ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಉದ್ಯಮಗಳಲ್ಲಿ ಎಐ ಹೂಡಿಕೆ ಶೇ.119 ರಷ್ಟು ಏರಿಕೆ, ಎಐ ಆಕಾಂಕ್ಷೆಗೆ ತಕ್ಕಂತೆ ಆಡಳಿತ ಚೌಕಟ್ಟು ಹೊಂದಿರುವ ಭಾರತೀಯ ಉದ್ಯಮಗಳು ಶೇ. 22 ಮಾತ್ರ: ಸರ್ವಿಸ್‌ ನೌ

ಭಾರತವು ತನ್ನ ಎಐ ಪಯಣದಲ್ಲಿ ಅತ್ಯಂತ ನಿರ್ಣಾಯಕ ಘಟ್ಟವನ್ನು ತಲುಪುತ್ತಿದೆ. ಈ ಸಂದರ್ಭ ದಲ್ಲಿ ಸರ್ವಿಸ್‌ನೌ ಸಂಸ್ಥೆಯು ಸರ್ವಿಸ್‌ನೌ ಎಂಟರ್‌ ಪ್ರೈಸ್ ಎಐ ಮೆಚ್ಯೂರಿಟಿ ಇಂಡೆಕ್ಸ್ 2026 ವರದಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಜಾಗತಿಕ ಸರಾಸರಿ ಶೇ. 110 ಕ್ಕಿಂತ ಹೆಚ್ಚಾಗಿ, ಭಾರತದ ಉದ್ಯಮಗಳಲ್ಲಿ ಎಐ ಹೂಡಿಕೆಯು ಒಂದೇ ವರ್ಷದಲ್ಲಿ ಶೇ. 119 ರಷ್ಟು ಬೆಳವಣಿಗೆ ಕಂಡಿದೆ.

ಭಾರತದ ಕ್ಷಿಪ್ರ ಎಐ ಹೂಡಿಕೆ ಬೆಳವಣಿಗೆ ಹಾಗೂ ವಿಶ್ವಾಸದಿಂದ ಎಐ ಅನ್ನು ವಿಸ್ತರಿಸಲು ಉದ್ಯಮ ಗಳಿಗೆ ಅಗತ್ಯವಿರುವ ಆಡಳಿತದ ಅಡಿಪಾಯಗಳ ನಡುವಿನ ಅಂತರವನ್ನು ಸರ್ವಿಸ್‌ನೌ ಸಂಸ್ಥೆಯ ನೂತನ ವರದಿ ಬಹಿರಂಗಪಡಿಸಿದೆ.

ಭಾರತವು ತನ್ನ ಎಐ ಪಯಣದಲ್ಲಿ ಅತ್ಯಂತ ನಿರ್ಣಾಯಕ ಘಟ್ಟವನ್ನು ತಲುಪುತ್ತಿದೆ. ಈ ಸಂದರ್ಭ ದಲ್ಲಿ ಸರ್ವಿಸ್‌ನೌ ಸಂಸ್ಥೆಯು ಸರ್ವಿಸ್‌ನೌ ಎಂಟರ್‌ ಪ್ರೈಸ್ ಎಐ ಮೆಚ್ಯೂರಿಟಿ ಇಂಡೆಕ್ಸ್ 2026 ವರದಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಜಾಗತಿಕ ಸರಾಸರಿ ಶೇ.110ಕ್ಕಿಂತ ಹೆಚ್ಚಾಗಿ, ಭಾರತದ ಉದ್ಯಮಗಳಲ್ಲಿ ಎಐ ಹೂಡಿಕೆಯು ಒಂದೇ ವರ್ಷದಲ್ಲಿ ಶೇ.119ರಷ್ಟು ಬೆಳವಣಿಗೆ ಕಂಡಿದೆ. 2027ರ ವೇಳೆಗೆ ಸರಾಸರಿ ಐಟಿ ಬಜೆಟ್‌ನ ಐದನೇ ಒಂದು ಭಾಗಕ್ಕಿಂತ ಹೆಚ್ಚು ಮೊತ್ತವನ್ನು ಎಐ ಒಳಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಈ ಹೂಡಿಕೆಯ ವೇಗವು ನೈಜ ರಾಷ್ಟ್ರೀಯ ಸಾಮರ್ಥ್ಯಗಳ ಮೇಲೆ ನಿರ್ಮಾಣವಾಗುತ್ತಿದೆ: ಜಾಗತಿಕ ಗುಣಮಟ್ಟದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಅತ್ಯುತ್ತಮ ಎಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕ ಮಟ್ಟದಲ್ಲೇ ಅತ್ಯಂತ ವೇಗವಾಗಿ ಎಂಟರ್‌ಪ್ರೈಸ್ ಎಐ ಅಳವಡಿಸಿಕೊಳ್ಳುತ್ತಿರುವ ಮುಂಚೂಣಿ ದೇಶಗಳಲ್ಲಿ ಭಾರತ ಒಂದಾಗಿದೆ.

