ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏರ್‌ ಟೆಲ್ ಸಾಧನೆ: 650 ಮಿಲಿಯನ್ ಗ್ರಾಹಕರ ಮೈಲಿಗಲ್ಲು ದಾಟಿದ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ

368 ಮಿಲಿಯನ್‌ ಗಿಂತಲೂ ಹೆಚ್ಚು ಮೊಬೈಲ್ ಗ್ರಾಹಕರಿಗೆ ಸೇವೆ ನೀಡುತ್ತಿರುವ ಏರ್‌ ಟೆಲ್, ಭಾರತದಲ್ಲಿ 5ಜಿ ಪ್ಲಸ್ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ. ಇದು ಇಂದು ಎಕ್ಸ್ ಸ್ಟ್ರೀಮ್ ಏರ್ ಫೈಬರ್ (ಎಫ್ ಡಬ್ಲ್ಯೂ ಎ) ಮತ್ತು ಸಂಯೋಜಿತ ಐಪಿಟಿವಿ ಸೇವೆಯನ್ನು ಒಳಗೊಂಡಿದ್ದು, ಒಂದು ಬಲಿಷ್ಠ ಡಿಜಿಟಲ್ ವಿಭಾಗವನ್ನು ಹೊಂದಿದೆ.

ಗ್ರಾಹಕ ಕೇಂದ್ರಿತ ಸೇವೆ ಮತ್ತು ವಿಶ್ವದರ್ಜೆಯ ಡಿಜಿಟಲ್ ನೆಟ್‌ ವರ್ಕ್ ಬೆಂಬಲ ದಿಂದ ಈ ಐತಿಹಾಸಿಕ ಸಾಧನೆ ಮಾಡಿದ ಭಾರತದ ಏಕೈಕ ಟೆಲಿಕಾಂ ಕಂಪನಿ.

ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಹಾಗೂ ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆ ಯಾದ ಭಾರ್ತಿ ಏರ್‌ ಟೆಲ್, 650 ಮಿಲಿಯನ್ ಗ್ರಾಹಕರ ಗಡಿಯನ್ನು ದಾಟುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಜಿಎಸ್ಎಂಎ ಇಂಟೆಲಿಜೆನ್ಸ್ ವರದಿಯ ಪ್ರಕಾರ, ಭಾರತ ಮತ್ತು ಆಫ್ರಿಕಾದಾದ್ಯಂತ ತನ್ನ ಕಾರ್ಯಾಚರಣೆಯನ್ನು ಹೊಂದಿರುವ ಭಾರ್ತಿ ಏರ್‌ಟೆಲ್, ಮೊಬೈಲ್ ಗ್ರಾಹಕರ ಸಂಖ್ಯೆ ಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.

ಈ ಸಾಧನೆಯ ಬಗ್ಗೆ ಮಾತನಾಡಿದ ಭಾರ್ತಿ ಏರ್‌ಟೆಲ್‌ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾದ ಗೋಪಾಲ್ ವಿಠ್ಠಲ್ ಅವರು, "650 ಮಿಲಿಯನ್ ಗ್ರಾಹಕರ ಮೈಲಿಗಲ್ಲನ್ನು ತಲುಪಿ ಜಾಗತಿಕವಾಗಿ ಎರಡನೇ ಅತಿದೊಡ್ಡ ಆಪರೇಟರ್ ಎನಿಸಿಕೊಂಡಿರುವುದು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಮ್ಮ ಗ್ರಾಹಕರಿಗೆ ಪ್ರತಿದಿನ ಇನ್ನೂ ಉತ್ತಮವಾದ ಸೇವೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.

ಮಾತು ಮುಂದುವರಿಸಿದ ಅರು, “ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡುವುದು ಮಾತ್ರವಲ್ಲದೆ, ಸುರಕ್ಷಿತವಾದ ನೆಟ್‌ ವರ್ಕ್ ಒದಗಿಸಲೆಂದೇ ನಾವು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ, ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿದಂತೆಲ್ಲಾ, ಹೊಸ ಆವಿಷ್ಕಾರ, ವಿಶ್ವಾಸಾರ್ಹತೆ ಮತ್ತು ಅನುಭವದ ಮಟ್ಟವನ್ನು ಹೆಚ್ಚಿಸಲು ಶ್ರಮಿಸುತ್ತೇವೆ. ಇದರಿಂದಾಗಿ ಗ್ರಾಹಕರ ಜೊತೆಗಿನ ಪ್ರತಿಯೊಂದು ಸಂವಹನವು ಅವರ ನಂಬಿಕೆಯನ್ನು ಗಳಿಸಲು ಮತ್ತು ಮೌಲ್ಯಯುತವಾದ ಸೇವೆಯನ್ನು ನೀಡಲು ನಮಗೆ ಸಿಗುವ ಒಂದು ಅವಕಾಶವಾಗಿದೆ” ಎಂದು ಹೇಳಿದರು.

ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಏರ್‌ ಟೆಲ್ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವುದು, ಜಾಗತಿಕ ಮಟ್ಟದಲ್ಲಿ ಅದರ ಸ್ಥಾನಮಾನ ನಿರಂತರವಾಗಿ ಸುಧಾರಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.

ಭಾರತ ಮತ್ತು ಆಫ್ರಿಕಾದಾದ್ಯಂತ ಕಂಪನಿಯ ಕಾರ್ಯಾಚರಿಸುತ್ತಿದ್ದು, ಸಂಸ್ಥೆಯು ಕಾರ್ಯನಿರ್ವಹಿಸುವ ಎಲ್ಲಾ ಮಾರುಕಟ್ಟೆಗಳಲ್ಲಿ ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಸೇವೆಗಳು ಮತ್ತು ಮೂಲಸೌಕರ್ಯ ಸೌಲಭ್ಯಗಳ ಬೆಂಬಲವನ್ನು ಹೊಂದಿದೆ.

  • ಭಾರತ
    • 368 ಮಿಲಿಯನ್‌ ಗಿಂತಲೂ ಹೆಚ್ಚು ಮೊಬೈಲ್ ಗ್ರಾಹಕರಿಗೆ ಸೇವೆ ನೀಡುತ್ತಿರುವ ಏರ್‌ ಟೆಲ್, ಭಾರತದಲ್ಲಿ 5ಜಿ ಪ್ಲಸ್ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ. ಇದು ಇಂದು ಎಕ್ಸ್ ಸ್ಟ್ರೀಮ್ ಏರ್ ಫೈಬರ್ (ಎಫ್ ಡಬ್ಲ್ಯೂ ಎ) ಮತ್ತು ಸಂಯೋಜಿತ ಐಪಿಟಿವಿ ಸೇವೆಯನ್ನು ಒಳಗೊಂಡಿದ್ದು, ಒಂದು ಬಲಿಷ್ಠ ಡಿಜಿಟಲ್ ವಿಭಾಗವನ್ನು ಹೊಂದಿದೆ. ಏರ್‌ ಟೆಲ್ ಈಗ 13 ಮಿಲಿಯನ್‌ ಗಿಂತಲೂ ಹೆಚ್ಚು ಮನೆಗಳಿಗೆ ಹೈ-ಸ್ಪೀಡ್ ಇಂಟರ್ ನೆಟ್ ಸೇವೆಗಳನ್ನು ಮತ್ತು 15 ಮಿಲಿಯನ್‌ ಗಿಂತಲೂ ಹೆಚ್ಚು ಮನೆಗಳಿಗೆ ಡಿಜಿಟಲ್ ಟಿವಿ (ಡಿಟಿಎಚ್) ಸೇವೆಗಳನ್ನು ಒದಗಿಸು ತ್ತಿದೆ. "ಗ್ರಾಹಕ ಕೇಂದ್ರಿತ" ಮಾದರಿ ಅನುಸರಿಸುತ್ತಿರುವ ಏರ್ ಟೆಲ್, ವಿಶ್ವದ ಮೊದಲ ನೆಟ್‌ ವರ್ಕ್ ಆಧಾರಿತ ಎಐ ಸ್ಪ್ಯಾಮ್ ಪ್ರೊಟೆಕ್ಷನ್ ಸೌಲಭ್ಯವನ್ನೂ ಒದಗಿಸುತ್ತಿದೆ.
    • ಏರ್‌ಟೆಲ್ ಬಿಸಿನೆಸ್ ವಾಣಿಜ್ಯ ಸಂಸ್ಥೆಗಳಿಗೆ ಅತ್ಯಗತ್ಯವಾದ ತಾಂತ್ರಿಕ ಉತ್ಪನ್ನ ಗಳನ್ನು ಒದಗಿಸುತ್ತದೆ. ಸುರಕ್ಷಿತ ಸಂಪರ್ಕದ ಜೊತೆಗೆ ಏರ್ ಟೆಲ್ ಐಕ್ಯೂ, ಸೈಬರ್ ಸೆಕ್ಯೂರಿಟಿ, ಎಸ್ ಡಿ ಡಬ್ಲ್ಯೂಎಎನ್, ಕ್ಲೌಡ್, ಮ್ಯಾನೇಜ್ಡ್ ಸರ್ವಿಸಸ್ ಮತ್ತು ಐಓಟಿ ಸೇವೆಗಳನ್ನು ಒಳಗೊಂಡಿದೆ. ಈ ಸೇವೆಗಳು 4,00,000 ಕಿಲೋಮೀಟರ್‌ ಗಳಿಗಿಂತಲೂ ಹೆಚ್ಚು ಉದ್ದದ ಸಮುದ್ರದಾಳದ ಫೈಬರ್ ನೆಟ್‌ ವರ್ಕ್ ಮತ್ತು ಎನ್ಎಕ್ಷ್ಟ್ರಾ ಪರಿಸರ ಸ್ನೇಹಿ ಡೇಟಾ ಸೆಂಟರ್‌ ಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ. ಇವು ದೇಶದ ಹೆಚ್ಚುತ್ತಿರುವ ಎಐ ಮತ್ತು ಡಿಜಿಟಲ್ ಕೆಲಸದ ಒತ್ತಡ ವನ್ನು ಸುಸ್ಥಿರವಾಗಿ ನಿಭಾಯಿಸುತ್ತವೆ.
