ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಕ್ಟೋಬರ್ 8ರಿಂದ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್' ಆರಂಭ

'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್' ಅಕ್ಟೋಬರ್ 8, 2026 ರಿಂದ ಆರಂಭ ವಾಗಲಿದೆ. ಭಾರತವು ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿರುವಂತೆ, ಗ್ರಾಹಕರು ಅತ್ಯಂತ ವೇಗದ ಡೆಲಿವರಿಯೊಂದಿಗೆ ಉತ್ತಮ ಬೆಲೆಗಳಲ್ಲಿ ಉತ್ಪನ್ನಗಳ ಅತಿ ದೊಡ್ಡ ಆಯ್ಕೆಯನ್ನು ನಿರೀಕ್ಷಿಸ ಬಹುದು. ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಸೌಂದರ್ಯ, ಗೃಹೋಪಯೋಗಿ ಅಗತ್ಯ ವಸ್ತುಗಳು ಮತ್ತು ದಿನಸಿ ಸೇರಿದಂತೆ ಎಲ್ಲಾ ಜನಪ್ರಿಯ ವಿಭಾಗಗಳಲ್ಲಿ ಡೀಲ್‌ಗಳು ಲಭ್ಯವಿವೆ.

ಬೆಂಗಳೂರು: 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್' ಮುಂದಿನ ಅಕ್ಟೋಬರ್ ರಿಂದ ಆರಂಭವಾಗಲಿದೆ. ಭಾರತವು ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿರುವಂತೆ, ಗ್ರಾಹಕರು ಅತ್ಯಂತ ವೇಗದ ಡೆಲಿವರಿಯೊಂದಿಗೆ ಉತ್ತಮ ಬೆಲೆಗಳಲ್ಲಿ ಉತ್ಪನ್ನಗಳ ಅತಿ ದೊಡ್ಡ ಆಯ್ಕೆಯನ್ನು ನಿರೀಕ್ಷಿಸ ಬಹುದು. ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಸೌಂದರ್ಯ, ಗೃಹೋಪಯೋಗಿ ಅಗತ್ಯ ವಸ್ತುಗಳು ಮತ್ತು ದಿನಸಿ ಸೇರಿದಂತೆ ಎಲ್ಲಾ ಜನಪ್ರಿಯ ವಿಭಾಗಗಳಲ್ಲಿ ಡೀಲ್‌ಗಳು ಲಭ್ಯವಿವೆ.

ಜೊತೆಗೆ ಗ್ರಾಹಕರು ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ ಇಎಂಐ ವಹಿವಾಟು ಗಳ ಮೇಲೆ 10% ತತ್‌ಕ್ಷಣದ ರಿಯಾಯಿತಿ ಮತ್ತು ಪ್ರೈಮ್ ಸದಸ್ಯರಿಗೆ ಮಾತ್ರ 10% ವರೆಗೆ ಹೆಚ್ಚುವರಿ ಉಳಿತಾಯವನ್ನು ಪಡೆಯಬಹುದು. ಈ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ಕೊಡುಗೆಗಳಿವೆ.

ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ (VP) ಸೌರಭ್ ಶ್ರೀವಾಸ್ತವ ಅವರು ಮಾತನಾಡಿ, "ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ದೇಶದ ಅತಿ ದೊಡ್ಡ ಶಾಪಿಂಗ್ ಸಂಭ್ರಮಕ್ಕಾಗಿ ಗ್ರಾಹಕರು, ಮಾರಾಟಗಾರರು ಮತ್ತು ಬ್ರ್ಯಾಂಡ್‌ಗಳನ್ನು ಒಗ್ಗೂಡಿಸುವ ಮೂಲಕ ಭಾರತೀಯ ಹಬ್ಬಗಳ ಸಂಭ್ರಮವನ್ನು ಆಚರಿಸುತ್ತದೆ.

