ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏರ್‌ಟೆಲ್‌'ನಿಂದ ಅಂತಾರಾಷ್ಟ್ರೀಯ ರೋಮಿಂಗ್, ವೀಸಾ ಹಾಗೂ ಪ್ರವಾಸಿ ಸೌಲಭ್ಯಗಳ ಒದಗಿಸುವ ಟ್ರಾವೆಲ್ ವೀಕ್ ಘೋಷಣೆ

ಏರ್‌ಟೆಲ್‌'ನಿಂದ ಅಂತಾರಾಷ್ಟ್ರೀಯ ರೋಮಿಂಗ್, ವೀಸಾ ಹಾಗೂ ಪ್ರವಾಸಿ ಸೌಲಭ್ಯಗಳನ್ನು ಒದಗಿಸುವ ಟ್ರಾವೆಲ್ ವೀಕ್ ಘೋಷಣೆ ಹಬ್ಬದ ಸಂಭ್ರಮ ಹಾಗೂ ಚಳಿಗಾಲದ ಪ್ರವಾಸದ ಸೀಸನ್‌ಗೂ ಮುನ್ನವೇ ಪ್ರಮುಖ ಟೆಲಿಕಾಂ ಸಂಸ್ಥೆ ಏರ್‌ಟೆಲ್, ತನ್ನ ಗ್ರಾಹಕರಿಗಾಗಿ ವಿಶೇಷ ಏರ್‌ಟೆಲ್ ಟ್ರಾವೆಲ್ ವೀಕ್ ಅನ್ನು ಆರಂಭಿಸಿದೆ.

ಹಬ್ಬದ ಸಂಭ್ರಮ ಹಾಗೂ ಚಳಿಗಾಲದ ಪ್ರವಾಸದ ಸೀಸನ್‌ಗೂ ಮುನ್ನವೇ ಪ್ರಮುಖ ಟೆಲಿಕಾಂ ಸಂಸ್ಥೆ ಏರ್‌ಟೆಲ್, ತನ್ನ ಗ್ರಾಹಕರಿಗಾಗಿ ವಿಶೇಷ ಏರ್‌ಟೆಲ್ ಟ್ರಾವೆಲ್ ವೀಕ್ ಅನ್ನು ಆರಂಭಿಸಿದೆ.

ನ.19 ರಿಂದ ನ.25ರವರೆಗೆ ಏರ್‌ಟೆಲ್ ಆ್ಯಪ್ ನಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ಅಂತಾರಾಷ್ಟ್ರೀಯ ರೋಮಿಂಗ್, ವೀಸಾ ನೆರವು ಮತ್ತು ಫಾರೆಕ್ಸ್‌ ನಂತಹ ಪ್ರಮುಖ ಪ್ರವಾಸಿ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗುತ್ತಿದೆ. ಈ ಏರ್‌ಟೆಲ್ ಟ್ರಾವೆಲ್ ವೀಕ್ ನ ಪ್ರಮುಖ ಆಕರ್ಷಣೆಯೆಂದರೆ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್‌ ಗಳ ಮೇಲೆ ಶೇ. 10 ರಷ್ಟು ರಿಯಾಯಿತಿ. ಈ ವಿಶೇಷ ಕೊಡುಗೆಯು ತಲಾ 1,000 ಪ್ರಿಪೇಯ್ಡ್ ಮತ್ತು 1,000 ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಲಭ್ಯವಿರಲಿದೆ.

ಗ್ರಾಹಕರು ತಮ್ಮ ಅತ್ಯಂತ ಕ್ರಿಯಾತ್ಮಕವಾದ ಔಟ್ ಆಫ್ ಆಫೀಸ್ ಇಮೇಲ್ ಅನ್ನು ಸಲ್ಲಿಸುವ ಮೂಲಕ ಔಟ್ ಆಫ್ ಆಫೀಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಇದರಲ್ಲಿ ಸಂಪೂರ್ಣ ವೆಚ್ಚ-ಭರಿತ ಅಂತಾರಾಷ್ಟ್ರೀಯ ಪ್ರವಾಸವನ್ನು ಗೆಲ್ಲುವ ಅವಕಾಶವಿದ್ದು, ಇಬ್ಬರು ಅದೃಷ್ಟಶಾಲಿ ವಿಜೇತರು ತಮ್ಮ ಕನಸಿನ ರಜಾದಿನದ ಪ್ರವಾಸವನ್ನು ನನಸಾಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Airtel: ದೇಶಾದ್ಯಂತ ಏರ್ಟೆಲ್ ಸರ್ವೀಸ್ ಡೌನ್ ; ಬಳಕೆದಾರರು ಪರದಾಟ