ಆದಾಗ್ಯೂ, ಮುಂದಿನ ಹಂತವು ಸಂಸ್ಥೆಗಳು ಎಐ ಅನ್ನು ಎಷ್ಟು ವೇಗವಾಗಿ ಅಳವಡಿಸಿಕೊಳ್ಳುತ್ತವೆ ಎಂಬುದಕ್ಕಿಂತ ಹೆಚ್ಚಾಗಿ, ಅದನ್ನು ಎಷ್ಟು ಆತ್ಮವಿಶ್ವಾಸದಿಂದ ನಿಯಂತ್ರಿಸುತ್ತವೆ (ಆಡಳಿತ ನಡೆಸು ತ್ತವೆ) ಎಂಬುದರ ಮೇಲೆ ಅವಲಂಬಿತ ವಾಗಿರುತ್ತದೆ. ಪ್ರಸ್ತುತ, ಭಾರತೀಯ ಉದ್ಯಮಗಳ ಪೈಕಿ ಕೇವಲ ಶೇ. 22 ರಷ್ಟು ಸಂಸ್ಥೆಗಳು ಮಾತ್ರ ಎಐ ಪರೀಕ್ಷೆ, ಲೆಕ್ಕಪರಿಶೋಧನೆ ಮತ್ತು ಅಪಾಯ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಜಾರಿಗೆ ತಂದಿವೆ.

ಇದನ್ನೂ ಓದಿ: ಕ್ಯಾನ್ಸರ್ ಆರೈಕೆಗಾಗಿ ಎಲೆಕ್ಟಾ ಹೊಂದಾಣಿಕೆಯ CT-ಲಿನಾಕ್ AI-ಚಾಲಿತ Evo ಜಾರಿ

ಈ ಅಂತರವು ಈಗಾಗಲೇ ಗೋಚರಿಸುತ್ತಿದೆ: ಭಾರತೀಯ ಸಂಸ್ಥೆಗಳ ಪೈಕಿ ಶೇ. 54 ರಷ್ಟು ಸಂಸ್ಥೆಗಳು ಎಐ ಏಜೆಂಟ್‌ಗಳನ್ನು ನಿಯೋಜಿಸುತ್ತಿವೆಯಾದರೂ, ಕೇವಲ ಶೇ. 11 ರಷ್ಟು ಸಂಸ್ಥೆಗಳು ಮಾತ್ರ ಸ್ವಾಯತ್ತ ಕಾರ್ಯನಿರ್ವಹಣೆಗಳ ಕಡೆ ಸಾಗಿವೆ. ಭಾರತವು ವೇಗವಾಗಿ ಮುನ್ನಡೆಯುತ್ತಿದೆ, ಆದರೆ ಎಐ ಎಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಮತಿಸಬೇಕು ಎಂಬುದರ ಕುರಿತು ಎಚ್ಚರಿಕೆ ಯನ್ನು ವಹಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ನಿಯೋಜನೆ ಮತ್ತು ಸ್ವಾಯತ್ತತೆಯ ನಡುವಿನ ಈ ಅಂತರವು,

ಭಾರತೀಯ ವ್ಯಾಪಾರ ನಾಯಕರು ಆದ್ಯತೆ ನೀಡುತ್ತಿರುವ ವಿಶ್ವಾಸಾರ್ಹತೆ, ಅಪಾಯ ಮತ್ತು ಸನ್ನದ್ಧತೆಯ ಅಂಶಗಳನ್ನು ಪ್ರತಿಬಿಂಬಿಸುತ್ತದೆ:

