ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಜೆನ್-ಜೀ ಪೀಳಿಗೆಯ ಪ್ರವಾಸ ಸಂಸ್ಕೃತಿಯನ್ನು ಸಂಗೀತೋತ್ಸವಗಳು ಹೇಗೆ ಬದಲಿಸುತ್ತಿವೆ ಎಂದು ಬಹಿರಂಗಗೊಳಿಸಿದ ಏರ್‌ಬಿಎನ್‌ಬಿ ವರದಿ

ಪ್ರತಿಷ್ಠಿತ ಏರ್‌ಬಿಎನ್‌ಬಿ ಸಂಸ್ಥೆಯು ತನ್ನ ಹೊಸ 'ಅನುಭವ ಕೇಂದ್ರಿತ ಪ್ರವಾಸೋದ್ಯಮ ಒಳನೋಟಗಳು' ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಜೆನ್-ಜೀ ಪೀಳಿಗೆಯು ಲೈವ್ ಕಾನ್ಸರ್ಟ್‌ಗಳು ಮತ್ತು ಮ್ಯೂಸಿಕ್ ಫೆಸ್ಟಿವಲ್ ಗಳನ್ನು ಗಮನದಲ್ಲಿಟ್ಟು ಕೊಂಡು ತಮ್ಮ ಪ್ರವಾಸಗಳನ್ನು ಹೇಗೆ ಯೋಜಿಸುತ್ತಿದ್ದಾರೆ ಎಂದು ತಿಳಿಸಿದೆ.

'ಅನುಭವ ಕೇಂದ್ರಿತ ಪ್ರವಾಸೋದ್ಯಮ ಒಳನೋಟಗಳು' ಎಂಬ ವರದಿ ಬಿಡುಗಡೆ

-

Ashok Nayak
Ashok Nayak Jan 7, 2026 11:38 AM

62% ರಷ್ಟು ಭಾರತದ ಜೆನ್-ಜೀ ಯುವಕರು 2026ರಲ್ಲಿ ಕಾನ್ಸರ್ಟ್ ಗಳು ಮತ್ತು ಫೆಸ್ಟಿವಲ್‌ಗಳಿಗಾಗಿ ಪ್ರವಾಸ ಯೋಜನೆ ಹಾಕಿಕೊಳ್ಳುತ್ತಿದ್ದಾರೆ.

● ಸಂಗೀತದ ಕಾರಣದಿಂದಾಗಿ 76% ರಷ್ಟು ಯುವಕರು ಮೊದಲ ಬಾರಿಗೆ ಹೊಸ ನಗರಗಳಿಗೆ ಭೇಟಿ ನೀಡಿದ್ದಾರೆ.

● ಕಾನ್ಸರ್ಟ್ ಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, 53% ರಷ್ಟು ಜನರು ಕಾರ್ಯಕ್ರಮ ಮುಗಿದ ನಂತರವೂ ಅಲ್ಲಿಯೇ ತಂಗಿ ಆ ನಗರವನ್ನು ಸುತ್ತಾಡುತ್ತಾರೆ.

ಪ್ರತಿಷ್ಠಿತ ಏರ್‌ಬಿಎನ್‌ಬಿ ಸಂಸ್ಥೆಯು ತನ್ನ ಹೊಸ 'ಅನುಭವ ಕೇಂದ್ರಿತ ಪ್ರವಾಸೋದ್ಯಮ ಒಳನೋಟಗಳು' ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಜೆನ್-ಜೀ ಪೀಳಿಗೆಯು ಲೈವ್ ಕಾನ್ಸರ್ಟ್‌ಗಳು ಮತ್ತು ಮ್ಯೂಸಿಕ್ ಫೆಸ್ಟಿವಲ್ ಗಳನ್ನು ಗಮನದಲ್ಲಿಟ್ಟು ಕೊಂಡು ತಮ್ಮ ಪ್ರವಾಸಗಳನ್ನು ಹೇಗೆ ಯೋಜಿಸುತ್ತಿದ್ದಾರೆ ಎಂದು ತಿಳಿಸಿದೆ. ಈ ಮೂಲಕ ಸಂಗೀತೋತ್ಸವಗಳು ಯುವ ಭಾರತೀಯರ ಪ್ರವಾಸ ಸಂಸ್ಕೃತಿ ಯನ್ನು ಹೇಗೆ ರೂಪಿಸುತ್ತಿವೆ ಎಂಬುದನ್ನು ಸಾರಿದೆ.

