ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ 35 ಶತಕೋಟಿ ಡಾಲರ್‌ ಹೂಡಿಕೆಗೆ ಅಮೆಜಾನ್‌ ನಿರ್ಧಾರ

Amazon: ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತಕ್ಕೆ ಅಮೆಜಾನ್‌ ಸಹಕರಿಸಲಿದೆ. ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಮತ್ತು ಎಲ್ಲರಿಗೂ ಎಐ ಪ್ರಯೋಜನಗಳನ್ನು ದಾಟಿಸುವುದು ಅಮೆಜಾನ್‌ ನ ಮಹತ್ವದ ಯೋಜನೆಯಾಗಿದೆ. ಸರಕಾರಿ ಶಾಲೆಗಳ 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಐ ತರಬೇತಿ, ಶಿಕ್ಷಣ ನೀಡಲಾಗಿವುದು.

amazon

ನವದೆಹಲಿ, ಡಿ.13: ಭಾರತದಲ್ಲಿ 2030ರ ವೇಳೆಗೆ 35 ಶತಕೋಟಿ ಡಾಲರ್‌ಗಳ (3.15 ಲಕ್ಷ ಕೋಟಿ ರುಪಾಯಿ) ಭಾರಿ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌(Amazon) ಕಂಪನಿಯ ಉಪಾಧ್ಯಕ್ಷ ಅಮಿತ್‌ ಅಗ್ರವಾಲ್‌(amit agarwal) ಅವರು ತಿಳಿಸಿದ್ದಾರೆ.

ಅಮೆಜಾನ್‌ ಸಂಭವ್-‌2025 ಸಮಾರಂಭದಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು. ಅಮೆಜಾನ್‌ ತನ್ನ 10 ಮಿನಿಟ್‌ ಡೆಲಿವರಿ ವ್ಯವಸ್ಥೆಯನ್ನು ಬಲಪಡಿಸಲಿದೆ. ಇತರ ಬಿಸಿನೆಸ್‌ಗಳನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ವಿವರಿಸಿದರು.

ಅಮೆಜಾನ್‌ 2010-24ರ ಅವಧಿಯಲ್ಲಿ ಭಾರತದಲ್ಲಿ 40 ಶತಕೋಟಿ ಡಾಲರ್‌ಗೂ ಹೆಚ್ಚು ಹೂಡಿಕೆಯನ್ನು ಮಾಡಿದೆ. 2030ರೊಳಗೆ ಹೊಸ ಹೂಡಿಕೆಯನ್ನು 15 ಶತಕೋಟಿ ಡಾಲರ್‌ನಿಂದ 30 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ಉದ್ದೇಶಿಸಿದೆ.

ಜೆಫ್‌ ಬಿಜೋಸ್‌ ಅವರು ಸ್ಥಾಪಿಸಿರುವ ಅಮೆಜಾನ್‌ ಎಐ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ಇದು ಗ್ರಾಹಕರಿಗೂ ಅನುಕೂಲಕರವಾಗಿದೆ. ನಗರಗಳು ಮತ್ತು ಪಟ್ಟಣಗಳಲ್ಲಿ ಅಮೆಜಾನ್‌ ಸೇವೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ಅಮೆಜಾನ್‌ ತನ್ನ 35 ಶತಕೋಟಿ ಡಾಲರ್‌ ಹೂಡಿಕೆಯನ್ನು ಇ-ಕಾಮರ್ಸ್‌, ಎಡಬ್ಲ್ಯುಎಸ್‌, ಪ್ರೈಮ್‌ ವಿಡಿಯೊ, ಕಂಟೆಂಟ್‌ ಮತ್ತು ಹಣಕಾಸು ಸೇವಾ ವಿಭಾಗಗಳಲ್ಲಿ ಹೂಡಿಕೆ ಮಾಡಲಿದೆ ಎಂದು ಅಗ್ರವಾಲ್‌ ಹೇಳಿದರು. ಅಮೆಜಾನ್‌ ಹೊಸ ಬಗೆಯ ಸೇವೆಗಳನ್ನು ನೀಡುತ್ತಿದೆ. ಕಳೆದ ಒಂದು ವರ್ಷದಲ್ಲೇ ನಾವು ಐದು ವಿಧದ ಹೊಸ ಸೇವೆಗಳನ್ನು ಬಿಡುಗಡೆ ಮಾಡಿದ್ದೇವೆ. ಅಮೆಜಾನ್‌ ನೌ, ಅಮೆಜಾನ್‌ ಬಜಾರ್‌, ಹೆಲ್ತ್‌ ಕೇರ್‌, ಡಯಾಗ್ನಸ್ಟಿಕ್ಸ್‌, ವಿಡಿಯೊ ಕನ್ಸಲ್ಟೇಶನ್ಸ್‌ ಸೇವೆಗಳನ್ನು ಬಿಡುಗಡೆ ಮಾಡಿದ್ದೇವೆ. ಕಂಪನಿ ಈಗ 300 ಡಾರ್ಕ್‌ ಸ್ಟೋರ್‌ಗಳನ್ನೂ ಒಳಗೊಂಡಿದೆ.

