ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu tips: ಫ್ರಿಡ್ಜ್ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ಫ್ರಿಡ್ಜ್ ಮೇಲೆ ಸ್ಥಳ ಖಾಲಿ ಇದೆ ಎಂದುಕೊಂಡು ನಾವು ಕೆಲವೊಂದು ವಸ್ತುಗಳನ್ನು ಅದರ ಮೇಲೆ ಇಡುತ್ತೇವೆ. ಆದರೆ ಇದು ಮನೆಗೆ ಆಪತ್ತು ತರಬಹುದು ಎನ್ನುತ್ತಾರೆ ವಾಸ್ತು (Vastu tips) ತಜ್ಞರು. ಫ್ರಿಡ್ಜ್ ಮೇಲೆ ಇಡಲೇಬಾರದ ಕೆಲವೊಂದು ವಸ್ತುಗಳಿವೆ. ಅವುಗಳು ಮನೆಯ ಸಕಾರಾತ್ಮಕ ಶಕ್ತಿಯ ಹರಿವಿಗೆ ತೊಂದರೆ ಉಂಟು ಮಾಡುತ್ತದೆ. ಅಂತಹ ವಸ್ತುಗಳು ಯಾವುದು, ಈ ಬಗ್ಗೆ ವಾಸ್ತು ತಜ್ಞರು ಹೇಳುವುದೇನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಇವುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ

-

ಬೆಂಗಳೂರು: ಸಾಮಾನ್ಯವಾಗಿ ಮನೆಯ (Vastu for home) ಕೆಲವೊಂದು ಜಾಗಗಳನ್ನು ನಾವು ಯಾವುದಾದರು ವಸ್ತುಗಳನ್ನು ಇಡಲು ಬಯಸುತ್ತೇವೆ. ಆದರೆ ಇದು ಮನೆಗೆ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು ಎನ್ನುತ್ತಾರೆ ವಾಸ್ತು (Vastu tips) ತಜ್ಞರು. ಅಡುಗೆ ಮನೆಯಲ್ಲಿ ಹೆಚ್ಚಾಗಿ ನಾವು ಫ್ರಿಡ್ಜ್‌ನ (Vastu for Fridge) ಮೇಲ್ಭಾಗದಲ್ಲಿ ಔಷಧ, ಮನೆಯ ಕೀ.. ಹೀಗೆ ಕೆಲವು ವಸ್ತುಗಳನ್ನು ಇಡುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಇದು ಸರಿಯಲ್ಲ. ಇದರಿಂದ ಮನೆಯಲ್ಲಿ ಶಕ್ತಿಯ ಹರಿವಿನ ಮೇಲೆ ತೊಂದರೆ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಫ್ರಿಡ್ಜ್‌ನ ಮೇಲ್ಭಾಗದಲ್ಲಿ ಕೆಲವು ವಸ್ತುಗಳನ್ನು ಇಡಲೇಬಾರದು. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವಿಗೆ ತೊಂದರೆ ಉಂಟು ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಶಕ್ತಿಯನ್ನು ಹೊರಸೂಸುತ್ತದೆ. ಇದು ಸಕಾರಾತ್ಮಕವಾಗಿದ್ದರೆ ಮನೆಯಲ್ಲಿ ಸಂತೋಷ ವೃದ್ಧಿಯಾಗುತ್ತದೆ. ನಕಾರಾತ್ಮಕವಾಗಿದ್ದರೆ ಒತ್ತಡ, ವಿವಾದಗಳು ಅಥವಾ ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತದೆ.

fridg1

ಬೆಲೆಬಾಳುವ ವಸ್ತುಗಳು

ಫ್ರಿಡ್ಜ್ ಮೇಲೆ ಹಣ, ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಫ್ರಿಡ್ಜ್ ಬೆಂಕಿಯ ಅಂಶಕ್ಕೆ ಸಂಬಂಧಿಸಿದೆ. ಇದು ಸಂಪತ್ತು ಸ್ಥಿರತೆ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಇವುಗಳ ಮೇಲೆ ಬೆಲೆಬಾಳುವ ವಸ್ತುಗಳನ್ನು ಇಟ್ಟರೆ ಆರ್ಥಿಕ ಸ್ಥಿರತೆಗೆ ತೊಂದರೆಯುಂಟಾಗುತ್ತದೆ.

