ಉತ್ತರ ಪ್ರದೇಶದಲ್ಲಿ ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ‘ಆರ್ಗಾ’ ಜೊತೆ ಅಮೆಜಾನ್ ಇಂಡಿಯಾ ಒಪ್ಪಂದ
ʼವಿಶ್ವ ಜೌಗು ಪ್ರದೇಶಗಳʼ ದಿನದ ಹಿನ್ನೆಲೆಯಲ್ಲಿ ಪಾರ್ವತಿ ಆರ್ಗಾ ಪಕ್ಷಿಧಾಮದಲ್ಲಿ ಹಮ್ಮಿಕೊಳ್ಳ ಲಾದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಹಾಗೂ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ ಸಿಂಗ್ ಉಪಸ್ಥಿತಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು
ಅಮೆಜಾನ್ ಡಾಟ್ ಇನ್ (Amazon.in) ಜೊತೆಗೆ ತಮ್ಮ ವಹಿವಾಟು ನಡೆಸಲು ಗೊಂಡಾ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಮಹಿಳಾ ಉದ್ಯಮಿಗಳಿಗೆ ಅಗತ್ಯ ಉಪಕರಣಗಳು, ಸಂಪನ್ಮೂಲಗಳು ಮತ್ತು ತರಬೇತಿಯನ್ನು ಈ ಸಹಯೋಗವು ಒದಗಿಸಲಿದೆ.
ಗೊಂಡಾ (ಉತ್ತರ ಪ್ರದೇಶ): ಗೊಂಡಾ ಜಿಲ್ಲೆ ಮತ್ತು ಸುತ್ತಮುತ್ತಲಿನ ಮಹಿಳಾ ಉದ್ಯಮಿಗಳು ಇ-ಕಾಮರ್ಸ್ ಮೇಲೆ ಹಿಡಿತ ಸಾಧಿಸಿ ತಮ್ಮ ವಹಿವಾಟನ್ನು ವೃದ್ಧಿಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರದ ಬ್ರ್ಯಾಂಡ್ ಯೋಜನೆಯಾದ ಆರ್ಗಾ (ARGA) ಜತೆಗಿನ ಒಪ್ಪಂದಕ್ಕೆ ಅಮೆಜಾನ್ ಇಂಡಿ ಯಾ ಸಹಿ ಹಾಕಿತು.
ʼವಿಶ್ವ ಜೌಗು ಪ್ರದೇಶಗಳʼ ದಿನದ ಹಿನ್ನೆಲೆಯಲ್ಲಿ ಪಾರ್ವತಿ ಆರ್ಗಾ ಪಕ್ಷಿಧಾಮದಲ್ಲಿ ಹಮ್ಮಿಕೊಳ್ಳ ಲಾದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕೇಂದ್ರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಹಾಗೂ ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ ಸಿಂಗ್ ಉಪಸ್ಥಿತಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇದನ್ನೂ ಓದಿ: Uttar Pradesh: ಮದುವೆಯಾಗಲು ಹುಡುಗಿ ಹುಡುಕುತ್ತಿದ್ದೀರಾ? ಈ ಸುದ್ದಿಯನ್ನು ಒಮ್ಮೆ ಓದಿ!