ಶೇ. 60 ರಷ್ಟು ನಾಯಕರು ಪಾರದರ್ಶಕತೆ ಮತ್ತು ತಪ್ಪು ಮಾಹಿತಿ ಹರಡುವ ಸಾಧ್ಯತೆಯನ್ನು ಪ್ರಮುಖ ಎಐ ಸವಾಲು ಎಂದು ಉಲ್ಲೇಖಿಸಿದ್ದಾರೆ

ಶೇ. 55 ರಷ್ಟು ನಾಯಕರು ನಿಯಂತ್ರಣ ಮತ್ತು ಅನುಸರಣೆಯ ಜಟಿಲತೆಯನ್ನು ಬೆಟ್ಟು ಮಾಡಿದ್ದಾರೆ

ಶೇ. 50 ರಷ್ಟು ನಾಯಕರು ಡೇಟಾ ಗೌಪ್ಯತೆ ಮತ್ತು ಭದ್ರತೆಯ ಆತಂಕಗಳನ್ನು ತಿಳಿಸಿದ್ದಾರೆ.

ಒಂದು ಉದ್ಯಮವು ನಿಯೋಜಿಸುವ ಪ್ರತಿಯೊಂದು ಎಐ ಏಜೆಂಟ್ ಸಹ ಡೇಟಾ, ಸಿಸ್ಟಮ್‌ಗಳು ಮತ್ತು ನಿರ್ಧಾರಗಳನ್ನು ಪ್ರವೇಶಿಸುವ ಸಾಮರ್ಥ್ಯವಿರುವ ಒಂದು ಪ್ರತ್ಯೇಕ ಗುರುತಾಗಿದೆ. ಈ ಏಜೆಂಟ್‌ಗಳನ್ನು ನಡೆಸಲು ಅಗತ್ಯವಿರುವ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು, ಭಾರತೀಯ ಉದ್ಯಮಗಳು ಪ್ರಮುಖ ಕೆಲಸಗಳನ್ನು ಎಷ್ಟು ವೇಗವಾಗಿ ಎಐಗೆ ವಹಿಸುತ್ತವೆ ಎಂಬುದನ್ನು ನಿರ್ಧರಿಸುತ್ತದೆ.

ಈ ಕುರಿತು ಸರ್ವಿಸ್‌ನೌ ಇಂಡಿಯಾ ಮತ್ತು ಸಾರ್ಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗ್ರೂಪ್ ಉಪಾಧ್ಯಕ್ಷ ಕುಲ್ಮೀತ್ ಬಾವಾ ಅವರು , "ಕೆಲವೇ ಕೆಲವು ಮಾರುಕಟ್ಟೆಗಳು ಮಾತ್ರ ಊಹಿಸಬಹು ದಾದ ಪ್ರಮಾಣದಲ್ಲಿ ಭಾರತವು ಎಐ ತಂತ್ರಜ್ಞಾನಕ್ಕೆ ಬದ್ಧತೆಯನ್ನು ತೋರಬಲ್ಲದು ಎಂಬುದನ್ನು ಸಾಬೀತುಪಡಿಸಿದೆ. ಮುಂದಿನ ಹಂತವು, ಭಾರತೀಯ ಉದ್ಯಮಗಳು ಆ ಮಹತ್ವಾಕಾಂಕ್ಷೆಯನ್ನು ಆಡಳಿತ, ಪರಸ್ಪರ ಸಂಪರ್ಕ ಹೊಂದಿದ ಡೇಟಾ ಮತ್ತು ಎಐಗೆ ಹೆಚ್ಚು ನಿರ್ಣಾಯಕ ಕೆಲಸಗಳನ್ನು ವಹಿಸಲು ಅನುವು ಮಾಡಿಕೊಡುವ ಕಾರ್ಯಪ್ರವಾಹಗಳೊಂದಿಗೆ ಹೇಗೆ ಸಂಯೋಜಿಸುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ಅಡಿಪಾಯಗಳನ್ನು ಮೊದಲು ನಿರ್ಮಿಸುವ ಸಂಸ್ಥೆ ಗಳು, ಭಾರತಕ್ಕಾಗಿ ಎಐ ಮೌಲ್ಯದ ಮುಂದಿನ ಹಂತವನ್ನು ಮುಕ್ತಗೊಳಿಸಲಿವೆ" ಎಂದು ತಿಳಿಸಿದ್ದಾರೆ.