ಈ ವರ್ಷ, ಭಾರತದಾದ್ಯಂತ ಇರುವ ಗ್ರಾಹಕರು ಕೋಟ್ಯಂತರ ಉತ್ಪನ್ನಗಳ ಮೇಲೆ ವರ್ಷದ ಅತ್ಯಂತ ಕಡಿಮೆ ಬೆಲೆಗಳು, ಬ್ಲಾಕ್‌ಬಸ್ಟರ್ ಡೀಲ್‌ಗಳು ಮತ್ತು ಆಕರ್ಷಕ ಹೊಸ ಬಿಡುಗಡೆಗಳನ್ನು ನಿರೀಕ್ಷಿಸಬಹುದು. ಜೊತೆಗೆ ಪ್ರೀಮಿಯಂ ಹಾಗೂ ಮೌಲ್ಯಾಧಾರಿತ ಉತ್ಪನ್ನಗಳ ಬೃಹತ್ ಸಂಗ್ರಹವು ಕೆಲವೇ ನಿಮಿಷಗಳು, ಗಂಟೆಗಳು, ಅದೇ ದಿನ ಅಥವಾ ಮರುದಿನವೇ ಡೆಲಿವರಿ ಆಗಲಿದೆ. ಮಾರಾಟಗಾರರು ಈಗಾಗಲೇ ರೂಪಿಸಿರುವ ಅತ್ಯಾಕರ್ಷಕ ಡೀಲ್‌ಗಳೊಂದಿಗೆ, ಗ್ರಾಹಕರು ಈ ಬಾರಿಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಭರ್ಜರಿ ಉಳಿತಾಯವನ್ನು ಮಾಡಬಹುದು" ಎಂದಿದ್ದಾರೆ.

ಇದನ್ನೂ ಓದಿ: EPL: Amazon.in ನಲ್ಲಿ ಮಾ.6ರಿಂದ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮೂಲಕ ಗ್ರಾಹಕರು ಬ್ಲಾಕ್‌ಬಸ್ಟರ್ ಡೀಲ್‌ಗಳು, ಟಾಪ್ 100 ಡೀಲ್‌ಗಳು, ಮೆಗಾ ಡೀಲ್‌ಗಳು, ರಾತ್ರಿ 8 ಗಂಟೆಯ ಡೀಲ್‌ಗಳು ಸೇರಿದಂತೆ ಎಲ್ಲಾ ರೀತಿಯ ಶಾಪರ್‌ ಗಳಿಗಾಗಿ ಇರುವ ಆಫರ್‌ಗಳೊಂದಿಗೆ ಬೃಹತ್ ಸಂಗ್ರಹದಿಂದ ವರ್ಷದ ಅತಿ ಕಡಿಮೆ ಬೆಲೆಗಳಲ್ಲಿ ಶಾಪಿಂಗ್ ಮಾಡಬಹುದು. ವಿವಿಧ ವರ್ಗಗಳಲ್ಲಿ 'ನೋ ಕಾಸ್ಟ್ ಇಎಂಐ' ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಜೊತೆಗೆ, 'ಬೈ ಮೋರ್ ಸೇವ್ ಮೋರ್', 'ಎಕ್ಸ್‌ಚೇಂಜ್ ಮೇಳ', 'ಸ್ಯಾಂಪಲ್ ಮೇನಿಯಾ' ಮತ್ತು 'ಅಮೆಜಾನ್ ಕಾಂಬೋಸ್' ನಂತಹ ಕೊಡುಗೆಗಳ ಮೂಲಕ ಗ್ರಾಹಕರು ಇನ್ನಷ್ಟು ಹೆಚ್ಚು ಉಳಿತಾಯ ಮಾಡಬಹುದು.