ಜೆನ್ ಜೀ ಪೀಳಿಗೆ ಈ ಸಂಗೀತ ಕಾರ್ಯಕ್ರಮಗಳನ್ನು, ಹೊಸ ನಗರಗಳನ್ನು ಅನ್ವೇಷಿಸಲು, ಹೆಚ್ಚು ದಿನ ವಾಸ್ತವ್ಯ ಮಾಡಲು ಮತ್ತು ಮುಖ್ಯ ಕಾರ್ಯಕ್ರಮದ ಆಚೆಗೆ ಅಲ್ಲಿನ ಸ್ಥಳೀಯ ಪ್ರದೇಶಗಳನ್ನು ಅನ್ವೇಷಿಸಲು ಒಂದು ದಾರಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಈ ಪೀಳಿಗೆಯ ಪ್ರವಾಸದ ನಿರ್ಧಾರಗಳು ಕ್ಯಾಲೆಂಡರ್ ದಿನಾಂಕಗಳಿಗಿಂತ ಹೆಚ್ಚಾಗಿ ಸಂಸ್ಕೃತಿಯಿಂದ ಪ್ರೇರಿತವಾಗಿವೆ. ಲೈವ್ ಕಾರ್ಯಕ್ರಮಗಳು ಮತ್ತು ವಿಶಿಷ್ಟ ಜೀವನಾನು ಭವಗಳು ಅವರು ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಹೋಗುತ್ತಾರೆ ಮತ್ತು ಆ ಸ್ಥಳದಲ್ಲಿ ಅವರು ಎಷ್ಟು ತೀವ್ರವಾಗಿ ತೊಡಗಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರುತ್ತಿವೆ.

ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ

ಯುವ ಭಾರತದ ಪ್ರವಾಸ ಮತ್ತು ಅನ್ವೇಷಣೆಯ ಕ್ರಮವನ್ನು ಬದಲಿಸುವಲ್ಲಿ ಸಂಗೀತದ ಪಾತ್ರ

2026ರಲ್ಲಿ ಪ್ರವಾಸದ ಕ್ರಮವನ್ನು ರೂಪಿಸುವಲ್ಲಿ ಸಂಗೀತವು ಬಹಳ ದೊಡ್ಡ ಪಾತ್ರವನ್ನು ವಹಿಸಲಿದೆ. 62% ಜೆನ್-ಜೀ ಮಂದಿ ಕಾನ್ಸರ್ಟ್ ಮತ್ತು ಸಂಗೀತೋತ್ಸವಗಳ ಸುತ್ತ ತಮ್ಮ ಪ್ರವಾಸಗಳನ್ನು ಯೋಜಿಸುತ್ತಿದ್ದಾರೆ. ಮೂವರಲ್ಲಿ ಒಬ್ಬರಿಗಿಂತ ಜಾಸ್ತಿ (36%) ಮಂದಿ ಈ ಸಂಗೀತ ಕಾರ್ಯಕ್ರಮಗಳ ಬಗ್ಗೆ ಕೇಳಿದ ತಕ್ಷಣ ತಮ್ಮ ಪ್ರವಾಸವನ್ನು ಯೋಜಿಸಲು ಪ್ರಾರಂಭಿಸುತ್ತಾರೆ.