ಒಂದೇ ದಿಕ್ಕಿನಲ್ಲಿ ಸಾಗುತ್ತಿರುವ ರಾಷ್ಟ್ರೀಯ ದೃಷ್ಟಿಕೋನ

ಭಾರತದ ಉದ್ಯಮಗಳ ಈ ವೇಗಕ್ಕೆ ಪೂರಕವಾಗಿ ರಾಷ್ಟ್ರೀಯ ಮಟ್ಟದಲ್ಲೂ ಎಐ ಕುರಿತು ಅಷ್ಟೇ ಬದ್ಧತೆಯುಳ್ಳ ದೃಷ್ಟಿಕೋನವಿದೆ. ದೇಶವು ಆರಂಭದಲ್ಲೇ ಪೂರಕ ಚೌಕಟ್ಟನ್ನು ರೂಪಿಸಲು ಮುನ್ನೆ ಚ್ಚರಿಕೆ ವಹಿಸಿದೆ - 2025 ರಲ್ಲಿ ಜಾರಿಗೆ ಬಂದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ (ಡಿಪಿಡಿಪಿ ಆಕ್ಟ್) ಮತ್ತು ಡಿಪಿಡಿಪಿ ನಿಯಮಗಳಿಂದ ಹಿಡಿದು, ಫೆಬ್ರವರಿ 2026ರ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾದ ಎಐ ಗವರ್ನೆನ್ಸ್ ಮಾರ್ಗಸೂಚಿಗಳು, ಇಂಡಿಯಾಎಐ ಮಿಷನ್ ಮತ್ತು ಇಂಡಿಯಾಎಐ ಸೇಫ್ಟಿ ಇನ್‌ಸ್ಟಿಟ್ಯೂಟ್ ಸ್ಥಾಪನೆಯವರೆಗೆ ಹಲವು ಕ್ರಮಗಳು ಇದರಲ್ಲಿ ಸೇರಿವೆ.

ಈ ವಿಧಾನವು ಹೊಸ ಆವಿಷ್ಕಾರವನ್ನು ಬೆಂಬಲಿಸುವುದರ ಜೊತೆಗೆ ಉದ್ಯಮಗಳು, ಪ್ರತಿಭೆಗಳು ಮತ್ತು ಗ್ರಾಹಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಉದ್ಯಮಗಳಿಗೆ, ಆಂತರಿಕ ಎಐ ಆಡಳಿತವನ್ನು ಈ ರಾಷ್ಟ್ರೀಯ ದಿಕ್ಕಿನೊಂದಿಗೆ ಸಂಯೋಜಿಸುವುದು ಸನ್ನದ್ಧತೆಯ ಸಂಕೇತವಾಗಿ ಮತ್ತು ಆರಂಭ ದಲ್ಲೇ ಮುನ್ನಡೆ ಸಾಧಿಸುವವರಿಗೆ ದೊಡ್ಡ ಪ್ರಯೋಜನವಾಗಿ ವೇಗವಾಗಿ ಹೊರ ಹೊಮ್ಮುತ್ತಿದೆ.

ಸಂಪರ್ಕಿಸದೇ ಇರುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ

ಪ್ರಸ್ತುತ ಭಾರತದ ಸರಾಸರಿ ಐಟಿ ಬಜೆಟ್‌ನಲ್ಲಿ ಎಐ ಪಾಲು ಶೇ. 16.6 ರಷ್ಟಿದ್ದು, 2027 ರ ವೇಳೆಗೆ ಇದು ಶೇ. 21.3 ಕ್ಕೆ ಏರುವ ನಿರೀಕ್ಷೆಯಿದೆ, ಇದು ಸ್ಪಷ್ಟ ಮುನ್ಸೂಚನೆಯಾಗಿದೆ. ಈ ಉದ್ದೇಶವನ್ನು ನಿಯಂತ್ರಿತ, ವಿಶ್ವಾಸಾರ್ಹ ಎಐ ಆಗಿ ಪರಿವರ್ತಿಸುವುದು ಅದರ ಕೆಳಗಿರುವ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ: ಪ್ರಸ್ತುತ, ಕೇವಲ ಶೇ. 18 ರಷ್ಟು ಭಾರತೀಯ ಸಂಸ್ಥೆಗಳು ಮಾತ್ರ ಹಳೆಯ ವಿಭಜಿತ ವ್ಯವಸ್ಥೆಗಳನ್ನು ಸಮಗ್ರ ವೇದಿಕೆಯೊಂದಿಗೆ ಬದಲಾಯಿಸಿವೆ ಮತ್ತು ಈ ಅಧ್ಯಯನದಲ್ಲಿ ಎಐ-ಸಶಕ್ತ ಕಾರ್ಯಪ್ರವಾಹಗಳು 100 ಕ್ಕೆ 41 ಅಂಕಗಳನ್ನು ಪಡೆದಿವೆ. ಪರಸ್ಪರ ಸಂಪರ್ಕ ಹೊಂದಿದ ಕಾರ್ಯಪ್ರವಾಹಗಳಿಲ್ಲದೆ, ಎಐ ಅನ್ನು ಮೇಲ್ವಿಚಾರಣೆ ಮಾಡಲು, ಲೆಕ್ಕಪರಿಶೋಧಿಸಲು ಅಥವಾ ನಿಯಂತ್ರಿಸಲು ಯಾವುದೇ ಏಕೀಕೃತ ವ್ಯವಸ್ಥೆ ಇರುವುದಿಲ್ಲ.