    • ತನ್ನ ಡಿಜಿಟಲ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ಏರ್‌ ಟೆಲ್ ಇತ್ತೀಚೆಗೆ ಎನ್ ಬಿ ಎಫ್ ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆ) ಕ್ಷೇತ್ರಕ್ಕೆ ಪ್ರವೇಶಿಸುವು ದಾಗಿ ಘೋಷಿಸಿದೆ. ತನ್ನಲ್ಲಿರುವ ದತ್ತಾಂಶದ ಮಾಹಿತಿಗಳನ್ನು ಬಳಸಿಕೊಂಡು, ಏರ್‌ಟೆಲ್ ಆ್ಯಪ್ ಮೂಲಕ ಗ್ರಾಹಕರಿಗೆ ವೈಯಕ್ತಿಕ ಸಾಲ ಮತ್ತು ಹಣಕಾಸು ಉತ್ಪನ್ನಗಳನ್ನು ನೀಡಲು ಸಂಸ್ಥೆ ಮುಂದಾಗಿದೆ.
  • ಏರ್ ಟೆಲ್ ಆಫ್ರಿಕಾ
    • 14 ದೇಶಗಳಲ್ಲಿ 179 ಮಿಲಿಯನ್‌ ಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಏರ್‌ ಟೆಲ್ ಆಫ್ರಿಕಾ, ಮೊಬೈಲ್ ವಾಯ್ಸ್, ಹೈ-ಸ್ಪೀಡ್ ಡೇಟಾ ಮತ್ತು ಅಂತಾ ರಾಷ್ಟ್ರೀಯ ರೋಮಿಂಗ್ ಸೇವೆಗಳ ಮೂಲಕ ಪ್ರಮುಖ ಡಿಜಿಟಲ್ ಜೀವನಾಡಿ ಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ವಿಭಾಗದ ಪ್ರಮುಖ ಭಾಗವೆಂದರೆ ಏರ್‌ ಟೆಲ್ ಮನಿ. ಇದು 52 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಮಹತ್ವದ ಮೊಬೈಲ್ ಹಣಕಾಸು ವೇದಿಕೆಯಾಗಿದ್ದು, ಈವರೆಗೆ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಆಫ್ರಿಕಾ ಖಂಡದ ಲಕ್ಷಾಂತರ ಜನರಿಗೆ ಬ್ಯಾಂಕಿಂಗ್ ಮತ್ತು ತ್ವರಿತ ಪಾವತಿ ಸೌಲಭ್ಯಗಳನ್ನು ನೀಡುವ ಮೂಲಕ ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತಿದೆ.
  • ಜಾಗತಿಕ ಬಾಹ್ಯಾಕಾಶ ಮತ್ತು ಸಂಪರ್ಕ ವ್ಯವಸ್ಥೆ
    • ತನ್ನ ಪ್ರಾದೇಶಿಕ ಕೇಂದ್ರಗಳಾಚೆಗೂ ಡಿಜಿಟಲ್ ವ್ಯವಸ್ಥೆಯ ಕೊರತೆಯನ್ನು ಕಡಿಮೆ ಮಾಡಲು ಏರ್‌ ಟೆಲ್ ಶ್ರಮಿಸುತ್ತಿದೆ. ಯುಟೆಲ್ ಸ್ಯಾಟ್ ಒನ್ ವೆಬ್ ಮತ್ತು ಸ್ಪೇಸ್ ಎಕ್ಸ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿರುವ ಏರ್‌ ಟೆಲ್, ಲೋ ಅರ್ಥ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಸಮೂಹವನ್ನು ಬಳಸಿಕೊಂಡು ಅತ್ಯಂತ ದೂರದ ಸಮುದ್ರಯಾನ, ವಿಮಾನಯಾನ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೈ-ಸ್ಪೀಡ್ ಮತ್ತು ಕಡಿಮೆ ವಿಳಂಬದ ಬ್ರಾಡ್‌ ಬ್ಯಾಂಡ್ ಸೇವೆಗಳನ್ನು ತಲುಪಿಸುತ್ತಿದೆ.