ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್'ನ 'ಟಿಐ22 ಬೈ ಅಹಂ' ಕಲೆಕ್ಷನ್‌ನ ಮುಖಚಿತ್ರವಾಗಿ ನಟ ಹರ್ಷವರ್ಧನ್ ರಾಣೆ ನೇಮಕ

ಮುಂಬೈನ ಜುಹುವಿನಲ್ಲಿರುವ ಒನ್‌8 ಕಮ್ಯೂನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕಲೆಕ್ಷನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. 'ದಿಟ್ಟವಾಗಿರಿ. ದೃಢವಾಗಿರಿ' ಎಂಬ ಪರಿಕಲ್ಪನೆಯಡಿ ವಿನ್ಯಾಸ ಗೊಂಡಿರುವ ಈ ಆಭರಣಗಳು ಆಧುನಿಕ ಪುರುಷರ ವ್ಯಕ್ತಿತ್ವ, ಬಲ ಮತ್ತು ವಿಶಿಷ್ಟತೆಯನ್ನು ಪ್ರತಿಬಿಂಬಿಸುತ್ತವೆ.

ಮುಂಬೈ: ಆಭರಣ ಬ್ರ್ಯಾಂಡ್ 'ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್', ತನ್ನ ಪುರುಷರ ಆಭರಣ ವಿಭಾಗವಾದ ‘ಅಹಂ' ಅಡಿಯಲ್ಲಿ ಟೈಟಾನಿಯಂ, ಚಿನ್ನ ಮತ್ತು ವಜ್ರಗಳ ಸಂಯೋಜನೆಯ ಹೊಸ 'ಟಿಐ22' ಕಲೆಕ್ಷನ್‌ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಕಲೆಕ್ಷನ್‌ನ ರಾಯಭಾರಿಯಾಗಿ ನಟ ಹರ್ಷವರ್ಧನ್ ರಾಣೆ ಅವರನ್ನು ಘೋಷಿಸಲಾಗಿದೆ.

ಮುಂಬೈನ ಜುಹುವಿನಲ್ಲಿರುವ ಒನ್‌8 ಕಮ್ಯೂನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕಲೆಕ್ಷನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. 'ದಿಟ್ಟವಾಗಿರಿ. ದೃಢವಾಗಿರಿ' ಎಂಬ ಪರಿಕಲ್ಪನೆಯಡಿ ವಿನ್ಯಾಸಗೊಂಡಿರುವ ಈ ಆಭರಣಗಳು ಆಧುನಿಕ ಪುರುಷರ ವ್ಯಕ್ತಿತ್ವ, ಬಲ ಮತ್ತು ವಿಶಿಷ್ಟತೆಯನ್ನು ಪ್ರತಿಬಿಂಬಿಸುತ್ತವೆ.

ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್ ಪಾಲಿಗೆ 'ಅಹಂ' ಎಂದರೆ ಪುರುಷರ ಆಭರಣಗಳ ಆಧುನಿಕ ದೃಷ್ಟಿಕೋನವಾಗಿದೆ. ಸಂಸ್ಕೃತದಲ್ಲಿ 'ಅಹಂ' ಎಂದರೆ 'ನಾನು' ಅಥವಾ 'ಆಂತರಿಕ ಗುರುತು' ಎಂದರ್ಥ. ಆಭರಣವು ಕೇವಲ ಸಂಪ್ರದಾಯವಲ್ಲ, ಬದಲಾಗಿ ಅದು ವ್ಯಕ್ತಿತ್ವದ ಪ್ರತಿರೂಪವಾಗಿರ ಬೇಕು ಎಂಬ ನಂಬಿಕೆಯಡಿ ಈ ಕಲೆಕ್ಷನ್ ರೂಪಿಸಲಾಗಿದೆ. ಪ್ರಪಂಚದ ಅತ್ಯಂತ ಗಟ್ಟಿಮುಟ್ಟಾದ ಲೋಹಗಳಲ್ಲಿ ಒಂದಾದ ಟೈಟಾನಿಯಂನೊಂದಿಗೆ ಚಿನ್ನ ಮತ್ತು ವಜ್ರಗಳನ್ನು ಬೆರೆಸಿ ಈ 'ಟಿಐ22' ಆಭರಣಗಳನ್ನು ತಯಾರಿಸಲಾಗಿದೆ.