ಭಾರತೀಯ ಉದ್ಯಮಗಳು ಬಲಪಡಿಸಲು ಶ್ರಮಿಸುತ್ತಿರುವ ಕೆಲವು ಅಡಿಪಾಯಗಳು:

  • ಶೇ. 74 ರಷ್ಟು ಸಂಸ್ಥೆಗಳು ಡೇಟಾ ನಿಖರತೆ, ಲಭ್ಯತೆ ಮತ್ತು ನಿರ್ವಹಣೆಯನ್ನು ಎಐಗಾಗಿ ಅತ್ಯಂತ ಬಲಪಡಿಸಬೇಕಾದ ಕ್ಷೇತ್ರವೆಂದು ಗುರುತಿಸಿವೆ
  • ಶೇ. 56 ರಷ್ಟು ಸಂಸ್ಥೆಗಳು ಹಳೆಯ ವ್ಯವಸ್ಥೆಗಳ ಏಕೀಕರಣವನ್ನು ಬೆಟ್ಟು ಮಾಡಿವೆ.

ಇದು ಭಾರತದ ಸಮಗ್ರ ಉದ್ಯಮ ಕ್ಷೇತ್ರದಲ್ಲಿ ಎದುರಾಗಿರುವ ಸಾಮಾನ್ಯ ಸವಾಲಾಗಿದೆ - ಘಾತೀಯ ಬೆಳವಣಿಗೆಗಾಗಿ ಎಐ ಅನ್ನು ವಿಸ್ತರಿಸುತ್ತಿರುವ ಡಿಜಿಟಲ್-ಸ್ಥಳೀಯ ವ್ಯವಹಾರಗಳಿಂದ ಹಿಡಿದು, ಸಂಕೀರ್ಣ ಮತ್ತು ಪ್ರತ್ಯೇಕ ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸುತ್ತಿರುವ ಸುಸ್ಥಾಪಿತ ಉದ್ಯಮಗಳವರೆಗೆ ಎಲ್ಲರಿಗೂ ಇದು ಅನ್ವಯಿಸುತ್ತದೆ. ಎರಡೂ ಸಹ ಒಂದೇ ರೀತಿಯ ಆಪರೇಟಿಂಗ್ ವ್ಯವಸ್ಥೆಯನ್ನು ನಿರ್ಮಿಸುತ್ತಿವೆ ಮತ್ತು ಇದನ್ನು ಸರಿಯಾಗಿ ರೂಪಿಸುವುದರಿಂದ ಎರಡಕ್ಕೂ ಲಾಭವಿದೆ. ಈ ಅಂತರಗಳನ್ನು ಕಡಿಮೆ ಮಾಡುವುದೇ ಭಾರತದ ಒಟ್ಟಾರೆ ಎಐ ಆಡಳಿತದ ಸ್ಕೋರ್ ಅನ್ನು (ಪ್ರಸ್ತುತ 100 ಕ್ಕೆ 55) ಜಾಗತಿಕ ಎಐ ನಾಯಕರ ಮಟ್ಟಕ್ಕೆ ಕೊಂಡೊಯ್ಯುತ್ತದೆ.