ಹಬ್ಬದ ಋತುವಿಗೂ ಮುನ್ನ, ಅಮೆಜಾನ್ ಇಂಡಿಯಾ ತನ್ನ ಅಖಿಲ ಭಾರತ ಕಾರ್ಯಾಚರಣಾ ಜಾಲದಾದ್ಯಂತ ದೊಡ್ಡ ಮೆಟ್ರೋ ನಗರಗಳು ಹಾಗೂ ಶ್ರೇಣಿ 2 ಮತ್ತು 3 ನಗರಗಳು ಸೇರಿದಂತೆ 400 ನಗರಗಳಲ್ಲಿ 1,60,000 ಕ್ಕೂ ಹೆಚ್ಚು ಕಾಲೋಚಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಇನ್ನಷ್ಟು ವೇಗದ ಮತ್ತು ವಿಶ್ವಾಸಾರ್ಹ ಡೆಲಿವರಿಯನ್ನು ಬೆಂಬಲಿಸಲು, ಕಂಪನಿಯು ತನ್ನ ಸಾರ್ವಕಾಲಿಕ ಅತಿ ದೊಡ್ಡ ಕಾರ್ಯಾಚರಣಾ ಜಾಲ ವಿಸ್ತರಣೆಯನ್ನು ಪ್ರಕಟಿಸಿದ್ದು, 20 ಹೊಸ ಫುಲ್‌ಫಿಲ್‌ಮೆಂಟ್ ಕೇಂದ್ರಗಳು, 6 ಹೊಸ ವಿಂಗಡಣಾ ಕೇಂದ್ರಗಳು ಮತ್ತು 150 ಹೊಸ ಕೊನೆಯ ಹಂತದ ಡೆಲಿವರಿ ಕೇಂದ್ರಗಳನ್ನು ಸೇರಿಸಿದೆ. ಅಮೆಜಾನ್ ಇಂಡಿಯಾದ ಈ ಜಾಲವು ದೇಶಾದ್ಯಂತ ಗ್ರಾಹಕರಿಗೆ ಸೇವೆ ನೀಡಲು 17 ಲಕ್ಷಕ್ಕೂ ಹೆಚ್ಚು ಮಾರಾಟಗಾರರಿಗೆ ನೆರವಾಗುತ್ತಿದ್ದು, ಇದರ ಮಾರಾಟಗಾರರ ಸಂಖ್ಯೆ 20 ಲಕ್ಷ ದಾಟಿದೆ; ಕಳೆದ ವರ್ಷವೊಂದರಲ್ಲೇ 3 ಲಕ್ಷಕ್ಕೂ ಹೆಚ್ಚು ಹೊಸ ಮಾರಾಟಗಾರರು ಇದಕ್ಕೆ ಸೇರ್ಪಡೆಗೊಂಡಿದ್ದಾರೆ.

ಜಲಂಧರ್, ತಿರುಪತಿ, ವಾರಂಗಲ್, ಧಾರವಾಡ, ವೆಲ್ಲೂರು ಮತ್ತು ಬೆರ್ಹಾಂಪುರ್‌ನಂತಹ ಮೆಟ್ರೋಯೇತರ ನಗರಗಳು ಸೇರಿದಂತೆ 60ಕ್ಕೂ ಹೆಚ್ಚು ನಗರಗಳ ಲಕ್ಷಾಂತರ ಗ್ರಾಹಕರಿಗೆ ಲಭ್ಯ ವಿರುವ 'ಅಮೆಜಾನ್ ನೌ' ಮೂಲಕ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಅಲ್ಟ್ರಾ-ಫಾಸ್ಟ್ ಡೆಲಿವರಿ ಯನ್ನು ಪಡೆಯಬಹುದು; ಹಾಗೂ ದೀಪಾವಳಿಗೂ ಮುನ್ನ ಇದು 100 ನಗರಗಳಿಗೆ ವಿಸ್ತರಣೆಯಾಗಲಿದೆ.