ಇದನ್ನೂ ಓದಿ: 72nd National Film Awards: ದೇಶೀಯ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ವುಡ್‌ನ ʼಮಿಥ್ಯʼ: ತುಳುವಿನ 'ಇಂಬು'ಗೆ ಅವಾರ್ಡ್‌

ಟೈಟಾನಿಯಂ ಲೋಹವು ಹಗುರ, ಬಲವಾದ ಮತ್ತು ಹೆಚ್ಚು ಬಾಳಿಕೆ ಬರುವ ಗುಣಗಳನ್ನು ಹೊಂದಿದೆ. ದೈನಂದಿನ ಬಳಕೆಗೆ ಹೇಳಿಮಾಡಿಸಿದಂತಿರುವ ಈ ಕಲೆಕ್ಷನ್‌ನಲ್ಲಿ ಪುರುಷರ ಚೈನ್‌ಗಳು, ಪೆಂಡೆಂಟ್‌ಗಳು, ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳು, ಕಡಗಗಳು ಮತ್ತು ಉಂಗುರಗಳು ಲಭ್ಯವಿವೆ.

ಸೆನ್ಕೊದ ಅಹಂ ಟೈಟಾನಿಯಂ ಮತ್ತು ಟಿಐ22 ಕಲೆಕ್ಷನ್ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ ನಟ ಹರ್ಷವರ್ಧನ್ ರಾಣೆ, "ನನ್ನ ಪಾಲಿಗೆ ಶಕ್ತಿ ಎಂದರೆ ಗಟ್ಟಿಯಾಗಿ ಕೂಗುವುದಲ್ಲ ಅಥವಾ ಇತರರಿಗೆ ಏನನ್ನಾದರೂ ಸಾಬೀತುಪಡಿಸಲು ಪ್ರಯತ್ನಿಸುವುದಲ್ಲ. ನಮ್ಮನ್ನು ನಾವು ಅರಿತುಕೊಳ್ಳುವುದು, ನಮ್ಮ ನಂಬಿಕೆಗಳಿಗೆ ಬದ್ಧರಾಗಿರುವುದು ಮತ್ತು ನಿರಂತರವಾಗಿ ಮುನ್ನಡೆ ಯುವ ಶಿಸ್ತು ಹೊಂದುವುದೇ ನಿಜವಾದ ಶಕ್ತಿ.

ಇದೇ ಕಾರಣಕ್ಕೆ ನಾನು 'ಟಿಐ22 ಬೈ ಅಹಂ' ಜೊತೆ ಸಂಪರ್ಕ ಸಾಧಿಸಿದ್ದೇನೆ. ಟೈಟಾನಿಯಂನ ಶಕ್ತಿ ಮತ್ತು ಸರಳತೆ ಅತ್ಯಂತ ಆಧುನಿಕವಾಗಿ ಕಾಣುತ್ತದೆ, ಜೊತೆಗೆ ಚಿನ್ನ ಮತ್ತು ವಜ್ರಗಳ ಸೇರ್ಪಡೆ ಆಭರಣಕ್ಕೆ ಒಂದು ವಿಶಿಷ್ಟವಾದ ಕಳೆಯನ್ನು ನೀಡುತ್ತದೆ. ಈ ಆಭರಣಗಳು ಅತಿಯೆನಿಸದೆ, ಆತ್ಮವಿಶ್ವಾಸದಿಂದ ಕೂಡಿದ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಬ್ಬರ ವಿಶಿಷ್ಟ ವ್ಯಕ್ತಿತ್ವ ವನ್ನು ಸಂಭ್ರಮಿಸುವ ಮತ್ತು 'ದಿಟ್ಟವಾಗಿರಿ. ದೃಢವಾಗಿರಿ' ಎಂಬುದರ ನೈಜ ಅರ್ಥವನ್ನು ಸೆರೆಹಿಡಿಯುವ ಕಲೆಕ್ಷನ್‌ನೊಂದಿಗೆ ಗುರುತಿಸಿಕೊಳ್ಳಲು ನನಗೆ ಅತೀವ ಸಂತೋಷವಾಗುತ್ತಿದೆ" ಎಂದು ಹೇಳಿದರು.

