ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಉದ್ಯೋಗಿಗಳ ಸಂಭ್ರಮದೊಂದಿಗೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ಗೆ ಚಾಲನೆ ನೀಡಿದ ಅಮೆಜಾನ್ ಇಂಡಿಯಾ

ಸಂಗೀತ, ಉತ್ಸಾಹ ಮತ್ತು ಹಬ್ಬದ ವಾತಾವರಣದ ನಡುವೆ ಉದ್ಯೋಗಿಗಳು AGIF ಆರಂಭವನ್ನು ಸ್ವಾಗತಿಸಿದರು. ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗಾಗಿ ಈ ಉತ್ಸವವನ್ನು ಯಶಸ್ವಿಗೊಳಿಸಲು ತಿಂಗಳುಗಟ್ಟಲೆ ತೆರೆಮರೆಯಲ್ಲಿ ಶ್ರಮಿಸಿದ ಉದ್ಯೋಗಿಗಳ ಉತ್ಸಾಹ ಮತ್ತು ಸಮರ್ಪಣೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸಿತು.

ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭವಾಗುತ್ತಿದ್ದಂತೆ, ಅಮೆಜಾನ್ ಇಂಡಿಯಾ ತನ್ನ ಉದ್ಯೋಗಿ ಗಳಿಗಾಗಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿ ವಿಶೇಷ ಸಂಭ್ರಮಾಚರಣೆಯನ್ನು ಆಯೋಜಿಸಿತು. ಭಾರತದ ಅತಿದೊಡ್ಡ ಶಾಪಿಂಗ್ ಉತ್ಸವಗಳಲ್ಲಿ ಒಂದಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ಗೆ ಸ್ವಾಗತ ಕೋರುವ ಕ್ಷಣಗಣನೆಗಾಗಿ ವಿವಿಧ ತಂಡಗಳ ಉದ್ಯೋಗಿಗಳು ಒಂದೆಡೆ ಸೇರಿದರು.

ಮಧ್ಯರಾತ್ರಿ ಡ್ರಮ್ಗಳ ನಾದದೊಂದಿಗೆ ನಡೆದ ಕ್ಷಣಗಣನೆಯು ಸಂಭ್ರಮಾಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು. ಸಂಗೀತ, ಉತ್ಸಾಹ ಮತ್ತು ಹಬ್ಬದ ವಾತಾವರಣದ ನಡುವೆ ಉದ್ಯೋಗಿಗಳು AGIF ಆರಂಭವನ್ನು ಸ್ವಾಗತಿಸಿದರು. ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗಾಗಿ ಈ ಉತ್ಸವವನ್ನು ಯಶಸ್ವಿಗೊಳಿಸಲು ತಿಂಗಳುಗಟ್ಟಲೆ ತೆರೆಮರೆಯಲ್ಲಿ ಶ್ರಮಿಸಿದ ಉದ್ಯೋಗಿಗಳ ಉತ್ಸಾಹ ಮತ್ತು ಸಮರ್ಪಣೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸಿತು.

ಆಕರ್ಷಕ ಡೀಲ್ಗಳನ್ನು ಪರಿಚಯಿಸುವುದು, ಉತ್ಪನ್ನಗಳ ಆಯ್ಕೆಯನ್ನು ಸಿದ್ಧಪಡಿಸುವುದು, ಮಾರಾಟಗಾರರ ದಾಸ್ತಾನು ಅಗತ್ಯಗಳನ್ನು ಮುಂಚಿತವಾಗಿ ಅಂದಾಜಿಸುವುದು ಮತ್ತು ಗ್ರಾಹಕರಿಗೆ ಜನಪ್ರಿಯ ಬ್ರ್ಯಾಂಡ್ಗಳನ್ನು ತಲುಪಿಸುವುದು ಸೇರಿದಂತೆ, ಗ್ರೇಟ್ ಇಂಡಿಯನ್ ಫೆಸ್ಟಿವಲ್ಗೆ ಜೀವ ತುಂಬುವಲ್ಲಿ ಅಮೆಜಾನ್ನ ವಿವಿಧ ತಂಡಗಳು ಮಹತ್ವದ ಪಾತ್ರ ವಹಿಸಿವೆ. ಈ ಕ್ಷಣಗಣನೆಯು ಅವರ ಸಾಮೂಹಿಕ ಪ್ರಯತ್ನವನ್ನು ಗುರುತಿಸುವುದರ ಜೊತೆಗೆ, ಹಬ್ಬದ ಮಾರಾಟದ ಪ್ರಮುಖ ಅವಧಿಗೆ ಒಟ್ಟಾಗಿ ಚಾಲನೆ ನೀಡುವ ಸಂದರ್ಭವೂ ಆಗಿತ್ತು.