ಸಂಶೋಧನೆ ಕುರಿತ ತಮ್ಮ ಅಭಿಪ್ರಾಯ ತಿಳಿಸಿದ ಡೆಲಾಯ್ಟ್ ಇಂಡಿಯಾದ ಪಾಲುದಾರ ಹಾಗೂ ಮುಖ್ಯ ಕಾರ್ಯತಂತ್ರ ಮತ್ತು ನಾವೀನ್ಯತಾ ಅಧಿಕಾರಿ ಅಶ್ವಿನ್ ವೆಲ್ಲೋಡಿ ಅವರು , “ಭಾರತದಲ್ಲಿ ಎಐ ಪ್ರಬುದ್ಧತೆಯು ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ.

ಸಂಸ್ಥೆಗಳು ತಮ್ಮ ಉದ್ದಿಮೆ ಯಾದ್ಯಂತ ಎಐ ಅಳವಡಿಕೆ ಹೆಚ್ಚಿಸುತ್ತಿದ್ದಂತೆ, ಇದರ ಅವಕಾಶಗಳು ವೈಯಕ್ತಿಕ ಬಳಕೆ ಯನ್ನು ಮೀರಿ ಕಾರ್ಯಪ್ರವಾಹಗಳು, ನಿರ್ಧಾರ ಕೈಗೊಳ್ಳುವಿಕೆ ಮತ್ತು ಕಾರ್ಯಾಚರಣಾ ಮಾದರಿ ಗಳನ್ನು ಮರುರೂಪಿಸುವತ್ತ ಸಾಗುತ್ತಿವೆ. ಅದಕ್ಕೆ ಎಐ ವ್ಯವಸ್ಥೆಯನ್ನು ಸುಲಭವಾಗಿ ವಿಸ್ತರಿಸಲು ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ಅಗತ್ಯವಿರುವ ಮೂಲ ಬುನಾದಿಗಳಿಗೂ ಸಮಾನ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಮುಖ್ಯವಾಗಿ ದತ್ತಾಂಶ ನಿರ್ವಹಣೆ, ಸೂಕ್ತ ಪ್ರತಿಭೆಗಳ ಲಭ್ಯತೆ, ಆಡಳಿತಾತ್ಮಕ ಚೌಕಟ್ಟು ಹಾಗೂ ಪಾರದರ್ಶಕ ಹೊಣೆಗಾರಿಕೆಯನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬೇಕಾಗಿದೆ. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ಮತ್ತಷ್ಟು ಸಂಕೀರ್ಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದ್ದು, ಗರಿಷ್ಠ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸಲು ಆರಂಭಿಸಲಿದೆ. ಈ ಹಂತದಲ್ಲಿ ಏಜೆಂಟಿಕ್ ಎಐ ಈ ಮಹತ್ವದ ಬದಲಾವಣೆಯ ವೇಗವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಹೀಗಾಗಿ ಎಐ ಎಲ್ಲಿ ಕಾರ್ಯನಿರ್ವಹಿಸುತ್ತದೆ, ಮಾನವನ ವಿವೇಚನೆ ಎಲ್ಲಿ ಗರಿಷ್ಠ ಮೌಲ್ಯವನ್ನು ನೀಡುತ್ತದೆ ಮತ್ತು ಇವೆರಡೂ ಹೇಗೆ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದರ ಕುರಿತು ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡುವ ಸಂಸ್ಥೆಗಳು ಮಾತ್ರವೇ ಸುಸ್ಥಿರ ಮೌಲ್ಯವನ್ನು ಸೃಷ್ಟಿಸಬಲ್ಲವು. ಅಂತಿಮವಾಗಿ, ಎಐ ಪ್ರಬುದ್ಧತೆಯು ಒಂದು ಸಂಸ್ಥೆಯು ಎಷ್ಟು ವಿಭಿನ್ನವಾಗಿ ಕೆಲಸ ಮಾಡುತ್ತದೆ, ನಿರ್ಧರಿಸುತ್ತದೆ ಮತ್ತು ಮೌಲ್ಯವನ್ನು ಸೃಷ್ಟಿಸುತ್ತದೆ ಎಂಬುದರಲ್ಲಿ ಗೋಚರಿಸುತ್ತದೆ” ಎಂದು ಹೇಳಿದರು.