ಇದನ್ನೂ ಓದಿ ಎಲಾನ್ ಮಸ್ಕ್‌ಗೆ ಪತ್ರ ಬರೆದ ಇಮ್ರಾನ್ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್

38 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ

ಭಾರತದಲ್ಲಿ 1.2 ಕೋಟಿಗೂ ಹೆಚ್ಚು ಸಣ್ಣ ಉದ್ದಿಮೆಗಳನ್ನು ಅಮೆಜಾನ್‌ ಡಿಜಿಟಲೀಕರಣಗೊಳಿಸಿದೆ. 2,000 ಕೋಟಿ ಡಾಲರ್‌ ಮೌಲ್ಯದ ಇ-ಕಾಮರ್ಸ್‌ ರಫ್ತು ನಡೆಸಿದೆ.

ಈ ಭಾರಿ ಹೂಡಿಕೆಯ ಪರಿಣಾಮ 2030ರೊಳಗೆ ಅಮೆಜಾನ್‌ 38 ಲಕ್ಷ ನೇರ-ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ತಂತ್ರಜ್ಞಾನ, ಉತ್ಪಾದನೆ, ಪ್ಯಾಕೇಜಿಂಗ್‌, ಕಾರ್ಯಾಚರಣೆ, ಲಾಜಿಸ್ಟಿಕ್ಸ್‌, ಕಸ್ಟಮರ್‌ ಸಪೋರ್ಟ್‌, ಕ್ಲೌಡ್‌ ಸರ್ವೀಸ್‌, ವೇರ್‌ ಹೌಸ್‌, ಲಾಸ್ಟ್‌ ಮೈಲ್‌ ಡೆಲಿವರಿ ಇತ್ಯಾದಿ ವಲಯಗಳಲ್ಲಿ ಈ ಉದ್ಯೋಗಗಳನ್ನು ನೀಡಲಾಗಿದೆ.

ಉದ್ಯೋಗಿಗಳಿಗೆ ಸ್ಪರ್ಧಾತ್ಮಕ ವೇತನ, ಹೆಲ್ತ್‌ ಬೆನಿಫಿಟ್‌ ಗಳನ್ನು ಕಲ್ಪಿಸಲಾಗಿದೆ. ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತಕ್ಕೆ ಅಮೆಜಾನ್‌ ಸಹಕರಿಸಲಿದೆ. ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಮತ್ತು ಎಲ್ಲರಿಗೂ ಎಐ ಪ್ರಯೋಜನಗಳನ್ನು ದಾಟಿಸುವುದು ಅಮೆಜಾನ್‌ ನ ಮಹತ್ವದ ಯೋಜನೆಯಾಗಿದೆ. ಸರಕಾರಿ ಶಾಲೆಗಳ 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಐ ತರಬೇತಿ, ಶಿಕ್ಷಣ ನೀಡಲಾಗಿವುದು ಎಂದರು ತಿಳಿಸಿದರು.