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ‘ಪಾರ್ವತಿ ಆರ್ಗಾದಲ್ಲಿ, ನಾವು ಸ್ವ-ಸಹಾಯ ಗುಂಪುಗಳ (ಎಸ್ ಎಚ್ ಜಿ) ಮೂಲಕ ಸ್ಥಳೀಯ ಮಹಿಳೆಯರನ್ನು ಸಬಲೀ ಕರಣಗೊಳಿಸುತ್ತಿದ್ದೇವೆ. ಅಮೆಜಾನ್ ನೆರವಿನಿಂದ ಈ ʼಎಸ್ ಎಚ್ ಜಿʼ ಗಳು ಈಗ ತಮ್ಮ ಉತ್ಪನ್ನ ಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವ ಅವಕಾಶ ಪಡೆದುಕೊಂಡಿವೆ. ನಮ್ಮ ಉತ್ಪನ್ನಗಳು ಯಾವಾಗಲೂ ಉತ್ತಮ ಗುಣಮಟ್ಟ ಹೊಂದಿವೆ. ನಾವೀಗ ಉತ್ಪನ್ನಗಳ ಆಕರ್ಷಕ ಪ್ಯಾಕೇಜಿಂಗ್ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಅಮೆಜಾನ್ನಂತಹ ಸಂಘಟನೆಗಳ ನೆರವಿ ನಿಂದ ಮಾರುಕಟ್ಟೆಯ ಅಡೆತಡೆಗಳೆಲ್ಲವೂ ದೂರವಾಗಲಿವೆ. ಈ ರೀತಿಯ ಉಪಕ್ರಮಗಳು ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ್‌ನ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಲಿವೆ. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಒತ್ತಾಸೆಯಾಗಿ ನಿಲ್ಲುವ ಆಂದೋಲನವನ್ನು ಬಲಪಡಿಸಲಿವೆʼ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು, ʼಬ್ರ್ಯಾಂಡ್ ಆರ್ಗಾʼಕ್ಕೆ (ARGA) ಪ್ರಚಾರ ಹಾಗೂ ಉತ್ತೇಜನ ನೀಡುವ ಅಮೆಜಾನ್ ಇಂಡಿಯಾದ ಉಪಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ಬಗೆಯ ಮೊದಲ ಪ್ರಯತ್ನ ಇದಾಗಿದೆ. ಗೊಂಡಾ ಜಿಲ್ಲೆಯ ಮಹಿಳಾ ಉದ್ಯಮಿಗಳ ಸ್ಥಳೀಯ ವಹಿವಾಟಿನಲ್ಲಿ ಇದು ಭಾರಿ ಬದಲಾವಣೆ ತರಲಿದೆ. ಈ ಒಪ್ಪಂದದ ನೆರವಿನಿಂದ ಗೊಂಡಾ ಜಿಲ್ಲೆಯ ಮಹಿಳೆಯರು ದೇಶದಾದ್ಯಂತ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ. ಸ್ಥಳೀಯ ಕುಶಲ ಕರ್ಮಿಗಳು ಮತ್ತು ಉದ್ಯಮಿಗಳು ಹೊಸ ಎತ್ತರ ತಲುಪಲು ನೆರವಾಗುವುದಕ್ಕೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣʼ ಎಂದು ಹೇಳಿದ್ದಾರೆ.
ಅಮೆಜಾನ್ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ಗೌರವ್ ಭಟ್ನಾಗರ್ ಮಾತನಾಡಿ, ‘ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಸರ್ಕಾರಿ ಯೋಜನೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಆರ್ಗಾ ಜೊತೆಗಿನ ಈ ಒಪ್ಪಂದವು ತೋರಿಸಿಕೊಡುತ್ತದೆ. ಗೊಂಡಾ ಜಿಲ್ಲೆಯ ಸ್ಥಳೀಯ ಉತ್ಪನ್ನಗಳ ಸಮೃದ್ಧ ವೈವಿಧ್ಯತೆಗಳನ್ನು ಇ–ಕಾಮರ್ಸ್ ಜತೆಗೆ ಜೋಡಿಸುವ ಮೂಲಕ ಈ ಪ್ರದೇಶದಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರಗತಿಯ ಅವಕಾಶವನ್ನು ನಾವು ಸೃಷ್ಟಿಸಿಕೊಡಬಹುದಾಗಿದೆ. ನಮ್ಮ ಸಹೇಲಿ ಕಾರ್ಯಕ್ರಮವು ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆ ಯಲ್ಲಿ ಅವರಿಗೆ ಅಗತ್ಯವಿರುವ ಡಿಜಿಟಲ್ ಉಪಕರಣಗಳು ಮತ್ತು ಜ್ಞಾನವನ್ನು ಒದಗಿಸುತ್ತದೆ. ಎಲ್ಲವನ್ನೂ ಒಳಗೊಳ್ಳುವ ಪ್ರಗತಿಗೆ ಈ ಪಾಲುದಾರಿಕೆ ಅರ್ಥಪೂರ್ಣ ಕೊಡುಗೆ ನೀಡಲಿದೆ ಮತ್ತು ʼವಿಕಸಿತ ಭಾರತʼದ ದೂರದೃಷ್ಟಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂಬುದು ನಮ್ಮ ಬಲವಾದ ನಂಬಿಕೆಯಾಗಿದೆ’ ಎಂದರು.