ಋತುಮಾನಗಳು, ರಜೆಗಳು ಅಥವಾ ಸುದೀರ್ಘ ವಾರಾಂತ್ಯಗಳ ಕಾರಣಕ್ಕೆ ಪ್ರವಾಸ ಹೋಗುವ ಸಾಂಪ್ರದಾಯಿಕ ಮಾದರಿಗಳು ಬದಲಾಗಿ, ಯುವ ಪ್ರವಾಸಿಗರು ಅನುಭವಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹೊಸ ತಾಣವನ್ನು ಅನ್ವೇಷಿಸುವ ಅವಕಾಶ ಮತ್ತು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಸಾಂಸ್ಕೃತಿಕ ಕ್ಷಣದ ಭಾಗವಾಗುವ ಹುಮ್ಮಸ್ಸು ಈ ಬದಲಾವಣೆಗೆ ಮೂಲಕ ಕಾರಣವಾಗಿದೆ.

ಯುವ ಪೀಳಿಗೆಗೆ ಸಂಗೀತವು ಎಷ್ಟು ಮುಖ್ಯ ಎಂಬುದಕ್ಕೆ ಒಂದು ಸ್ಪಷ್ಟ ಮಾಹಿತಿ ಕೊಡು ವುದಾದರೆ, ಅವರು ತಮ್ಮ ನೆಚ್ಚಿನ ಕಲಾವಿದರ ಪ್ರದರ್ಶನವನ್ನು ಲೈವ್ ಆಗಿ ವೀಕ್ಷಿಸಲು ಸಾಗರಗಳನ್ನು ಕೂಡ ದಾಟಲು ಸಿದ್ಧರಿದ್ದಾರೆ. 40% ಕ್ಕಿಂತ ಹೆಚ್ಚು ಜನರು ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗಾಗಿ ಪ್ರಯಾಣಿಸಲು ಸಿದ್ಧರಿದ್ದಾರೆ. ಇವರ ಆಯ್ಕೆಯಲ್ಲಿ ಅಮೆರಿಕಾ (48%), ಯುರೋಪ್ (45%) ಮತ್ತು ಏಷ್ಯಾದ ಉಳಿದ ಭಾಗಗಳು (46%) ಪ್ರಮುಖ ಸ್ಥಾನ ಪಡೆದಿವೆ.

ಕಾನ್ಸರ್ಟ್ ಆಧರಿತ ಪ್ರವಾಸವು ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮವನ್ನು ಬೆಳೆಸುತ್ತದೆ

ಕಾನ್ಸರ್ಟ್ ಗಳು ಮತ್ತು ಸಂಗೀತೋತ್ಸವಗಳು ಪ್ರಮುಖ ಆಕರ್ಷಣೆಯಾಗಿದ್ದರೂ, ಅವುಗಳ ಪ್ರಭಾವ ಕಾರ್ಯಕ್ರಮ ನಡೆಯುವ ಸ್ಥಳದ ಆಚೆಗೂ ಬೀಳುತ್ತದೆ. 65% ಜೆನ್-ಜೀ ಪ್ರವಾಸಿ ಗರು ಕಾರ್ಯಕ್ರಮ ನಡೆಯುವ ಸ್ಥಳಗಳ ಹತ್ತಿರ ತಂಗಲು ಇಷ್ಟಪಡುತ್ತಾರೆ, ನಂತರ ಆ ಪ್ರದೇಶವನ್ನು ಅನ್ವೇಷಿಸಲು ಆಸೆ ಪಡುತ್ತಾರೆ.