ತಾಜಾ ಹಣ್ಣು-ತರಕಾರಿಗಳು, ಫ್ರೋಜನ್ ಆಹಾರಗಳು, ಪಾನೀಯಗಳು, ಮನೆಯ ಅಗತ್ಯ ವಸ್ತುಗಳು, ಪರ್ಸನಲ್ ಕೇರ್, ಫ್ಯಾಷನ್ ಮತ್ತು ಸೌಂದರ್ಯ, ಸಣ್ಣ ಗೃಹೋ ಪಯೋಗಿ ಉಪಕರಣಗಳು, ಮನೆ ಮತ್ತು ಕಿಚನ್ ಸೇರಿದಂತೆ ದಿನಸಿ ಸಾಮಗ್ರಿಗಳ ಬೃಹತ್ ಸಂಗ್ರಹವನ್ನು ಗ್ರಾಹಕರು ಇಲ್ಲಿ ಅನ್ವೇಷಿಸಬಹುದು. ನಿಮ್ಮ ಪಿನ್ ಕೋಡ್‌ನಲ್ಲಿ ಅಮೆಜಾನ್ ನೌ ಲಭ್ಯವಿದೆಯೇ ಎಂದು ಪರಿಶೀಲಿಸಲು, ನಿಮ್ಮ ಅಮೆಜಾನ್ ಶಾಪಿಂಗ್ ಆ್ಯಪ್‌ಗೆ ಹೋಗಿ ಮೇಲ್ಭಾಗದಲ್ಲಿರುವ 'Now' ಬ್ಯಾನರ್ ಅನ್ನು ನೋಡಿ.

ಹಕ್ಕುತ್ಯಾಗ: ಉತ್ಪನ್ನದ ವಿವರಗಳು, ವಿವರಣೆ ಮತ್ತು ಬೆಲೆಗಳನ್ನು ಮಾರಾಟಗಾರರು ಒದಗಿಸಿ ದಂತೆಯೇ ನೀಡಲಾಗಿದೆ. ಉತ್ಪನ್ನಗಳ ಬೆಲೆ ನಿಗದಿಪಡಿಸುವಲ್ಲಿ ಅಥವಾ ಅವುಗಳನ್ನು ವಿವರಿಸು ವಲ್ಲಿ ಅಮೆಜಾನ್‌ನ ಯಾವುದೇ ಪಾತ್ರವಿರುವುದಿಲ್ಲ ಮತ್ತು ಮಾರಾಟಗಾರರು ಒದಗಿಸಿದ ಮಾಹಿತಿಯ ನಿಖರತೆಗೆ ಅಮೆಜಾನ್ ಜವಾಬ್ದಾರವಾಗಿರುವುದಿಲ್ಲ. ಡೀಲ್‌ಗಳು ಮತ್ತು ರಿಯಾಯಿತಿ ಗಳನ್ನು ಸಂಪೂರ್ಣವಾಗಿ ಮಾರಾಟಗಾರರು ಮತ್ತು/ಅಥವಾ ಬ್ರ್ಯಾಂಡ್‌ಗಳೇ ಒದಗಿಸುತ್ತವೆ. ಉತ್ಪನ್ನದ ವಿವರಣೆಗಳು, ವೈಶಿಷ್ಟ್ಯಗಳು ಮತ್ತು ಡೀಲ್‌ಗಳನ್ನು ಮಾರಾಟಗಾರರು ನೀಡಿದ ರೀತಿಯಲ್ಲೇ ಯಥಾವತ್ತಾಗಿ ಪ್ರಕಟಿಸಲಾಗಿದೆ.

ಪ್ರಮುಖ ಡೀಲ್‌ಗಳು ಮತ್ತು ಹೊಸ ಬಿಡುಗಡೆಗಳು: ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಟಿವಿಗಳು, ಫ್ಯಾಷನ್ ಮತ್ತು ಸೌಂದರ್ಯ, ಕಿಚನ್ ಮತ್ತು ಹೊರಾಂಗಣ, ದೈನಂದಿನ ಅಗತ್ಯ ವಸ್ತುಗಳು, ಮನೆ ಅಲಂಕಾರ, ಗೃಹೋಪಯೋಗಿ ಉಪಕರಣಗಳು ಸೇರಿದಂತೆ ಹಲವು ವಿಭಾಗಗಳಲ್ಲಿನ ಪ್ರಮುಖ ಬ್ರ್ಯಾಂಡ್‌ಗಳ ಹೊಸ ಬಿಡುಗಡೆಗಳು, ವರ್ಷದ ಅತಿ ಕಡಿಮೆ ಬೆಲೆಗಳು ಹಾಗೂ ಕೋಟ್ಯಂತರ ಉತ್ಪನ್ನಗಳ ಬೃಹತ್ ಸಂಗ್ರಹದ ಮೇಲೆ ಗ್ರಾಹಕರು ಆಕರ್ಷಕ ಡೀಲ್‌ಗಳನ್ನು ನಿರೀಕ್ಷಿಸಬಹುದು.