ಈ ಒಪ್ಪಂದದ ಭಾಗವಾಗಿ ಅಮೆಜಾನ್, ತನ್ನ ಸಹೇಲಿ ಕಾರ್ಯಕ್ರಮದ ಮೂಲಕ ಬ್ರ್ಯಾಂಡ್ ಆರ್ಗಾ ದೊಂದಿಗೆ ಸಂಬಂಧಿಸಿದ ಮಹಿಳಾ-ನೇತೃತ್ವದ ವಹಿವಾಟುಗಳನ್ನು ಬೆಂಬಲಿಸುತ್ತದೆ. ಡಿಜಿಟಲ್ ಮತ್ತು ಕಾರ್ಯಕ್ಷಮತೆಯ ಮಾರ್ಕೆಟಿಂಗ್, ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟ ಮಾಡಿಸುವುದು ಹಾಗೂ ಜಾಹೀರಾತು ಕ್ರಮಗಳು ಇದರಲ್ಲಿ ಸೇರಿವೆ. ಗ್ರಾಹಕರ ನಿರೀಕ್ಷೆಗಳು ಮತ್ತು ಮಾರುಕಟ್ಟೆ ಅವಕಾಶಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಪ್ರದೇಶದ ಮಹಿಳಾ ಉದ್ಯಮಿ ಗಳು ಅಂಕಿಅಂಶದಿಂದ ಕೂಡಿದ ಒಳನೋಟಗಳನ್ನು ಮತ್ತು ಲೆಕ್ಕಾಚಾರಗಳನ್ನೂ ಪಡೆಯು ವಂತಾಗುತ್ತದೆ. ಈ ಒಪ್ಪಂದವು ಅಮೆಜಾನ್ಡಾಟ್ಇನ್ (Amazon.in) ನಲ್ಲಿ ಉಪ್ಪಿನಕಾಯಿ, ಜಾಮ್, ಹಿಟ್ಟು, ಖಾರದ ತಿಂಡಿಗಳು, ಕಡಲೆ ಹಿಟ್ಟು, ನೂಡಲ್ಸ್ ಮೊದಲಾದ ವೈವಿಧ್ಯಮಯ ಉತ್ಪನ್ನ ಗಳನ್ನು ಪರಿಚಯಿಸಲು ಸಹಾಯ ಮಾಡುತ್ತದೆ.
ಕಾರ್ಯಕ್ರಮದಲ್ಲಿ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್, ಉತ್ತರ ಪ್ರದೇಶದ ಅರಣ್ಯ ಮತ್ತು ಪರಿಸರ, ಮೃಗಾಲಯ, ಹವಾಮಾನ ಬದಲಾವಣೆ ಸಚಿವ ಅರುಣ್ ಕುಮಾರ್ ಸಕ್ಸೇನಾ, ಇದೇ ಖಾತೆಗಳ ರಾಜ್ಯ ಸಚಿವ ಕಿಶನ್ ಪಾಲ್ ಮಲಿಕ್ ಉಪಸ್ಥಿತರಿದ್ದರು.
ಉಪ್ಪಿನಕಾಯಿ, ಜಾಮ್, ಖಾರದ ತಿಂಡಿಗಳು, ಕಡಲೆ ಹಿಟ್ಟು, ನೂಡಲ್ಸ್ ಮೊದಲಾದ ವೈವಿಧ್ಯ ಮಯ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜ್ ಮಾಡುವಲ್ಲಿ ಸ್ಥಳೀಯ ಉದ್ಯಮಿಗಳು ಎದುರಿಸುತ್ತಿದ್ದ ಬಹಳ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಬ್ರ್ಯಾಂಡ್ ಆರ್ಗಾ ಪ್ರಮುಖ ಪಾತ್ರ ನಿರ್ವಹಿಸಿದೆ. ಸ್ಥಳೀಯ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ’ಆರ್ಗಾ’ ಬ್ರ್ಯಾಂಡ್ ಹೆಸರಲ್ಲಿ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಸ್ಥಳೀಯ ಉದ್ಯಮಿ ಗಳಿಗೆ ಅವಕಾಶ ನೀಡುತ್ತದೆ. ಮೊದಲ ಹಂತದಲ್ಲಿ, ಗೊಂಡ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳು ತಯಾರಿಸಿದ (ಎಸ್‌ಎಂಬಿ) ಆಹಾರ ಉತ್ಪನ್ನಗಳು ಸೇರಿದಂತೆ 55 ಕ್ಕೂ ಹೆಚ್ಚು ಉತ್ಪನ್ನಗಳಿಗೆ ARGA ಅಡಿಯಲ್ಲಿ ಹೊಸ ಗುರುತನ್ನು ನೀಡಲಾಗಿದೆ.