ಅರ್ಧಕ್ಕಿಂತ ಹೆಚ್ಚು (53%) ಜನರು ಸ್ಥಳೀಯ ಕೆಫೆಗಳು, ನೈಟ್ ಲೈಫ್, ಸಾಂಸ್ಕೃತಿಕ ಸ್ಥಳಗಳು ಮತ್ತು ಅಲ್ಲಿನ ಪ್ರದೇಶಗಳಲ್ಲಿ ಸಮಯ ಮತ್ತು ಹಣವನ್ನು ಕಳೆಯುವ ಮೂಲಕ ತಮ್ಮ ಪ್ರವಾಸವನ್ನು ಮುಂದುವರಿಸುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಗಳಿಗೆ ಮತ್ತು ಸಮು ದಾಯಗಳಿಗೆ ನೆರವು ಒದಗುವುದಲ್ಲದೆ ಸ್ಥಳೀಯ ಆರ್ಥಿಕತೆ ಬೆಳೆಯುತ್ತದೆ. ಅದರಲ್ಲೂ 70% ರಷ್ಟು ಜನರು ಸ್ನೇಹಿತರು ಅಥವಾ ಗುಂಪುಗಳೊಂದಿಗೆ ಕಾನ್ಸರ್ಟ್‌ಗಳಿಗೆ ಹಾಜರಾಗುವು ದರಿಂದ ಈ ಬೆಳವಣಿಗೆಯ ಪ್ರಮಾಣ ಬಹಳ ದೊಡ್ಡದಾಗಿರುತ್ತದೆ.

ಹತ್ತರಲ್ಲಿ ಆರು ಯುವ ಪ್ರವಾಸಿಗರು ತಮ್ಮ ಮಾಸಿಕ ಆದಾಯದ 21-40% ರಷ್ಟನ್ನು ಸಂಗೀತ ಪ್ರಧಾನ ಪ್ರವಾಸ ಮತ್ತು ಅನುಭವಗಳಿಗಾಗಿ ಮೀಸಲಿಡಲು ಸಿದ್ಧರಿದ್ದಾರೆ ಮತ್ತು ಹತ್ತರಲ್ಲಿ ಒಬ್ಬರು ತಮ್ಮ ಮಾಸಿಕ ಆದಾಯದ ಅರ್ಧದಷ್ಟು ಖರ್ಚು ಮಾಡಲು ಸಿದ್ಧರಿ ದ್ದಾರೆ. ಈ ಸಮೀಕ್ಷಾ ವರದಿಯಲ್ಲಿ ಪ್ರತಿಕ್ರಿಯಿಸಿದವರು ತಮ್ಮ ಇತ್ತೀಚಿನ ಸಂಗೀತ ಕಾರ್ಯ ಕ್ರಮ ಕೇಂದ್ರಿತ ಪ್ರವಾಸಕ್ಕೆ ಸರಾಸರಿಯಾಗಿ ₹51,000 ಖರ್ಚು ಮಾಡಿದ್ದಾರೆ.

ಕಾನ್ಸರ್ಟ್ ಟೂರಿಸಂ ಪ್ರವಾಸೋದ್ಯಮವನ್ನು ಬೆಳೆಸಲು ಒಂದು ಪ್ರಮುಖ ಮಾರ್ಗವಾ ಗಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ 76% ರಷ್ಟು ಜನರು ಕಾನ್ಸರ್ಟ್ ಅಥವಾ ಸಂಗೀತ ಉತ್ಸವದ ಕಾರಣದಿಂದಾಗಿ ಮೊದಲ ಬಾರಿಗೆ ಒಂದು ಹೊಸ ನಗರಕ್ಕೆ ಭೇಟಿ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದು ಲೈವ್ ಕಾರ್ಯಕ್ರಮಗಳು ಹೇಗೆ ಯುವ ಭಾರತೀಯರಿಗೆ ಹೊಸ ನಗರಗಳು ಮತ್ತು ಸಾಂಸ್ಕೃತಿಕ ಪದ್ಧತಿಗಳನ್ನು ಪರಿಚಯಿಸುತ್ತಿವೆ ಎಂಬುದನ್ನು ತೋರಿಸು ತ್ತದೆ.