ವೀಸಾಕ್ಕೆ ಅರ್ಜಿ ಸಲ್ಲಿಸುವ ಗ್ರಾಹಕರು, ಅರ್ಹ ಏಷ್ಯನ್ ರಾಷ್ಟ್ರಗಳಿಗೆ ಅಟ್ಲಿಸ್ ಮೂಲಕ ತಮ್ಮ ಮುಂದಿನ ವೀಸಾ ಅರ್ಜಿಯ ಮೇಲೆ ₹4,000 ವರೆಗೆ ಶೇ. 100 ರಷ್ಟು ರಿಯಾಯಿತಿ ಪಡೆಯಬಹುದು. ಪ್ರವಾಸದ ಹಣಕಾಸಿನ ಅಗತ್ಯಗಳಿಗಾಗಿ ಗ್ರಾಹಕರು ಝೀರೋ ಮಾರ್ಕಪ್ ಮತ್ತು ಉಚಿತ ಡೆಲಿವರಿಯೊಂದಿಗೆ ನಿಯೋ ಮಲ್ಟಿಕರೆನ್ಸಿ ಕಾರ್ಡ್ ಪಡೆಯಬಹುದು. ಜೊತೆಗೆ ರಿಯಾಯಿತಿ ದರದಲ್ಲಿ ನಿಯೋ ಫಾರೆಕ್ಸ್ ಕ್ಯಾಶ್ ಅನ್ನು ಮನೆ ಬಾಗಿಲಿಗೇ ತರಿಸಿಕೊಳ್ಳುವ ಸೌಲಭ್ಯವೂ ಇದ್ದು, ಪ್ರವಾಸಕ್ಕೂ ಮುನ್ನ ವಿದೇಶಿ ಕರೆನ್ಸಿ ಹೊಂದಿಸುವುದು ಇದರಿಂದ ಸುಲಭವಾಗಲಿದೆ.

ವೈಯಕ್ತಿಕಗೊಳಿಸಿದ ಪ್ರವಾಸ ಯೋಜನೆಗಾಗಿ ಏರ್‌ಟೆಲ್ ಬ್ರೂಸ್ಡ್ ಪಾಸ್‌ಪೋರ್ಟ್ಸ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಐವರು ಅದೃಷ್ಟಶಾಲಿ ಗ್ರಾಹಕರು ತಮ್ಮ ಪ್ರವಾಸದ ಯೋಜನೆ ಮತ್ತು ಆದ್ಯತೆಗಳಿಗೆ ತಕ್ಕಂತೆ ಪ್ರವಾಸದ ಪಟ್ಟಿ ಸಿದ್ಧಪಡಿಸಿಕೊಳ್ಳಲು ಬ್ರೂಸ್ಡ್ ಪಾಸ್‌ಪೋರ್ಟ್ಸ್‌ನ ಪ್ರವಾಸಿ ತಜ್ಞರೊಂದಿಗೆ ನೇರ ಆನ್‌ಲೈನ್ ಸಮಾಲೋಚನೆ ಪಡೆಯಲಿದ್ದಾರೆ. ಇದರೊಂದಿಗೆ ಏರ್‌ಟೆಲ್ ಗ್ರಾಹಕರು ಇತರ ವಿಶೇಷ ಪ್ರವಾಸಿ ಪ್ರಯೋಜನಗಳನ್ನೂ ಪಡೆಯಬಹುದಾಗಿದೆ.