  • ಬ್ಯಾಂಕ್ ಆಫರ್: ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ ಇಎಂಐ ವಹಿವಾಟುಗಳ ಮೇಲೆ ಗ್ರಾಹಕರು 10% ತತ್‌ಕ್ಷಣದ ರಿಯಾಯಿತಿಯನ್ನು ಪಡೆಯಬಹುದು.
  • ಪ್ರೈಮ್ ಪ್ರಯೋಜನಗಳು: ಪ್ರೈಮ್ ಸದಸ್ಯರಿಗೆ ಮಾತ್ರ 10% ವರೆಗೆ ಹೆಚ್ಚುವರಿ ರಿಯಾಯಿತಿ.
  • ಈ ಹಬ್ಬದ ಋತುವಿನಲ್ಲಿ ಮನರಂಜನೆ: ವಿವಿಧ ವಿಭಾಗಗಳಲ್ಲಿನ ಅತ್ಯಾಕರ್ಷಕ ಕೊಡುಗೆಗಳ ಜೊತೆಗೆ, ಪ್ರೈಮ್ ಸದಸ್ಯರು ಭಾರತದ ಅತಿದೊಡ್ಡ ಸ್ಟ್ರೀಮಿಂಗ್ ತಾಣವಾದ ಪ್ರೈಮ್ ವಿಡಿಯೋದಲ್ಲಿ ವಿವಿಧ ಪ್ರಕಾರಗಳು ಮತ್ತು ಭಾಷೆಗಳ ಎಕ್ಸ್‌ಕ್ಲೂಸಿವ್ ಒರಿಜಿನಲ್ಸ್ ಸೇರಿದಂತೆ ಹಬ್ಬದ ವಿಶೇಷ ಕಾರ್ಯಕ್ರಮಗಳನ್ನು ಆನಂದಿಸಬಹುದು.
  • AI ಮೂಲಕ ಸ್ಮಾರ್ಟ್ ಶಾಪಿಂಗ್: ಸುಲಭವಾದ ಹಬ್ಬದ ಶಾಪಿಂಗ್‌ಗಾಗಿ ಗ್ರಾಹಕರು ಉತ್ಪನ್ನಗಳನ್ನು ಪರಸ್ಪರ ಹೋಲಿಸಬಹುದು, ಬೆಲೆಯ ಇತಿಹಾಸವನ್ನು ಪರಿಶೀಲಿಸಬಹುದು, ಶಿಫಾರಸುಗಳನ್ನು ಪಡೆಯಬಹುದು ಹಾಗೂ ಉತ್ಪನ್ನ ಪುಟಗಳು ಮತ್ತು ಹುಡುಕಾಟದಲ್ಲಿ AI ಶಾಪಿಂಗ್ ವೈಶಿಷ್ಟ್ಯಗಳನ್ನು ಬಳಸಬಹುದು.
  • ವೇಗದ ಡೆಲಿವರಿ: Amazon.in ಭಾರತದಾದ್ಯಂತ ಇರುವ ಗ್ರಾಹಕರಿಗೆ ಅಗತ್ಯವಿರುವಾಗ ಮಾರಾಟಗಾರರಿಂದ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ತಲುಪಿಸುತ್ತದೆ: ಹತ್ತಾರು ಸಾವಿರ ಉತ್ಪನ್ನಗಳು ಕೆಲವೇ ನಿಮಿಷಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ, 10 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಅದೇ ದಿನ, 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಮರುದಿನವೇ ತಲುಪುತ್ತವೆ ಹಾಗೂ ಲಕ್ಷಾಂತರ ಉತ್ಪನ್ನಗಳು ಅನಿಯಮಿತ, ಉಚಿತ ಪ್ರೈಮ್ ಡೆಲಿವರಿಯೊಂದಿಗೆ ಲಭ್ಯವಿವೆ.