ಈ ಕುರಿತು ಮಾತನಾಡಿರುವ ಏರ್‌ಬಿಎನ್‌ಬಿಯ ಭಾರತ ಮತ್ತು ಆಗ್ನೇಯ ಏಷ್ಯಾದ ಕಂಟ್ರಿ ಹೆಡ್ ಅಮನ್‌ಪ್ರೀತ್ ಸಿಂಗ್ ಬಜಾಜ್ ಅವರು, "ಕಾನ್ಸರ್ಟ್ ಗಳು ಮತ್ತು ಸಂಗೀತ ಉತ್ಸವಗಳಲ್ಲಿ ಆಸಕ್ತಿ ಬೆಳೆಯುತ್ತಿರುವುದರಿಂದ ಹೊಸ ರೀತಿಯ ಪ್ರವಾಸ ಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಈ ವಿಭಾಗವು ಸಂಗೀತ ಕಾರ್ಯಕ್ರಮಗಳನ್ನು ಹೊಸ ತಾಣಗಳನ್ನು ಅನ್ವೇಷಿಸುವ ಮಾರ್ಗವೆಂದು ಕಾಣುತ್ತಾರೆ. ಏರ್‌ಬಿಎನ್‌ಬಿಯಲ್ಲಿ ನಾವು ಕಾನ್ಸರ್ಟ್ ಟೂರಿಸಂ ಯುವ ಪ್ರವಾಸಿಗರ ಹೊಸ ನಗರಗಳನ್ನು ನೋಡುವ ಆಸಕ್ತಿಯನ್ನು ಹೇಗೆ ರೂಪಿಸುತ್ತಿದೆ ಮತ್ತು ಇದು ಉಂಟುಮಾಡುವ ಅರ್ಥಪೂರ್ಣ ಪ್ರಭಾವವನ್ನು ಗಮನಿಸು ತ್ತಿದ್ದೇವೆ. ಈ ಹೊಸ ಪ್ರವಾಸೋದ್ಯಮ ವಿಭಾಗವು ಪ್ರವಾಸಿಗರ ನಡವಳಿಕೆಯನ್ನು ಮರು ರೂಪಿಸುತ್ತಿದೆ. ಈ ಟ್ರೆಂಡ್ ಗುಂಪುಗಳು ಒಟ್ಟಿಗೆ ಸಮಯ ಕಳೆಯಲು, ಆರಾಮವಾಗಿ ಸೇರಲು ಮತ್ತು ಸ್ಮರಣೀಯ ಅನುಭವಗಳನ್ನು ರಚಿಸಲು ಅನುವು ಮಾಡಿಕೊಡುವ ವಾಸ್ತವ್ಯಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸುತ್ತಿದ್ದು, ಇದು ಏರ್‌ಬಿಎನ್‌ಬಿ ನೀಡುವ ಸೇವೆಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ" ಎಂದರು.

ಜೀವನಶೈಲಿ ಆಯ್ಕೆಯಾದ ಕಾನ್ಸರ್ಟ್ ಟೂರಿಸಂ

ಅಪರೂಪಕ್ಕೊಮ್ಮೆ ಮಾಡುತ್ತಿದ್ದ ಇಂತಹ ಪ್ರವಾಸಗಳು ಈಗ ಯುವ ಭಾರತದ ಜೀವನ ಶೈಲಿಯ ಭಾಗವಾಗಿದೆ. ಕಾನ್ಸರ್ಟ್ ಆಧರಿತ ಪ್ರವಾಸಗಳಿಗೆಂದೇ ಬಜೆಟ್ ನಿಗದಿಪಡಿಸ ಲಾಗುತ್ತಿದೆ, ಮುಂಚಿತವಾಗಿ ಯೋಜಿಸಲಾಗುತ್ತಿದೆ ಮತ್ತು ಅನುಭವ ಹಾಗೂ ಅನ್ವೇಷಣೆ ಎರಡನ್ನೂ ದೊಡ್ಡದಾಗಿಸಲು ಪ್ರವಾಸ ವಿನ್ಯಾಸಗೊಳಿಸಲಾಗುತ್ತಿದೆ.