250 ಗ್ರಾಹಕರಿಗೆ ವಿಶೇಷ ಮರ್ಚಂಡೈಸ್‌ನೊಂದಿಗೆ ಕಾಂಡೆ ನಾಸ್ಟ್ ಟ್ರಾವೆಲರ್ ವಾರ್ಷಿಕ ಚಂದಾದಾರಿಕೆ ಹಾಗೂ ಎಲ್ಲಾ ಏರ್‌ಟೆಲ್ ಗ್ರಾಹಕರಿಗೆ 10 ಆಯ್ದ ನಗರಗಳ ಮಾರ್ಗದರ್ಶಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ. ಅಲ್ಲದೆ, 500 ಅದೃಷ್ಟಶಾಲಿ ಏರ್‌ಟೆಲ್ ಗ್ರಾಹಕರಿಗೆ ₹500 ಮೌಲ್ಯದ ಅಮೆಜಾನ್ ವೋಚರ್‌ಗಳು ಲಭ್ಯವಿರಲಿವೆ. ನವೆಂಬರ್ 19 ರಿಂದ ನವೆಂಬರ್ 25, 2026 ರವರೆಗೆ ಏರ್‌ಟೆಲ್ ಆ್ಯಪ್‌ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು, ಗ್ರಾಹಕರು ಏರ್‌ಟೆಲ್ ಆ್ಯಪ್‌ಗೆ ಭೇಟಿ ನೀಡಿ ಟ್ರಾವೆಲ್ ವೀಕ್ (https://i.airtel.in/ir_travelweekpr) ಎಂದು ಹುಡುಕಬೇಕು.

ಬಳಿಕ ಆಫರ್‌ ಗಾಗಿ ನೋಂದಾಯಿಸಿಕೊಂಡು ಒಂದು ಸರಳ ಪ್ರಶ್ನೆಗೆ ಉತ್ತರಿಸಬೇಕು. ಯಶಸ್ವಿಯಾಗಿ ಭಾಗವಹಿಸಿದವರು ಸ್ಪರ್ಧೆಗೆ ಅರ್ಹರಾಗುತ್ತಾರೆ. ಏರ್‌ಟೆಲ್ ಟ್ರಾವೆಲ್ ವೀಕ್‌ ನ ಪ್ರಯೋಜನಗಳು ಮತ್ತು ನಿಯಮಗಳ ಕಿರುನೋಟ: ಪ್ರಯೋಜನ ನಿಯಮ ಮತ್ತು ಷರತ್ತುಗಳು ಪಡೆಯುವುದು ಹೇಗೆ? ಅಂತಾರಾಷ್ಟ್ರೀಯ ರೋಮಿಂಗ್ ಪೋಸ್ಟ್‌ ಪೇಯ್ಡ್ ಬಳಕೆದಾರರು ವಿಜೇತರ ಘೋಷಣೆಯಾದ 90 ದಿನಗಳ ಒಳಗೆ ಪ್ರಯಾಣಿಸಬೇಕು; ಪ್ರಿಪೇಯ್ಡ್ ಬಳಕೆದಾರರು 15 ದಿನಗಳ ಒಳಗೆ ಕೂಪನ್ ರಿಡೀಮ್ ಮಾಡಿಕೊಂಡು, ರಿಡೀಮ್ ಮಾಡಿದ 30 ದಿನಗಳ ಒಳಗೆ ಪ್ರಯಾಣಿಸ ಬೇಕು.

ಪ್ರಿಪೇಯ್ಡ್: https://i.airtel.in/Prepaid_Recharge ಗೆ ಭೇಟಿ ನೀಡಿ, ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಆಯ್ಕೆಮಾಡಿ ಮತ್ತು ಶೇ. 10 ರಿಯಾಯಿತಿ ಪಡೆಯಲು ಪಾವತಿಸಿ. (ಸೂಚನೆ: ಕೂಪನ್ ನೀಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿಯೇ ಏರ್‌ಟೆಲ್ ಆ್ಯಪ್‌ಗೆ ಲಾಗಿನ್ ಆಗಬೇಕು). ಪೋಸ್ಟ್‌ ಪೇಯ್ಡ್: ವಿಜೇತರ ಘೋಷಣೆಯಾದ 90 ದಿನಗಳ ಒಳಗೆ ಅರ್ಹ ಐಆರ್ ಪ್ಯಾಕ್ ಖರೀದಿಸಿ. ಮೊದಲ ಬಿಲ್ಲಿಂಗ್ ಸೈಕಲ್‌ನೊಳಗೆ ಪೋಸ್ಟ್‌ಪೇಯ್ಡ್ ಬಿಲ್‌ನಲ್ಲಿ ರಿಯಾಯಿತಿಯನ್ನು ಹೊಂದಾಣಿಕೆ ಮಾಡಲಾಗುತ್ತದೆ. ಔಟ್ ಆಫ್ ಆಫೀಸ್ ಸ್ಪರ್ಧೆ ವಿಜೇತರ ಘೋಷಣೆಯಾದ 4 ತಿಂಗಳ ಒಳಗೆ. ಅಭಿಯಾನ ಮುಕ್ತಾಯಗೊಂಡ 5 ದಿನಗಳ ಒಳಗೆ ವಿಜೇತರಿಗೆ ಇನ್‌ಸ್ಟಾಗ್ರಾಮ್/ಇಮೇಲ್ ಮೂಲಕ ತಿಳಿಸಲಾಗುತ್ತದೆ.