ಇದನ್ನೂ ಓದಿ: Amazon.in ನಲ್ಲಿ ವ್ಯಾಲೆಂಟೈನ್ಸ್ ಡೇ ಸ್ಟೋರ್‌ನೊಂದಿಗೆ ಪ್ರೀತಿಯನ್ನು ಸಂಭ್ರಮಿಸಿ

ಮಾರಾಟ ಆರಂಭಕ್ಕೂ ಮುನ್ನ, ಅಮೆಜಾನ್ ಉದ್ಯೋಗಿಗಳಿಗಾಗಿ ಲೈವ್ ಸಂಗೀತ, ಉತ್ಸಾಹಭರಿತ ವಾತಾವರಣ ಮತ್ತು ಹಬ್ಬದ ವಿಶೇಷ ಅನುಭವಗಳೊಂದಿಗೆ ಸಂಭ್ರಮಾಚರಣೆಗೆ ಚಾಲನೆ ನೀಡಿತು. ಇದರೊಂದಿಗೆ, Amazon.inನಲ್ಲಿ ಲಭ್ಯವಿರುವ 50 ಬ್ರ್ಯಾಂಡ್ಗಳಾದ್ಯಂತ ಹಬ್ಬದ ಋತುವಿಗಾಗಿ ಉದ್ಯೋಗಿಗಳಿಗೆ ಮಾತ್ರ ಮೀಸಲಾದ ವಿಶೇಷ ಡೀಲ್ಗಳು ಮತ್ತು ರಿಯಾಯಿತಿಗಳನ್ನು ಇದೇ ಮೊದಲ ಬಾರಿಗೆ ಘೋಷಿಸಿತು. ಈ ಉಪಕ್ರಮಗಳು AGIFನ ಹಬ್ಬದ ಸಂಭ್ರಮವನ್ನು ಕೆಲಸದ ಸ್ಥಳಕ್ಕೂ ತಂದವು. ಮುಂಬರುವ ಬಿಡುವಿಲ್ಲದ ದಿನಗಳಿಗೆ ಸಜ್ಜಾಗುತ್ತಿರುವ ಉದ್ಯೋಗಿಗಳಿಗೆ ಒಟ್ಟಾಗಿ ಸಂಭ್ರಮಿಸಲು ಮತ್ತು ತಮ್ಮ ಕೊಡುಗೆಗೆ ಮನ್ನಣೆ ದೊರೆತ ಅನುಭವ ಪಡೆಯಲು ಇದು ಅವಕಾಶ ಕಲ್ಪಿಸಿತು.

ಅಮೆಜಾನ್ನಲ್ಲಿ, ಉದ್ಯೋಗಿಗಳು ತಮ್ಮನ್ನು ಮೌಲ್ಯಯುತರೆಂದು ಭಾವಿಸುವ ಮತ್ತು ಪರಸ್ಪರ ಸಂಪರ್ಕ ಹಾಗೂ ಸಹಯೋಗವನ್ನು ಬೆಳೆಸಿಕೊಳ್ಳುವ ಕಾರ್ಯಸಂಸ್ಕೃತಿಯನ್ನು ರೂಪಿಸುವಲ್ಲಿ ಅರ್ಥಪೂರ್ಣ ಉದ್ಯೋಗಿ ಅನುಭವಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಹತ್ವದ ಸಂದರ್ಭ ಗಳಲ್ಲಿ ತಂಡಗಳನ್ನು ಒಗ್ಗೂಡಿಸಿ ಅವರ ಸಾಮೂಹಿಕ ಸಾಧನೆಗಳನ್ನು ಸಂಭ್ರಮಿಸುವ ಮೂಲಕ, ಗ್ರಾಹಕರಿಗೆ ಮಾತ್ರವಲ್ಲದೆ, ಈ ಉತ್ಸವವನ್ನು ಸಾಕಾರಗೊಳಿಸುವ ಉದ್ಯೋಗಿಗಳಿಗೂ ಹಬ್ಬದ ಋತುವನ್ನು ವಿಶೇಷವಾಗಿಸಲು ಅಮೆಜಾನ್ ಉದ್ದೇಶಿಸಿದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್ನ ಹಿಂದಿರುವ ಜನರು, ಅವರ ಪರಿಶ್ರಮ, ಸಮರ್ಪಣೆ ಮತ್ತು ಸಂಭ್ರಮದ ಕ್ಷಣಗಳ ಒಂದು ನೋಟ ಇಲ್ಲಿದೆ.

ಮಧ್ಯರಾತ್ರಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭವಾಯಿತು; ಅದನ್ನು ಸಾಕಾರಗೊಳಿಸಿದ ಉದ್ಯೋಗಿಗಳ ಸಂಭ್ರಮವೂ ಅದೇ ಕ್ಷಣದಲ್ಲಿ ಆರಂಭವಾಯಿತು.