ಮುರಿದ ವಸ್ತುಗಳು

ಯಾವುದೇ ರೀತಿಯ ಮುರಿದ ವಸ್ತುಗಳಿದ್ದರೆ ಅದನ್ನು ಫ್ರಿಡ್ಜ್ ಮೇಲೆ ಇಡಬಾರದು. ಇವುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಪ್ರಗತಿಯಲ್ಲಿ ತೊಂದರೆಯನ್ನು ಉಂಟು ಮಾಡುತ್ತದೆ.

ಔಷಧಗಳು

ಮನೆಯಲ್ಲಿ ಔಷಧಗಳು ಅನಾರೋಗ್ಯವನ್ನು ಸೂಚಿಸುತ್ತದೆ. ಇವುಗಳನ್ನು ಫ್ರಿಡ್ಜ್ ಮೇಲೆ ಇಡುವುದರಿಂದ ನಕಾರಾತ್ಮಕ ಶಕ್ತಿ ವೃದ್ಧಿಯಾಗುವುದು. ಇದು ಆರೋಗ್ಯ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಳ ಮಾಡುತ್ತದೆ. ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಔಷಧಗಳನ್ನು ಯಾವತ್ತೂ ಅಡುಗೆ ಮನೆಯಲ್ಲಿ ಇಡಬಾರದು. ಕಪಾಟಿ ಒಳಗೆ ಕೋಣೆಯಲ್ಲಿ ಇಟ್ಟುಕೊಳ್ಳಬಹುದು ಎನ್ನುತ್ತಾರೆ ವಾಸ್ತು ತಜ್ಞರು.

ಓವನ್ ಅಥವಾ ಮೈಕ್ರೋವೇವ್

ಜಾಗ ಉಳಿತಾಯ ಮಾಡುವ ಸಲುವಾಗಿ ಕೆಲವರು ಫ್ರಿಡ್ಜ್ ಮೇಲೆ ಮೈಕ್ರೋವೇವ್ ಅಥವಾ ಓವನ್ ಅನ್ನು ಇಡುತ್ತಾರೆ. ಒಂದೇ ಸ್ಥಳದಲ್ಲಿ ಹೆಚ್ಚಿನ ಬೆಂಕಿಯ ಅಂಶಗಳು ಸೇರಿದರೆ ಮನೆಯಲ್ಲಿಕೋಪ, ಜಗಳ ಮತ್ತು ಒತ್ತಡ ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಅಕ್ವೇರಿಯಂ

ಅಲಂಕಾರಕ್ಕಾಗಿ ಇಡಲಾಗುವ ಅಕ್ವೇರಿಯಂಗಳು ಫ್ರಿಡ್ಜ್ ಮೇಲೆ ಇಡುವುದು ಸರಿಯಲ್ಲ. ಇದು ವಾಸ್ತುವಿಗೆ ವಿರುದ್ಧವಾಗಿದೆ. ಅಕ್ವೇರಿಯಂ ನೀರಿನ ಅಂಶವಾದರೆ ಫ್ರಿಡ್ಜ್ ಬೆಂಕಿಯ ಅಂಶವಾಗಿದೆ. ಇವುಗಳನ್ನು ಒಟ್ಟಿಗೆ ಇಡುವುದು ಕುಟುಂಬದಲ್ಲಿ ವಿವಾದ, ಮಾನಸಿಕ ಒತ್ತಡ ಮತ್ತು ಆರ್ಥಿಕ ತೊಂದರೆಗಳು ಉಂಟಾಗುವಂತೆ ಮಾಡುತ್ತದೆ.