ಲಭ್ಯತೆಯನ್ನು ಖಚಿತಪಡಿಸಿ, ಪರಿಶೀಲನೆ ಪೂರ್ಣಗೊಳಿಸಿ ಮತ್ತು ಪ್ರವಾಸದ ಆದ್ಯತೆಗಳನ್ನು ಹಂಚಿಕೊಳ್ಳಬೇಕು. ನಂತರ ಏರ್‌ಟೆಲ್ ಪ್ರವಾಸದ ಪಟ್ಟಿ ಮತ್ತು ವಿವರಗಳನ್ನು ಖಚಿತಪಡಿಸುತ್ತದೆ. ಅಟ್ಲಿಸ್ ಆಫರ್ ಮಾನ್ಯತೆಯ ಅವಧಿ: 31 ಡಿಸೆಂಬರ್, 2026 ವಿಜೇತರು ತಮ್ಮ ಒನ್-ಟೈಮ್ ಯೂನಿಕ್ ಕೋಡ್‌ಗಳನ್ನು https://www.atlys.com/en-IN/redeem ನಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ಬ್ರೂಸ್ಡ್ ಪಾಸ್‌ ಪೋರ್ಟ್ಸ್ ಆಫರ್ ಮಾನ್ಯತೆಯ ಅವಧಿ: 31 ಡಿಸೆಂಬರ್, 2026 ವಿಜೇತರಿಗೆ ಪ್ರಸ್ತಾವಿತ ಸಮಾಲೋಚನೆಯ ಸಮಯದೊಂದಿಗೆ ಇಮೇಲ್ ಬರುತ್ತದೆ.

ಲಭ್ಯತೆಯನ್ನು ಖಚಿತಪಡಿಸಿ ನಿಗದಿತ ಸೆಷನ್‌ಗೆ ಸೇರಿಕೊಳ್ಳಬಹುದು. ಕಾಂಡೆ ನಾಸ್ಟ್ ಟ್ರಾವೆಲರ್ ಯಾವುದೇ ಅವಧಿ ಮಿತಿಯಿಲ್ಲ (ನೋ ವ್ಯಾಲಿಡಿಟಿ) ಚಂದಾದಾರಿಕೆಯನ್ನು ಪ್ರಾರಂಭಿಸಲು ವಿಜೇತರ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಡೆಲಿವರಿ ವಿಳಾಸವನ್ನು ಕೋರುವ ಇಮೇಲ್ ಬರುತ್ತದೆ. ಅಮೆಜಾನ್ ವೋಚರ್‌ನ ಮಾನ್ಯತೆಯ ಅವಧಿಗೆ ಒಳಪಟ್ಟಿರುತ್ತದೆ.

ವಿಜೇತರಿಗೆ ಇಮೇಲ್ ಮೂಲಕ ಕೂಪನ್ ಕೋಡ್ ಬರುತ್ತದೆ, ಇದನ್ನು ಅಮೆಜಾನ್‌ನಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ನಿಯೋ ಆಫರ್ ಮಾನ್ಯತೆಯ ಅವಧಿ: 31 ಡಿಸೆಂಬರ್, 2026 ಕ್ಲೈಮ್ ಮಾಡಲು ಈ ಲಿಂಕ್ ಬಳಸಿ: https://u.niyo.me/url-r/gGQH ಈ ಏರ್‌ಟೆಲ್ ಟ್ರಾವೆಲ್ ವೀಕ್ ಯೋಜನೆಯು ಕೇವಲ ಕನೆಕ್ಟಿವಿಟಿಗೆ ಸೀಮಿತವಾಗದೆ, ಗ್ರಾಹಕರಿಗೆ ವಿಭಿನ್ನ ಹಾಗೂ ವಿಶೇಷ ಅನುಭವಗಳನ್ನು ನೀಡುವತ್ತ ಏರ್‌ಟೆಲ್ ಹೊಂದಿರುವ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.