ಭಾರತದ ಮಹಿಳಾ ಉದ್ಯಮಿಗಳು ಮತ್ತು ಸ್ಥಳೀಯ ಮಹಿಳಾ ಒಡೆತನದ ವ್ಯವಹಾರಗಳಿಂದ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳ ಕುರಿತಂತೆ ತಿಳಿವಳಿಕೆ ಮತ್ತು ಪೂರೈಕೆ ಮಾಡುವ ಗುರಿ ಯೊಂದಿಗೆ ಅಮೆಜಾನ್ ಸಹೇಲಿ ಕಾರ್ಯಕ್ರಮವನ್ನು 2017ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯ ಭಾಗವಾಗಿ ಅಮೆಜಾನ್ ಸಂಸ್ಥೆಯು ತನ್ನ ಪಾಲುದಾರರನ್ನು ಡಿಜಿಟಲೀಕರಣದಲ್ಲಿ ತೊಡುಗುವಂತೆ ಮಾಡುತ್ತದೆ ಮತ್ತು ಮಹಿಳಾ ಉದ್ಯಮಿಗಳಿಗೆ ಅಗತ್ಯವಾದ ಸಾಧನಗಳನ್ನು ಒದಗಿಸುತ್ತದೆ, ಇದು ಅವರ ಡಿಜಿಟಲ್ ಪ್ರಯತ್ನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ.
ಅಮೆಜಾನ್ ಸಹೇಲಿಯು 60ಕ್ಕೂ ಹೆಚ್ಚು ಪಾಲುದಾರರನ್ನು ಹೊಂದಿದ್ದು, ನಗರ ಮತ್ತು ಗ್ರಾಮೀಣ ಭಾಗದ 16 ಲಕ್ಷಕ್ಕೂ ಅಧಿಕ ಮಹಿಳಾ ಉದ್ಯಮಿಗಳನ್ನು ತಲುಪಿದೆ, ಜತೆಗೆ 1.8 ಲಕ್ಷಕ್ಕೂ ಅಧಿಕ ಮಹಿಳೆಯರು ಉಡುಪುಗಳು, ಆಭರಣಗಳು, ದಿನಸಿ ಇತ್ಯಾದಿ ಹತ್ತು ವಿಭಾಗಗಳಲ್ಲಿ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಈ ಪಾಲುದಾರಿಕೆಯಲ್ಲಿ 80,000ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು ತೊಡಗಿಸಿಕೊಂಡಿದ್ದಾರೆ ಮತ್ತು ಇದರಿಂದ ಪ್ರಯೋಜನ ಪಡೆದಿದ್ದಾರೆ. ಕುಶಲಕರ್ಮಿಗಳು ತಮ್ಮ ಜೀವನೋಪಾಯಕ್ಕಾಗಿ ಈ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಾರೆ.
ಅಮೆಜಾನ್ ಇಂಡಿಯಾ ತನ್ನ ಕಾರ್ಯಕ್ಷೇತ್ರದಲ್ಲಿ ಮಹಿಳೆಯರಿಗೆ ಅಸಂಖ್ಯ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಅದರಲ್ಲಿ ಮಾರಾಟ ಪಾಲುದಾರರು, ಕಾರ್ಯಾಚರಣೆ ಜಾಲ ಪಾಲುದಾರರು, ಸಮುದಾಯ ಫಲಾನುಭವಿಗಳು, ಉದ್ಯೋಗಿಗಳು ಮತ್ತು ಸಂಘ ಸಂಸ್ಥೆಗಳು ಸೇರಿದ್ದಾರೆ. ಇವರೆ ಲ್ಲರೂ ದೇಶದಾದ್ಯಂತ ಅಮೆಜಾನ್‌ನ ವೈವಿಧ್ಯಮಯ ಗ್ರಾಹಕರ ನೆಲೆಯನ್ನು ರಚನಾತ್ಮಕವಾಗಿ ಪ್ರಭಾವಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಮೆಜಾನ್ ಸಂಸ್ಥೆಯು ತನ್ನ ಸಂಸ್ಥೆಯೊಳಗೆ ಮಾತ್ರವಲ್ಲ ಹೊರಗಡೆ ಸಹ ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವಾರು ಪ್ರಯೋಜನ ಗಳು, ಕಾರ್ಯಕ್ರಮಗಳು ಮತ್ತು ಮುಂಚೂಣಿ ಕಾರ್ಯಗಳನ್ನು ಪರಿಚಯಿಸಿದೆ.