಚೀಫ್ ಕ್ರಿಯೇಟಿವ್ ಆಫಿಸರ್ ಸುಕೇಶ್ ನಾಯಕ್, “ಚಾರ್ಜ್ಡ್ ಮತ್ತೆ ಹಿಂದಿರುಗಿದೆ, ಮತ್ತು ಈ ಬಾರಿ ಆಮಿರ್ ಖಾನ್ ಶಿಲಾಯುಗದ ಮನುಷ್ಯನ ಕಾಲಕ್ಕೆ ಹಿಂದಿರುಗಿ ದ್ದಾರೆ.
ಇತಿಹಾಸ ಪೂರ್ವ ಯುಗದ ಮೋಜಿನ ಸಾಹಸಗಳು ಆಧುನಿಕ ಜಗತ್ತಿನ ಅಗತ್ಯಗಳಿಗೆ ಸರಿಯಾಗಿ ಹೊಂದುತ್ತವೆ- ದೈಹಕವಾಗಿ ಹಾಗೂ ಮಾನಸಿಕವಾಗಿ ಚುರುಕಾಗಿರುವ ಅವಶ್ಯಕತೆ. ಈ ಪ್ರಚಾರವು, ಈ ವರ್ಗದಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿರುವ ವಿಷಯದಲ್ಲಿ ಮೋಜಿನಿಂದ ಹಾಗೂ ತಾಜಾ ರೀತಿಯಲ್ಲಿ ಟಿಜಿಯನ್ನು ತೊಡಗಿಸಿಕೊಂಡು, ಹೆಚ್ಚಿಗೆ ಅಲ್ಲದಿದ್ದರೂ, ಈ ಪಾನೀಯದಷ್ಟೇ ಪ್ರೇಕ್ಷಕರನ್ನು ಚಾರ್ಜ್ ಮಾಡಲಿದೆ.” ಎಂದರು.
ಉತ್ಪನ್ನದ ಹೊಸ ಲೇಬಲ್ ಹಾಗೂ ದಿಟ್ಟ ವಿಶುವಲ್ ತಾಜಾತನ, ಮಾರುಕಟ್ಟೆಯಲ್ಲಿ ಅದು ಎದ್ದು ಕಾಣುವುದನ್ನು ಖಾತರಿ ಪಡಿಸಿ, ಅದರ ಗೋಚರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ನಿಮ್ಮ ಮನಸ್ಸು ಮತ್ತು ದೇಹಕ್ಕೆ ಶಕ್ತಿ ನೀಡುವ ವಿದ್ಯುಚ್ಛಕ್ತಿಯಂಥ ಪಾನೀಯವಾದ ನಿಮ್ಮ ಚಾರ್ಜ್ಡ್‌ಅನ್ನು ಇಂದೇ ಪಡೆದುಕೊಳ್ಳಿ!