'ಲೋಲಪಲೂಜಾ ಇಂಡಿಯಾ'ದಂತಹ ದೊಡ್ಡ ಮಟ್ಟದ ಸಂಗೀತೋತ್ಸವಗಳು ಈ ಬದಲಾವಣೆಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು, ಕಾರ್ಯಕ್ರಮದ ಈ ಹಿಂದಿನ ಆವೃತ್ತಿ ಗಳಿಗೆ ಹತ್ತಾರು ಸಾವಿರ ಅಭಿಮಾನಿಗಳು ಮುಂಬೈಗೆ ಪ್ರಯಾಣಿಸಿದ್ದಾರೆ. 62% ರಷ್ಟು ಭಾಗವಹಿಸುವವರು ಈ ಉತ್ಸವದ ವಾತಾವರಣವು ತಮ್ಮನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತದೆ ಎಂದು ಹೇಳುತ್ತಾರೆ ಮತ್ತು 98% ರಷ್ಟು ಜನರು ಮತ್ತೆ ಬರುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ, ಇದು ಸಂಗೀತ ಕೇಂದ್ರಿತ ಪ್ರವಾಸವು ಹೇಗೆ ವೇಗವಾಗಿ ಮುಖ್ಯವಾಹಿನಿ ಯ ಸಾಂಸ್ಕೃತಿಕ ನಡವಳಿಕೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಇದಕ್ಕೆ ಪೂರಕವಾಗಿ ಏರ್‌ಬಿಎನ್‌ಬಿ ಸಂಸ್ಥೆಯು ಲೋಲಪಲೂಜಾ ಇಂಡಿಯಾ ಜೊತೆಗೆ ಇದೇ ಮೊದಲ ಬಾರಿಗೆ ಜಾಗತಿಕ ಲೈವ್ ಮ್ಯೂಸಿಕ್ ಕಾರ್ಯಕ್ರಮದ ಪಾಲುದಾರಿಕೆ ಮಾಡಿ ಕೊಂಡಿದೆ. ಅದರ ಭಾಗವಾಗಿ ಜನವರಿ 24-25 ರಂದು ಮುಂಬೈನ ಮಹಾಲಕ್ಷ್ಮಿ ರೇಸ್‌ ಕೋರ್ಸ್‌ನಲ್ಲಿ ನಡೆಯಲಿರುವ 2026ರ ಆವೃತ್ತಿಯಲ್ಲಿ ಭಾಗವಹಿಸುವ ಅತಿಥಿಗಳಿಗೆ ವಿಶಿಷ್ಟ ವಾದ ಅನುಭವಗಳನ್ನು ಒದಗಿಸುವ ಮತ್ತು ಅವರು ಇಷ್ಟಪಡುವ ಸಂಗೀತಕ್ಕೆ ಮತ್ತಷ್ಟು ಹತ್ತಿರವಾಗಿಸುವ ವಾಸ್ತವ್ಯ ಸೌಲಭ್ಯಗಳನ್ನು ನೀಡುತ್ತದೆ.

ಲೈವ್ ಕಾರ್ಯಕ್ರಮಗಳು ಯುವ ಭಾರತೀಯರು ಹೊಸ ನಗರಗಳಿಗೆ ಭೇಟಿ ನೀಡುವುದನ್ನು ಹೆಚ್ಚುಸುತ್ತಿರುವುದರಿಂದ, ಏರ್‌ಬಿಎನ್‌ಬಿಯ ಅನುಭವ ಕೇಂದ್ರೀತ ಪ್ರವಾಸೋದ್ಯಮ ಒಳನೋಟಗಳು ಎಂಬ ವರದಿಯು ಭವಿಷ್ಯದಲ್ಲಿ ಸಂಸ್ಕೃತಿ, ಸಮಾಜ ಮತ್ತು ಸಂಪರ್ಕ ಈ ಮೂರು ಪ್ರವಾಸದ ಯೋಜನೆಯ ಕೇಂದ್ರಬಿಂದುವಾಗಿರಲಿದೆ ಎಂಬುದನ್ನು ಸೂಚಿಸುತ್ತದೆ.