ಪ್ರತಿಫಲಗಳು ನೈಜವಾಗಿವೆ - ಮತ್ತು ಎಪಿಎಸಿ ಮುಂಚೂಣಿ ರಾಷ್ಟ್ರಗಳಿಗಿಂತ ಭಾರತ 23 ಅಂಕಗಳಷ್ಟು ಹಿಂದಿದೆ

ಇದರ ಪ್ರತಿಫಲಗಳು ಈಗಾಗಲೇ ಗೋಚರಿಸುತ್ತಿವೆ. ಪರಸ್ಪರ ಸಂಪರ್ಕಿತ ವ್ಯವಸ್ಥೆಗಳು, ವಿಶ್ವಾಸಾರ್ಹ ಡೇಟಾ, ಬಲವಾದ ಆಡಳಿತ ಮತ್ತು ಉದ್ಯಮ-ವ್ಯಾಪಿ ಕಾರ್ಯಪ್ರವಾಹಗಳನ್ನು ನಿರ್ಮಿಸಿದ ಎಪಿಎಸಿ ಮುಂಚೂಣಿ ಸಂಸ್ಥೆಗಳು ಇಂದು ಎಐ ಮೇಲೆ ಶೇ. 149 ರಷ್ಟು ಹೂಡಿಕೆಯ ಮೇಲಿನ ಆದಾಯವನ್ನು (ಆರ್ ಓ ಐ) ಸಾಧಿಸುತ್ತಿವೆ - ಇದು ಎರಡು ವರ್ಷಗಳಲ್ಲಿ ಶೇ. 181 ಕ್ಕೆ ತಲುಪುವ ನಿರೀಕ್ಷೆಯಿದೆ. ಅವು ತಮ್ಮ ಸಹವರ್ತಿ ಸಂಸ್ಥೆಗಳಿಗಿಂತ ಆರು ಪಟ್ಟು ಹೆಚ್ಚು ಉತ್ಪಾದಕತೆಯನ್ನು ಹೊಂದಿವೆ ಮತ್ತು ಎಐ ಆಡಳಿತದಲ್ಲಿ ಭಾರತದ 55/100 ಸ್ಕೋರ್‌ಗೆ ವಿರುದ್ಧವಾಗಿ 78/100 ಅಂಕಗಳನ್ನು ಗಳಿಸಿವೆ.

ಈ ಕುರಿತು ಕುಲ್ಮೀತ್ ಬಾವಾ ಅವರು, "ಭಾರತ ಮತ್ತು ಜಾಗತಿಕ ಎಐ ನಾಯಕರ ನಡುವಿನ ಈ 23 ಅಂಶಗಳ ಅಂತರವು ಹಿಂದೆ ಬಿದ್ದಿರುವ ಕಥೆಯಲ್ಲ, ಬದಲಿಗೆ ಇದೊಂದು ದಾರಿದೀಪ. ಆಡಳಿತದ ಚೌಕಟ್ಟನ್ನು ಈಗಲೇ ನಿರ್ಮಿಸಿ, ನಿಮ್ಮ ಡೇಟಾವನ್ನು ಸಂಪರ್ಕಿಸಿ, ಮತ್ತು ವ್ಯಾಪಾರವನ್ನು ನಿಜವಾಗಿ ಮುನ್ನಡೆಸುವ ಕೆಲಸಗಳನ್ನು ಎಐಗೆ ವಹಿಸಿ. ಮುಂದಿನ 12 ತಿಂಗಳುಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಉದ್ಯಮಗಳು ಭಾರತದ ಎಐ ದಶಕವನ್ನು ನಿರ್ಧರಿಸಲಿವೆ" ಎನ್ನುತ್ತಾರೆ.

ಸರ್ವಿಸ್‌ನೌ ಎಂಟರ್‌ಪ್ರೈಸ್ ಎಐ ಮೆಚ್ಯೂರಿಟಿ ಇಂಡೆಕ್ಸ್ 2026 ಸಮೀಕ್ಷೆಯ ಸಂಪೂರ್ಣ ಸಂಶೋ ಧನಾ ವರದಿ ಮತ್ತು ಭಾರತೀಯ ಉದ್ಯಮಗಳು ತಮ್ಮ ಎಐ ತಳಹದಿಯನ್ನು ಹೇಗೆ ರೂಪಿಸಿಕೊಳ್ಳು ತ್ತಿವೆ ಎಂಬ ಸಮಗ್ರ ವಿವರಗಳನ್ನು ತಿಳಿಯಲು ಸಂಸ್ಥೆಯ ಅಧಿಕೃತ ವರದಿಯನ್ನು ವೀಕ್ಷಿಸಬಹು ದಾಗಿದೆ.