ಈ ಬಿಡುಗಡೆ ಕಾರ್ಯಕ್ರಮದ ಕುರಿತು ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್‌ನ ಮಾರ್ಕೆಟಿಂಗ್ ಮತ್ತು ವಿನ್ಯಾಸ ವಿಭಾಗದ ನಿರ್ದೇಶಕಿ ಹಾಗೂ ಮುಖ್ಯಸ್ಥೆ ಶ್ರೀಮತಿ ಜೋಯಿತಾ ಸೇನ್ ಮಾತನಾಡಿ, "ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ, ಧರಿಸುವವರ ವ್ಯಕ್ತಿತ್ವಕ್ಕೆ ತಕ್ಕಂತೆ ಆಭರಣಗಳು ಸಹ ವಿಕಸನಗೊಳ್ಳಬೇಕು ಎಂದು ನಾವು ಯಾವಾಗಲೂ ನಂಬುತ್ತೇವೆ. 'ಅಹಂ' ಮೂಲಕ ನಾವು ಪುರುಷರ ಆಭರಣಗಳಿಗೆ ಹೆಚ್ಚು ಆಧುನಿಕ ಭಾಷೆಯನ್ನು ರೂಪಿಸುತ್ತಿದ್ದೇವೆ ಮತ್ತು 'ಟಿಐ22 ಬೈ ಅಹಂ' ಆ ಪಯಣದ ಮುಂದಿನ ಹೆಜ್ಜೆಯಾಗಿದೆ. ಟೈಟಾನಿಯಂ ನೈಸರ್ಗಿಕವಾಗಿಯೇ ಶಕ್ತಿ, ದೃಢತೆ ಮತ್ತು ಹಗುರತೆಯಂತಹ ಗುಣಗಳನ್ನು ಮೈಗೂಡಿಸಿಕೊಂಡಿದೆ.

ಜೊತೆಗೆ ಚಿನ್ನ ಮತ್ತು ವಜ್ರಗಳು ನಿರಂತರ ಕರಕುಶಲತೆ ಮತ್ತು ವಿಶಿಷ್ಟತೆಯನ್ನು ತರುತ್ತವೆ. ಇವೆಲ್ಲವೂ ಒಟ್ಟಾಗಿ ನೈಜತೆ, ವ್ಯಕ್ತಿತ್ವ ಮತ್ತು ಉದ್ದೇಶಪೂರ್ವಕ ವಿನ್ಯಾಸವನ್ನು ಗೌರವಿಸುವ ಇಂದಿನ ಆಧುನಿಕ ಪುರುಷನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. 'ದಿಟ್ಟವಾಗಿರಿ. ದೃಢವಾಗಿರಿ' ಎಂಬುದು ಈ ತತ್ವದ ಅಭಿವ್ಯಕ್ತಿಯಾಗಿದೆ. ಹರ್ಷವರ್ಧನ್ ಅವರು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಅವರು ನಮ್ಮ ಸಹಜ ಆಯ್ಕೆಯಾಗಿದ್ದಾರೆ. ಅವರ ಶಿಸ್ತು, ಸರಳ ಶೈಲಿ ಮತ್ತು ಮೌನವಾದ ಆತ್ಮವಿಶ್ವಾಸವು ಅವರನ್ನು ಅಹಂ ತತ್ವದ ನೈಜ ವಿಸ್ತರಣೆ ಯನ್ನಾಗಿ ಮಾಡಿದೆ" ಎಂದು ತಿಳಿಸಿದರು.

'ಟಿಐ22 ಬೈ ಅಹಂ' ಕಲೆಕ್ಷನ್ ಕೇವಲ ಹೊಸ ಆಭರಣಗಳ ಸಂಗ್ರಹವಲ್ಲ, ಇದು ಪುರುಷರ ಆಭರಣಗಳ ಬದಲಾಗುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಪ್ರಸ್ತುತ ಈ ಕಲೆಕ್ಷನ್ ಎಲ್ಲಾ ಸೆನ್ಕೊ ಗೋಲ್ಡ್ ಅಂಡ್ ಡೈಮಂಡ್ಸ್ ಶೋರೂಮ್‌ಗಳು, ಸೆನ್ಕೊ ಆ್ಯಪ್ ಮತ್ತು ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಲಭ್ಯವಿದೆ.